ವಾದಿರಾಜ್. ಬಿ
ಮೂರು ಎಕರೆ ಪ್ರದೇಶದಲ್ಲಿ ಮರಗಳನ್ನು ಕಡಿಯಲು ಚಿಂತನೆ
ಕೋರಮಂಗಲದಲ್ಲಿ ಮರ ಕಡೆದು ಸೈಟ್ಗಳನ್ನಾಗಿ ಪರಿವರ್ತಿಸಲು ಅಧಿಕಾರಿಗಳು ಸಿದ್ಧತೆ
ಸ್ಥಳೀಯರಿಂದ ತೀವ್ರ ವಿರೋಧ
ಬೆಂಗಳೂರು: ಅಭಿವೃದ್ಧಿಯ ಹೆಸರಲ್ಲಿ ಕಾಯಿದೆಯಲ್ಲಿರುವ ಲೋಪಗಳ ರಕ್ಷಣೆಯನ್ನು ಮುಂದಿಟ್ಟುಕೊಂಡು ರಾಜಧಾನಿ ಬೆಂಗಳೂರಿನ ಹೃದಯಭಾಗ ದಲ್ಲಿರುವ ಮೂರು ಎಕರೆ ವಿಸ್ತೀರ್ಣದಲ್ಲಿ ಹರಡಿರುವ ಸಾವಿರಾರು ಮರಗಳಿಗೆ ಕೊಡಲಿಯೇಟು ನೀಡಲು ಸದ್ದಿಲ್ಲದೇ ಸಿದ್ಧತೆ ಆರಂಭಗೊಂಡಿವೆಯೇ ಎನ್ನುವ ಅನುಮಾನಗಳು ಶುರುವಾಗಿದೆ.
ಬೆಂಗಳೂರಿನ ಪ್ರತಿಷ್ಠಿತ ಪ್ರದೇಶಗಳಲ್ಲಿ ಒಂದಾಗಿರುವ ಕೋರಮಂಗಲದಲ್ಲಿ ಭೂಮಿಗೀಗ ‘ಬಂಗಾರ’ದ ಬೆಲೆ. ಇದನ್ನು ಗಮನದಲ್ಲಿರಿಸಿಕೊಂಡು ಭೂಗಳ್ಳರು ಮೂರು ಎಕರೆ ಪ್ರದೇಶದಲ್ಲಿ ಈ ಹಿಂದೆ ಅಭಿವೃದ್ಧಿಯಾಗಿರುವ ಉದ್ಯಾನವನವನ್ನು ‘ಸಿಎ’ ಸೈಟ್ ನೆಪದಲ್ಲಿ ಕತ್ತರಿಸಿ ಕಾಂಟ್ರೀಟ್ ಕಾಡಾಗಿ ಮಾರ್ಪಡು ಮಾಡಲು ಮುಂದಾಗಿದ್ದು, ಇದಕ್ಕೆ ಬಿಡಿಎದ ಹಲವು ಅಧಿಕಾರಿಗಳ ಬೆಂಬಲವಿದೆ ಎನ್ನುವ ಆರೋಪ ಕೇಳಿಬಂದಿದೆ.
ಬಿಡಿಎ ಹಾಗೂ ರಿಯಲ್ ಎಸ್ಟೇಟ್ನವರ ಈ ನಡೆಯನ್ನು ಗಮನಿಸಿ, ಈಗಾಗಲೇ ಕೆಲವು ಸಂಘ ಸಂಸ್ಥೆಗಳು ವಿರೋಧಿಸುತ್ತಿದ್ದರೂ, ಕಾಯಿದೆಯಲ್ಲಿರುವ ಕೆಲ ಲೋಪಗಳನ್ನು ಮುಂದಿಟ್ಟುಕೊಂಡು ಅಧಿಕಾರಿಗಳು ಈ ಪ್ರದೇಶವನ್ನು ನಿವೇಶನಗಳಾಗಿ ಪರಿರ್ವತಿಸಲು ಮುಂದಾಗಿದ್ದಾರೆ. ಆದರೆ ಸ್ಥಳೀಯರು ದಶಕಗಳಿಂದ ಕಾಪಾಡಿ ಕೊಂಡು ಬಂದಿರುವ ಈ ಮರಗಳನ್ನು ಯಾವುದೇ ಕಾರಣಕ್ಕೂ ಕಡಿಯಬಾರದು ಎನ್ನುವ ಆಗ್ರಹವನ್ನು ಮುಂದಿಟ್ಟಿದ್ದಾರೆ.
ಎಕೋ ಸ್ಪೇಸ್ಗೆ ಕೊಡಲಿ ಪೆಟ್ಟು
ಆದರೆ ಸಾರ್ವಜನಿಕರ ವಿರೋಧದ ನಡುವೆಯೂ ಮೂರು ಎಕರೆ ಪ್ರದೇಶದಲ್ಲಿ ಹಬ್ಬಿಕೊಂಡಿರುವ ಈ ಉದ್ಯಾನ ವನವನ್ನು ಖಾಲಿ ಮಾಡಲು ಬಿಡಿಎ ಸಿದ್ಧತೆ ನಡೆಸಿಕೊಂಡಿದೆ ಎನ್ನಲಾಗಿದೆ. ಕೋರಮಂಗಲದ ಮೊದಲನೇ ಬ್ಲಾಕ್ನ ಜಕ್ಕಸಂದ್ರದ ಬಿಡಿಎ ನರ್ಸರಿಯಲ್ಲಿ ಮರಗಳು ಬೆಳೆದು ಉತ್ತಮ ವಾತಾವರಣ ನಿರ್ಮಾಣವಾಗಿದೆ. ಇಲ್ಲಿ ಸುತ್ತಮುತ್ತಲಿನ ಬಡಾವಣೆಯ ಜನತೆ ನಿತ್ಯ ವಾಕಿಂಗ್ ಮಾಡುವ ಮೂಲಕ ನೈಸರ್ಗಿಕ ಪರಿಸರದ ಲಾಭ ಪಡೆಯುತ್ತಿದ್ದಾರೆ.
ಒಂದು ಕಾಲದ ಗಾರ್ಡನ್ ಸಿಟಿ ಎಂದು ಹೆಸರಾಗಿದ್ದ ಬೆಂಗಳೂರು ಗಾರ್ಬೇಜ್ ಸಿಟಿ ಹಾಗೂ ಇಂದಿನ ಜಾಗತೀಕರಣದ ಹೆಸರಿನಲ್ಲಿ ವಾಸಯೋಗ್ಯವಲ್ಲದ ಪ್ರದೇಶವಾಗಿಬಿಟ್ಟಿದೆ. ಮರಗಳ ಮಾರಣ ಹೋಮದಿಂದಾಗಿ ವಾಯು ಮಾಲಿನ್ಯ
ಹೆಚ್ಚಾಗಿ ಅಪಾಯ ಮಟ್ಟಕ್ಕೆ ತಲುಪಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ದೆಹಲಿಯಲ್ಲಿರುವ ಪರಿಸ್ಥಿತಿ ಬೆಂಗಳೂರಿನಲ್ಲಿ ನಿರ್ಮಾಣವಾದರೂ ಅಚ್ಚರಿ ಪಡಬೇಕಿಲ್ಲ.
ಒಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಬೆಂಗಳೂರು ಕೂಡ ದೆಹಲಿಯಂತೆ ವಾಸಯೋಗ್ಯವಲ್ಲದ ಸ್ಥಿತಿಗೆ ತಲುಪಲು ಬೇಕಾದ ಎಲ್ಲಾ ವ್ಯವಸ್ಥೆ ಬಿಡಿಎ ಮಾಡುತ್ತಿದೆ. ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ದೆಹಲಿಯಂತೆ ಬೆಂಗಳೂರಿನಲ್ಲೂ ಕೂಡ ವಾಯುಮಾಲಿನ್ಯ ಹೆಚ್ಚಾಗಿ ಮುನುಷ್ಯರು ವಾಸಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗುವುದಂತು.
ಮೂರು ಎಕರೆ ಕಬಳಿಸಲು ಸಂಚು
ಇಷ್ಟು ವರ್ಷ ಸುಮ್ಮನಿದ್ದ ಭೂಗಳ್ಳರ ಕಣ್ಣು ಇದೀಗ ಕೋರಮಂಗಲದ ಎಕೋ ಸ್ಪೇಸ್ ಮೇಲೆ ಬಿದಿದ್ದೆ. ಇದಕ್ಕೆ ಬಿಡಿಎ ಕೂಡ ಕೈಜೋಡಿಸಿದ್ದಲ್ಲದೇ ಭೂ ಸ್ವಾಧೀನ ಕಾಯಿದೆಯಲ್ಲಿ ತಿದ್ದುಪಡಿಯನ್ನೇ ಬಂಡವಾಳ ಮಾಡಿಕೊಂಡು ಮೂರು ಎಕರೆ ಪ್ರದೇಶವನ್ನು ಕಬಳಿಸಲು ಸಂಚು ರೂಪಿಸಿದೆ. ಈಗಾಗಲೇ ಭೂ ಸ್ವಾಧೀನಕ್ಕೆ ಬೇಕಾಗಿರುವ ಪ್ರಕ್ರಿಯೆ ಗಳಿಗೆ ಮುಂದಾಗಿರುವ ಬಿಡಿಎ ಸುಂದರವಾಗಿ ನಿರ್ಮಾಣವಾಗಿರುವ ಪರಿಸರವನ್ನು ಕಲುಷಿತಗೊಳಿಸಿ ಮರಗಳ ಮಾರಣಹೋಮಕ್ಕೆ ಮುಂದಾಗಿದೆ. ಸುಮಾರು ಮೂರು ಎಕರೆ ಜಾಗವನ್ನು ಬಿಡಿಎ ಸ್ವಾಧೀನ ಪಡಿಸಿಕೊಂಡು ನಿವೇಶನ ಮಾಡಲು ಹೊರಟಿದೆ.
ಭೂ ಸ್ವಾಧೀನ ಕಾಯಿದೆ ತಿದ್ದುಪಡಿಯಲ್ಲಿ ಸಿಎ ನಿವೇಶನವನ್ನು ಬಿಡಿಎ ವಶಕ್ಕೆ ಪಡೆದು ಅಭಿವೃದ್ಧಿ ಮಾಡಲಾಗು ತ್ತಿದೆ. ಅಲ್ಲಿ ನಿವೇಶನ ಸೇರಿದಂತೆ ವಾಣಿಜ್ಯ ಸಂಕೀರ್ಣ ಮಾಡಿದರೆ ಸರಕಾರಕ್ಕೂ ಲಾಭವಾಗಲಿದೆ. ಅಲ್ಲದೇ ಮುಂದೆ ಸಾರ್ವಜನಿಕರಿಗೆ ಅನಕೂಲವಾಗುವ ಆಸ್ಪತ್ರೆ ಸೇರಿದಂತೆ ಶಾಲೆ, ಕಾಲೇಜ್ಗೂ ನೀಡಬಹುದಾಗಿದೆ.
ಜಗದೀಶ್, ಭೂ ಸ್ವಾಧೀನಾಧಿಕಾರಿ
ಇದನ್ನೂ ಓದಿ: BDA complex: ಬಿಡಿಎ ಕಾಂಪ್ಲೆಕ್ಸ್ಗಳ ಖಾಸಗೀಕರಣಕ್ಕೆ ಭಾರಿ ಪ್ರತಿಭಟನೆ: ‘60% ಸರ್ಕಾರʼ ಎಂದು ಟೀಕೆ