ವಿನಾಯಕ ಮಠಪತಿ ಬೆಳಗಾವಿ
ಕಿತ್ತೂರು ತಾಲೂಕಿನ ತಿಗಡೊಳ್ಳಿ ಗ್ರಾಮದಲ್ಲಿ ಘಟನೆ
ನಕಲಿ ವೈದ್ಯಅಬ್ದುಲ್ ಲಾಡಖಾನ್ ಬಂಧನ
ನಕಲಿ ವೈದ್ಯನೋರ್ವ ಹಣದ ಆಸೆಯಿಂದ ಭ್ರೂಣಹತ್ಯೆ ಹಾಗೂ ಕಳ್ಳ ಸಾಗಣೆ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದ್ದು, ಆರೋಪಿ ಸೇರಿ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ, ಆರೋಪಿಯ ತೋಟದಲ್ಲಿ ಮೂರು ಭ್ರೂಣಗಳ ಅವಶೇಷಗಳನ್ನು ಹೊರತೆಗೆಯಲಾಗಿದೆ.
ಕಿತ್ತೂರು ಪಟ್ಟಣದಲ್ಲಿ ನಕಲಿ ವೈದ್ಯಕೀಯ ವೃತ್ತಿ ನಡೆಸುತ್ತಿದ್ದ ಆರೋಪಿ ಅಬ್ದುಲ್ ಲಾಡಖಾನ್ ಭ್ರೂಣಹತ್ಯೆ ನಡೆಸುತ್ತಿದ್ದನೆಂದು ಆರೋಪಿಸಲಾಗಿದೆ. ತಿಗಡೊಳ್ಳಿ ಗ್ರಾಮದ ತೋಟದಮನೆಯ ಆವರ ಣದಲ್ಲಿ ಹೂತಿದ್ದ ಮೂರು ಭ್ರೂಣಗಳ ಅವಶೇಷಗಳನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿ ಯಾಗಿದ್ದಾರೆ.
ಭಾನುವಾರ ಬೆಳಗಾವಿ ಜಿಲ್ಲಾ ವೈದ್ಯಾಧಿಕಾರಿ ಡಾ. ಮಹೇಶ್ ಕೋಣಿ, ಎಸಿ ಪ್ರಭಾವತಿ ಪಕೀರಪುರ ಹಾಗೂ ಬೈಲಹೊಂಗಲ ಡಿವೈಎಸ್ಪಿ ರವಿ ನಾಯ್ಕ ಒಳಗೊಂಡ ಅಽಕಾರಿಗಳ ತಂಡ ತಿಗಡೊಳ್ಳಿಯಲ್ಲಿ ಕಾರ್ಯಾಚರಣೆ ನಡೆಸಿತು. ಈ ಸಂದರ್ಭದಲ್ಲಿ ನಕಲಿ ವೈದ್ಯ ಅಬ್ದುಲ್ ಲಾಡಖಾನ್ ಬಳಿ ಸಹಾ
ಯಕನಾಗಿ ಕೆಲಸ ಮಾಡುತ್ತಿದ್ದ ರೋಹಿತ್ ಕುಪ್ಪಸಗೌಡರ್ ಭ್ರೂಣ ಹೂತಿಟ್ಟಿದ್ದ ಕುರಿತು ಮಾಹಿತಿ ನೀಡಿದ್ದ. ಸ್ಥಳ ಪರಿಶೀಲನೆ ನಡೆಸಿದ್ದ ವೇಳೆ, ಮೂರು ಭ್ರೂಣಗಳ ಅವಶೇಷ ಪತ್ತೆಯಾಗಿದ್ದು, ನವಜಾತ ಶಿಶು ಮಾರಾಟ ಹಾಗೂ ಭ್ರೂಣಹತ್ಯೆ ಪ್ರಕರಣದಲ್ಲಿ ನಕಲಿವೈದ್ಯ ಲಾಡಖಾನ್ ಸೇರಿ ಐವರನ್ನು
ಪೊಲೀಸರು ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆಗೆ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ವಿಶೇಷ ತನಿಖಾ ತಂಡ ರಚಿಸಿದ್ದಾರೆ.
೨೦ ವರ್ಷಗಳಿಂದ ನಕಲಿ ವೈದ್ಯನ ದರ್ಬಾರ್: ಕಳೆದ ೨೦ ವರ್ಷಗಳಿಂದ ರಿಯಾಜ್ ಕ್ಲಿನಿಕ್ ನಡೆಸುತ್ತಿದ್ದ ಅಬ್ದುಲ್ ಲಾಡಖಾನ್ ಸರಕಾರದಿಂದ ಯಾವುದೇ ಪ್ರಮಾಣಪತ್ರ ಪಡೆದಿರಲಿಲ್ಲ. ರಾಜಾರೋಷವಾಗಿ ಶಿಶು ಕಳ್ಳಸಾಗಣೆ ಹಾಗೂ ಭ್ರೂಣಹತ್ಯೆ ನಡೆಸುತ್ತಿದ್ದರೂ ಅಧಿಕಾರಿಗಳ ಗಮನಕ್ಕೆ ಬಾರದಿರುವುದು ವಿಪರ್ಯಾಸ.
ಮಹಿಳೆಯಿಂದ ಕರಾಳ ಪ್ರಕರಣ ಬೆಳಕಿಗೆ
ಬೆಳಗಾವಿಯ ರಾಮತೀರ್ಥ ನಗರದಲ್ಲಿ ಮಕ್ಕಳ ರಕ್ಷಣಾ ಘಟಕದ ಕೈಗೆ ಸಿಕ್ಕಿಬಿದ್ದಿದ್ದ ಮಹಿಳೆಯಿಂದ ಇಡೀ ಪ್ರಕರಣದ ಜಾಲವೇ ಪೊಲೀಸರ ಗಮನಕ್ಕೆ ಬಂದಿತ್ತು. ಕಿತ್ತೂರಿನ ನಕಲಿವೈದ್ಯ ಅಬ್ದುಲ್ ಲಾಡಖಾನ್ ಬಳಿ ೬೦ ಸಾವಿರಕ್ಕೆ ಶಿಶುವನ್ನು ಪಡೆದಿದ್ದ ಮಹಾದೇವಿ ಎಂಬ ಮಹಿಳೆ ೧.೪೦ ಲಕ್ಷ ರು.ಗೆ ಮಾರಾಟ ಮಾಡಲು ಯತ್ನಿಸಿದ್ದಳು. ಮಾಳಮಾರುತಿ ಠಾಣೆಯ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ದ
ಕುರಿತು ಕರಾಳಮುಖ ಬಯಲಾಗಿತ್ತು. ಅಬ್ದುಲ್ ಗಫರ್ ಲಾಡಖಾನ್ ಕಿತ್ತೂರಿ ನಲ್ಲಿ ಆಸ್ಪತ್ರೆ ಇಟ್ಟುಕೊಂಡು ಗರ್ಭಿಣಿ ಯರನ್ನು ಟಾರ್ಗೆಟ್ ಮಾಡುತ್ತಿದ್ದ. ಮಕ್ಕಳನ್ನು ತಿರಸ್ಕರಿಸಿದವರಿಂದ ನವಜಾತ ಶಿಶು ಪಡೆದು, ಆರೈಕೆಮಾಡಿ ಬೇರೆಯವರಿಗೆ ಮಾರಾಟ ಮಾಡುತ್ತಿದ್ದ. ಒಂದು ವೇಳೆ ಶಿಶು ಮೃತಪಟ್ಟರೆ ತನ್ನ ತೋಟದಮನೆ ಹಿಂದಿನ ಜಾಗದಲ್ಲಿ ಹೂಳುತ್ತಿದ್ದ ಎಂಬುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.