ವಿನುತಾ ಹೆಗಡೆ ಶಿರಸಿ
ಪುರಾತನ ದಿನಗಳಿಗೆ ಮರಳಿಸಿದ ಮೇಘಸ್ಫೋಟ: ದೇಸಿ ಸೇತುವೆಗಳಿಗೆ ಸಾಕ್ಷಿಯಾದ ಮಲೆನಾಡು
ಉತ್ತರ ಕನ್ನಡ ಜಿಲ್ಲೆಯ ಹಳ್ಳಿಗಳಲ್ಲೀಗ ದಶಕಗಳ ಹಿಂದಿನ ಪಾರಂಪರಿಕ ದೇಸಿ ಸೊಗಡಿನ ದೃಶ್ಯಗಳು ಮರುಳಿಸುತ್ತಿದೆ. ಇದಕ್ಕೆ ಕಾರಣವಾಗಿರುವುದು ಸಂಕ ಯಾನೆ ಸೇತುವೆಗಳು. ಹೌದು, ಈ ಭಾಗದಲ್ಲಿ ಹರಿಯುವ ಹಳ್ಳಗಳಿಗೆ ಕಾಂಕ್ರೀಟ್ ಸೇತುವೆ ಬದಲು ಅಡಕೆ ಮರದ ದಬ್ಬೆ, ಬಿದಿರು ತುಂಡುಗಳಿಂದ ನಿರ್ಮಿಸಿದ ಸಂಕ (ಸೇತುವೆ)ಗಳೇ ಇತ್ತೀಚೆಗೆ ಕಾಣಸಿಗುತ್ತಿವೆ. ಹೀಗಾಗಿ ಇಲ್ಲಿನ ಪ್ರಕೃತಿ ಸೌಂದರ್ಯ ಆಸ್ವಾದಿಸಲು ಬರುವ ಪ್ರವಾಸಿಗರು ಇಂಥ ದೇಸಿ ಸೇತುವೆಗಳು ಆಕರ್ಷಣೆಯ ಕೇಂದ್ರವಾಗುತ್ತಿವೆ.
ಕಳೆದ ಮಳೆಗಾಲದ ಮೇಘಸ್ಫೋಟದ ಉದಾರ ಕೊಡುಗೆಯಿದು. ಸುರಿದ ಭಾರಿ ಮಳೆ ಯಿಂದಾಗಿ ಉತ್ತರಕನ್ನಡ ಜಿಲ್ಲೆಯಲ್ಲಿನ ಬರೋಬ್ಬರಿ ೧೦೮ ಗ್ರಾಮಗಳು ಸಂಪರ್ಕ ಕಳೆದುಕೊಂಡು ಹಾನಿ ಅನುಭವಿಸಿದ್ದವು. ಹಳ್ಳ ಕೊಳ್ಳಗಳು ಹರಿಯುವ ಗ್ರಾಮಗಳ ಸೇತುವೆಗಳು ಕೊಚ್ಚಿಹೋಗಿದ್ದವು. ಇವುಗಳನ್ನು ಮರು ನಿರ್ಮಿಸಲು ಸರಕಾರ ವಿಳಂಬ ಮಾಡಿದ್ದರಿಂದ ಜನರೇ ಊರಿನಲ್ಲಿ ಸಿಗುವ ಅಡಕೆ ಮರದ ದಬ್ಬೆ, ಬಿದಿರು, ಮರಗಳಿಂದ ಸೇತುವೆಗಳನ್ನು ನಿರ್ಮಿಸಿ ಸಂಪರ್ಕ ಸಾಧಿಸಿಕೊಂಡಿದ್ದಾರೆ.
ಮೇಲ್ನೋಟಕ್ಕೆ ತೂಗುಯ್ಯಾಲೆಯಂತೆ ಕಂಡುಬರುವ, ಹಳೆಯ ಕಾಲದಲ್ಲಿ ಕಾಣಿಸಿ ಕೊಳ್ಳುತ್ತಿದ್ದ ಈ ಸೇತುವೆಗಳು ಪ್ರವಾಸಿಗರ ಪಾಲಿಗೆ ಸಹಜವಾಗಿ ಆಕರ್ಷಣೆಯ ಕೇಂದ್ರ ಬಿಂದು. ಸರಕಾರ ಮಲೆ ನಾಡಿಗೆ ಅತೀ ಹೆಚ್ಚು ಫುಟ್ ಬ್ರಿಜ್ಗಳನ್ನು ಕಟ್ಟಿಸಿಕೊಟ್ಟು ಸಂಪರ್ಕ ಸಾಧನವನ್ನಾಗಿಸಿತ್ತು. ಆದರೆ ಅವೆಲ್ಲ ಕೊಚ್ಚಿಹೋದ ಪರಿಣಾಮವಾಗಿ ಸಂಪರ್ಕ ಕಡಿತಗೊಂಡಿತ್ತು. ತಕ್ಷಣಕ್ಕೆ ಸಂಪರ್ಕ ಕಲ್ಪಿಸಲು ಕುಸಿದ ರಸ್ತೆಯೂ ಅಡ್ಡಿ ಪಡಿಸಿತ್ತು. ಇದೆಲ್ಲದರ ಪರಿಣಾಮವಾಗಿ ಯಲ್ಲಾಪುರ, ಸಿದ್ದಾಪುರ, ಶಿರಸಿ, ಮುಂಡಗೋಡ, ಜೋಯಿಡಾ, ಹಳಿಯಾಳ ಸೇರಿ ಹಲವು ತಾಲೂಕುಗಳ ನೂರಾರು ಗ್ರಾಮಗಳಲ್ಲಿ ಸಾರ್ವಜನಿಕರೇ ಖುದ್ದಾಗಿ ಅಡಕೆ ಮರದ ದಬ್ಬೆ,
ಬಿದಿರಿನ ಕಟ್ಟಿಗೆಯಿಂದ ಆಚೆ ದಡದಿಂದ ಈಚೆ ದಡಕ್ಕೆ ಸಂಪರ್ಕ ಸಾಽಸಿಕೊಂಡವು.
ಇವು ಸ್ವಲ್ಪ ತೂಗುಯ್ಯಾಲೆಯಾಡುವಂತೆ ಕಂಡು ಬರುತ್ತಿದ್ದು, ಹರಿವ ಹಳ್ಳದ ಆಚೆ ಈಚೆ ದಡದ ನಡುವೆ ತೂಗುವ ಸೇತುವೆ ನೋಡುವುದೇ ಸ್ವರ್ಗವೆನಿಸುತ್ತದೆ.
ಹೆಚ್ಚಿದ ಸೌಂದರ್ಯ
ಒಂದೆಡೆ ಹಸುರಾಗಿರುವ ಅಡಕೆ ತೋಟಗಳು, ಗದ್ದೆಗಳು ನಡುವೆ ಕಾಲು ದಾರಿ ಸ್ವಲ್ಪ ದೂರಸಾಗಿದರೆ ಹಳ್ಳ, ಆ ಹಳ್ಕೆದ ಆಚೆ ದಡ ದಾಟುವಂತೆ ನಿರ್ಮಿಸಲಾದ ಅಡಕೆ ಮುಂಡದ ಕಾಲು ಸಂಕ ಇಂಥ ಸೌಂದರ್ಯ ಕಣ್ಣು ತುಂಬಿಕೊಳ್ಳಬೇಕೆಂದರೆ ಉತ್ತರ
ಕನ್ನಡ ಜಿಲ್ಲೆಯ ಗ್ರಾಮ ಗ್ರಾಮಗಳಿಗೆ ಬರಬೇಕು. ಮಳೆಗಾಲದ ನಂತರದಲ್ಲಿ ಇಂಥ ಕಾಲು ಸಂಕಗಳ ಅಸ್ತಿತ್ವದಿಂದಾಗಿ ಮಲೆನಾಡು ಸೌಂದರ್ಯ ಹೊತ್ತು ೮೦ ವರ್ಷದ ಹಿಂದೆ ಹೋದ ೨೦ ರ ಹುಡುಗಿಯಾಗಿದ್ದಾಳೆ. ರಸ್ತೆಗಳು ಸರಿಯಾಗಿರದಿದ್ದರೂ ಮಲೆನಾಡ
ಸೌಂದರ್ಯ ನೋಡಲು ಹಲವು ರಾಜ್ಯವಲ್ಲದೇ ದೇಶಗಳಿಂದಲೂ ಪ್ರವಾಸಿಗರು ಬರುತ್ತಿದ್ದಾರೆ.
***
ಯಲ್ಲಾಪುರದಲ್ಲಿ ೮೦ ಸಣ್ಣ ಸೇತುವೆ ಮಂಜೂರು
೫೫ ತಾತ್ಕಾಲಿಕ ಅಡಕೆ ದಬ್ಬೆಯ ಸೇತುವೆಗಳು
೧೦೦ ವರ್ಷಗಳ ಹಿಂದಕ್ಕೆ ಹೋಗಿವೆ ಗ್ರಾಮಗಳು
ಉತ್ತರ ಕನ್ನಡದಲ್ಲಿ ೬೦೦ ಸೇತುವೆಗಳು ಮಾಯ
***
ಉತ್ತರಕನ್ನಡ ಜಿಲ್ಲೆಯಲ್ಲಿ ಯಲ್ಲಾಪುರ ತಾಲೂಕಿನ ಗ್ರಾಮಗಳಿಗೆ ಕಳೆದ ಬಾರಿಯ ಮಳೆಗಾಲದಲ್ಲಿ ಅತೀ ಹೆಚ್ಚು ಹಾನಿ ಸಂಭವಿ ಸಿದ್ದು, ಸಂಪರ್ಕ ಕೊಂಡಿಗಳಾದ ಸೇತುವೆಗಳು ಕೊಟ್ಟಿ ಹೋಗಿವೆ. ಆದ್ದರಿಂದ ಅದನ್ನೆಲ್ಲ ಪುನರ್ ನಿರ್ಮಿಸುವ ಉದ್ಧೇಶದಿಂದ ಗ್ರಾಮಬಂಧು ಕಾರ್ಯಮದಡಿ ೯೦ -ಟ್ ಬ್ರಿಡ್ಜ್ಗಳು ಮಂಜೂರಾಗಿದ್ದು, ಇನ್ನೇನು ನಿರ್ಮಾಣದಕಾರ್ಯ ಆರಂಭವಾಗಲಿದೆ. ಬರುವ ಮಳೆಗಾಲದ ಒಳಗೆ ಎಲ್ಲ -ಟ್ ಬ್ರಿಡ್ಜ್ಗಳು ಸಂಪೂರ್ಣವಾಗಲಿವೆ.
-ಶ್ರೀಕೃಷ್ಣ ಕಾಮಕರ್ ಯಲ್ಲಾಪುರ ದಂಡಾಧಿಕಾರಿಗಳು