ವಿಶೇಷ ವರದಿ: ಅರವಿಂದ ಬಿರಾದಾರ ವಿಜಯಪುರ
ಗಣೇಶ ಚತುರ್ಥಿ ನಂತರ ತನ್ನ ಜನಪ್ರಿಯತೆ ತೂಕ ಮಾಡಲು ಹೊರಟಿದ್ದ ಯಡಿಯೂರಪ್ಪ ಅವರಿಗೆ ತಾತ್ಕಾಲಿಕವಾಗಿ ಹಿನ್ನಡೆಯಾಗಿದೆ. ಯಡಿಯೂರಪ್ಪ ಸಹಜವಾಗಿ ಬಿಜೆಪಿಯಲ್ಲಿ ತನ್ನ ಬಿಗಿ ಹಿಡಿತವನ್ನು ಹೊಂದಿರುವ ಜನಪ್ರಿಯ ನಾಯಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಇಂಥ ನಾಯಕ ಈಗ ಅಧಿಕಾರ ಬಿಟ್ಟು ಕೆಳಗಿಳಿದಿದ್ದಾರೆ.
ಆದರೂ ಅವರ ಜನಪ್ರಿಯತೆ ಕುಂಗಿಲ್ಲ, ಲಿಂಗಾಯತರ ಪ್ರಶ್ನಾತೀತ ನಾಯಕ ಎನ್ನುವ ಜನಪ್ರಿಯತೆ ಇನ್ನೂ ಇದೆ. ಅದೇ ಜನಪ್ರಿಯತೆ ಮುಂದಿಟ್ಟುಕೊಂಡು ರಾಜ್ಯ ಪ್ರವಾಸಕ್ಕೆ ಅಣಿ ಆಗಿದ್ದರು. ಎಲ್ಲ ಜಿಗಳಲ್ಲಿ ಪ್ರವಾಸ ಮಾಡಿ ಇಷ್ಟು ವರ್ಷಗಳ ಕಾಲ ತಮ್ಮ ರಾಜಕೀಯಕ್ಕೆ ಬಳ ತುಂಬಿದ ರಾಜ್ಯದ ಜನತೆಗೆ ಅಭಿನಂದನೆ ಸಲ್ಲಿಸಲು
ಭರ್ಜರಿ ತಯಾರಿ ನಡೆಸಿದ್ದರು. ಅದಕ್ಕಾಗಿ ಹೊಸದೊಂದು ಐಷಾರಾಮಿ ವಾಹನವನ್ನು ಖರೀದಿಸಿದ್ದರು. ಇದೆಲ್ಲ ಮೇಲ್ನೋಟಕ್ಕೆ ಕಂಡು ಬಂದರೂ ಒಳತಿರುಳು ಬೇರೆಯೇ ಇತ್ತು. ತಾನು ಇನ್ನು ಪ್ರಭಾವಿ ನಾಯಕ, ನನ್ನ ಮಾತೇ ಅಂತಿಮ, ನನ್ನನ್ನು ಕಡೆಗಣಿಸಬೇಡಿ ಎನ್ನುವ ಬಹಿರಂಗ ಸಂದೇಶವನ್ನು ಬಿಜೆಪಿಯ ಹೈಕಮಾಂಡ್ಗೆ ನೀಡಬೇಕಾಗಿತ್ತು. ತಮ್ಮ ಪುತ್ರ ವಿಜಯೇಂದ್ರನಿಗೂ ಒಂದು ಶಾಶ್ವತ ಪಟ್ಟವನ್ನು ಕಲ್ಪಿಸಬೇಕಾಗಿತ್ತು. ಇವರ ಈ ಪ್ರವಾಸಕ್ಕೆ ಒಂದು ಕ್ಷಣ ಬಿಜೆಪಿಯ ನಾಯಕರೆಲ್ಲರಿಗೂ ಚಡಪಡಿಕೆ ಶುರುವಾಗಿದ್ದಂತೂ ಸುಳ್ಳಲ್ಲ.
ಪ್ರವಾಸಕ್ಕೆ ಕೊಕ್ಕೆ: ಹೇಗಾದ್ರು ಮಾಡಿ ಪ್ರವಾಸಕ್ಕೆ ಕೊಕ್ಕೆ ಹಾಕಬೇಕು ಎಂದು ತೀರ್ಮಾನಿಸಿದ್ದರು. ಅದರಂತೆ ಮೂರು ಮಹಾನಗರ ಪಾಲಿಕೆಗಳಿಗೆ ಚುನಾವಣೆ ಘೋಷಣೆಯಾಗಿದ್ದು, ಈ ಹಂತದಲ್ಲಿ ಬಿಎಸ್ವೈ ರಾಜ್ಯದಲ್ಲಿ ಪ್ರವಾಸ ಮಾಡಿದರೆ, ಚುನಾವಣೆ ವೇಳೆಗೆ ಗೊಂದಲ ಉಂಟಾಗುತ್ತದೆ, ಹೀಗಾಗಿ ಅವರ ಪ್ರವಾಸಕ್ಕೆ ಹೈ ಕಮಾಂಡ್ ಅನುಮತಿ ನೀಡಬಾರದು ಎಂದು ಕಿವಿ ಊದಿದ್ದರು. ಈ ಊದುವಿಕೆ ಬಿಎಸ್ ಪ್ರವಾಸಕ್ಕೆ ಅಲ್ಪ ವಿರಾಮ ನೀಡುವಲ್ಲಿ ಸ್ವಲ್ಪಮಟ್ಟಿಗೆ ಯಶಸ್ವಿಯಾಗಿ ದ್ದಾರೆ.
ಯಡಿಯೂರಪ್ಪ ಅವರ ಅನುಪಸ್ಥಿತಿಯಲ್ಲಿ ನಡೆಯುತ್ತಿರುವ ಈ ಮಹಾನಗರ ಪಾಲಿಕೆ ಚುನಾವಣೆಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಪಕ್ಷದ ಅಧ್ಯಕ್ಷರಾದಿ
ಯಾಗಿ ಬಹುತೇಕರು ಈ ಚುನಾವಣೆಯಲ್ಲಿ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ, ಯಡಿಯೂರಪ್ಪ ನನಗೂ ಇದಕ್ಕೂ ಸಂಬಂಧವಿಲ್ಲ ಎನ್ನುವಂತೆ ಇದ್ದಾರೆ.
ಅನುಭವದ ಪಾಠವಾಗಿದೆ ಅವರಿಗೆ!
ಈ ಚುನಾವಣೆಯಲ್ಲಿ ಯಾರ ಯಾರ ತಾಕತ್ತು ಎಷ್ಟು ಇದೆ ಎನ್ನುವುದನ್ನು ಕಾದು ನೋಡುವ ತಂತ್ರಕ್ಕೆ ಯಡಿಯೂರಪ್ಪ ಮುಂದಾಗಿದ್ದಾರೆ. ರಾಜ್ಯ ರಾಜಕಾರಣದಲ್ಲಿ
ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ ಎಂಬ ಹೆಸರು ಯಡಿಯೂರಪ್ಪ ಅವರಿಗಿದೆ. ಯಡಿಯೂರಪ್ಪ ಅವರ ಹೋರಾಟಗಳು, ಪಕ್ಷ ಸಂಘಟನೆಯ ತಾಕತ್ತು
ಈಗ ಅವರ ವಿರೋಧಿ ಪಾಳೆಯಗಳ ನಿದ್ದೆಗೆಡೆಸಿವೆ. ಯಡಿಯೂರಪ್ಪ ಅವರು ಈಗ ಮಾಗಿದ್ದಾರೆ. ಅನುಭವ ಅವರಿಗೆ ಹಲವು ಪಾಠಗಳನ್ನು ಕಲಿಸಿದೆ.