ಮ್ಮಾಯಿ-ಬಿಎಸ್ವೈ ಜಂಟಿ ಕಾರ್ಯಾಚರಣೆ ವರಿಷ್ಠರ ಸೂಚನೆ
ವಿಶೇಷ ವರದಿ: ರಂಜಿತ್ ಎಚ್. ಅಶ್ವತ್ಥ ಬೆಂಗಳೂರು
ಹಾನಗಲ್ ಕ್ಷೇತ್ರವನ್ನು ಗೆಲ್ಲಲು ಮಾಜಿ ಹಾಗೂ ಹಾಲಿ ಮುಖ್ಯಮಂತ್ರಿಯ ಜಂಟೀ ಕಾರ್ಯಾಚರಣೆಯ ಸೂಚನೆ ಬಿಜೆಪಿ ವರಿಷ್ಠರಿಂದ ರವಾನೆಯಾಗಿದ್ದು, ಬಿ.ಎಸ್.ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಉಪಕದನದ ಕಣಕ್ಕೆ ಶನಿವಾರದಿಂದಲೇ ಧುಮುಕಿದ್ದಾರೆ.
ದಿನದಿಂದ ದಿಕ್ಕೆ ಉಪಚುನಾವಣೆಯ ರಂಗು ಏರುತ್ತಿರುವಾಗಲೇ ಫಲಿತಾಂಶದ ಸಂಬಂಧ ಬಿಜೆಪಿ ಹೈಕಮಾಂಡ್ ಆಂತರಿಕ ಸಮೀಕ್ಷಾ ವರದಿ ಸಂಗ್ರ ಹಿಸಿದೆ. ಇದರನ್ವಯ ಹಾನಗಲ್ನಲ್ಲಿ ಬಿಜೆಪಿಗೆ ಹಣಾಹಣಿಯ ಸ್ಪರ್ಧೆಯನ್ನು ನಿರೀಕ್ಷಿಸಲಾಗಿದೆ. ಹೀಗಾಗಿ ಎಚ್ಚೆತ್ತಿರುವ ಪಕ್ಷದ ವರಿಷ್ಠರು, ಉತ್ತರ ಕರ್ನಾಟಕ ಭಾಗದಲ್ಲಿನ ಯಡಿಯೂರಪ್ಪ ಪ್ರಭಾವ ಹಾಗೂ ಅವರ ವೈಯಕ್ತಿಕ ವರ್ಚಸ್ಸನ್ನು ಸಮರ್ಥವಾಗಿ ಬಳಸಲು ನಿರ್ಧರಿಸಲಾಗಿದೆ. ಮುಖ್ಯಮಂತ್ರಿ ಹಾಗೂ ಮಾಜಿ ಮುಖ್ಯಮಂತ್ರಿ ಜಂಟಿ ಪ್ರಚಾರದ ಮೂಲಕ ಮತದಾರರನ್ನು ಸೆಳೆಯುವ ತಂತ್ರ ಅನುಸರಿಸು ವುದು ಅನಿವಾರ್ಯ ಎಂಬ ನಿಲುವಿಗೆ ಬರಲಾಗಿದೆ.
ಫಲಿಸದ ಪ್ರತ್ಯೇಕ ಪ್ರಚಾರ
ಚುನಾವಣೆ ಆರಂಭದಲ್ಲಿ ಹಾನಗಲ್ ಕ್ಷೇತ್ರದಲ್ಲಿ ಬಸವರಾಜ ಬೊಮ್ಮಾಯಿ ಹಾಗೂ ಯಡಿಯೂರಪ್ಪ ಪ್ರತ್ಯೇಕ ವಾಗಿ ಪ್ರಚಾರ ನಡೆಸಿದ್ದರು. ಆದರೆ ಇದು ಪೂರ್ಣ ಪ್ರಮಾಣದಲ್ಲಿ ನೆರವಾಗುತ್ತಿಲ್ಲ. ಇಬ್ಬರೂ ಒಟ್ಟಿಗೇ ಪ್ರಚಾರ ಕ್ಕಿಳಿದರೆ ಮಾತ್ರ ಮತದಾರರನ್ನು ಸೆಳೆಯಬಹುದು ಎನ್ನಲಾಗಿದೆ. ಹೀಗಾಗಿ ಹೈಕಮಾಂಡ್ ಇಬ್ಬರಿಗೂ ಒಟ್ಟಿಗೆ ಪ್ರಚಾರಕ್ಕೆ ಹೋಗಬೇಕು ಎಂದು ಸೂಚಿಸಿದೆ.
ಬಿಎಸ್ವೈಗೆ ಮನವಿ
ಇನ್ನು ಉಪಚುನಾವಣಾ ವಿಷಯದಲ್ಲಿ ತಮ್ಮನ್ನು ವಿಶ್ವಾಸಕ್ಕೆ ತಗೆದುಕೊಂಡಿಲ್ಲ ಎನ್ನುವ ಕಾರಣಕ್ಕೆ ಆರಂಭ ದಲ್ಲಿ ಯಡಿಯೂರಪ್ಪ ಅವರು ಹಾನಗಲ್ ವಿಷಯಕ್ಕೆ ಸಂಬಂಧಿಸಿದಂತೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಆದರೆ ವಿಜಯದಶಮಿಯಂದು ಹಬ್ಬಕ್ಕೆ ಶುಭ ಕೋರುವ ನೆಪದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಆಗಮಿಸಿ ಯಡಿಯೂರಪ್ಪ ಅವರ ಮನ ವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆದ್ದರಿಂದ ಯಡಿಯೂರಪ್ಪ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಹಾನಗಲ್ ಮತ್ತು ಸಿಂದಗಿ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ನಡೆಸುವ ಕಾರ್ಯಕ್ರಮ ನಿಗದಿಪಡಿಸಿಕೊಂಡು ತಲಾ ಎರಡೆರಡು ದಿನ ಪ್ರಚಾರ ಕಾರ್ಯ ಮುಗಿಸಿದರೂ ನಂತರ ಹೈಕಮಾಂಡ್ ಸೂಚನೆಯಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜತೆ ಹಾನಗಲ್ ಕ್ಷೇತ್ರದಲ್ಲಿ ಇನ್ನೂ ಎರಡು ದಿನಗಳ ಕಾಲ ಜಂಟಿ ಪ್ರಚಾರ ನಡೆಸಿ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ ಮಾಡುತ್ತಿದ್ದಾರೆ.
ಈಗಾಗಲೇ ಹಾನಗಲ್ ಕ್ಷೇತ್ರದ ಬಮ್ಮನಹಳ್ಳಿ, ಬೆಳಗಾಲಪೇಟೆ, ಅಕ್ಕಿಆಲೂರು ಭಾಗದಲ್ಲಿ ಪ್ರಚಾರ ಮಾಡಿರುವ ಅವರು, ಶನಿವಾರ ಚಿಕ್ಕಾಂಶಿ ಹೊಸೂರ,
ಮಕರವಳ್ಳಿ, ಹೇರೂರು ವ್ಯಾಪ್ತಿಯಲ್ಲಿ ಜಂಟಿ ಪ್ರಚಾರ ನಡೆಸಿ ಬಿಜೆಪಿ ಅಭ್ಯರ್ಥಿ ಪರ ಮತ ಯಾಚಿಸಿದ್ದಾರೆ.
ಸಿಎಂ ದೆಹಲಿ ಪ್ರವಾಸ ರದ್ದು ಈ ಹಿಂದೆ ಬೊಮ್ಮಾಯಿ ಅವರು ಕೆಲ ದಿನಗಳ ಕಾಲ ಪ್ರಚಾರ ನಡೆಸಿ ದೆಹಲಿಗೆ ಶನಿವಾರ ತೆರಳಬೇಕಿತ್ತು. ಆದರೆ ಬದಲಾದ
ಬೆಳವಣಿಗೆ ಗಮನಿಸಿರುವ ಹೈಕಮಾಂಡ್ ದೆಹಲಿಗೆ ಬರುವುದು ಬೇಡ. ಯಡಿಯೂರಪ್ಪ ಅವರೊಂದಿಗೆ ಪ್ರಚಾರ ಮಾಡಿ ಎಂದು ಸೂಚನೆ ನೀಡಿದ್ದಾರೆ. ಆದ್ದರಿಂದ ಅಂತಿಮ ಕ್ಷಣದಲ್ಲಿ ಬದಲಾವಣೆಗಳಾಗಿವೆ ಎನ್ನುವ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿಬಂದಿವೆ. ಆದರೆ ಇನ್ನೊಂದು ಮೂಲದ ಪ್ರಕಾರ, ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿದ್ದರೂ ಅವರಿಗಿರುವ ಮಾಸ್ ಇಮೇಜ್ ಇನ್ನು ಕಡಿಮೆಯಾಗಿಲ್ಲ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗಿಂತಲೂ ಹೆಚ್ಚಿನ ಸಂಖ್ಯೆಯ ಜನರು ಯಡಿಯೂರಪ್ಪ ಅವರ ಸಭೆಗಳಿಗೆ ಸೇರುತ್ತಿದ್ದಾರೆ. ಆದ್ದರಿಂದ ಸಿಎಂಗೆ ಇಮೇಜ್ ಇಲ್ಲ ಎನ್ನುವ ಸಂದೇಶ ರವಾನೆಯಾಗಬಾರದು ಮತ್ತು ಮತಗಳು ಬಿಜೆಪಿ ಕೈ ತಪ್ಪಬಾರದು ಎನ್ನುವ ಕಾರಣಕ್ಕೆ ಹೈಕಮಾಂಡ್ ಜಂಟಿ
ಪ್ರಚಾರ ಕಾರ್ಯ ಆಯೋಜಿಸಿದೆ ಎನ್ನುವ ಮಾತಿದೆ.
ಬಿಎಸ್ವೈ ಮೊರೆ ಹೋಗಿದ್ದೇಕೆ?
ರಾಜ್ಯದಲ್ಲಿ ಮಾಸ್ ವರ್ಚಸ್ಸು ಹೊಂದಿರುವ ನಾಯಕ ಹಾನಗಲ್ ಕ್ಷೇತ್ರದ ಮೇಲೆ ಹಿಡಿತ ಹೊಂದಿರುವ ಬಿಎಸ್ವೈ ಲಿಂಗಾಯತ ಮತ ವಿಭಜನೆ ಯಾಗದಂತೆ ಎಚ್ಚರವಹಿಸಬೇಕಾದ ಅನಿವಾರ್ಯತೆ ಯಡಿಯೂರಪ್ಪ ಅವರ ಮಾತಿಗೆ ಉದಾಸಿ ಕುಟುಂಬ ಎದುರಾಡುವ ಸಾಧ್ಯತೆ ಕಡಿಮೆ ವರಿಷ್ಠರಿಗೆ ಇರುವ ಆತಂಕವೇನು? ಸಿಂದಗಿ, ಹಾನಗಲ್ನಲ್ಲಿ ಮತ ವಿಭಜನೆಯಾಗುವ ಸಾಧ್ಯತೆ ಬೊಮ್ಮಾಯಿ ಕಾಮನ್ ಮ್ಯಾನ್ ಸಿಎಂ ಆಗಿದ್ದರೂ, ಮತ ಸೆಳೆಯುವಲ್ಲಿ ಸಂಪೂರ್ಣ ಯಶಸ್ವಿಯಾಗಿಲ್ಲ ಆಂತರಿಕ ವರದಿಯಲ್ಲಿ ಎರಡೂ ಕ್ಷೇತ್ರಗಳ ಗೆಲುವು ಕಠಿಣ ಎನ್ನುವ ಮಾಹಿತಿ ಮೊದಲ ಉಪಚುನಾವಣೆ ಸೋತರೆ ಕೆಟ್ಟ ಸಂದೇಶ ರವಾನೆಯಾಗುವ ಆತಂಕ.