೩ ಅಂಶ ಆಧರಿಸಿ ಕರ್ನಾಟಕ ಸೂತ್ರ ಹೆಣೆಯುತ್ತಿರುವ ಬಿಜೆಪಿ ವರಿಷ್ಠರು
ವಾರದೊಳಗೆ ಸಂಭಾವ್ಯರ ಹೊಸ ಪಟ್ಟಿ ಸಿದ್ಧ
ಸೂತ್ರ ಆಧರಿಸಿ ಒಳ-ಹೊರಗು ನಿರ್ಧಾರ
ಪ್ರದೀಪ್ ಕುಮಾರ್ ಎಂ ಬೆಂಗಳೂರು
ಕರ್ನಾಟಕಕ್ಕೆ ಕರ್ನಾಟಕವೇ ಮಾದರಿ. ಬೇರಾವ ರಾಜ್ಯಗಳ ಮಾದರಿಯೂ ಇಲ್ಲಿಗೆ ಲಾಭದಾಯಕವಾಗದು ಎಂಬ ನಿರ್ಧಾರಕ್ಕೆ ಬಂದಿರುವ ಬಿಜೆಪಿ ವರಿಷ್ಠರು, ಎಲ್ಲ ಸಂಭವನೀಯತೆ, ಬೆಳವಣಿಗೆ, ಚರ್ಚೆ, ರಾಜಕೀಯ ಕಸರತ್ತುಗಳ ನಡುವೆಯೇ ರಾಜ್ಯ ಸಚಿವ ಸಂಪುಟ ಪುನಾರಚನೆಗೆ ಪ್ರತ್ಯೇಕ ‘ಕರ್ನಾಟಕ ಸೂತ್ರ’ವೊಂದನ್ನೇ ಸಿದ್ಧಪಡಿಸುತ್ತಿದೆ.
ಪಕ್ಷದ ಉನ್ನತ ಖಚಿತ ಮೂಲವೊಂದರ ಪ್ರಕಾರ, ಮುಂದಿನ ವರ್ಷದ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ರಾಜ್ಯ ಸಚಿವ ಸಂಪುಟ ಪುನಾರಚನೆಗೆ ಅಂತಿಮ ಹಂತದ ಕಸರತ್ತಿಗೆ ಇಳಿದಿರುವ ಬಿಜೆಪಿ ಹೈಕಮಾಂಡ್, ಕರ್ನಾಟಕಕ್ಕೆ ಸಂಬಂಧಿಸಿದಂತೆ ಬೇರಾವುದೇ ರಾಜ್ಯಗಳ, ಹಳೆ ಮಾದರಿಯ ಗೋಜಿಗೂ ಹೋಗದೇ, ಇಲ್ಲಿನ ಸನ್ನಿವೇಶ ಗಳಿಗನುಗುಣ ಪ್ರತ್ಯೇಕ ಸೂತ್ರವೊಂದನ್ನು ಸಿದ್ಧಪಡಿಸುತ್ತಿದೆ.
ಸಚಿವ ಸಂಪುಟ ಪುನಾರಚನೆಯ ಸಂಪೂರ್ಣ ಹೊಣೆಯನ್ನು ಸ್ವತಃ ಪಕ್ಷದ ದಿಲ್ಲಿಯ ನಾಯಕರೇ ಹೊತ್ತಿದ್ದು, ರಾಜಕೀಯ ಸಾಧ್ಯಾಸಾಧ್ಯತೆ, ಜಾತಿವಾರು, ಪ್ರದೇಶವಾರು ಲೆಕ್ಕಾಚಾರಗಳ ಜತೆಗೆ ಸಂಭಾವ್ಯ ಆಡಳಿತ ವಿರೋಧಿ ಅಲೆಯಿಂದ ಹೊರಬರಲು ಕೈಗೊಳ್ಳಬೇಕಾದ ಕ್ರಮಗಳನ್ನೂ ಪರಿಗಣಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಪುಟದಿಂದ ಯಾರನ್ನು ಕೈಬಿಡಬೇಕು ಮತ್ತು ಯಾರಿಗೆ ಹೊಸದಾಗಿ ಅವಕಾಶ ಕಲ್ಪಿಸಬೇಕು ಎಂಬುದನ್ನು ಬಹು ಎಚ್ಚರಿಕೆಯಿಂದ ನಿರ್ಧರಿಸಲಿದ್ದಾರೆ.
ಉತ್ತರ ಪ್ರದೇಶ, ಉತ್ತರಾಖಂಡ್, ಗುಜರಾತ್ ಸೇರಿದಂತೆ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳೆಲ್ಲೆಡೆ ಚುನಾವಣೆಗೆ ಒಂದು ವರ್ಷ ಇರುವಾಗ ಅಲ್ಲಿನ ಸಚಿವ ಸಂಪುಟಗಳಲ್ಲಿ ಮಹತ್ವದ ಬದಲಾವಣೆಗಳಾಗಿವೆ. ಅದೇ ರೀತಿ ರಾಜ್ಯದಲ್ಲೂ ಬದಲಾವಣೆಗಳು ಖಚಿತ. ಆದರೆ, ಆ ರಾಜ್ಯಗಳಲ್ಲಿ ಅನುಸರಿಸಿದ ನೀತಿಯನ್ನು ಕೈಬಿಟ್ಟು ಕರ್ನಾಟಕಕ್ಕೆ ಹೊಸ ತಂತ್ರವೊಂದನ್ನು ವರಿಷ್ಠರು ಸಿದ್ಧಪಡಿಸುತ್ತಿದ್ದಾರೆ. ಅದು
ಅಂತಿಮಗೊಳ್ಳುತ್ತಿದ್ದಂತೆ ಹೊಸ ಸಂಪುಟ ರಚನೆಯಾಗಲಿದೆ.
ಈಗಿನ ಚಿಂತನೆಯನ್ವಯ ರಾಜ್ಯದಲ್ಲಿ ೨೦೧೯ರಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲು ಕಾರಣರಾದವರನ್ನು ಹೊರತುಪಡಿಸಿ ಉಳಿದ ಬಹುತೇಕ ಸಚಿವರನ್ನು ಬದಲಿಸಿ ಹೊಸ ಮುಖಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ. ಮೊದಲು ಸಂಪುಟ ಸೂತ್ರ ಅಂತಿಮಗೊಳಿಸಿ ಬಳಿಕ ಕೈಬಿಡುವ ಮತ್ತು ಒಳಬರುವವರು ಯಾರು ಎಂಬುದನ್ನು ತೀರ್ಮಾನಿಸಲಿದ್ದಾರೆ ಎನ್ನತ್ತವೆ ಪಕ್ಷದ ಮೂಲಗಳು.
ಅರ್ಧಕ್ಕರ್ಧ ಬದಲು!
ಆಡಳಿತ ವಿರೋಧಿ ಅಲೆಯಿಂದ ಹೊರಬರಲು ಸಂಪುಟಕ್ಕೆ ಮೇಜರ್ ಸರ್ಜರಿ ಆಗುವ ಸಾಧ್ಯತೆ ಹೆಚ್ಚಿದೆ. ಬಹುತೇಕ ಹಳೆಯ ಸಚಿವರನ್ನು ರಾಜ್ಯದಲ್ಲಿ ಪಕ್ಷ ಸಂಘಟನೆಗೆ ಹಚ್ಚಿ, ಕನಿಷ್ಠ ಶೇ.೫೦ರಷ್ಟು ಹೊಸಬರಿಗೆ ಅವಕಾಶ ಸಿಗಬಹುದು. ಇತ್ತೀಚೆಗೆ ಕೋರ್ ಕಮಿಟಿ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಗ್ರಹಿಸಿದ ಮಾಹಿತಿ ಮತ್ತು ಬಿಜೆಪಿ ರಾಜ್ಯ ಕಾರ್ಯಕಾರಿಣಿ ವೇಳೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ
ನಡೆಸಿದ ಅಭಿಪ್ರಾಯ ಸಂಗ್ರಹವನ್ನು ಆಧರಿಸಿ ವರಿಷ್ಠರೇ ಕುಳಿತು ಈ ಸೂತ್ರ ಹೆಣೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕಾರಣ ಕ್ಕಾಗಿಯೇ ಸಚಿವಾಕಾಂಕ್ಷಿಗಳಾರೂ ಯಾವುದೇ ಕಾರಣಕ್ಕೂ ದೆಹಲಿಗೆ ಬರವುದು ಬೇಡ ಎಂಬ ಸ್ಪಷ್ಟ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಸೂತ್ರಕ್ಕೆ ಮೂರು ಗಂಟು?
ಸಂಪುಟ ಪುನಾರಚನೆಗೆ ಸಂಬಂಧಿಸಿದಂತೆ ಮೂರು ಪ್ರಮುಖ ವಿಚಾರಗಳ ಮೇಲೆ ಕೇಂದ್ರೀಕರಿಸಿ ಸೂತ್ರ ಸಿದ್ಧಪಡಿಸಲಾಗುತ್ತಿದೆ. ಜಾತಿ, ಪ್ರದೇಶ ಹಾಗೂ ಪ್ರಾಬಲ್ಯವನ್ನು ಪ್ರಮುಖವಾಗಿ ಪರಿಗಣಿಸಲಾಗುತ್ತಿದೆ. ಕೆ.ಎಸ್.ಈಶ್ವರಪ್ಪ ರಾಜೀನಾಮೆಯಿಂದ ತೆರವಾಗಿರುವ ಸ್ಥಾನವೂ ಸೇರಿ ಸದ್ಯ ಸಂಪುಟದಲ್ಲಿ ೫ ಸ್ಥಾನಗಳು ಖಾಲಿ ಇವೆ. ಇದರೊಂದಿಗೆ ೭-೮ ಸಚಿವರನ್ನು ಸಂಪುಟದಿಂದ ಕೈಬಿಟ್ಟು, ಹೊಸದಾಗಿ ೧೨ರಿಂದ ೧೩ ಮಂದಿಯನ್ನು ಸೇರ್ಪಡೆ ಮಾಡಿಕೊಳ್ಳುವ ಕುರಿತು ಚರ್ಚೆ ಆರಂಭವಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಈ ವಾರಾಂತ್ಯಕ್ಕೆ ಸೂತ್ರ ಸಿದ್ಧವಾಗಲಿದ್ದ, ಇನ್ನೊಂದು ವಾರದಲ್ಲಿ ಸಂಪುಟ ಪುನಾರಚನೆ ನಡೆಯಲಿದೆ. ಪಟ್ಟಿ ಸಿದ್ಧವಾಗಲಿದೆ ಎಂದು ಮೂಲ ಗಳು ತಿಳಿಸಿವೆ.
ಪ್ಲಾನ್ ನಂ. ೧
೨೦೦೮ರಲ್ಲಿ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ, ಜಗದೀಶ್ ಶೆಟ್ಟರ್, ಯಡಿಯೂರಪ್ಪ ೨ನೇ ಅವಧಿ ಮತ್ತು ಇದೀಗ
ಬಸವರಾಜ ಬೊಮ್ಮಾಯಿ ಸರಕಾರದಲ್ಲಿ ಸಚಿವರಾಗಿರುವ ಆರ್.ಅಶೋಕ್ ಅವರನ್ನು ಕೈಬಿಟ್ಟರೆ ಹೇಗೆ? ಇದರಿಂದಾಗುವ ಸಮಸ್ಯೆ ಯನ್ನು ಯಾವ ರೀತಿ ಸರಿಗಟ್ಟಬಹುದು? ಬಿಜೆಪಿ ಅಧಿಕಾರದಲ್ಲಿದ್ದಾಗಲೆಲ್ಲ ಸಚಿವರಾಗಿದ್ದ ಆರ್.ಅಶೋಕ್ ಒಕ್ಕಲಿಗರಾಗಿದ್ದರೂ ಈ
ಸಮುದಾಯದವರನ್ನು ಒಗ್ಗೂಡಿಸಲು ಸಾಧ್ಯವಾಗಿಲ್ಲ. ಹೀಗಾಗಿ ಈಗಾಗಲೇ ಸಂಪುಟದಲ್ಲಿರುವ ಅದೇ ಸಮುದಾಯದ ಡಾ.ಸಿ.ಎನ್.ಅಶ್ವತ್ಥನಾರಾಯಣ, ಗೋಪಾಲಯ್ಯ, ಎಸ್.ಟಿ.ಸೋಮಶೇಖರ್ ಅವರನ್ನು ಹಾಗೂ ಇತರೆ ಪ್ರಭಾವಿ ಸಮುದಾಯದ ವಿ.ಸೋಮಣ್ಣ, ಭೈರತಿ ಬಸವರಾಜು ಮತ್ತು ಮುನಿರತ್ನ ಅವರನ್ನು ಮುಂದುವರಿಸುವುದು. ಇನ್ನು ಬೆಂಗಳೂರಿನಲ್ಲಿ ಸಾಕಷ್ಟು ಪ್ರಭಾವಿಯಾಗಿರುವ ಅರವಿಂದ ಲಿಂಬಾವಳಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದು. ಆ ಮೂಲಕ ಅಶೋಕ್ ಅವರನ್ನು ಸಂಪುಟದಿಂದ ಕೈಬಿಟ್ಟರೆ ಆಗುವ ಹಾನಿ ತಡೆಗಟ್ಟುವುದು.
ಪ್ಲಾನ್ ನಂ. ೨
ಹಳೇ ಮೈಸೂರು ಭಾಗದಲ್ಲಿ ಅದರಲ್ಲೂ ಮುಖ್ಯವಾಗಿ ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಕಟ್ಟಿಹಾಕಲು ಸಿ.ಪಿ.ಯೋಗೇಶ್ವರ್ ಅವರಿಗೆ ಅವಕಾಶ ನೀಡಬೇಕೇ ಅಥವಾ ಬೇರೆ ಯಾವುದಾದರೂ ದಾರಿಗಳಿವೆಯೇ ಎಂಬುದನ್ನು ಪರಿಶೀಲಿಸುವುದು. ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರಿಗೆ ಹಳೇ
ಮೈಸೂರು ಭಾಗದ ಜವಾಬ್ದಾರಿ ವಹಿಸಿ, ಆ ಭಾಗದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಿದರೆ ಹೇಗೆ? ಅದಕ್ಕಾಗಿ ವಿಜಯೇಂದ್ರಗೆ ಸಚಿವ ಸ್ಥಾನ ನೀಡಬೇಕೇ? ಜೆಡಿಎಸ್ ಸಹಕಾರದೊಂದಿಗೆ ಡಿ.ಕೆ.ಶಿವಕುಮಾರ್ ಅವರನ್ನು ಹದ್ದು ಬಸ್ತಿನಲ್ಲಿಡಬಹುದೇ? ಇದಾವುದೂ ಸಾಧ್ಯ ವಾಗದೇ ಇದ್ದರೆ ಯೋಗೇಶ್ವರ್ಗೆ ಸಚಿವ ಸ್ಥಾನ ನೀಡಿ ಹಳೇ ಮೈಸೂರು, ಅದರಲ್ಲೂ ಮುಖ್ಯವಾಗಿ ರಾಮನಗರ ಭಾಗದಲ್ಲಿ ಪಕ್ಷ ಸಂಘಟನೆಗೆ ವೇದಿಕೆ ಸಿದ್ಧಪಡಿಸುವುದು.
ಪ್ಲಾನ್ ನಂ. ೩
ಉತ್ತರ ಕರ್ನಾಟಕ ಭಾಗದಲ್ಲಿ ಪ್ರಬಲವಾಗಿರುವ ಲಿಂಗಾಯತ ಸಮುದಾಯದವರಲ್ಲಿ ಯಾರನ್ನು ಸಂಪುಟದಿಂದ ಕೈಬಿಟ್ಟು ಅದೇ
ಸಮುದಾಯದ ಹೊಸಬರಿಗೆ ಅವಕಾಶ ನೀಡಿ ಆ ಸಮುದಾಯ ಅಸಮಾಧಾನಗೊಳ್ಳದಂತೆ ನೋಡಿಕೊಳ್ಳುವುದು. ಆ ನಿಟ್ಟಿನಲ್ಲಿ ಯಾವ ರೀತಿ ಕಾರ್ಯತಂತ್ರ ರೂಪಿಸಬೇಕು ಎಂಬ ಬಗ್ಗೆ ಚರ್ಚೆ ಆರಂಭವಾಗಿದೆ. ಒಂದೊಮ್ಮೆ ವೀರಶೈವ ಲಿಂಗಾಯತ ಸಮುದಾಯದಲ್ಲಿ
ಹೊಸಬರಿಗೆ ಅವಕಾಶ ಕಲ್ಪಿಸುವುದಾದರೆ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್ ಅವರಿಗೆ ಅವಕಾಶ ಸಿಗುತ್ತದೆ.
ಅದಕ್ಕಾಗಿ ಅದೇ ಸಮುದಾಯದ ಇಬ್ಬರು ಪ್ರಮುಖ ಸಚಿವರು ಅಧಿಕಾರ ಕಳೆದುಕೊಳ್ಳಬೇಕಾಗುತ್ತದೆ. ಅವರಿಗೆ ಪಕ್ಷದಲ್ಲಿ ಸ್ಥಾನಮಾನ ನೀಡಿ ಸಮುದಾಯದ ಮತಗಳು ಪಕ್ಷದಿಂದ ದೂರವಾಗದಂತೆ ನೋಡಿಕೊಳ್ಳುವುದು. ಅದಕ್ಕಾಗಿ ಹೊಸ ಕಾರ್ಯತಂತ್ರ ಸಿದ್ಧಪಡಿಸಲಾಗುತ್ತಿದೆ.
ಅರ್ಧಕ್ಕರ್ಧ ಬದಲು!
ಆಡಳಿತ ವಿರೋಧಿ ಅಲೆಯಿಂದ ಹೊರಬರಲು ಸಂಪುಟಕ್ಕೆ ಮೇಜರ್ ಸರ್ಜರಿ ಆಗುವ ಸಾಧ್ಯತೆ ಹೆಚ್ಚಿದೆ. ಬಹುತೇಕ ಹಳೆಯ ಸಚಿವರನ್ನು ರಾಜ್ಯದಲ್ಲಿ ಪಕ್ಷ ಸಂಘಟನೆಗೆ ಹಚ್ಚಿ, ಕನಿಷ್ಠ ಶೇ.೫೦ರಷ್ಟು ಹೊಸಬರಿಗೆ ಅವಕಾಶ ಸಿಗಬಹುದು. ಇತ್ತೀಚೆಗೆ ಕೋರ್ ಕಮಿಟಿ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಗ್ರಹಿಸಿದ ಮಾಹಿತಿ ಮತ್ತು ಬಿಜೆಪಿ ರಾಜ್ಯ ಕಾರ್ಯಕಾರಿಣಿ ವೇಳೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ
ನಡೆಸಿದ ಅಭಿಪ್ರಾಯ ಸಂಗ್ರಹವನ್ನು ಆಧರಿಸಿ ವರಿಷ್ಠರೇ ಕುಳಿತು ಈ ಸೂತ್ರ ಹೆಣೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕಾರಣಕ್ಕಾ ಗಿಯೇ ಸಚಿವಾಕಾಂಕ್ಷಿಗಳಾರೂ ಯಾವುದೇ ಕಾರಣಕ್ಕೂ ದೆಹಲಿಗೆ ಬರವುದು ಬೇಡ ಎಂಬ ಸ್ಪಷ್ಟ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಸೂತ್ರಕ್ಕೆ ಮೂರು ಗಂಟು?
ಸಂಪುಟ ಪುನಾರಚನೆಗೆ ಸಂಬಂಧಿಸಿದಂತೆ ಮೂರು ಪ್ರಮುಖ ವಿಚಾರಗಳ ಮೇಲೆ ಕೇಂದ್ರೀಕರಿಸಿ ಸೂತ್ರ ಸಿದ್ಧಪಡಿಸಲಾಗುತ್ತಿದೆ. ಜಾತಿ, ಪ್ರದೇಶ ಹಾಗೂ ಪ್ರಾಬಲ್ಯವನ್ನು ಪ್ರಮುಖವಾಗಿ ಪರಿಗಣಿಸಲಾಗುತ್ತಿದೆ. ಕೆ.ಎಸ್.ಈಶ್ವರಪ್ಪ ರಾಜೀನಾಮೆಯಿಂದ ತೆರವಾಗಿರುವ ಸ್ಥಾನವೂ ಸೇರಿ ಸದ್ಯ ಸಂಪುಟದಲ್ಲಿ ೫ ಸ್ಥಾನಗಳು ಖಾಲಿ ಇವೆ. ಇದರೊಂದಿಗೆ ೭-೮ ಸಚಿವರನ್ನು ಸಂಪುಟದಿಂದ ಕೈಬಿಟ್ಟು, ಹೊಸದಾಗಿ ೧೨ರಿಂದ ೧೩ ಮಂದಿಯನ್ನು ಸೇರ್ಪಡೆ ಮಾಡಿಕೊಳ್ಳುವ ಕುರಿತು ಚರ್ಚೆ ಆರಂಭವಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಈ
ವಾರಾಂತ್ಯಕ್ಕೆ ಸೂತ್ರ ಸಿದ್ಧವಾಗಲಿದ್ದ, ಇನ್ನೊಂದು ವಾರದಲ್ಲಿ ಸಂಪುಟ ಪುನಾರಚನೆ ನಡೆಯಲಿದೆ. ಪಟ್ಟಿ ಸಿದ್ಧವಾಗಲಿದೆ ಎಂದು ಮೂಲ ಗಳು ತಿಳಿಸಿವೆ.
ಆರಗ ಜ್ಞಾನೇಂದ್ರ ಖಾತೆ ಬದಲು?
ರಾಜ್ಯದಲ್ಲಿ ಇತ್ತೀಚಿನ ವಿದ್ಯಮಾನಗಳ ಹಿನ್ನೆಲೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಸಂಪುಟದಿಂದ ಕೊಕ್ ನೀಡಬಹುದು ಎಂಬ ಮಾತುಗಳು ಕೇಳಿಬರುತ್ತಿದೆಯಾದರೂ ಆರಗ ಸಂಪುಟದಲ್ಲಿ ಉಳಿದುಕೊಳ್ಳುತ್ತಾರೆ. ಆದರೆ, ಅವರಿಗೆ ನೀಡಿರುವ ಗೃಹ ಖಾತೆ ವಾಪಸ್ ಪಡೆದು ಬೇರೆ ಖಾತೆ ನೀಡಲಾಗುತ್ತದೆ. ಗೃಹ ಖಾತೆಯನ್ನು ಹೊಸದಾಗಿ ಸೇರುವವರಿಗೆ ನೀಡಲಾಗುತ್ತದೆ ಎನ್ನಲಾಗಿದೆ.