ಕಾನೂನು ಉಲ್ಲಂಘನೆಗೆ ಅಧಿಕಾರಿಗಳ ಸಾಥ್..!!
ಕುರುಡರಾದ ಅಹಾರ ಗುಣಮಟ್ಟದ ಅಧಿಕಾರಿಗಳು…
ಕಣ್ಣಿಗೆ ಹಿತಕರವಾಗಿ ಕಾಣುವ ಆಹಾರವೆಲ್ಲ ಆರೋಗ್ಯಕ್ಕೆ – ಮಾರಕ
ವಿಶೇಷ ವರದಿ : ಆನಂದ ಸ್ವಾಮಿ ಹಿರೇಮಠ
ರಾಯಚೂರು: ಕರ್ನಾಟಕದಲ್ಲಿ ರಾಸಾಯನಿಕ ಬಣ್ಣವನ್ನು ಬಳಸಿ ಮಾಡುವ ಗೋಬಿ ಮಂಚೂರಿ, ಚಿಕನ್ ಪಕೋಡಾ, ಬಾಂಬೆ ಮಿಠಾಯಿಗಳಲ್ಲಿ ಬಣ್ಣ ಮಿಶ್ರಣದ ಪದಾರ್ಥವನ್ನು ಮಾರಾಟವನ್ನು ಸರ್ಕಾರವೇ ನಿಷೇಧಿಸಲಾಗಿದೆ, ಆದರೆ ನಗರದ ಮಾವಿನ ಕೆರೆ ಉದ್ಯಾನವನದ ಬಳಿ ಎಂದಿಗೂ ನಿಲ್ಲದ ರಂಗು ಬಣ್ಣದ ಗೋಬಿ, ಪಾನಿಪುರಿ ಮಾರಾಟ ಹೆಗ್ಗಿಲ್ಲದೆ ಮುಂದುವರಿಯುತ್ತಿರುವುದು ಸಣ್ಣ ಸಣ್ಣ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಇದಕ್ಕೆಲ್ಲ ಸಂಬಂಧಿಸಿದ ಅಧಿಕಾರಿಗಳ ಸಾಥ್ ನೀಡುತ್ತಿರುವುದು ದುರದೃಷ್ಟಕರ ವಿಷಯವಾಗಿದೆ.
ನಗರದಲ್ಲಿ ಒಂದು ಒಳ್ಳೆಯ ವಾತಾವರಣ, ಸಣ್ಣ ಮಕ್ಕಳಿಗೆ ಆಟನ ಆಡಲು ಉದ್ಯಾನವನ,ದೊಡ್ಡದಾದ ಕೆರೆ, ಸಾರ್ವಜನಿಕರು ಕೂತು ಮಾತನಾಡುವ ವಿಶಾಲವಾದ ಉದ್ಯಾನವನದ ಮಾವಿನ ಕೆರೆಯ ರಸ್ತೆಯ ಬದಿಯಲ್ಲಿ
ಗ್ರಾಹಕರ ಮನಸೆಳೆಯಲು, ಕಡಿಮೆ ಬೆಲೆಗೆ ಸಿಗುವ ಈ ಪ್ಲಾಸ್ಟಿಕ್ ಉದ್ಯಮ, ಸಿಂಥೆಟಿಕ್ ಬಣ್ಣದ
ರೋಡಮೈನ್ ಬಿ, ಸನ್ಸೆಟ್ ಯೆಲ್ಲೊ ಮತ್ತು ಟೆಟ್ರಾಜಿನ್ ಎಂಬ ರಾಸಾಯನಿಕಗಳು ಹಾಗೂ ಗರಿಗರಿಯಾಗಿ ಬರಲು ಕೆಲವು ಕಡೆ ಸೋಪಿನ ಪುಡಿಯನ್ನು ಕೂಡ ಬಳಸಿ ವಿಷಪೂರಿತ ಆಹಾರವನ್ನು ನಗರದ ಜನಕ್ಕೆ ನೀಡುತ್ತಿದ್ದಾರೆ, ಕುರುಡುತನದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಪ್ರಾಧಿಕಾರ ಕುರುಡುತನ ಎದ್ದು ಕಾಣುತ್ತಿದೆ,
ರೋಡಮೈನ್ ಬಿ ಮತ್ತು ಉಳಿದವು ಹಾನಿಕಾರಕ ಎಂದು ವರದಿಯಾಗಿರುವುದರಿಂದ ಅವನ್ನು ಹೊರಗಿಡಲಾಗಿದೆ. ಆದರೆ ಗ್ರಾಹಕರ ಮನಸೆಳೆಯಲು, ಕಡಿಮೆ ಬೆಲೆಗೆ ಸಿಗುವ ಈ ರಾಸಾಯನಿಕಗಳನ್ನು ಮತ್ತು ಗರಿಗರಿಯಾಗಿ ಬರಲು ಕೆಲವು ಕಡೆ ಸೋಪಿನ ಪುಡಿಯನ್ನು ಕೂಡ ಬಳಸಲಾಗುತ್ತಿತ್ತು ಎಂಬ ಅಂಶಗಳು ಬೆಳಕಿಗೆ ಬಂದು ನಿಷೇಧಿಸಲಾಯಿತು.
ಪಾನಿಪುರಿ, ಮಸಾಲಾಪುರಿಯಂಥ ಚಾಟ್ಸ್ಗೆ ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಮೊರೆ ಹೋಗುತ್ತಿದ್ದಾರೆ. ಇವುಗಳಲ್ಲಿ ಬಳಸುವ ಹಸಿರು ಬಟಾಣಿಯಲ್ಲಿ ಮಲಾಚೈಟ್ ಗ್ರೀನ್ ಎನ್ನುವ ಬಣ್ಣ ಬಳಸಲಾಗುತ್ತದೆ. ಸಿಹಿತಿಂಡಿ, ಕಬಾಬ್ಗಳಲ್ಲಿ ಬಣ್ಣಕ್ಕಾಗಿ ಬಹಳಷ್ಟು ರಾಸಾಯನಿಕಗಳು ಬಳಕೆ
ಯಾಗುತ್ತವೆ. ಆಹಾರದ ಮೂಲಕ ದೇಹದೊಳಗೆ ಪ್ರವೇಶಿಸಿದಾಗ ಚರ್ಮದಲ್ಲಿ ತುರಿಕೆ, ಕಣ್ಣಿನ ಸಮಸ್ಯೆ, ಶ್ವಾಸಕೋಶದ ಸೋಂಕು ಮತ್ತು ವಿಶೇಷವಾಗಿ ಮಕ್ಕಳಲ್ಲಿ ದೀರ್ಘಕಾಲದ ಬಳಕೆಯಿಂದ ಕ್ಯಾನ್ಸರ್ ಕೂಡ ಬರುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಹೊರಗೆ ಆಹಾರ ಸೇವಿಸುವಾಗ ತಯಾರಿಸುವವರ ವೈಯಕ್ತಿಕ ನೈರ್ಮಲ್ಯ, ಆಹಾರ ತಯಾರಿಸುವ, ತಿನ್ನುವ ಪಾತ್ರೆಗಳ ಸ್ವಚ್ಛತೆ, ಶುದ್ಧನೀರಿನ ಲಭ್ಯತೆ, ಸುತ್ತಲ ಪರಿಸರ ಇವೆಲ್ಲವೂ ಗಮನಿಸಲೇ ಬೇಕಾಗಿದ್ದು ಇಲ್ಲದಿದ್ದರೆ ತಮ್ಮ ಆಹಾರವೆ ತಮ್ಮ ಆರೋಗ್ಯಕ್ಕೆ ಮಾರಕವಾಗಲಿದೆ.
ಗೋಬಿ ಮಂಚೂರಿ, ಪಾನಿಪುರಿ ಸೇರಿದಂತೆ ಇತರೆ ಫಾಸ್ಟ್ ಫುಡ್ ಗಳಿಗೆ ಬಣ್ಣಗಳು ಬೆರೆಸದೆ ಆಹಾರವನ್ನು ಸಿದ್ಧಪಡಿಸಬೇಕು ಎಂಬುವ ಆದೇಶ ಸರ್ಕಾರ ಈಗಾಗಲೇ ನೀಡಿದೆ. ಗೋಬಿ ಮಂಚೂರಿ ಮಾಡಲು ಉಪಯೋಗಿಸುವ ಹೂಕೋಸಿಗೆ ಬೇರೆಲ್ಲ ತರಕಾರಿಗಳಿಗಿಂತ ಅತಿ ಹೆಚ್ಚು ಕ್ರಿಮಿನಾಶಕವನ್ನು ಸಿಂಪಡಿಸಿರುತ್ತಾರೆ. ಹೀಗಾಗಿ, ಉಪ್ಪು ನೀರಿನಲ್ಲಿ ಮುಳುಗಿಸಿಟ್ಟು ಸ್ವಚ್ಛವಾಗಿ ತೊಳೆದು ಅಡುಗೆ ಮಾಡುವುದು ಮುಖ್ಯ. ಕುಡಿಯುವ ನೀರಿಗೂ ಕೊರತೆ ಇರುವ ಸಮಯದಲ್ಲಿ ಈ ರೀತಿಯ ಸ್ವಚ್ಛತೆ ಕಷ್ಟವೇ. ಅದರೊಂದಿಗೆ ನೆಂಚಿಕೊಳ್ಳಲು ಕೊಡುವ ಸಾಸ್ನಲ್ಲಿ ಕೂಡ ಕೃತಕ ಬಣ್ಣವಿದ್ದು ಅಪಾಯಕಾರಿಯಾಗಿದೆ, ಕರಿಯುವ ಎಣ್ಣೆಯನ್ನು ಪದೇಪದೇ ಬಳಸುವುದೂ ಒಳ್ಳೆಯದಲ್ಲ. ಬಾಂಬೆಮಿಠಾಯಿಯಲ್ಲಿ ಬಣ್ಣ ಗಾಢವಾದಷ್ಟೂ ಅಪಾಯ ಹೆಚ್ಚು. ಜತೆಗೆ ಸಕ್ಕರೆ ಅಂಶವೂ ಹೆಚ್ಚಿರುತ್ತದೆ. ಹೀಗಾಗಿ ಇವು ತಿನ್ನಲು ಸೂಕ್ತವಾದ ಆಹಾರವಲ್ಲ. ಅತಿ ಹೆಚ್ಚು ತರಕಾರಿಗಳನ್ನು ಮನೆಯಲ್ಲೇ ತೊಳೆದು ಮಕ್ಕಳಿಗೆ ಮಾಡಿಕೊಡುವುದು ಉತ್ತಮ ಎಂದು ಡಾ. ಸುರೇಂದ್ರಬಾಬು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ರಾಯಚೂರು ತಿಳಿಸಿದ್ದಾರೆ.
*
ರಸ್ತೆ ಬದಿಯಲ್ಲಿ ಆಹಾರ ಮಾರಾಟ ಮಾಡುವ ಹೆಚ್ಚಿನವರಿಗೆ ಸರಿಯಾದ ಜಾಗವಿಲ್ಲ, ಮೇಲಾಗಿ ಕಾನೂನಿನ ಮಾನ್ಯತೆ ಸಿಕ್ಕಿಲ್ಲ,ಆಹಾರ ತಯಾರಿಕೆಯಲ್ಲಿ ಬಳಸಬೇಕಾದ ನಿಯಮಗಳ ಬಗ್ಗೆ ಗೊತ್ತಿಲ್ಲ, ಹೀಗಾಗಿ, ತಿಳಿಸಬೇಕಾದಂತ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಪ್ರಾಧಿಕಾರದ ಪ್ರಕಾಶ್ ಪುಣೆ ಶೆಟ್ಟಿ ಅಂಕಿತ ಅಧಿಕಾರಿಗಳು ತಮ್ಮ ಮಾಮೂಲಿ ಬರುವ ಹೋಟೆಲ್ ಗಳಿಗೆ ಭೇಟಿ, ಆದಾಯ ನೀಡುವವರಿಗೆ ಪರವಾನಿಗೆ, ಹೇಗೆ ಸಂಪೂರ್ಣವಾಗಿ ಅಧಿಕಾರಿ ಗಳನ್ನು ನೀಡಿದರು ಸರ್ಕಾರಕ್ಕೆ ಸುಳ್ಳು ವರದಿ ಸಲ್ಲಿಸುತ್ತಾ ಕಾಲಹರಣ ಮಾಡುತ್ತಿದ್ದಾರೆ. ಹೀಗಾಗಿ, ಆರೋಗ್ಯದ ದೃಷ್ಟಿಯಿಂದ ನಿಷೇಧ ಸರಿಯಾದರೂ ಈ ಎಲ್ಲ ಅಂಶಗಳ ಬಗ್ಗೆ ಮಾಹಿತಿ ಮತ್ತು ಅಗತ್ಯ ನೆರವು ದೊರೆತು ಸುರಕ್ಷಿತ ಆಹಾರ ಸಾರ್ವಜನಿಕರಿಗೆ ಸಿಗುವಂತಾಗಲಿ. ಎಂದು ಕಾನೂನಾತ್ಮಕ ಹೋರಾಟ ಮಾಡಲು ಮುಂದಾಗಬೇಕು ಎಂದುಕೊಂಡಿದ್ದೇನೆ.
ಅಶೋಕ್ ಕುಮಾರ್ ಸಿ ಕೆ ಜೈನ್
ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರು ರಾಯಚೂರು