ಪೊಲೀಸರ ಬಳಿಯಿದೆ ಗಾಂಜಾ ಸೇವನೆ ಪತ್ತೆ ಹಚ್ಚುವ ಕಿಟ್
ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ
ವಿಶೇಷ ವರದಿ: ಹೆಗ್ಗೆರೆ ರೇಣುಕಾರಾಧ್ಯ ಶಿವಮೊಗ್ಗ
ಗಾಂಜಾ ಸೇವಿಸಿ ಸಿಕ್ಕಿಹಾಕಿಕೊಂಡೀರಿ ಜೋಕೆ. ನೇರವಾಗಿ ವಾರೆಂಟ್ ಇಲ್ಲದೇ ಜೈಲುಪಾಲಾಗಬೇಕಾಗುತ್ತದೆ. ಏಕೆಂದರೆ ಗಾಂಜಾ ಸೇವಿಸಿದವರನ್ನು ಪತ್ತೆ ಹಚ್ಚುವ ಸಲುವಾಗಿಯೇ ಜಿಲ್ಲಾ ಪೊಲೀಸ್ ವಿಶೇಷ ಕಿಟ್ವೊಂದನ್ನು ವಿತರಿಸಿದ್ದು, ಆದರ ಮೂಲಕ
ಸುಲಭವಾಗಿ ಗಾಂಜಾ ಸೇವಿಸಿದ ವ್ಯಕ್ತಿಗಳ ಪತ್ತೆ ಆರಂಭಿಸಿದ್ದಾರೆ.
ಜಿಲ್ಲೆಯಲ್ಲಿ ಗಾಂಜಾ ಹಾವಳಿ ದೂರುಗಳ ಹಿನ್ನಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ಅವರ ಆಸ್ಥೆಯಿಂದಾಗಿ ಗಾಂಜಾ ಸೇವನೆಯ ಪತ್ತೆ ಕಿಟ್ಗಳು ಬಂದಿವೆ. ಅದನ್ನು ಮೆಗ್ಗಾನ್ ಆಸ್ಪತ್ರೆಯಲ್ಲಿ ಇಡಲಾಗಿದ್ದು, ಗಾಂಜಾ ಸೇವನೆ ಕುರಿತು ಖಚಿತ ಮಾಹಿತಿ ಪಡೆದು ಬಂಽಸಿದ ವ್ಯಕ್ತಿಗಳನ್ನು ಆ ಪತ್ತೆ ಪ್ರಕರಣದಲ್ಲಿ ತೊಡಗಿಸಲಾಗು ತ್ತದೆ.
ಏನದು ಕಿಟ್: ಈಗಾಗಲೇ ರಾಜ್ಯದ ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಇಂತಹ ದೊಂದು ಕಿಟ್ ಸಂಬಂಧಪಟ್ಟ ಸರಕಾರಿ ಆಸ್ಪತ್ರೆಗಳಲ್ಲಿದೆ. ಆದರೆ, ಇದುವರೆಗೆ ಇದು ಜಿಲ್ಲೆಗೆ ಬಂದಿರಲಿಲ್ಲ. ಈ ಕಿಟ್ ವಿಶೇಷವೆಂದರೆ ಗಾಂಜಾ ಸೇವಿಸಿದ್ದಾನೆ ಎಂದು ಪತ್ತೆ ಯಾದ ವ್ಯಕ್ತಿಯನ್ನು ಬಂಧಿಸಿದ ಅನಂತರದಲ್ಲಿ ಆತನ ಮೂತ್ರವನ್ನು ಈ ಕಿಟ್ಗೆ ಹಾಕಿದಾಗ, ಅದು ಪಾಸಿಟಿವ್ ಅಥವಾ ನೆಗೆಟಿವ್ ಎಂದು ತೋರಿಸುತ್ತದೆ. ಪಾಸಿಟಿವ್ ಎಂದು ತೋರಿಸಿದರೆ ಆ ವ್ಯಕ್ತಿಗಳು ಗಾಂಜಾ ಸೇವಿಸಿದ್ದಾರೆ ಎಂದರ್ಥ. ಅಂತಹ ವ್ಯಕ್ತಿ
ಗಳನ್ನು ಮಾದಕ ವಸ್ತುಗಳ ಸೇವನೆಯ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಿ, ಬಂಧಿಸಲಾಗುತ್ತದೆ. ಈ ಪ್ರಕರಣದಲ್ಲಿ ದಾಖಲಾದ ವ್ಯಕ್ತಿಗಳಿಗೆ 10 ಸಾವಿರ ಹಾಗೂ ಆರು ತಿಂಗಳ ಜೈಲು ಶಿಕ್ಷೆ ವಿಧಿಸಬಹುದು.
ಜಿಲ್ಲೆಯಲ್ಲಿ ಇದೇ ಮೊದಲು: ಈ ಮೊದಲು ಮಂಗಳೂರಿನಲ್ಲಿ ಈ ತರಹದ ಟೆಸ್ಟ್ ನಡೆಯುತ್ತಿರುವ ಬಗ್ಗೆ ಮಾಹಿತಿ ಇದ್ದರಿಂದ ಅಲ್ಲಿನ ವಿತರಕರೊಂದಿಗೆ ಮಾತನಾಡಿ, ಜಿಲ್ಲೆಯಲ್ಲೂ ಅದರ ಅವಶ್ಯ ಮನವರಿಕೆ ಮಾಡಲಾಯಿತು. ನಂತರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅನುದಾನದಡಿಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಯವರಿಗೆ ಮಾತನಾಡಿ ಅವರಿಗೆ ಇದರ ಮಹತ್ವ ಹಾಗೂ ಇದರಿಂದ ಪೊಲೀಸ್ ಇಲಾಖೆಗೆ ಆಗುವ ಸಹಾಯದ ಬಗ್ಗೆ ಸರಕಾರದ ಗಮನ ಸೆಳೆದ ಅನಂತರದಲ್ಲಿ ಜಿಲ್ಲೆಗೆ ಈಗ ೩೦೦ ಕಿಟ್ ಗಳು ವಿತರಣೆಯಾಗಿವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ತಿಳಿಸಿದರು. ಕಿಟ್ ಬಳಸಿ ಈಗಾಗಲೇ ಇಬ್ಬರನ್ನು ಬಂಧಿಸಿ, ಪ್ರಕರಣ ದಾಖಲಿಸಿದ್ದೇವೆ ಎಂದರು.
ಉಪಯೋಗವೇನು: ಜಿಲ್ಲೆಯಲ್ಲಿ ಗಾಂಜಾ ಪ್ರಕರಣ ಸಿಗುತ್ತಲೇ ಇವೆ. ಕಾಲೇಜು ವಿದ್ಯಾರ್ಥಿಗಳು ಗಾಂಜಾ ಜಾಲಕ್ಕೆ ಸಿಲುಕು ತ್ತಿದ್ದಾರೆ ಎಂಬ ಆರೋಪ ಕೇಳುತ್ತಲೇ ಇದೆ. ಇತ್ತೀಚಿನ ದಿನಗಳಲ್ಲಿ ಅದು ಹೆಚ್ಚಾಗಿದ್ದರಿಂದ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಗಾಂಜಾ ಜಾಲದ ಪತ್ತೆ ಹಚ್ಚುವುದು ಕಷ್ಟಕರವಾಗಿತ್ತು. ಸೇವನೆ ಮಾಡಿದ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ನಿಗದಿತ ವೈದ್ಯಕೀಯ ಕ್ರಮ ಇರಲಿಲ್ಲ. ಹೀಗಾಗಿ ಗಾಂಜಾ ಸೇವಿಸಿದ್ದರೂ ಸುಲಭವಾಗಿ ತಪ್ಪಿಸಿಕೊಳ್ಳುತ್ತಿದ್ದರು. ಈಗ ಹಾಗಾಗುವುದಿಲ್ಲ.
ಇದನ್ನು ಮನಗಂಡೆ ಜಿಲ್ಲಾ ಪೊಲೀಸ್ ಇಲಾಖೆ ಟೆಸ್ಟ್ ಕಿಟ್ಗೆ ಮೊರೆ ಹೋಗಿದೆ. ಈಗಾಗಲೇ ಜಿಲ್ಲೆಯ ಎಲ್ಲ ಠಾಣೆಗಳಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಅನುಮಾಸ್ಪದವಾಗಿ ಬಂಧಿತ ವ್ಯಕ್ತಿಗಳನ್ನು ಗಾಂಜಾ ಸೇವನೆ ಟೆಸ್ಟ್ ಮಾಡಿಸಲೇಬೇಕು ಎಂದು ಸುತ್ತೋಲೆ ಯಲ್ಲಿ ತಿಳಿಸಲಾಗಿದೆ. ಅಂತಹ ಪ್ರಕರಣದಲ್ಲಿ ಪಾಸಿಟಿವ್ ಫಲಿತಾಂಶ ಬಂದರೆ ಕಾನೂನು ಕ್ರಮ ಜರುಗಿಸಿ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮೆಗ್ಗಾನ ಆಸ್ಪತ್ರೆಯಲ್ಲಿ ವೈದ್ಯ ತಂಡವೊಂದು ಇದಕ್ಕಾಗಿ ಎಲ್ಲ ಸಿದ್ಧತೆ ಮಾಡಿಕೊಂಡಿದ್ದು, ಜಿಲ್ಲಾ ಪೊಲೀಸ್ ಇಲಾಖೆಯೊಂದಿಗೆ ಕೈ ಜೋಡಿಸಿದೆ. ಮಾದಕ ವಸ್ತು ಸೇವನೆ ಮಾಡುವುದು ಅಪಾಯಕಾರಿ ಎಂಬುದನ್ನು ಹಲವು ಜಾಗೃತಿ ಕಾರ್ಯಕ್ರಮದಿಂದ
ಎಚ್ಚರಿಸಲು ಪ್ರಯತ್ನ ಮಾಡಿದರೂ ವ್ಯರ್ಥವಾಗುತ್ತಿದೆ. ಹೀಗಾಗಿ ಜಿಲ್ಲಾ ಪೊಲೀಸ್ ಇಲಾಖೆ ಉತ್ತಮ ಕೆಲಸ ಮಾಡುತ್ತಿದೆ ಎಂದು
ವೈದ್ಯಧಿಕಾರಿಗಳು ಹೇಳುತ್ತಾರೆ.
ಗಾಂಜಾ ಸೇವನೆ ನಿರ್ಮೂಲನೆ ಸಾಧ್ಯವೇ?
ಗಾಂಜಾ ಸೇವನೆ ಟೆಸ್ಟ್ ಕಿಟ್ ಬಂದಿರುವುದರಿಂದ ಗಾಂಜಾ ಸೇವಿಸುತ್ತಿದ್ದವರಲ್ಲಿ 20 ದಿನಗಳವರೆಗೆ ಮಾದಕ ಸೇವನೆ ಅಂಶ ಇರುತ್ತದೆ. ಅಂತಹ ವ್ಯಕ್ತಿಗಳು ೨೦ ದಿನಗಳ ನಂತರ ಸಿಕ್ಕರೂ ಅವರ ಮೂತ್ರ ಹಾಗೂ ರಕ್ತ ಪರೀಕ್ಷೆಯಿಂದ ಸಾಬೀತು ಮಾಡಬಹು ದಾದ ಸಾಧನವಾಗಿದೆ. ಹೀಗಾಗಿ ಜನರು ಎಚ್ಚರಿಕೆಯಿಂದಿರಬೇಕಾಗುತ್ತದೆ. ಜತೆಗೆ ಸಂಪೂರ್ಣ ನಿರ್ಮೂಲನೆಗೆ ಪಣ ತೊಟ್ಟಿದ್ದೇವೆ. ಮುಂದಿನ ದಿನಗಳಲ್ಲಿ ಸಾಬೀತು ಪಡಿಸುತ್ತೇವೆ. ಆದರೆ, ಈಗ ಸಿಕ್ಕಿಹಾಕಿಕೊಂಡ ಯಾರನ್ನೂ ಸುಮ್ಮನೆ ಬಿಡುವುದಿಲ್ಲ. ನಮ್ಮಲ್ಲಿ ಅಗತ್ಯಕ್ಕೆ ತಕ್ಕಂತೆ ಸಿಬ್ಬಂದಿ ಹಾಗೂ ಟೆಸ್ಟ್ ಕಿಟ್ಗಳು ಬಂದಿರುವುದರಿಂದ ಅಂತಹ ಯಾವುದೇ ಪ್ರಕರಣ ಜರಲು ಬಿಡದಂತೆ ಕ್ರಮ ಜರುಗಿಸುತ್ತೇವೆ ಎಂದು ಎಸ್ಪಿ ಲಕ್ಷ್ಮೀ ಪ್ರಸಾದ್ ವಿಶ್ವಾಸದಿಂದ ಹೇಳುತ್ತಾರೆ.
***
ಗಾಂಜಾ ಪ್ರಕರಣ ತಡೆಗೆ ಪೊಲೀಸರು ಸಾಕಷ್ಟು ಮುಂಜಾಗ್ರತೆ ಕ್ರಮ ಕೈಗೊಂಡಿದ್ದು, ಈಗ ಟೆಸ್ಟ್ ಕಿಟ್ಗಳನ್ನು ಮೆಗ್ಗಾನ್ ಆಸ್ಪತ್ರೆಗೆ ತರಿಸಿಕೊಡಲಾಗಿದೆ. ಗಾಂಜಾ ಮಾರಾಟ ಅಥವಾ ಸೇವನೆ ಮಾಹಿತಿ ತಿಳಿದರೆ, ಎಷ್ಟೇ ಪ್ರಭಾವಿಯಾಗಿದ್ದರೂ ಅವರನ್ನು
ಹೆಡೆ ಮುರಿಕಟ್ಟಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಗಾಂಜಾ ಮುಕ್ತ ಜಿಲ್ಲೆ ನನ್ನ ಗುರಿ.
ಅರಗ ಜ್ಞಾನೇಂದ್ರ, ಗೃಹ ಸಚಿವ