ಹೂವಪ್ಪ ಐ. ಎಚ್. ಬೆಂಗಳೂರು
ಖಾದ್ಯತೈಲದ ದರ ಲೀಟರ್ ಗೆ 20-25 ರು. ಏರಿಕೆ
ಸುಂಕ ಏರಿಕೆಯಿಂದ ಬೆಲೆ ಹೆಚ್ಚಳ
ಆಮದಿನಿಂದ ದೇಶೀಯ ಘಟಕಗಳಿಗೆ ತೊಂದರೆ
ಈರುಳ್ಳಿ ಬೆಲೆ ಏರಿಕೆ ಬೆನ್ನಲ್ಲೇ ಸಾಲ ಸಾಲು ಹಬ್ಬಗಳ ನಡುವೆ ಅಡುಗೆ ಎಣ್ಣೆ (Edible Oil) ಬೆಲೆ ಏರಿಕೆ ಗ್ರಹಕರನ್ನು ಬೆಚ್ಚಿ ಬೀಳಿಸಿದೆ. ಕೇಂದ್ರ ಸರ್ಕಾರ ಕಚ್ಚಾ ಮತ್ತು ರಿಫೈನ್ಡ್ ಸೋಯಾಬೀನ್, ಸೂರ್ಯಕಾಂತಿ ಹಾಗೂ ತಾಳೆ ಎಣ್ಣೆ ಮೇಲಿನ ಆಮದು ಸುಂಕವನ್ನು ಹೆಚ್ಚಿಸಿದೆ.
ಇದರಿಂದ ಇಲ್ಲಿನ ಎಣ್ಣೆಕಾಳು ಬೆಳೆಗಾರರಿಗೆ ಅನುಕೂಲವಾಗಲಿದ್ದು, ಗ್ರಾಹಕರ ಜೇಬಿಗೆ ಮಾತ್ರ ಕತ್ತರಿ ಬಿದ್ದಿದೆ. ಸೆಪ್ಟೆಂಬರ್ 14ರಿಂದಲೇ ಈ ಏರಿಕೆ ಅನ್ವಯವಾಗಿದೆ. ಎಣ್ಣೆಕಾಳುಗಳ ಬೆಲೆ ಕುಸಿತದಿಂದ ರೈತರನ್ನು ಪಾರು ಮಾಡಲು ಕೇಂದ್ರ ಸರ್ಕಾರ ಈ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಸರ್ಕಾರದ ಅಂಕಿ -ಅಂಶಗಳ ಪ್ರಕಾರ ಕಳೆದ 18 ತಿಂಗಳಿನಿಂದ ರಿಫೈನ್ಡ್ ಎಣ್ಣೆಯ ದರ ಇಳಿಕೆಯ ಹಾದಿಯಲ್ಲಿತ್ತು. ಅದರಲ್ಲೂ ಜುಲೈ, ಆಗಸ್ಟ್ನಲ್ಲಿ ಶೇ. 4.8ರಷ್ಟು ಕುಸಿತ ಕಂಡಿತ್ತು.
ಸೆ.13ರಂದು ಹಣಕಾಸು ಇಲಾಖೆ ಹೊರಡಿಸಿದ ಅಧಿಸೂಚನೆ ಪ್ರಕಾರ ಕಚ್ಚಾ ಸೋಯಾಬೀನ್, ಸೂರ್ಯ ಕಾಂತಿ ಹಾಗೂ ತಾಳೆ ಎಣ್ಣೆ ಮೇಲಿನ ಮೂಲ ಆಮದು ಸುಂಕವನ್ನು ಶೂನ್ಯದಿಂದ ಶೇ.20ಕ್ಕೆ ಹೆಚ್ಚಿಸಲಾಗಿದೆ. ಇದೇ ವೇಳೆ ರಿಫೈನ್ಡ್ ಎಣ್ಣೆಗಳ ಮೇಲಿನ ಮೂಲ ಆಮದು ಸುಂಕವನ್ನು ಶೇ. 12.5ರಿಂದ ಶೇ. 32.5ಕ್ಕೆ ಏರಿಸಲಾಗಿದೆ.
ಆಮದು ಹೆಚ್ಚಳ: ಈ ಹಿಂದೆ ತಾಳೆ ಎಣ್ಣೆ ಬೆಲೆ ಅಗ್ಗವಾಗಿದ್ದರಿಂದ ಆಮದು ಏರಿಕೆ ಕಂಡಿತ್ತು. 2024ರ
ಮೊದಲಾರ್ಧದಲ್ಲಿ ಭಾರತದ ತಾಳೆಎಣ್ಣೆ ಆಮದು ಶೇ. 30ರಷ್ಟು ಹೆಚ್ಚಳವಾಗಿತ್ತು. ಇದೇ ರೀತಿ ಸೂರ್ಯಕಾಂತಿ(Suryakanti seed) ಬೀಜ, ಸೂರ್ಯಕಾಂತಿ ಹಾಗೂ ಹತ್ತಿಬೀಜ ಎಣ್ಣೆಗಳ ಆಮದು ಶೇ. 55ರಷ್ಟು ಏರಿಕೆ ಕಂಡಿತ್ತು.
ಇದರಿಂದ ಇದೀಗ ಕಚ್ಚಾ ಅಡುಗೆಎಣ್ಣೆಗಳ ಮೇಲಿನ ಆಮದು ಸುಂಕ ಶೇ. 270.5ಕ್ಕೆ ತಲುಪಿದೆ. ಹಾಗೂ ರಿಫೈನ್ಡ್ ಎಣ್ಣೆ(Refined Oil) ಗಳ ಮೇಲಿನ ಆಮದು ಸುಂಕ ಶೇ. ೩೫.೭೫ಕ್ಕೆ ಮುಟ್ಟಿದೆ. ಇದು ಈ ಹಿಂದೆ ಕ್ರಮವಾಗಿ ಶೇ. ೫.೫ ಮತ್ತು ಶೇ. ೧೩.೭೫ರಷ್ಟು ಇತ್ತು. ನಮ್ಮ ದೇಶ, ೭೦ರಷ್ಟು ಆಮದಿನ ಖಾದ್ಯತೈಲದ ಮೇಲೆಯೇ ಅವಲಂಬಿತವಾಗಿದೆ. ಈ ಹಿಂದೆ ಜಾಗತಿಕ ಮಟ್ಟದಲ್ಲಿ ಸರಕುಗಳ ಬೆಲೆ ಏರಿಕೆ ಕಾಣುತ್ತಿದ್ದ ಸಂದರ್ಭದಲ್ಲಿ ಗ್ರಾಹಕರನ್ನು ಖುಷಿಪಡಿಸಲು
ಆಮದು ಸುಂಕ ಇಳಿಸಲಾಗಿತ್ತು. ಇದೀಗ ದೇಶೀಯ ರೈತರ ಮೇಲೆ ಇದು ಬೀರುತ್ತಿರುವ ಪರಿಣಾಮ ಕೊನೆಗಾಣಿಸಲು ಪುನಃ ಆಮದು ಸುಂಕವನ್ನು ಹೆಚ್ಚಿಸಲಾಗಿದೆ.
ಆಮದಿನಿಂದ ದೇಶೀಯ ಘಟಕಗಳಿಗೆ ಹೊಡೆತ: ಅಗ್ಗದ ಆಮದು ಖಾದ್ಯತೈಲದಿಂದ ದೇಶದಲ್ಲಿ ಅಡುಗೆ ಎಣ್ಣೆ ಉತ್ಪಾದನಾ ಘಟಕಗಳು ಅಂದಾಜು ಶೇ. ೭೦ ರಷ್ಟು ಸ್ಥಗಿತಗೊಂಡು ದಶಕಗಳೇ ಕಳೆದಿವೆ. ಹೀಗಾಗಿ ಎಣ್ಣೆಕಾಳು ರೈತರು ಬೆಳೆದರೂ ಬೆಲೆ ಸಿಗುತ್ತಾ ಇರಲಿಲ್ಲ ಪರಿಣಾಮ ಪ್ರಸ್ತುತ ಶುಂಕ ಏರಿಕೆ ರೈತರಿಗೆ ಉತ್ತಮ ಬೆಲೆ ಸಿಗುವ ಆಶಾಭಾವನೆ ಬರುತ್ತದೆ ಎಂದು ಅಭಿಪ್ರಾಯ ಪಡುತ್ತಾರೆ ಎಪಿಎಂಸಿ ಖಾದ್ಯ ತೈಲ ಪೂರೈಕೆದಾರರು ರಾಜಶೇಖರ.
ಸುಂಕ ಏರಿಕೆಯಿಂದ ಬೆಲೆ ಹೆಚ್ಚಳ: ಕೇಂದ್ರಸರಕಾರ ಸುಂಕ ಏರಿಕೆಯ ಪರಿಣಾಮ ಸ್ಥಳೀಯ ಸಗಟು ಮಾರುಕಟ್ಟೆ ಹಾಗೂ ಚಿಲ್ಲರೆ ಮಾರುಕಟ್ಟೆಗಳಲ್ಲಿ ಖಾದ್ಯತೈಲ ಬೆಲೆ ಏರಿಕೆ ಕಂಡಿದೆ. ನವೆಂಬರ್ ೨೦೨೩-ಜುಲೈ 2024 ರ ಅವಧಿ ಯಲ್ಲಿ ಅಡುಗೆ ಎಣ್ಣೆಯ ಆಮದು ೧,೧೯,೩೫,೨೨೭ ಟನ್ಗಳು. ಅದೇ ೨೦೨೨-೨೩ ಮಾರುಕಟ್ಟೆ ವರ್ಷದಲ್ಲಿ ೧,೨೧,೨೨,೭೧೧ ಟನ್ಗಳಾಗಿವೆ.
ಅಡುಗೆ ಎಣ್ಣೆಗಳ ಮಾರುಕಟ್ಟೆ ವರ್ಷವು ನವೆಂಬರ್ನಿಂದ ಅಕ್ಟೋಬರ್ ವರೆಗೆ ಇರುತ್ತದೆ. ಭಾರತದ ಅಡುಗೆ ಎಣ್ಣೆಯ ಬೇಡಿಕೆಯ ಶೇಕಡಾ ೫೦ ಕ್ಕಿಂತ ಹೆಚ್ಚು ಆಮದುಗಳ ಮೂಲಕ ಪೂರೈಸಲಾಗುತ್ತದೆ. ಎಸ್ಇಎ ಮಾಹಿತಿಯ ಪ್ರಕಾರ, ಖಾದ್ಯವಲ್ಲದ ತೈಲಗಳ ಆಮದು ೧,೩೨,೨೪೨ ಟನ್ಗಳಿಂದ ೧,೮೮,೯೫೫ ಟನ್ಗಳಿಗೆ ಏರಿದೆ. ಪ್ರಸಕ್ತ ವರ್ಷದ
ಮೊದಲ ಒಂಬತ್ತು ತಿಂಗಳ ಅವಧಿಯಲ್ಲಿ ಸಸ್ಯಜನ್ಯ ಎಣ್ಣೆಗಳ (ಖಾದ್ಯ ಮತ್ತು ಖಾದ್ಯೇತರ ತೈಲಗಳು) ಒಟ್ಟು ಆಮದು ೧೨೧.೨೪ ಲಕ್ಷ ಟನ್ಗಳು. ಹಿಂದಿನ ವರ್ಷಕ್ಕೆ ಹೋಲಿಸಿದರೆ ೧೨೨.೫೫ ಲಕ್ಷ ಟನ್ಗಳಿಗೆ ಹೋಲಿಸಿದರೆ ಶೇ. ೨೦೨೩-೨೪ ತೈಲ ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ (ನವೆಂಬರ್ ೨೦೨೩-ಜುಲೈ ೨೦೨೪) ಭಾರತವು ೧೫,೧೮,೬೭೧ ಟನ್ ಗಳಷ್ಟು ಸಂಸ್ಕರಿಸಿದ ಖಾದ್ಯತೈಲವನ್ನು ಆಮದು ಮಾಡಿಕೊಂಡಿದೆ.
ಬೆಲೆ ಏರುಪೇರು ವಿವರ: ಬಡ ಗ್ರಾಹಕರು ಸಣ್ಣ ಹೋಟೆಲ್, ಬೋಂಡಾ ಬಜ್ಜಿ ವ್ಯಾಪಾರಿಗಳು ಉಪಯೋಗಿಸುವ ತಾಳೆ ಎಣ್ಣೆ ಕೇವಲ ೩-೪ ದಿನಗಳ ಹಿಂದೆ ಸಗಟು ದರ ೧ ಲೀ, ನ ೧೦ ಪ್ಯಾಕೆಟ್ ತುಂಬಿದ ಒಂದು ಬಾಕ್ಸ್ ಬೆಲೆ ೯೦೦ ಇದ್ದ ಬೆಲೆ ಈಗ ೧೧೨೦ ಏರಿಕೆಯಾಗಿದೆ ೧೫ ಕೆಜಿ ತುಬಿದ ೧ ಟಿನ್ ೧೭೦೦ ಇದ್ದದ್ದು , ೧೯೭೦ ರು. ಗೆ ಹೆಚ್ಚಳ ಕಂಡಿದೆ. ಅಂದರೆ ಒಂದು ಲೀ, ಗೆ ಸಗಟು ದರ ಹೆಚ್ಚು ಕಡಿಮೆ ೨೦-೨೨ ರು. ನಷ್ಟು ಗ್ರಾಹಕರಿಗೆ ಹೆಚ್ಚಳವಾಗುತ್ತದೆ.
ಇನ್ನು ಸಾಮಾನ್ಯವಾಗಿ ಎಲ್ಲಾ ಗ್ರಾಹಕರು ಬಳಸುವ ಶುದ್ಧೀಕರಿಸಿದ ಸೂರ್ಯಕಾಂತಿ ಎಣ್ಣೆ ೧ ಲೀ, ನ ೧೦ ಪಾಕೆಟ್ ತುಂಬಿದ ಒಂದು ಬಾಕ್ಸ್ ೧೧೦೦-೧೧೨೦ ಇತ್ತು ಈಗ ಬೆಲೆ ೧೨೫೦-೧೩೦೦ ರು.. ಜಿಗಿದಿದೆ. ೧೫ ಕೆಜಿ ತುಬಿದ ೧ ಟಿನ್ ಬೆಲೆ ೧೭೦೦ ಇದ್ದದ್ದು , ೧೯೭೦ ರು.. ಗೆ ಅಧಿಕವಾಗಿದೆ. ಲೀ, ಗೆ ೧೫-೨೦ ರು. ನಷ್ಟು ಏರಿಕೆಯಾಗಿದೆ. ಇನ್ನು ಕಡಲೆ ಕಾಯಿ ಎಣ್ಣೆ, ಸೋಯಾ ಎಣ್ಣೆ ದೀಪದ ಎಣ್ಣೆ ತಲಾ ೧೦ ರಿಂದ ೧೫ ರು. ನಷ್ಟು ಏರಿಕೆಯಾಗಿವೆ.
ಚಿಲ್ಲರೆ ಅಂಗಡಿಕಾರರ ಕೆನಿಷ್ಟ ೫ ರೂ. ಲಾಭ ಮಾಂಸ ಸೇರಿಸಿದರೆ ಲೀ ಗೆ ೨೦-೨೫ ರೂ. ಹೊರೆ ಬೀಳುತ್ತಿದೆ. ಜೊತೆಗೆ ಈರುಳ್ಳಿ, ಬೆಳ್ಳುಳ್ಳಿ, ಅಕ್ಕಿ ರಾಗಿಬೆಳೆ ಕಾಳು ಹೀಗೆ ಎ ಅಗತ್ಯ ವಾಸುಗಳು ಗಗನಮುಕಿಯಾಗಿವೆ ಒಟ್ಟಿನಲ್ಲಿ ಬಡ ಗ್ರಾಹಕರು ಜೀವನ ದುಸ್ತರವಾಗಿದೆ. ಇನ್ನು ಪೂಜೆಗೆ ಬಳಸುವ ದೀಪದ ಎಣ್ಣೆಯನ್ನು ೧೧೦ರಿಂದ ೧೨೦ ರೂ.ಗೆ ಹೆಚ್ಚಿಸಿ ವ್ಯಾಪಾರಸ್ಥರು ಮಾರಾಟ ಮಾಡುತ್ತಿದ್ದಾರೆ. ನಗರಗಳು ಮತ್ತು ಪಟ್ಟಣಗಳಲ್ಲಿ, ಅಂಗಡಿಗಳು ಮತ್ತು ಆನ್ಲೈನ್ ಮಾರಾಟ ಕಂಪನಿಗಳು ಸಹ ಬೆಲೆಗಳನ್ನು ಹೆಚ್ಚಿಸುತ್ತಿವೆ.
*
ಶೇಂಗಾ, ಸೂರ್ಯಕಾಂತಿ ಸೋಯಾ ಕುಸಿಭಿ ಹೀಗೆ ಎಲ್ಲಾ ಎಣ್ಣೆ ಬೀಜಗಳನ್ನು ನೂರಾರು ಕ್ವಿಂಟಲ್ ಬೆಳೆಯುತ್ತಿzವು ಇತ್ತೀಚಿನ ವರ್ಷಗಳಲ್ಲಿ ಎಣ್ಣೆ ಕಾಳಿಗೆ ದರ ಸಿಗದ ಕಾರಣ ನಿಲ್ಲಿಸಿ ಮೆಕ್ಕೆಜೋಳ, ಹತ್ತಿ, ಮೆಣಸಿನಕಾಯಿ, ಬೆಳೆಯಲು
ಆರಂಭಿzವ. ಮುಂದೆ ಹೆಚ್ಚು ಬೆಲೆ ಸಿಗುವುದಾದರೆ ಎಣ್ಣೆ ಬೆಳೆಗಳ ಕಡೆ ಹೆಚ್ಚು ಗಮನ ಹರಿಸುತ್ತೇವೆ.
ಮಾಲತೇಶ, ರೈತ ಹಾವೇರಿ
ಇನ್ನೇನು ಎಣ್ಣೆ ಕಾಳು ಬೆಳೆ ಕಟಾವು ಮಾಡುವ ಸಮಯ ಬರಲಿದೆ. ಕೇಂದ್ರ ಸರಕಾರದ ಸುಂಕ ಹೆಚ್ಚಳದಿಂದ ರೈತರಿಗೆ ಉತ್ತಮ ಬೆಲೆ ಸಿಗುತ್ತದೆ. ಇದರಿಂದ ರೈತರು ಎಣ್ಣೆ ಕಾಳು ಬೆಳೆಯಲು ಆಸಕ್ತರಾಗುತ್ತಾರೆ.
-ರಾಧಾಕೃಷ್ಣ , ಆಯಿಲ್ ಮಿಲ್ಸ್ ಮಾಲೀಕರು, ಬೆಂಗಳೂರು
ಈಗಾಗಲೇ ಅಕ್ಕಿ, ಬೇಳೆಕಾಳು, ರಾಗಿ, ಈರುಳ್ಳಿ ಬೆಳ್ಳುಳ್ಳಿ, ಬೆಲೆ ಗಗನಕ್ಕೇರಿಯಾಗಿವೆ. ಮುಂದೆ ಸಾಲುಸಾಲು ಹಬ್ಬಗಳು ಬರುತ್ತಿವೆ. ಇಂಥ ಸಂದರ್ಭದ ಅಡುಗೆ ಎಣ್ಣೆ ಬೆಲೆ ಏರಿಕೆ ಗಾಯದ ಮೇಲೆ ಬರೆ ಹಾಕುತ್ತಿದೆ.
ಶಿಲ್ಪಾ ಪಿ., ಗ್ರಾಹಕಿ
ಇದನ್ನೂ ಓದಿ: ತಪ್ಪಿಸಿಕೊಳ್ಳಲು ಓಡಿದ ಉಗ್ರನನ್ನು ಹೊಡೆದುರುಳಿಸಿದ ಸೇನೆ; ರೋಚಕ ವಿಡಿಯೊ ಇಲ್ಲಿದೆ