೨೦ ಪ್ರತಿಷ್ಠಿತ ಕಂಪನಿಗಳ ನೆರವು, ಶೀಘ್ರವೇ ಸಿಎಂ ಬೊಮ್ಮಾಯಿ ಚಾಲನೆ
ಐಟಿಐ ಕಾಲೇಜುಗಳಿಗೆ ಹೈಟೆಕ್ ತಂತ್ರಜ್ಞಾನದ ಸ್ಪರ್ಷ
ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ರಾಜ್ಯ ಸರಕಾರ ದೇಶದಲ್ಲೇ ಪ್ರಥಮ ಬಾರಿಗೆ ಕೌಶಲಪೂರ್ಣ ಕಾರ್ಮಿಕರ ಸೃಷ್ಟಿಗಾಗಿ ಸುಮಾರು ೪೭೦೦ ಕೋಟಿ ರು. ವೆಚ್ಚದಲ್ಲಿ ೧೫೦ ತಂತ್ರಜ್ಞಾನ ಕೇಂದ್ರಗಳನ್ನು ತೆರೆದು ಮೌನಕ್ರಾಂತಿಗೆ ಕೈ ಹಾಕಿದೆ.
ದೇಶ ಮತ್ತು ವಿದೇಶಗಳ ಪ್ರತಿಷ್ಠಿತ ೨೦ಕ್ಕೂ ಹೆಚ್ಚು ಕಂಪನಿಗಳ ಸಹಾಯದೊಂದಿಗೆ ಈ ಕೇಂದ್ರಗಳನ್ನು ತೆರೆದು ಕೆಲವು ಕಡೆ ಪ್ರಾಯೋಗಿಕ ತರಬೇತಿ ಯನ್ನೂ ಆರಂಭಿಸಲಾಗಿದೆ. ಮುಖ್ಯಮಂತ್ರಿ ಅವರ ಅಧಿಕೃತ ಚಾಲನೆ ನಂತರ ರಾಜ್ಯಾದ್ಯಂತ ಈ ಕೇಂದ್ರಗಳು ಕಾರ್ಯಾರಂಭ ಮಾಡಲಿವೆ. ಇದರಿಂದ ವರ್ಷಕ್ಕೆ ಸುಮಾರು ೧.೩೦ಕ್ಕೂ ಅಧಿಕ ಕೌಶಲ ಪೂರ್ಣ ಕಾರ್ಮಿಕರು ಸಿದ್ಧರಾಗಲಿದ್ದು, ಇವರನ್ನು ಪ್ರತಿಷ್ಠಿತ ಕಂಪನಿಗಳೇ ನೇಮಕ ಮಾಡಿಕೊಳ್ಳ ಲಿವೆ.
ಅಂದರೆ ಅವಸಾನದ ಅಂಚಿನಲ್ಲಿದ್ದ ರಾಜ್ಯದ ಐಟಿಐ ಕಾಲೇಜುಗಳನ್ನು ಕೌಶಲ ಅಭಿವೃದ್ಧಿ ಇಲಾಖೆ ವ್ಯಾಪ್ತಿಗೆ ತಂದು ಅವುಗಳನ್ನು ಈಗ ತಂತ್ರಜ್ಞಾನ ಕೇಂದ್ರಗಳಾಗಿ ಪರಿವರ್ತಿಸಲಾಗುತ್ತಿದೆ. ಕೇವಲ ಪಿಟ್ಟರ್ ಮತ್ತು ಎಲೆಕ್ಟ್ರಿಷಿ ಯನ್ ತರಬೇತಿಗಳಿಗೆ ಸೀಮಿತವಾಗಿದ್ದ ಐಟಿಐ ಕಾಲೇಜು ಗಳನ್ನು ಈಗ ಮೇಲ್ದರ್ಜೇಗೇರಿಸಿ ತಂತ್ರಜ್ಞಾನ ಕೇಂದ್ರಗಳ ನ್ನಾಗಿ ಮಾಡಲಾಗಿದೆ. ಈ ಕೇಂದ್ರಗಳಲ್ಲಿ ಡಿಜಿಟಲ್ ಉತ್ಪಾದನೆ, ರೋಡೋಟಿಕ್ಸ್ , ಬ್ಯಾಟರಿ ಚಾಲಿತ ವಾಹನಗಳು, ಕೈಗಾರಿಕಾ ರೋಬೋಟಿಕ್ಸ್, ಅತ್ಯಾಧುನಿಕ ಪ್ಲಂಬಿಂಗ್ ಸೇರಿದಂತೆ ಅನೇಕ ಉನ್ನತ ಮಟ್ಟದ ತಂತ್ರಜ್ಞಾನ ಸಹಿತ ಸುಧಾರಿತ ರೀತಿಯ ತರಬೇತಿ ನೀಡಲಾಗುತ್ತದೆ.
ರಾಜ್ಯದ ಈ ತಂತ್ರಜ್ಞಾನ ಕೇಂದ್ರವನ್ನು ಇತ್ತೀಚಿಗೆ ನಡೆದ ಬಿಜೆಪಿ ಆಡಳಿತ ಇರುವ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಮೆಚ್ಚಿಕೊಂಡಿದ್ದು, ಇದನ್ನು ಇತರ ರಾಜ್ಯಗಳೂ ಅನುಕರಿಸುವಂತೆ ಸಲಹೆ ನೀಡಿದ್ದಾರೆ ಎಂದು ಕೌಶಲ್ಯ ಅಭಿವೃದ್ದಿ ಮತ್ತು ಉದ್ಯಮ ಶೀಲತೆ ಮತ್ತು ಜೀವನಾಧಾರ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಏನಿದು ಯೋಜನೆ, ಲಾಭವೇನು ? : ರಾಜ್ಯದಲ್ಲಿ ೨೭೦ಕ್ಕೂ ಹೆಚ್ಚು ಐಟಿಐ ಕಾಲೇಜುಗಳಿದ್ದು, ಅವುಗಳಲ್ಲಿ ಬಹುತೇಕ ದುಸ್ಥಿತಿಯಲ್ಲಿದ್ದವು. ಇವು ಗಳಲ್ಲಿ ಸ್ವಂತ ಕಟ್ಟಡ ದಲ್ಲಿದ್ದ ೧೫೦ಕ್ಕೂ ಸಂಸ್ಥೆಗಳನ್ನು ಆಯ್ಕೆ ಮಾಡಿಕೊಂಡು ಅವುಗಳನ್ನು ಸುಧಾರಿತ ತಂತ್ರಜ್ಞಾನದ ಮೂಲಕ ಮೇಲ್ದರ್ಜೆಗೇರಿಸ ಲಾಗಿದೆ. ಇದಕ್ಕಾಗಿ ಟಾಟಾ ಟೆಕ್ನಾಲಾ ಜೀಸ್ ಸೇರಿದಂತೆ ೨೦ ಬಹುರಾಷ್ಟ್ರೀಯ ಕಂಪನಿಗಳು ತಮಗೆ ಬೇಕಾದ ಕೌಶಲಪೂರ್ಣ ಕಾರ್ಮಿಕರ ಸೃಷ್ಟಿಗೆ ಯಂತ್ರೋಪಕರಣ ಹಾಗೂ ತಾಂತ್ರಿಕ ಸೌಲಭ್ಯಗಳನ್ನು ಒದಗಿಸಿವೆ.
ಹೀಗಾಗಿ ಪ್ರಥಮ ಹಂತದಲ್ಲಿ ೧೫೦ ತಂತ್ರಜ್ಞಾನ ಕೇಂದ್ರಗಳಲ್ಲಿ ವೈಮಾನಿಕ, ರಕ್ಷಣಾ ವಲಯ, ಗೃಹ ಬಳಕೆ ಹಾಗೂ ವಿದ್ಯುನ್ಮಾನ, ಮರಗೆಲಸ, ಇಂಧನ, ರೈಲ್ವೆ, ಕೃಷಿ, ಪ್ಯಾಕೇಂಜಿಂಗ್ , ಹಡಗು ನಿರ್ಮಾಣ, ಕರಕುಶಲ ಹಾಗೂ ಆಹಾರ ಪಾನೀಯ ಮತ್ತು ಔಷಧ ಉದ್ಯಮಗಳ ಕ್ಷೇತ್ರಕ್ಕೆ ಸಂಬಂಧಿಸಿದಂತೆ ತರಬೇತಿ ನಡೆಸಲಾಗುತ್ತದೆ. ದೀರ್ಘಾವಧಿ ತರಬೇತಿಯಿಂದ ಸುಮಾರು ೨೦ಸಾವಿರ ಕೌಶಲ್ಯಪೂರ್ಣ ಕಾರ್ಮಿಕರನ್ನು ಹಾಗೂ ಅಲ್ಪಾ ವಧಿಯಿಂದ ೧.೩೦ ಲಕ್ಷ ಕಾರ್ಮಿಕರನ್ನು ಸೃಷ್ಟಿಸಿ ಆಯಾ ಕಂಪನಿಗಳಲ್ಲೇ ಉದ್ಯೋಗ ಸಿಗುವಂತೆ ಮಾಡಲಾಗುತ್ತದೆ. ಅಗತ್ಯ ಇರುವವರು ಸ್ವಯಂ ಉದ್ಯೋಗ ಪಡೆಯುವು ದಕ್ಕೂ ನೆರವು ಒದಗಿಸಲಾಗುವುದು ಎಂದು ಅಽಕಾರಿಗಳು ಹೇಳಿದ್ದಾರೆ.
೪೭೦೦ ಕೋಟಿ ಯಾರು ಕೊಡುತ್ತಾರೆ?
ಸರಕಾರದ ಮಹತ್ವಾಕಾಂಕ್ಷೆಯ ಈ ಯೋಜನೆಗೆ ಸುಮಾರು ೪೭೦೦ ಕೋಟಿ ವೆಚ್ಚವಾಗಲಿದ್ದು, ಇದಕ್ಕೆ ರಾಜ್ಯ ಸರಕಾರ ೬೬೭ ಕೋಟಿ ಒದಗಿಸಿದರೆ, ಟಾಟಾ ಟೆಕ್ನಾಲಾಜೀಸ್ ಸೇರಿ ಇತರ ಪ್ರಮುಖ ಬಹುರಾಷ್ಟ್ರೀಯ ಕಂಪನಿಗಳು ೪,೦೮೦ ಕೋಟಿಗಳ ನೆರವು ನೀಡುತ್ತಿದೆ. ಹಾಗೆಯೇ ಡೆಲ್, ಟೆಕ್ ಎಕ್ಸ್ -ರ್ಟ್, ಡಿ.ಸಿಸ್ಟೆಮ್ , ಹಾಸ್ ಹಾಗೂ ಟಿಪಿಸಿ ಸೇರಿದಂತೆ ೨೦ ಕಂಪನಿಗಳು ಈ ಯೋಜನೆ ಯಶಸ್ಸಿಗೆ ಕೈಜೋಡಿಸಿವೆ.
***
ಇದು ದೇಶದಲ್ಲಿ ಮಾದರಿಯಾದ ಯೋಜನೆ. ಮುಖ್ಯಮಂತ್ರಿ ಅವರಿಂದ ಚಾಲನೆ ದೊರೆತ ನಂತರ ಇದನ್ನು ಎಲ್ಲೆಡೆ ಆರಂಭಿಸಲಾಗುತ್ತಿದೆ. ಇದರಿಂದ
ವರ್ಷಕ್ಕೆ ೧.೩೦ಲಕ್ಷ ಮಂದಿಗೆ ತರಬೇತಿ ಮತ್ತು ಉದ್ಯೋಗ ಸಿಗಲಿದೆ.
-ಡಾ.ಎಸ್.ಸೆಲ್ವಕುಮಾರ್,
ಕೌಶಲ ಅಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ