ವಿಶೇಷ ವರದಿ: ಮಂಜುನಾಥ ಕೆ. ಬೆಂಗಳೂರು
ಟೆಕ್ಕಿ ಅಜಿತಾಬ್ ನಿಗೂಢ ನಾಪತ್ತೆಯಾಗಿ 4 ವರ್ಷ ಕಳೆದರೂ ಈವರೆಗೆ ಅವರ ಬಗ್ಗೆ ಯಾವುದೇ ಸಣ್ಣ ಸುಳಿವೂ ಲಭ್ಯವಾಗಿಲ್ಲ. ಜತೆಗೆ ಕೇಂದ್ರಿಯ ತನಿಖಾ ತಂಡ (ಸಿಬಿಐ)ದಿಂದಲೂ ಕೂಡ ಈ ಪ್ರಕರಣ ಭೇದಿಸಲು ಸಾಧ್ಯವಾಗಿಲ್ಲ.
ಸಿಬಿಐಗೆ ವಹಿಸಿದರೆ ಎಂತಹ ಪ್ರಕರಣವಾದರು ಇತ್ಯರ್ಥವಾಗುತ್ತದೆ ಎಂಬ ಮಾತಿದೆ. ಈ ಪ್ರಕರಣದಲ್ಲಿ ಅದು ಸುಳ್ಳಾದಂತಿದೆ. ಮಗನ ಬಗ್ಗೆ ನಾಲ್ಕು ವರ್ಷ ಕಳೆದರೂ ಯಾವುದೇ ಮಾಹಿತಿ ಸಿಗದೇ ಟೆಕ್ಕಿ ಅಜಿತಾಬ್ ಕುಟುಂಬ ಇಂದಿಗೂ ಕಣ್ಣೀರಿನಲ್ಲಿ ಕೈತೊಳೆಯು ತ್ತಿದ್ದಾರೆ. ಸಿಐಡಿ, ಎಸ್ಐಟಿ ಹಾಗೂ ದೇಶದ ಪ್ರಮುಖ ತನಿಖಾ ಸಂಸ್ಥೆಯಾದ ಸಿಬಿಐ ಎ ಆಯಾಮಗಳಲ್ಲಿ ತನಿಖೆ ನಡೆಸಿ ದ್ದರೂ ಇಲ್ಲಿಯವರೆಗೆ ಯಾವುದೇ ಸುಳಿವು ದೊರೆಯ ದಿರುವುರಿಂದ ಕುಮಾರ್ ಅಜಿತಾಬ್ ಕುಟುಂಬದವರನ್ನು ಸಂಕಷ್ಟಕ್ಕೆ ದೂಡಿದೆ.
ಏನಿದು ಪ್ರಕರಣ?: ಬೆಳ್ಳಂದೂರಿನ ಸಾಫ್ಟ್’ವೇರ್ ಕಂಪನಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಮತ್ತು ವೈಟ್ಫೀಲ್ಡ್ ನಿವಾಸಿ ಕುಮಾರ್ ಅಜಿತಾಬ್(29) 2017ರ ಡಿ.18 ರಂದು ನಾಪತ್ತೆಯಾಗಿದ್ದರು. ಅವರು ತಮ್ಮ ಕಾರನ್ನು ಮಾರಾಟ ಮಾಡುವು ದಕ್ಕಾಗಿ ಒಎಲ್ಎಕ್ ನಲ್ಲಿ ಪೋಸ್ಟ್ ಮಾಡಿದ್ದರು. ಈ ಬಗ್ಗೆ ಗ್ರಾಹಕರೊಬ್ಬರು ಕರೆ ಮಾಡಿ ದಾಗ ಕಾರನ್ನು ತೋರಿಸಲು ಮನೆ ಯಿಂದ ಹೋದವರು ಮತ್ತೆ ಹಿಂದಿರುಗಿರಲಿಲ್ಲ. ಪ್ರಕರಣವನ್ನು ಮೊದಲು ವೈಟ್ ಫೀಲ್ಡ್ ಪೊಲೀಸರು, ನಂತರ ಸಿಐಡಿ, ಬಳಿಕ ವಿಶೇಷ ತನಿಖಾ ತಂಡ (ಎಸ್ಐಟಿ) ತನಿಖೆ ನಡೆಸಿತ್ತು. ಅಜಿತಾಬ್ ಕುಟುಂಬದ ಕೋರಿಕೆ ಮೇರೆಗೆ 2018 ರ ಅಕ್ಟೋಬರ್ 22 ರಂದು ರಾಜ್ಯ ಹೈಕೋರ್ಟ್ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸುವಂತೆ ನಿರ್ದೇಶನ ನೀಡಿತು.
ನಂತರ ಹೈಕೋರ್ಟ್ ಆದೇಶದ ಮೇರೆಗೆ ಪ್ರಕರಣವನ್ನು ರಾಜ್ಯ ಸರಕಾರ ಸಿಬಿಐಗೆ ವರ್ಗಾಹಿಸಿತ್ತು. ಸಿಬಿಐ ಪ್ರಕರಣ ಬೇಧಿಸ ಬಹುದೆಂದು ಅಜಿತಾಬ್ ಅವರ ಕುಟುಂಬವು ಸಿಬಿಐ ಮೇಲೆ ಹೆಚ್ಚು ಭರವಸೆ ಹೊಂದಿತ್ತು. ಆದರೆ ಎರಡೂವರೆ ವರ್ಷಗಳಿಗಿಂತ ಹೆಚ್ಚು ಕಾಲ ಪ್ರಕರಣದ ತನಿಖೆ ನಡೆಸಿದ್ದರೂ ಸಹ ಈ ಪ್ರಕರಣ ಭೇದಿಸುವಲ್ಲಿ ಸಿಬಿಐನಿಂದಲೂ ಸಾಧ್ಯವಾಗಿಲ್ಲ.
ನಿಗೂಢವಾಗಿ ಉಳಿದ ಪ್ರಕರಣ: ತಮಿಳು ನಟ ಸೂರ್ಯ ಅಭಿನಯದ ಇತೀಚೆಗೆ ಬಿಡುಗಡೆಯಾದ ಜೈ ಭೀಮ್ ಸಿನಿಮಾ ಚಿತ್ರ ದಲ್ಲಿ ಠಾಣೆಯಲ್ಲಿದ್ದ ಮೂವರು ನಿಗೂಢವಾಗಿ ನಾಪತ್ತೆಯಾಗಿತ್ತಾರೆ. ಆ ಮೂವರು ಎಲ್ಲಿ ಹೋದರು? ಏನಾದರೂ ಎಂಬು ದರ ತನಿಖೆ ನಡೆಸಲು ವಕೀಲರಿಂದ ಹೈಕೋರ್ಟ್ಗೆ ಹೇಬಿಯಸ್ ಕಾರ್ಪಸ್ ಸಲ್ಲಿಕೆಯಾಗುತ್ತದೆ. ಕೋರ್ಟ್ ಆದೇಶದ ಮೇರೆಗೆ ಆ ಪ್ರಕರಣವನ್ನು ಐಜಿ ನೇತೃತ್ವದ ತನಿಖೆ ನಡೆಸಿದ್ದಾಗ ಆ ಮೂವರಲ್ಲಿ ಒಬ್ಬನನ್ನು ಪೊಲೀಸರೇ ಹೊಡೆದು ಕೊಂದು ಮತ್ತಿಬ್ಬರನ್ನು ಸುಳ್ಳು ಪ್ರಕರಣ ದಾಖಲಿಸಿ ಅಕ್ರಮವಾಗಿ ಜೈಲಿನಲ್ಲಿ ಇರಿಸಲಾಗಿರುತ್ತೆ. ಈ ಪ್ರಕರಣದಲ್ಲಿ ನಾಪತ್ತೆಯಾದವರ ಬಗ್ಗೆ ಕೊನೆಗೂ ಮಾಹಿತಿ ಬೆಳಕಿಗೆ ಬರುತ್ತೆ. ಆದರೆ, ಟೆಕ್ಕಿ ಅಜಿತಾಬ್ ಪ್ರಕರಣದಲ್ಲಿ ನಾಲ್ಕು ವರ್ಷವಾದರೂ ಆತ ಬದುಕಿದ್ದಾನೊ ಇಲ್ಲ ಸತ್ತಿದ್ದಾನೊ ಎಂಬ ಸಣ್ಣ ಸುಳಿವು ಇದುವರೆಗೂ ದೊರೆತಿಲ್ಲ.
ಯುವಕನ ತಂದೆ ಹೇಳುವುದೇನು?
ಮಗ ನಾಪತ್ತೆಯಾಗಿ ನಾಲ್ಕು ವರ್ಷಗಳೆ ಕಳೆದಿವೆ. ಮಗನಿಗಾಗಿ ಹುಡುಕಾಟ ಮಾಡದ ಸ್ಥಳಗಳೇ ಇಲ್ಲ. ಪೊಲೀಸ್ ಇಲಾಖೆ, ರೈಲ್ವೆ ಇಲಾಖೆ, ಇಂಟರ್ಪೋಲ್ಗೆ ಮನವಿ ಮಾಡಿ ದ್ದೇನೆ. ಮಗ ಏನಾದರೂ ವಿದೇಶಕ್ಕೆ ಹೋಗಿರಬಹುದಾ ಎಂದು ಆತನ ಹೆಸರಿನಲ್ಲಿ ರುವ ವೀಸಾ ಪಾಸ್ಪೋರ್ಟ್ ಬಗ್ಗೆಯೂ ವಿಚಾರಿಸಿದ್ದೇನೆ. ಮಗನ ಬಗ್ಗೆ ಸುಳಿವು ನೀಡಿದವರಿಗೆ 10 ಲಕ್ಷ ನೀಡುವುದಾಗಿಯೂ ಘೋಷಿಸಿದ್ದೆ. ಆದರೆ ಯಾವುದೇ ಪ್ರಯೋ ಜನವಾಗಲಿಲ್ಲ. ಮಗನಿಲ್ಲದೇ ನಮ್ಮ ಬಾಳು ಕತ್ತಲೆ ಯಾಗಿದೆ. ಇಂದಲ್ಲ ನಾಳೆ ಅವನು ಮರ ಳುತ್ತಾನೆ ಎಂಬ ಭರವಸೆಯೊಂದಿಗೆ ಬದುಕುತ್ತಿದ್ದೇವೆ ಎಂದು ಕುಮಾರ್ ಅಜಿತಾಬ್ ತಂದೆ ಅಶೋಕ್ ಕುಮಾರ್ ಸಿಂಹ ವಿಶ್ವವಾಣಿಗೆ ತಿಳಿಸಿದ್ದಾರೆ.
ಮಗನಿಗಾಗಿ ಕಾಯುತ್ತಿದ್ದಾರೆ
ಇದೀಗ ಕುಟುಂಬದ ಪಾಲಿಗೆ ಕಳೆಯುತ್ತಿರುವ ಪ್ರತಿ ದಿನವೂ ನೋವಿನದ್ದಾಗಿದೆ. ಅಜಿತಾಬ್ ಕಣ್ಮರೆಯಾಗಿ ನಾಲ್ಕು ವರ್ಷಗಳೆ ಕಳೆದಿವೆ. ಅವರ ಸ್ವಂತ ಊರಾದ ಪಾಟ್ನಾದಲ್ಲಿರುವ ಅಜಿತಾಬ್ ವೃದ್ಧ ಪೋಷಕರು ಪ್ರತಿನಿತ್ಯ ಮಗನ ಬರುವಿಕೆಗಾಗಿ ಹಾಗೂ ಆತನ ಬಗೆಗಿನ ಸುದ್ದಿಗಾಗಿ ಕಾಯುತ್ತಿದ್ದಾರೆ. ಅವರ ತಂದೆ ಇನ್ನೂ ಸಿಬಿಐಗೆ ಇಮೇಲ್ ಗಳನ್ನು ಕಳುಹಿಸುತ್ತಾ ಪ್ರಕರಣಕ್ಕೆ ಸಂಬಂಧಿ ಸಿದ ಹೆಚ್ಚಿನ ಬೆಳವಣಿಗೆಗಳ ಬಗೆಗೆ ಮಾಹಿತಿ ಕೋರಿದ್ದಾರೆ. ಈ ಪೋಷಕರ ನಿರೀಕ್ಷೆ ಹುಸಿಯಾಗದಿರಲಿ.
***
ಎಲ್ಲ ಆಯಾಮಗಳಲ್ಲಿಯೂ ತನಿಖೆ ನಡೆಸಿ ಮುಚ್ಚಿದ ಲಕೋಟಿಯಲ್ಲಿ ಕೋರ್ಟ್ಗೆ ವರದಿ ಸಲ್ಲಿದ್ದೇವೆ ಎಂದು ಸಿಬಿಐ ಅಧಿಕಾರಿ ಗಳು ಹೇಳುತ್ತಿದ್ದಾರೆ. ಜತೆಗೆ ತನಿಖೆಯ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ. ಆದರೆ ಮಗನ ಬಗ್ಗೆ ಸಿಬಿಐನಿಂದಲೂ ಈವರೆಗೂ ಯಾವುದೇ ಸುಳಿವು ಲಭ್ಯವಾಗಿಲ್ಲ.
– ಅಶೋಕ್ ಕುಮಾರ್ ಸಿಂಹ, ಟೆಕ್ಕಿ ಅಜಿತಾಬ್ ತಂದೆ