ಹೂವಪ್ಪ ಐ.ಎಚ್. ಬೆಂಗಳೂರು
ಮಳೆ; ಮಾರುಕಟ್ಟೆಗೆ ಹೆಚ್ಚಾಗಿ ಬಾರದ ಹೂವು-ಹಣ್ಣುಗಳು
ಬೆಲೆಗಳಲ್ಲಿ ಕೊಂಚ ಏರಿಕೆಯಾದರೂ ಖರೀದಿ ಬಲು ಜೋರು
ಬೆಳಕಿನ ಹಬ್ಬ ದೀಪಾವಳಿಗೆ ಹೂವು ಹಣ್ಣು, ತರಕಾರಿ ಹಾಗೂ ಪೂಜಾ ಪರಿಕರಿಗಳ ಬೆಲೆ ದುಬಾರಿಯಾಗಿದ್ದರೂ ಗ್ರಾಹಕ ರಿಂದ ಗಿಜುಗುಟ್ಟಿದ ಮಾರುಕಟ್ಟೆ ಭರ್ಜರಿ ವಹಿವಾಟು ಕಂಡಿದೆ.
ನಗರದ ಪ್ರಮುಖ ಕೆ.ಆರ್.ಮಾರುಟ್ಟೆ, ಯಶವಂತಪುರ ಮಾರುಕಟ್ಟೆ, ಮಲ್ಲೇಶ್ವರ, ಗಾಂಽ ಬಜಾರ್, ಕಲಾಸಿಪಾಳ್ಯ,
ಮಡಿವಾಳ, ಕೋರಮಂಗಲ, ಜಯನಗರ, ಶಿವಾಜಿನಗರ ಮಾರುಕಟ್ಟೆ ಜನಜಂಗುಳಿಯಿಂದ ಕೂಡಿದೆ. ಅನೇಕ ಮಾಲ್
ಗಳಲ್ಲೂ ಜನರು ಖರೀದಿಯಲ್ಲಿ ತೊಡಗಿದ್ದರು.
ನಗರದ ಹಲವೆಡೆ ಸುತ್ತಮುತ್ತಲ ಹಳ್ಳಿಗಳಿಂದ ಆಗಮಿಸಿದ ರೈತರು, ವ್ಯಾಪಾರಿಗಳು ಹಬ್ಬದ ಪರಿಕರಗಳ ವ್ಯಾಪಾರ
ನಡೆಯುತ್ತಿದೆ. ಕಳೆದ ವಾರದ ಬಿಡುವಿಲ್ಲದೆ ಮಳೆಯಿಂದ ಮಾರುಕಟ್ಟೆ ಚೇತರಿಸಿಕೊಂಡಿದೆ. ಭಾರೀ ಮಳೆಯಾದ ಕಾರಣ, ಹೂವು ಹೆಚ್ಚಾಗಿ ಮಾರುಕಟ್ಟೆಗೆ ಬರದೇ, ಬೇಡಿಕೆ ಹೆಚ್ಚಾಗಿದ್ದರಿಂದ ಬೆಲೆಯೂ ಹೆಚ್ಚಾಗಿದೆ. ತಮಿಳುನಾಡಿ ನಿಂದ ಸುಗಂಧರಾಜ ಸೇರಿ ಹಲವು ಹೂವುಗಳು ಕಡಿಮೆ ಪ್ರಮಾಣದಲ್ಲಿ ಬಂದಿವೆ ಎಂದು ಕೆ. ಆರ್.ಮಾರುಕಟ್ಟೆ ಯಲ್ಲಿರುವ ವ್ಯಾಪಾರಿ ನಾರಾಯಣಸ್ವಾಮಿ ಹೇಳಿದರು.
ತರಕಾರಿ ಬೆಲೆ ಏರಿಕೆ: ಇನ್ನೊಂದೆಡೆ ಕೆ.ಆರ್.ಮಾರುಕಟ್ಟೆಯಲ್ಲಿ ತರಕಾರಿ ಬೆಲೆಯೂ ಏರಿಕೆಯಾಗಿದೆ. ಟೋಮೆಟೋ ಬೆಲೆ ಮಾತ್ರ ಯಥಾಸ್ಥಿತಿ ಇದ್ದು, ಹುರುಳಿಕಾಯಿ, ಕ್ಯಾರೆಟ್ ಬೆಲೆಯೂ ಏರಿಕೆಯಾಗಿದೆ. ಸತತ ಮಳೆ ಕಾರಣದಿಂದ ಬೆಳೆ ಹಾಳಾಗಿ ಮಾರುಕಟ್ಟೆಗೆ ತರಕಾರಿ ಬರುವುದೇ ಕಡಿಮೆಯಾಗಿರುವ ಹಿನ್ನೆಲೆ ತರಕಾರಿ ಬೆಲೆಯೂ ಏರಿಕೆಯಾಗಿದೆ.
ಆಕಾಶ ದೀಪ ಹಣತೆಗೆ ಬೇಡಿಕೆ: ದೀಪಾವಳಿ ಆಕರ್ಷಣೆಯಾಗಿ ಮಾರುಕಟ್ಟೆಗೆ ಬಂದ ತರಹೇವಾರಿ ಹಣತೆಗಳಿಗೆ ಹೆಚ್ಚಿನ ಬೇಡಿಕೆಯಿತ್ತು. ಸ್ತಂಭದ ಹಣತೆ, ಲ್ಯಾಂಪ, ಗಾಜಿನ ಹಣತೆ, ಮೇಣದ ಹಣತೆ, ಐದು, ಎಂಟು, ಹನ್ನೆರಡು ನೆಣೆಯ ಹಣತೆ, ಆಕಾಶ ದೀಪದ ಮಾದರಿ, ತೂಗುದೀಪ ಸೇರಿದಂತೆ ವಿವಿಧ ವಿನ್ಯಾಸದ ದೀಪಗಳು ಮಾರಾಟವಾಗಿವೆ. ರಾಜಸ್ಥಾನ, ಜೋಧಪುರದಿಂದ ಹೆಚ್ಚಾಗಿ -ನ್ಸಿ ಹಣತೆಗಳು ಮಾರುಕಟ್ಟೆಗೆ ಬಂದಿವೆ. ಸಣ್ಣ ಹಣತೆಗೆ ೧೦ರು. ಇದ್ದರೆ, ವಿಶೇಷ ವಿನ್ಯಾಸದ ದೊಡ್ಡ ಗಾತ್ರದ ಹಣತೆಗಳಿಗೆ ೨೫೦- ೪೦೦ ರು. ರವರೆಗೂ ಮಾರಾಟವಾಗುತ್ತಿದೆ. ದುಬಾರಿ ಯಾಗಿದ್ದರೂ ಅಲಂಕಾರಿಕ ಪ್ಲಾಸ್ಟಿಕ್ ಹೂವುಗಳು, ಪರಪರೆ, ಹೂಕುಂಡ, ಆಕಾಶದೀಪ, ವಿದ್ಯುತ್ ದೀಪಗಳಿಗೂ ಬೇಡಿಕೆ ಇದೆ.
*
ಸೇವಂತಿಗೆ ಮತ್ತು ಗುಲಾಬಿ ಹೂವು ಕರ್ನಾಟಕದ್ದು. ಉಳಿದಂತೆ ಮಲ್ಲಿಗೆ ಮತ್ತಿತರ ಹೂವುಗಳು ತಮಿಳುನಾಡಿನಿಂದ ಆಗಮಿಸುತ್ತಿವೆ. ಪ್ರತಿ ಹಬ್ಬಕ್ಕೆ ಹೂವು ಬೆಲೆ ಏರಿಕೆ ಸಹಜ ಎಂದು ಅರಿತ ಗ್ರಾಹಕರು ಬೆಲೆ ಚೌಕಾಸಿ ಮಾಡದೆ ಖರೀದಿಸುತ್ತಿದ್ದಾರೆ.
ವಿಜಯಕುಮಾರ್, ಕೆ.ಆರ್.ಮಾರುಕಟ್ಟೆ, ಹೂವಿನ ಮಂಡಿ ವರ್ತಕ
ಇದನ್ನೂ ಓದಿ: Hoovappa I H Column: ಹೂವು, ಹಣ್ಣು ಬೆಲೆ ಜಾಸ್ತಿಯೇನಾಗಿಲ್ಲ !