ವಿನುತಾ ಹೆಗಡೆ ಶಿರಸಿ
ವಿಚಾರಣೆಯಲ್ಲೂ ಸುಪ್ರೀಂಕೋರ್ಟ್ ಮೀನುಗಾರರ ಪರವಾಗಿಯೇ ಆದೇಶ ಹೊರಡಿಸಲಿ ಎಂಬ ಆಶಯದಲ್ಲಿ ಮೀನು ಗಾರರು
ಈಗಾಗಲೇ ರಾಜ್ಯ ಸರಕಾರ ಹಣ ಬಿಡುಗಡೆಗೆ ಬಜೆಟ್ ನಲ್ಲಿ ಮೀಸಲಿಟ್ಟಿದ್ದ ಸಾಗರಮಾಲಾ ಯೋಜನೆಯು ಮೀನುಗಾರರ ಹೋರಾಟದಿಂದ ಹಿಮ್ಮೆಟ್ಟಿದೆ.
ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಸಾಗರಮಾಲಾ ಯೋಜನೆಗೆ ಮೀನುಗಾರರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಈ ಯೋಜನೆ ಹಿಂಪಡೆಯಲು ಮೀನುಗಾರರು ಸರಕಾರದ ವಿರುದ್ಧ ಬೀದಿಗಿಳಿದು ಕೂಡಾ ಹೋರಾಟ ನಡೆಸಿದ್ದರು. ಈ ನಡುವೆ
ಕಾನೂನು ಹೋರಾಟ ನಡೆಸಿದ್ದ ಮೀನುಗಾರರು ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿ ದ್ದರು. ಇದೀಗ ಸುಪ್ರೀಂಕೋರ್ಟ್ನ ತ್ರಿ ಸದಸ್ಯ ಪೀಠ ಮೀನುಗಾರರ ಪರವಾಗಿ ಮೌಕಿಕ ಆದೇಶ ನೀಡಿದ್ದು, ಮೀನುಗಾರರಂತೂ ಫುಲ್ ಖುಷ್ ಆಗಿದ್ದಾರೆ.
ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಸಾಗರಮಾಲಾ ಯೋಜನೆಗೆ ಕಳೆದೆರಡು ವರ್ಷ ಗಳಿಂದ ಮೀನುಗಾರರಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದ್ದು, ಈ ಯೋಜನೆಯನ್ನು ಹಿಂಪಡೆಯಬೇಕೆಂದು ಮೀನುಗಾರರು ಕೂಡಾ ಸಾಕಷ್ಟು ಹೋರಾಟ ಕೂಡಾ ನಡೆಸಿ ದ್ದರು. ಈ ಯೋಜನೆಯಡಿ ಬೈತ್ ಕೋಲ್ ಗ್ರಾಮದಲ್ಲಿ ಕಾರವಾರ ಬಂದರು ವಿಸ್ತರಣೆ ನಡೆಯಲಿದ್ದು, ಯೋಜನೆ ಪ್ರಾರಂಭ ವಾದಲ್ಲಿ ಕಾರವಾರ, ಬೈತ್ಕೋಲಾ ಬೀಚ್ ಸಂಪೂರ್ಣ ಯೋಜನೆಯ ವಶವಾಗುವುದರಿಂದ ಸಾಂಪ್ರದಾಯಿಕ ಮೀನುಗಾರಿಕೆಗೆ ಪೂರ್ಣ ವಿರಾಮ ಬೀಳಲಿದೆ.
ಅಲ್ಲದೇ, ಸಾವಿರಾರು ಮೀನುಗಾರರು ಹಾಗೂ ಅವರ ಕುಟುಂಬ ಈ ಮೀನುಗಾರಿಕೆಯನ್ನು ನಂಬಿಕೊಂಡಿದ್ದು, ಈ ಯೋಜನೆ ಪೂರ್ಣವಾದಲ್ಲಿ ಈ ಕುಟುಂಬಗಳು ಬೀದಿಗೆ ಬೀಳಲಿದೆ ಎಂದು ಮೀನುಗಾರರ ಆರೋಪ. ಈ ಕಾರಣದಿಂದ ಪ್ರತಿಭಟನೆಯ ಜತೆ
ಕಾನೂನು ಹೋರಾಟ ಕೂಡಾ ಮೀನುಗಾರರು ನಡೆಸಿದ್ದು, ಸರಕಾರದ ಪರವಾಗಿ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಲು ಪ್ರಾರಂಭಿಸಿರುವ ಸುಪ್ರೀಂಕೋರ್ಟ್ ಮುಖ್ಯ ನ್ಯಾ.ಎನ್.ವಿ.ರಮಣ ನೇತೃತ್ವದ ತ್ರಿಸದಸ್ಯ ಪೀಠ ಯೋಜನೆ ಸಂಬಂಧಿಸಿ ರಾಜ್ಯ ಸರ್ಕಾರಕ್ಕೆ ನೋಟೀಸ್ ನೀಡಿದ್ದಲ್ಲದೇ, ಕಾಮಗಾರಿ ಮುಂದುವರಿಸದಂತೆ ಯಾವುದೇ ಅಧಿಕೃತ ತಡೆ ಆದೇಶ ನೀಡದೆ ಮೌಕಿಕ ಸೂಚನೆ ನೀಡಿದೆ.
ಇದರಿಂದ ಮೀನುಗಾರರ ಹೋರಾಟಕ್ಕೆ ಆನೆಬಲ ಬಂದಂತಾಗಿದೆ. ಒಂದು ವೇಳೆ ಸುಪ್ರೀಂಕೋಟ್ ನಲ್ಲೂ ಮೀನುಗಾರರ ವಿರುದ್ಧ ವಾಗಿ ಆದೇಶ ಬಂದಲ್ಲಿ ಮೀನುಗಾರರ ಹೋರಾಟ ಮಾತ್ರ ಯಾವತ್ತೂ ನಿಲ್ಲಲ್ಲ ಎಂದು ಮೀನುಗಾರ ಮುಖಂಡರು ಎಚ್ಚರಿಕೆ ನೀಡಿದ್ದಾರೆ. ಸುಪ್ರೀಂಕೋರ್ಟ್ನ ತ್ರಿಸದಸ್ಯ ಪೀಠ ಕಾಮಗಾರಿ ನಡೆಸದಂತೆ ಮೌಕಿಕ ಸೂಚನೆ ನೀಡಿರುವುದು ಮೀನುಗಾರರ ಪಾಲಿಗೆ ಖುಷಿ ತಂದಿದೆ.
ಮುಂದೆ ನಡೆಯಲಿರುವ ವಿಚಾರಣೆಯಲ್ಲೂ ಸುಪ್ರೀಂಕೋರ್ಟ್ ಮೀನುಗಾರರ ಪರವಾಗಿಯೇ ಆದೇಶ ಹೊರಡಿಸಲಿ ಅನ್ನೋದು
ಮೀನುಗಾರರ ಆಶಯ.
***
ಕೇಂದ್ರ ಸರಕಾರದ ಸಾಗರಮಾಲಾ ಯೋಜನೆಗೆ ೨೦೧೭ರಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ಅಡಿಗಲ್ಲು ಹಾಕಲು ಬಂದಿದ್ದಾಗ ಮೀನುಗಾರರು ವಿರೋಧ ವ್ಯಕ್ತಪಡಿಸಿ ಮನವಿ ಸಲ್ಲಿಸಿದ್ದರು. ಆದರೆ, ೨೦೧೯ ರಲ್ಲಿ ಮತ್ತೆ ಮೀನುಗಾರರು ಯೋಜನೆಗೆ ವಿರೋಧ ವ್ಯಕ್ತಪಡಿಸಿ ಭಾರೀ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಪ್ರತಿಭಟನೆಯ ತೀವ್ರತೆ ಹತೋಟಿಗೆ ತರಲು ಪೊಲೀಸರು ಲಾಠಿ ಚಾರ್ಜ್ ಕೂಡಾ ನಡೆಸಿ, ಹಲವು ಮೀನುಗಾರರನ್ನು ಬಂಽಸಿ ನಂತರ ಬಿಡುಗಡೆ ಮಾಡಿದ್ದರು. ಅಂದಿನಿಂದ ಪ್ರತೀ ಬಾರಿ ಈ ಯೋಜನೆ ಹಿಂಪಡೆಯುವಂತೆ ಮೀನುಗಾರರು ಹೋರಾಟ ನಡೆಸುತ್ತಲೇ ಬರುತ್ತಿದ್ದಾರೆ. ಸಾಗಾರ ಮಾಲಾ ಯೋಜನೆ ಜಾರಿಯಾದಲ್ಲಿ ಸುಮಾರು ೨೦೦೦ಕ್ಕೂ ಮಿಕ್ಕಿ ಮೀನುಗಾರರು ತಮ್ಮ ಜೀವನ ಕಳೆದುಕೊಳ್ಳಲಿದ್ದಾರೆ. ಈ ಕಾರಣದಿಂದ ಯಾವುದೇ ಕಾರಣಕ್ಕೂ ಸಾಗರಮಾಲಾ ಯೋಜನೆ ಕಾರವಾರದಲ್ಲಿ ಅನುಷ್ಠಾನಗೊಳ್ಳಬಾರದು. ಬೇರೆಲ್ಲಾದರೂ ನಡೆಸಿದರೂ ನಮಗೆ ತೊಂದರೆಯಿಲ್ಲ. ಸುಪ್ರೀಂಕೋರ್ಟ್ ತೀರ್ಪಿನ ಮೇಲೆ ನಮಗೆ ಭರವಸೆಯಿದೆ.
-ರಾಜು ತಾಂಡೇಲ್ ಮೀನುಗಾರ ಮುಖಂಡ.