ವಿಶೇಷ ವರದಿ: ಸಿಂಹರಾಜ್ ಬೆಂಗಳೂರು
ಕನ್ನಡ ಅಡ್ಡಿಗೆ ಸಂಸ್ಕೃತ ಸಂಸ್ಥೆಗಳ ದಾವೆ ಒಂದೆಡೆಯಾದರೆ, ಕರ್ನಾಟಕ ಸರಕಾರ ಕನ್ನಡ ಭಾಷೆಗಿಂತ ಸಂಸ್ಕೃತ ಭಾಷೆಯ ಮೇಲೆಯೇ ಅಗಾಧ ಪ್ರೀತಿ ತೋರಿ ಸುತ್ತಿರುವ ಕಾರಣವೂ, ಕರುನಾಡಿನಲ್ಲೇ ಕನ್ನಡದ ಅಸ್ಮಿತೆಗಾಗಿ ಕನ್ನಡಿಗರು ಹೋರಾಟ ಮಾಡಬೇಕಾದ ಅನಿವಾರ್ಯತೆ ತಂದೊಡ್ಡಿದೆ !
ಸಂಸ್ಕೃತ ಭಾಷೆ ಉಳಿಸುವುದು ಭಾರತೀಯರ ಕರ್ತವ್ಯ ಸರಿ. ಕರ್ನಾಟಕದಲ್ಲಿ ಸಂಸ್ಕೃತ ಕಲಿಕೆಗೆ ಕನ್ನಡಿಗರ ಆಕ್ಷೇಪ ಮತ್ತು ಅಸಮಾಧಾನಗಳೇನೂ ಇಲ್ಲ. ಆದರೆ, ಕನ್ನಡ ನೆಲ, ಜಲ, ಸಂಪನ್ಮೂಲಗಳನ್ನೆಲ್ಲಾ ಬಳಸಿ ಕೊಂಡ ಸಂಸ್ಕೃತ ಸಂಸ್ಥೆಗಳು ಇದೀಗ ಕನ್ನಡದ ಅಸ್ಮಿತೆಗೇ ಧಕ್ಕೆಯುಂಟು ಮಾಡಿ, ಸಂಸ್ಕೃತ ಹೇರಲು ಹೊರಟಿರುವುದು ನ್ಯಾಯಬದ್ಧವೇ? ಇದನ್ನು ಸಹಿಸಿಕೊಂಡು ಇಲ್ಲಿನವರು ಮೌನವಾಗಿರಬೇಕೇ? ಎಂಬುದನ್ನು ದೂರುದಾರರೇ ಹೇಳಬೇಕಿದೆ.
ಇನ್ನು ದೇಶದಲ್ಲಿ ಒಟ್ಟು 24 ಸಾವಿರ ಸಂಸ್ಕೃತ ಭಾಷಿಕರಿದ್ದು, 18 ವಿಶ್ವವಿದ್ಯಾಲಯಗಳಿವೆ. ಇದೀಗ ಕರ್ನಾಟಕ ಸರಕಾರದಿಂದ ಮಾಗಡಿ ತಾಲೂಕಿನಲ್ಲಿ ಸಂಸ್ಕೃತ ವಿವಿ ಸ್ಥಾಪನೆಗೆ 100 ಎಕರೆ ಜಾಗ ಹಾಗೂ 359 ಕೋಟಿ ರು. ಅನುದಾನ ನೀಡಲಾಗುತ್ತಿದೆ. ಆದರೆ, ಕರ್ನಾಟಕದಲ್ಲಿ ವಾಸಿಸುತ್ತಿರುವ 6.5 ಕೋಟಿ ಕನ್ನಡಿಗರ ಏಕೈಕ ವಿಶ್ವವಿದ್ಯಾಲಯಕ್ಕೆ ವರ್ಷಕ್ಕೆ 2 ಕೋಟಿ ರು. ನೀಡಲು ಮಾತ್ರ ಕರ್ನಾಟಕ ಸರಕಾರ ಮೀನಾಮೇಷ ಎಣಿಸುವುದು ಏಕೆ? ಪದವಿ ಹಂತದಲ್ಲಿ ಕನ್ನಡ ಕಡ್ಡಾಯ ಮಾಡಲು ಉಂಟಾಗಿರುವ ಅಡ್ಡಿ ಸರಿ ಮಾಡುವಲ್ಲಿ ಸರಕಾರ ಏಕೆ ಮೌನ ವಹಿಸಿದೆ? ಎಂಬುದೂ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಸರಕಾರದ ಈ ಇಬ್ಬಂದಿ ನೀತಿಗೆ ಕನ್ನಡ ಅಭಿವೃದ್ಧಿ ಪ್ರಾದೀಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಗುರುವಾರ ಸುದ್ದಿಗೋಷ್ಠಿ ಮೂಲಕ ಅಸಮಾಧಾನವನ್ನೂ ಹೊರಹಾಕಿದ್ದಾರೆ.
ಮುಂಚಿನ ಪ್ರಯತ್ನಗಳು: ಡಾ.ವಿ.ಕೃ.ಗೋಕಾಕ್ ಸಮಿತಿಯು 3 ರಿಂದ 10ನೇ ತರಗತಿಯವರೆಗೂ ಕನ್ನಡ ಕಲಿಕೆಯನ್ನು ಕಡ್ಡಾಯಗೊಳಿಸಬೇಕೆಂದು 1981ರ ಜ.೨೭ರಂದು ರಾಜ್ಯ ಸರಕಾರಕ್ಕೆ ವರದಿ ಸಲ್ಲಿಸಿತ್ತು. ರಾಜ್ಯ ಉನ್ನತ ಶಿಕ್ಷಣ ಪರಿಷತ್ನಲ್ಲಿ 2015೨೦೧೫ರ ಮೇ 13ರಂದು ಸಭೆ ನಡೆದು, ಎಂಜಿನಿಯರಿಂಗ್, ವೈದ್ಯಕೀಯ, ಕಾನೂನು, ಕೃಷಿ ಸೇರಿ ಮತ್ತಿತರೆ ವೃತ್ತಿ ಶಿಕ್ಷಣದಲ್ಲಿ ಕಡ್ಡಾಯವಾಗಿ ಕನ್ನಡವನ್ನು ಬೋಧಿಸುವ ಬಗ್ಗೆ ಹೆಚ್ಚಿನ ಅಧ್ಯಯನದ ಅವಶ್ಯಕತೆ ಇದೆ.
ಹಾಗಾಗಿ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಹಿ.ಚಿ.ಬೋರಲಿಂಗಯ್ಯ ಅಧ್ಯಕ್ಷತೆಯ ಸಮಿತಿ ಸಲ್ಲಿಸುವ ವರದಿಯಾಧಾರದಲ್ಲಿ ತೀರ್ಮಾನ ತೆಗೆದುಕೊಳ್ಳಬಹುದೆಂದು ಅಭಿಪ್ರಾಯಪಟ್ಟಿತ್ತು. ಅದರಂತೆ, ಸಮಿತಿಯು ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳು ಮತ್ತು ವೃತ್ತಿಪರ ಕೋರ್ಸ್ನ ಎಲ್ಲಾ ಬಗೆಯ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಭಾಷಾ ಬೋಧನೆಯನ್ನು ಕಡ್ಡಾಯಗೊಳಿಸಲು ಶಿಫಾರಸ್ಸು ಮಾಡಿತ್ತು.
ಈ ನಿಟ್ಟಿನಲ್ಲಿ ಸಂಬಂಧಿತ ವಿವಿಗಳ ಅಕಾಡೆಮಿಕ್ ಕೌನ್ಸಿಲ್ ಮತ್ತು ಸಿಂಡಿಕೇಟ್ ಸಭೆಯಲ್ಲಿ ಸಮಿತಿಯ ವರದಿಯನ್ನು ಮಂಡಿಸಿ, ಸೂಕ್ತ ನಿರ್ಣಯ ತೆಗೆದುಕೊಳ್ಳು ವಂತೆ ರಾಜ್ಯ ಸರಕಾರ ಆದೇಶ ಹೊರಡಿಸಿತ್ತು. ಜತೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ೨೦೧೭ರ ಜು.೨೯ರಂದು ಸಭೆ ನಡೆಸಿ, ಸಮಿತಿಯ ವರದಿಯ ಅನುಷ್ಠಾನಕ್ಕೆ ತೀರ್ಮಾನಿಸಿತು. ಅದರಂತೆ, ರಾಜ್ಯದ ಎಲ್ಲಾ ಸರಕಾರಿ, ಖಾಸಗಿ ಮತ್ತು ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ವೃತ್ತಿಪರ ಶಿಕ್ಷಣದಲ್ಲಿ ವ್ಯಾಸಂಗ ಮಾಡುತ್ತಿರುವ ಕನ್ನಡ ಮತ್ತು ಕನ್ನಡೇತರ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಬೋಧಿಸಲು ಅನುಕೂಲವಾಗುವಂತೆ ಪಠ್ಯ ಪುಸ್ತಕ ರಚನಾ
ಸಮಿತಿಗಳು ಪ್ರತ್ಯೇಕ ಪಠ್ಯಕ್ರಮಗಳನ್ನು ಸಿದ್ಧಪಡಿಸುವ ಸಂದರ್ಭದಲ್ಲಿ ಹಾಗೂ ಪಠ್ಯ ಪ್ರಕಟಣಾ ಸಮಿತಿಯು ಪಠ್ಯ ಪ್ರಕಟಗೊಳಿಸುವುದನ್ನು ಪರಿಶೀಲಿಸುವ ನಿಟ್ಟಿನಲ್ಲಿ ಸರಕಾರವು ೨೦೧೮ರ ಸೆ.೨೨ರಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರ ಅಧ್ಯಕ್ಷತೆಯ ೮ ಮಂದಿ ಸದಸ್ಯರನ್ನೊಳಗೊಂಡ ಉನ್ನತ ಅನುಷ್ಠಾನ ಸಮಿತಿ ರಚಿಸಿತ್ತು
ಸಂಸ್ಕೃತ ವಿದ್ವಾಂಸರೆನಿಸಿಕೊಂಡ ಕನ್ನಡಿಗರಿಂದಲೇ ದ್ರೋಹ
ಕನ್ನಡ ಸಂಸ್ಕೃತಿ ಉಳಿಸುವುದಾಗಿ ಹೇಳಿಕೊಳ್ಳುವ ಸಂಸ್ಕೃತ ಭಾರತಿಯೇ ಈ ರೀತಿ ನಡೆದುಕೊಳ್ಳುತ್ತಿರುವುದು ದುರಂತ. ಈ 4 ಸಂಸ್ಕೃತ ಸಂಸ್ಥೆಗಳಲ್ಲಿರುವ ವಿದ್ವಾಂಸರೆಲ್ಲರೂ ಕನ್ನಡಿಗರೇ ಆಗಿದ್ದಾರೆ. ಆದರೆ, ಮೊದಲಿಂದಲೂ ಸಂಸ್ಕೃತದ ಮೇಷ್ಟ್ರುಗಳುಕನ್ನಡಕ್ಕೆ ವಿರುದ್ಧವಾಗಿಯೇ ನಡೆದುಕೊಳ್ಳುತ್ತಿದ್ದು, ಇವರೆಲ್ಲಾಕನ್ನಡ ದ್ರೋಹಿಗಳು ಎಂದು ಹಿರಿಯ ಸಾಹಿತಿ ರಾ.ನಂ. ಚಂದ್ರಶೇಖರ ಹೇಳಿದ್ದಾರೆ. ‘ವಿಶ್ವವಾಣಿ’ಯೊಂದಿಗೆ ಮಾತನಾಡಿ, ಬರೆಯದೇ ಇದ್ದರೂ ಹೆಚ್ಚು ಅಂಕ ಸಿಗುವ
ಕಾರಣಕ್ಕೆ ಬಹುತೇಕ ವಿದ್ಯಾರ್ಥಿಗಳು ಸಂಸ್ಕೃತ ಆಯ್ಕೆ ಮಾಡಿಕೊಂಡು,ಕನ್ನಡ ಮೇಷ್ಟ್ರುಗಳುಕೆಲಸಕಳೆದು ಕೊಳ್ಳುತ್ತಿದ್ದುದ್ದು ಗೋಕಾಕ್ ಚಳವಳಿಯ ವಸ್ತುಸ್ಥಿತಿ ಯಾಗಿತ್ತು. ಈ ರೀತಿ ಕನ್ನಡದ ಮೇಲೆ ನಿರಂತರವಾಗಿ ಎಲ್ಲಾ ಕಾಲಮಾನದಲ್ಲಿಯೂ ದಬ್ಬಾಳಿಕೆ ನಡೆಯುತ್ತಲೇ ಇದೆ.
ಸಂಸ್ಕೃತ ಶ್ರೀಮಂತ ಭಾಷೆಯಾಗಿದ್ದು, ಕನ್ನಡ ಅಲ್ಲಿಂದ ಎರವಲು ಪಡೆದಿರುವುದೇನೋ ಸರಿ. ಆದರೆ,ಕರ್ನಾಟಕದಲ್ಲೇಕನ್ನಡದ ಅಸ್ತಿತ್ವದ ಪ್ರಶ್ನೆ ಬಂದರೆ ಹೇಗೆ? ರಾಜ್ಯ ಸರಕಾರಕ್ಕೂಕನ್ನಡ ಪರ ಬದ್ಧತೆಯೇ ಇಲ್ಲ. ಸರಕಾರಕ್ಕೆ ನಿಜವಾಗಿಯೂ ಕನ್ನಡ ನಿಷ್ಠೆ ಇದ್ದರೆ, ಸಮಗ್ರಕನ್ನಡ ಭಾಷಾಕಾಯ್ದೆ ಜಾರಿಗೊಳಿಸುವುದು, ಪರಿಷ್ಕೃತ ಡಾ. ಸರೋಜಿನಿ ಮಹಿಷಿ ವರದಿ ಮಂಡಿಸುವುದು, ಸರಕಾರಿ ವೆಬ್ಸೈಟ್ಗಳುಕನ್ನಡದಲ್ಲಿ ತೆರೆಯಬೇಕು, ಕನ್ನಡ ನಾಮಫಲಕ ಅಳವಡಿಕೆ, ಭಾಷಾ ವಾರು ಪ್ರಾಂತ್ಯಗಳಿಗೆ ಪೂರಕವಾದ ಸಂವಿಧಾನ ತಿದ್ದುಪಡಿಗಳಾಗುವ ನಿಟ್ಟಿನಲ್ಲಿಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಸಂಸ್ಥೆಗಳಿಂದೇಕೆ ವಿರೋಧ?
ಕನ್ನಡ ಕಡ್ಡಾಯದಿಂದ ಸಂಸ್ಕೃತಕ್ಕೆ ಪ್ರಾಶಸ್ತ್ಯವಿಲ್ಲದೇ ಹೋಗಬಹುದು, ಸಂಸ್ಕೃತಕಲಿತವರಿಗೆ ಉದ್ಯೋಗಾವಕಾಶಗಳುಕಡಿಮೆಯಾಗಬಹುದು, ಉದ್ಯೋಗವಕಾ
ಶವಿಲ್ಲದ ಕಾರಣ ಮುಂದಿನ ದಿನಗಳಲ್ಲಿ ಸಂಸ್ಕೃತ ಕಲಿಯಲು ಯಾರೂ ಬರುವುದಿಲ್ಲ ಎಂಬ ಅಂಶಗಳು ಸೇರಿದಂತೆ ಸಂಸ್ಕೃತದ ಹೆಸರಿನಲ್ಲಿ ಬಂಡವಾಳಶಾಹಿ ಆಂಗ್ಲಮಾಧ್ಯಮ ಸಂಸ್ಥೆಗಳ ಹುನ್ನಾರವೂ ಈ ವಿರೋಧಕ್ಕೆಕಾರಣವಾಗಿರಬಹುದು.