Hampi Festival: ಹಂಪಿ ಉತ್ಸವ: ಅಂತಿಮ ಹಂತದ ಸಿದ್ದತೆ
ವಿಶ್ವವಿಖ್ಯಾತ ಹಂಪಿ ಗತವೈಭವವನ್ನು ನೆನಪಿಸುವ ಹಂಪಿ ಉತ್ಸವಕ್ಕೆ ಸಿದ್ಧತೆ ಕಾರ್ಯ ಭರ ದಿಂದ ಸಾಗಿದೆ. ಉತ್ಸವ ನಿಮಿತ್ತ ಐದು ವೇದಿಕೆಗಳ ನಿರ್ಮಾಣ ಕಾರ್ಯ ಈಗಾಗಲೇ ಭರದಿಂದ ಸಾಗಿದೆ. ಈ ಬಾರಿ ಹಂಪಿ ಉತ್ಸವದಲ್ಲಿ ಖ್ಯಾತ ಕಲಾವಿದರು ಸೇರಿದಂತೆ ಸ್ಥಳೀಯ ಕಲಾವಿದ ರಿಗೂ ವೇದಿಕೆ ಕಲ್ಪಿಸಲಾಗುತ್ತಿದೆ. ಹಂಪಿ ಉತ್ಸವ ಫೆ.28, ಮಾ.2ರವರೆಗೆ 3 ದಿನಗಳ ಕಾಲ ನಡೆಯಲಿದೆ. ಫೆ. 28ರಂದು ಸಂಜೆ 6 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಲಿದ್ದಾರೆ

ಹಂಪಿ ಉತ್ಸವಕ್ಕಾಗಿ ವಿಜಯನಗರ ವಾಸ್ತುಶಿಲ್ಪ ಮಾದರಿಯಲ್ಲಿ ಅದ್ಧೂರಿಯಾಗಿ ನಿರ್ಮಾಣ ಗೊಳ್ಳುತ್ತಿರುವ ಪ್ರಾಚೀನ ಸ್ಮಾರಕಗಳುಳ್ಳ ಪ್ರಧಾನ ವೇದಿಕೆ.

ಅನಂತ ಪದ್ಮನಾಭ ರಾವ್ ಹೊಸಪೇಟೆ
ಫೆ.28 ರಿಂದ ಮಾ.2 ರವರೆಗೆ ಉತ್ಸವ ಆಯೋಜನೆ
ಸಿಎಂ ಸಿದ್ದರಾಮಯ್ಯ ಉದ್ಘಾಟನೆ
ವಿಶ್ವವಿಖ್ಯಾತ ಹಂಪಿ ಗತವೈಭವವನ್ನು ನೆನಪಿಸುವ ಹಂಪಿ ಉತ್ಸವಕ್ಕೆ ಸಿದ್ಧತೆ ಕಾರ್ಯ ಭರದಿಂದ ಸಾಗಿದೆ. ಉತ್ಸವ ನಿಮಿತ್ತ ಐದು ವೇದಿಕೆಗಳ ನಿರ್ಮಾಣ ಕಾರ್ಯ ಈಗಾಗಲೇ ಭರದಿಂದ ಸಾಗಿದೆ. ಈ ಬಾರಿ ಹಂಪಿ ಉತ್ಸವದಲ್ಲಿ ಖ್ಯಾತ ಕಲಾವಿದರು ಸೇರಿದಂತೆ ಸ್ಥಳೀ ಯ ಕಲಾವಿದರಿಗೂ ವೇದಿಕೆ ಕಲ್ಪಿಸಲಾಗುತ್ತಿದೆ. ಹಂಪಿ ಉತ್ಸವ ಫೆ.28, ಮಾ.2ರವರೆಗೆ 3 ದಿನಗಳ ಕಾಲ ನಡೆಯಲಿದೆ. ಫೆ. 28ರಂದು ಸಂಜೆ 6 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವ ಕುಮಾರ್, ಜಿಲ್ಲಾ ಉಸ್ತುವಾರಿ ರಿದಂತೆ ಶಾಸಕರು ಉತ್ಸವದಲ್ಲಿ ಭಾಗಿಯಾಗಲಿದ್ದಾರೆ. ಶಾಸಕ ಎಚ್.ಆರ್. ಗವಿಯಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.
ಅತ್ಯಾಕರ್ಷಕ ಪ್ರಧಾನ ವೇದಿಕೆ: ಬೆಂಗಳೂರಿನ ಉಡುಪಾಸ್ ಸಂಸ್ಥೆ ಹಾಗೂ ವಿಜಯ ನಗರ ಜಿಲ್ಲಾಡಳಿತ ವಿಜಯನಗರ ವಾಸ್ತುಶಿಲ್ಪ ಮಾದರಿಯಲ್ಲಿ ಹಂಪಿ ಸ್ಮಾರಕಗಳ ಗುಚ್ಛವನ್ನು ಬಳಸಿಕೊಂಡು ಅತ್ಯಾಕರ್ಷಕ ವೇದಿಕೆ ನಿರ್ಮಾಣ ಮಾಡುತ್ತಿವೆ. ವಿಜಯನಗರ ವಾಸ್ತುಶಿಲ್ಪ ರಚನೆಯಲ್ಲಿ ವಿಜಯವಿಠಲ ದೇವಾಲಯದ ಸಪ್ತಸ್ವರ ಕಂಬಗಳು, ಕುದುರೆ ಗೊಂಬೆ ಮಂಟಪದ ಕಂಬಗಳನ್ನು ಬಳಸಿಕೊಂಡು ಆಕರ್ಷಕ ಮಂಟಪ ನಿರ್ಮಿಸ ಲಾಗಿದೆ. ಈ ಮಂಟಪದ ಮೇಲೆ ಕಮಲ ಮಹಲ್ ಸೃಜನೆ ಮಾಡಲಾಗುತ್ತಿದೆ. ಜತೆಗೆ ವಿಜಯನಗರ ಸಾಮ್ರಾಜ್ಯದ ರಾಜಲಾಂಛನ ವರಾಹ ಕೆತ್ತನೆ ಮೂಡಿಬರಲಿದೆ. ಮಧ್ಯದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಸ್ಮಾರಕದ ಅಕ್ಕಪಕ್ಕ ರಾಣಿ ಸ್ನಾನಗೃಹ ಸೃಜಿಸಲಾಗುತ್ತಿದೆ. ರಾಣಿ ಸ್ನಾನಗೃಹದ ಮೇಲೆ ವಿರೂಪಾಕ್ಷೇಶ್ವರ ದೇವಾಲಯದ ರಾಯಗೋಪುರ ನಿರ್ಮಿಸ ಲಾಗುತ್ತಿದೆ.
ಆಕರ್ಷಕ ಲೈಟಿಂಗ್ ವ್ಯವಸ್ಥೆ: 120 ಅಡಿ ಅಗಲ 80 ಉದ್ದ ಅಳತೆಯಲ್ಲಿ ಪ್ರಧಾನ ವೇದಿಕೆ ನಿರ್ಮಿಸಲಾಗುತ್ತಿದೆ. ಜತೆಗೆ ಆಕರ್ಷಕ ಲೈಟಿಂಗ್ ವ್ಯವಸ್ಥೆ ಕೂಡ ಮಾಡಲಾತ್ತಿದೆ. ಎಲ್‌ಇಡಿ ಪರದೆ ಕೂಡ ಅಳವಡಿಕೆ ಮಾಡಲಾಗುತ್ತಿದ್ದು, ವೇದಿಕೆ ಮುಂಭಾಗದಲ್ಲಿ 70 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗುತ್ತಿದೆ. ವಿಐಪಿ ಹಾಗೂ ವಿವಿಐಪಿ ಆಸನಗಳನ್ನು ಕೂಡ ವ್ಯವಸ್ಥೆ ಮಾಡಲಾಗುತ್ತಿದ್ದು, ಕಲಾವಿದರು, ಗಣ್ಯಾತಿಗಣ್ಯರಿಗಾಗಿ ಗ್ರೀನ್ ರೂಂ ನಿರ್ಮಾಣ ಮಾಡಲಾಗುತ್ತಿದೆ. ಹಂಪಿ ಉತ್ಸವದಲ್ಲಿ ಈ ಬಾರಿ ಭಾರಿ ಗಾತ್ರದಲ್ಲಿ ಜರ್ಮನ್ ಟೆಂಟ್ ನಿರ್ಮಾಣ ಮಾಡಲಾಗುತ್ತಿದೆ. ಇದರಲ್ಲಿ ಗಣ್ಯಾತಿಗಣ್ಯರು, ಕಲಾವಿದರಿಗಾಗಿ ವ್ಯವಸ್ಥೆ ಮಾಡಲಾಗುತ್ತಿದೆ. ಇದು ಸಂಪೂರ್ಣ ಹವಾನಿಯಂತ್ರಿತ ಕೊಠಡಿ ಆಗಿರಲಿದೆ.
ಕಲ್ಲಿನ ತೇರು ಮಂಟಪದ ಆಕರ್ಷಣೆ
ವೇದಿಕೆ ಅಡಿಪಾಯದಲ್ಲಿ ಹಜಾರ ರಾಮದೇವಾಲಯ, ಮಹಾನವಮಿ ದಿಬ್ಬದ ಮಾದರಿ ಯಲ್ಲಿ ಆನೆ, ಕುದುರೆಗಳನ್ನು ಕೆತ್ತನೆ ಮಾಡುವ ಮೂಲಕ ಆಕರ್ಷಕ ಮಂಟಪ ಸೃಜಿಸ ಲಾಗುತ್ತಿದೆ. ಈ ವೇದಿಕೆಯ ಎರಡು ಬದಿಯಲ್ಲಿ ಸಾಲು ಮಂಟಪದ ಕಂಬಗಳನ್ನು ಬಳಸಿ ಆಕರ್ಷಕ ಮಂಟಪ ಸೃಜಿಸಲಾಗುತ್ತಿದೆ. ಅವುಗಳ ಮೇಲೆ ಅಂಜನಾದ್ರಿಯ ಅಂಜನೇಯ ಮತ್ತು ಸಾಸಿವೆಕಾಳು ಗಣಪತಿಯನ್ನು ಸೃಜಿಸಲಾಗುತ್ತಿದೆ. ಇನ್ನೂ ವೇದಿಕೆಯ ಎರಡೂ ಬದಿಯಲ್ಲಿ ವಿಜಯವಿಠಲ ದೇವಾಲಯದ ಆವರಣದ ಕಲ್ಲಿನ ತೇರು ಮಂಟಪ ಸೃಜಿಸಿ ಇದರಲ್ಲಿ ಎಲ್‌ಇಡಿಗೆ ವ್ಯವಸ್ಥೆ ಮಾಡುವ ಕಾರ್ಯವೂ ನಡೆಯುತ್ತಿದೆ.
*
ಫೆ.28 ರ ಸಂಜೆ 6 ಗಂಟೆಗೆ ಗಾಯತ್ರಿ ಪೀಠದ ಬಳಿ ನಿರ್ಮಿಸಲಾಗಿರುವ ಎಂ.ಪಿ.ಪ್ರಕಾಶ್ ಪ್ರಧಾನ ವೇದಿಕೆಯಲ್ಲಿ ಹಂಪಿ ಉತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ವೇದಿಕೆಗಳ ಕಾರ್ಯ ಭರದಿಂದ ಸಾಗಿದೆ. ಫೆ.26ರ ಸಂಜೆ ೬ ಗಂಟೆಗೆ ಹಂಪಿ ವಿರೂಪಾಕ್ಷ ದೇವಸ್ಥಾನದ ಹತ್ತಿರದ ತುಂಗಭದ್ರಾ ನದಿತಟದಲ್ಲಿ ತುಂಗಾರತಿ ನಡೆಯಲಿದೆ. ಹಲವು ಖ್ಯಾತ ಕಲಾವಿದರು ಭಾಗವಹಿಸಲಿದ್ದಾರೆ.
-ಎಂ.ಎಸ್. ದಿವಾಕರ್, ವಿಜಯನಗರ ಜಿಲ್ಲಾಧಿಕಾರಿ