ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಐಪಿಎಲ್‌ ಟಿಕೆಟ್‌ 1.50 ಲಕ್ಷಕ್ಕೆ ಮಾರಾಟ !

ಕಾಳಸಂತೆಯಲ್ಲಿ ಐಪಿಎಲ್ ಟಿಕೆಟ್ ಬೆಲೆ ಈಗ 1.50ಲಕ್ಷ ರೂ. ವರೆಗೂ ಏರಿಕೆಯಾಗಿದೆ. ಬಹುತೇಕ ಎಲ್ಲಾ ಗ್ಯಾಲರಿಗಳ ಟಿಕೆಟ್ ದರ 10 ಪಟ್ಟು ಹೆಚ್ಚು ದರಕ್ಕೆ ಮಾರಾಟವಾಗುತ್ತಿದೆ. ಅತ್ಯಂತ ಕಡಿಮೆ ಬೆಲೆಯ 1200 ದರದ ಟಿಕೆಟ್ ಕೂಡ 15000 ರು.ಗಳಿಂದ 18000 ರು.ವರೆಗೂ ಮಾರಾಟವಾಗುತ್ತಿದೆ. ಊಟ, ಐಷಾರಾಮಿ ಆಸನಗಳು ಮತ್ತು ಪಾನಿಯಗಳನ್ನು ಪೂರೈಸುವ ವಿಐಪಿ ವಿಭಾಗದ ಟಿಕೆಟ್ ಮುಖ ಬೆಲೆ 50 ಸಾವಿರ ರು. ಇದ್ದರೆ, ಕಾಳಸಂತೆಯಲ್ಲಿ ಈ ಟಿಕೆಟ್ ಸುಮಾರು 1.50 ಲಕ್ಷ ರು.ವರೆಗೂ ಮಾರಾಟವಾಗುತ್ತಿದೆ.

ಐಪಿಎಲ್‌ ಟಿಕೆಟ್‌ 1.50 ಲಕ್ಷಕ್ಕೆ ಮಾರಾಟ !

Profile Ashok Nayak May 2, 2025 9:59 AM

ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು

ಶನಿವಾರದ ಆರ್‌ಸಿಬಿ-ಚೆನ್ನೈ ಪಂದ್ಯದ ಟಿಕೆಟ್ ಕಾಳಸಂತೆಯಲ್ಲಿ ದಾಖಲೆ ಬೆಲೆಗೆ ಮಾರಾಟ

ಸಾಂಪ್ರದಾಯಿಕ ಎದುರಾಳಿಗಳಾದ ಸಿಎಸ್ ಕೆ ಮತ್ತು ಆರ್‌ಸಿಬಿ ನಡುವೆ ಬೆಂಗಳೂರಿನಲ್ಲಿ ಶನಿವಾರ ನಡೆಯುವ ಪಂದ್ಯ ಆರಂಭಕ್ಕೆ ಮುನ್ನವೇ ಐಪಿಎಲ್ ಟಿಕೆಟ್ ಬೆಲೆ ಹೊಸ ದಾಖಲೆ ಬರೆದಿದೆ. ಕಾಳಸಂತೆಯಲ್ಲಿ ಐಪಿಎಲ್ ಟಿಕೆಟ್ ಬೆಲೆ ಈಗ 1.50ಲಕ್ಷ ರೂ. ವರೆಗೂ ಏರಿಕೆಯಾಗಿದೆ. ಬಹುತೇಕ ಎಲ್ಲಾ ಗ್ಯಾಲರಿಗಳ ಟಿಕೆಟ್ ದರ 10 ಪಟ್ಟು ಹೆಚ್ಚು ದರಕ್ಕೆ ಮಾರಾಟವಾಗುತ್ತಿದೆ. ಅತ್ಯಂತ ಕಡಿಮೆ ಬೆಲೆಯ 1200 ದರದ ಟಿಕೆಟ್ ಕೂಡ 15000 ರು.ಗಳಿಂದ 18000 ರು.ವರೆಗೂ ಮಾರಾಟವಾಗುತ್ತಿದೆ. ಊಟ, ಐಷಾರಾಮಿ ಆಸನಗಳು ಮತ್ತು ಪಾನಿಯಗಳನ್ನು ಪೂರೈಸುವ ವಿಐಪಿ ವಿಭಾಗದ ಟಿಕೆಟ್ ಮುಖ ಬೆಲೆ 50 ಸಾವಿರ ರು. ಇದ್ದರೆ, ಕಾಳಸಂತೆಯಲ್ಲಿ ಈ ಟಿಕೆಟ್ ಸುಮಾರು 1.50 ಲಕ್ಷ ರು.ವರೆಗೂ ಮಾರಾಟವಾಗುತ್ತಿದೆ.

ಇದರೊಂದಿಗೆ ಈವರೆಗಿನ ಎಲ್ಲಾ ಪಂದ್ಯಗಳಿಗಿಂತಲೂ ಶನಿವಾರದ ನಡೆಯಲಿರುವ ಪಂದ್ಯದ ಟಿಕೆಟ್ ದರ ದಾಖಲೆ ಬರೆದಿದೆ. ಹೀಗಾಗಿ ‘ಈ ಬಾರಿ ಕಪ್ ನಮ್ಮದೇ’ ಎನ್ನುವವರು ಕ್ರಿಕೆಟ್ ಪ್ರೇಮಿಗಳು ಬೆಂಗಳೂರಿನಲ್ಲಿ ನಡೆಯುವ ಟಿಕೆಟ್ ಪಂದ್ಯಗಳ ಟಿಕೆಟ್‌ಗಳು ಮಾತ್ರ ನಮ್ಮದಲ್ಲ, ಅವು ನಮಗೆ ಸಿಗುವುದೂ ಇಲ್ಲ ಎಂದು ನಿಶ್ಚಯ ಮಾಡಿಕೊಳ್ಳಬೇಕಾಗಿದೆ.

ಇದನ್ನೂ ಓದಿ: IPL 2025: ಆರ್‌ಸಿಬಿ, ಮುಂಬೈಗೆ ಒಂದೇ ಹೆಜ್ಜೆ ಬಾಕಿ-8 ತಂಡಗಳ ಐಪಿಎಲ್‌ ಪ್ಲೇಆಫ್ಸ್‌ ಲೆಕ್ಕಾಚಾರ!

ಐಪಿಎಲ್ ಪಂದ್ಯಗಳನ್ನು ನಡೆಸುವ ಆಯೋಜಕ ಸಂಸ್ಥೆಗಳು ಟಿಕೆಟ್ ಗಳನ್ನು ಅಧಿಕೃತವಾಗಿ ಮಾರಾಟ ಮಾಡುವುದಿಲ್ಲ. ಅದು ಜನರಿಗೆ ಸಿಗುತ್ತಿಲ್ಲವೇ ಎಂದು ಪ್ರಶ್ನಿಸಿ ಅಂದರೆ ಐಪಿಎಲ್ ಟಿಕೆಟ್‌ಗಳೇನೋ ಅಧಿಕೃತವಾಗಿಯೇ ಮಾರಾಟವಾಗುತ್ತವೆ. ಆದರೆ ಅವು ಸಾಮಾನ್ಯ ಕ್ರಿಕೆಟ್ ಪ್ರೇಮಿಗಳ ಪಾಲಿಗೆ ಗಗನ ಕುಸುಮವಾಗಿವೆ. ಪಂದ್ಯಗಳ ಆಯೋಜಕ ಸಂಸ್ಥೆಗಳು ಕೇವಲ ಮೂರ್ನಾಲ್ಕು ನಿಮಿಷಗಳು ಮಾತ್ರ ತಮ್ಮ ವೆಬ್‌ಸೈಟ್ ಗಳ ಮಾರಾಟ ಕಿಂಡಿಗಳನ್ನು ತೆರೆದಿರುತ್ತವೆ. ಆ ಮೂರು ನಿಮಿಷಗಳಲ್ಲಿ ಯಾರಿಗೆ ಟಿಕೆಟ್ ಸಿಗುತ್ತದೆ ಅವರಿಗೆ ಮಾತ್ರ ಅಧಿಕೃತ ದರದಲ್ಲಿ ಟಿಕೆಟ್ ಲಭ್ಯ.

ಅಷ್ಟಕ್ಕೂ ಅವುಗಳನ್ನೂ ಕೂಡ ಕಾಳಸಂತೆಕೋರರು ಮತ್ತು ಅದಕ್ಕೆ ಸಹಕಾರ ನೀಡುವ ಸಂಸ್ಥೆ ಗಳವರೇ ಖರೀದಿಸಿ ಬಿಡುತ್ತಾರೆ ಎನ್ನುವ ದೂರುಗಳಿವೆ. ಹೀಗಾಗಿ ಈ ಟಿಕೆಟ್ ಮಾರಾಟ ವ್ಯವಸ್ಥೆ ಯನ್ನು ಬ್ಯಾಕ್ ಮ್ಯಾಜಿಕ್ ಎಂದು ಸ್ಥಳೀಯ ಕ್ರಿಕೆಟ್ ಪ್ರೇಮಿಗಳು ಟೀಕಿಸುತ್ತಾರೆ. ಪ್ರತಿ ಬಾರಿ ಐಪಿಎಲ್ ಪಂದ್ಯ ಆರಂಭಕ್ಕೆ ಮೂರು ದಿನ ಮುಂಚೆಯೇ ಟಿಕೆಟ್ ದರ ಲಕ್ಷ ರು. ಗಡಿ ದಾಟಲಾ ರಂಭಿಸುತ್ತದೆ ಎನ್ನುತ್ತಾರೆ ಬೆಂಗಳೂರಿನ ಹಿರಿಯ ಪೊಲೀಸ್‌ ಅಧಿಕಾರಿಗಳು.

ಕಾಳಸಂತೆ ದಂಧೆಗೆ ಕಡಿವಾಣ ಇಲ್ಲವೇ ?

ಸಚಿವರನ್ನೂ ಕ್ರೀಡಾಂಗಣಕ್ಕೆ ಆಹ್ವಾನಿಸಿ ಅವರಿಗೆ ಪಂದ್ಯಕ್ಕೆ ಸಂಬಂಧಿಸಿದ ಯಾವುದೇ ದೂರುಗಳು ಹೋಗಬಾರದು. ಹೋದರೂ ಏನೂ ಆಗದಂತೆ ಮಾಡುವ ಪ್ರಯತ್ನಗಳನ್ನೂ ಮಾಡಲಾಗುತ್ತದೆ. ಹೀಗಾಗಿ ಐಪಿಎಲ್ ಟಿಕೆಟ್ ದರ 2 ಲಕ್ಷ ರು. ವರೆಗೂ ಕಾಳಸಂತೆಯಲ್ಲಿ ಮಾರಾಟ ಮಾಡಿದರೂ ಯಾರೂ ಪ್ರಶ್ನಿಸುತ್ತಿಲ್ಲ. ಹೀಗಾಗಿ ಟಿಕೆಟ್ ಮಾರಾಟಗಾರ ಸಂಸ್ಥೆಗಳು ಬೆಂಗಳೂರು ಈ ಬಾರಿ ಐಪಿಎಲ್ ನಲ್ಲಿ ಬೆಂಗಳೂರಿನಲ್ಲಿ ನಡೆಯುವ ಪಂದ್ಯಗಳ ಟಿಕೆಟ್ ಮಾರಾಟ ವ್ಯವಸ್ಥೆಯನ್ನು ಬುಕ್ ಮೈ ಶೋ ಮತ್ತು ಡಿಎನ್‌ಎ ಎಂಬ ಸಂಸ್ಥೆಗಳು ಹಾಗೂ ಪಂದ್ಯ ಆಯೋಜಕ ಸಂಸ್ಥೆಗಳು ಪಡೆದು ಕೊಂಡಿವೆ.

ಈ ಸಂಸ್ಥೆಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿರುವ ಸುಮಾರು 38 ಸಾವಿರ ಆಸನಗಳ ಸಾಮರ್ಥ್ಯಕ್ಕೆ ತಕ್ಕಂತೆ ಟಿಕೆಟ್‌ಗಳನ್ನು ಸಿದ್ಧಪಡಿಸಿ ಮಾರಾಟ ಮಾಡಬೇಕು. ಆದರೆ ಕಳೆದ ವರ್ಷ ಅನೇಕ ನಕಲಿ ಟಿಕೆಟ್ ಗಳ ಮಾರಾಟವೂ ಆಗಿತ್ತು. ಇದನ್ನು ಯಾರೂ ಪ್ರಶ್ನಿಸಲು ಹೋಗುವುದಿಲ್ಲ. ಏಕೆಂದರೆ, ಪಂದ್ಯ ಆಯೋಜಕರು ಮತ್ತು ಟೆಕೆಟ್ ಮಾರಾಟಗಾರರು ಅಧಿಕಾರಿಗಳು, ಸಂಘಸಂಸ್ಥೆಗಳು, ರಾಜಕೀಯ ನಾಯಕರು, ಆಯಕಟ್ಟಿನ ಸ್ಥಾನದಲ್ಲಿರುವ ಐಎಎಸ್ ಅಧಿಕಾರಿಗಳು, ಐಪಿಎಸ್ ಅಧಿಕಾರಿಗಳು ಹಾಗೂ ವಿವಿಧ ಕ್ಷೇತ್ರಗಳ ಪ್ರಭಾವಿಗಳಿಗೆ ಟೆಕೆಟ್ ಗಳನ್ನು ನೀಡಿ ಸಮಾಧಾನ ಪಡಿಸಿರುತ್ತಾರೆ. ಅಷ್ಟು ಸಾಲದು ಎಂದು ಮುಖ್ಯಮಂತ್ರಿ ಅವರೂ ಸೇರಿದಂತೆ ಅನೇಕ ಜಿಲ್ಲಾಡಳಿತ, ಪೊಲೀಸ್ ವ್ಯವಸ್ಥೆ ಸೇರಿದಂತೆ ಯಾವುದೇ ಸಂಸ್ಥೆಯನ್ನೂ ಕೇರ್ ಮಾಡುತ್ತಿಲ್ಲ ಎಂದು ಹಿರಿಯ ಅಧಿಕಾರಿಗಳು ಹೇಳುತ್ತಿದ್ದಾರೆ.

ಪ್ರಭಾವಿಗಳಿಂದಲೇ ಬ್ಲ್ಯಾಕ್ ಟಿಕೆಟ್ ಖರೀದಿ

ಅಚ್ಚರಿ ಎಂದರೆ, ಐಪಿಎಎಲ್ ಟಿಕೆಟ್ ದರ ಲಕ್ಷಾಂತರ ರೂ. ಏರಿಕೆಯನ್ನು ಪ್ರಶ್ನಿಸಬೇಕಾದ ಅನೇಕ ಪ್ರಭಾವಿ ರಾಜಕಾರಣಿಗಳೇ ಈ ಬಾರಿ ಬ್ಲ್ಯಾಕ್‌ನಲ್ಲಿ ಟಿಕೆಟ್ ಖರೀದಿಯಲ್ಲಿ ತೊಡಗಿದ್ದಾರೆ. ಸಚಿವರು, ಶಾಸಕರು ಕೂಡ ತಮಗೆ ಉಚಿತವಾಗಿ ಬಂದಿರುವ ಒಂದೆರಡು ಟಿಕೆಟ್ ಸಾಲದೆ ತಮ್ಮ ಆಪ್ತರು ಮತ್ತು ಮಧ್ಯವರ್ತಿಗಳ ಮೂಲಕ ಲಕ್ಷ ರು.ವರೆಗೂ ಹಣ ಪಾವತಿಸಿ ಕಾಳಸಂತೆಯಲ್ಲಿ ಟಿಕೆಟ್ ಖರೀದಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಇಷ್ಟೆ ನಡೆಯುತ್ತಿದ್ದರೂ ನಗರ ಪೊಲೀಸ್ ವ್ಯವಸ್ಥೆ ಈ ನಿಟ್ಟಿನಲ್ಲಿ ಅಸಹಾಯಕವಾಗಿ ಕುಳಿತಿದೆ.