ವಿಶೇಷ ವರದಿ : ನರಸಮ್ಮ ಮುಧೋಳ
ನಾವು ಬದಲಾವಣೆ ಬಯಸುತ್ತೇವೆ ಆದರೆ ಸ್ವತಃ ಬದಲಾಗುವದಿಲ್ಲ, ಉಪದೇಶ ಮಾಡುತ್ತೇವೆ ನಮ್ಮ ಮನ ಅವಲೋಕನ ಮಾಡುವುದಿಲ್ಲ, ಅಚಾರ ವಿಚಾರದಲ್ಲೂ ಲಾಭ ನಷ್ಟಗಳ ಲೆಕ್ಕ ಹಾಕುವ ಕಾಲಮಾನ ಇದು. ಆದರೆ, ಇತಿಹಾಸದಲ್ಲಿ ಇಂತಹ ಮನಸ್ಸುಗಳಿಗೆ ಜಾಗವಿಲ್ಲ. ಇದು ಕೇವಲ ಈಗಿನ ಕಥೆ ಅಲ್ಲ ಅನಾದಿಕಾಲದಿಂದಲೂ ಮಾನವಜೀವನದ ಮೇಲೆ ಪ್ರಭಾವ ಬೀರುವ ಭಾವನೆಗಳ ಸಂತೆ. ಈ ಸಂತೆಯಲ್ಲಿ ಮಾನವಕೂಲಕ್ಕೆ ಒಳಿತು ಮಾಡಲು ಸಾಕಷ್ಟು ಮಹನೀಯರು ತಮ್ಮ ತನು ಮನದಿಂದ ತಮ್ಮನ್ನು ಅರ್ಪಿಸಿ ಕೊಂಡಿದ್ದಾರೆ ಅಂತಹ ಮಹಾನು ಭಾವರಲ್ಲಿ ೧೨ ಶತಮಾನದಲ್ಲಿ ನಮ್ಮ ಕರುನಾಡಿನ ಪುಣ್ಯ ಭೂಮಿಯಲ್ಲಿ ಜನಿಸಿದ ಬಸವಣ್ಣನವರು ಒಬ್ಬರು ಆಗಿದ್ದರು.
ಕಾಯಕ ಮಾನವನ ಬದುಕಿನ ಬಹು ದೊಡ್ಡ ಅಂಗ, ಈ ಅಂಗದಿAದಲೇ ನಮ್ಮ ಬದುಕು, ಬದುಕಿಗಾಗಿ ಕಾಯಕ ಮಾಡಲೇಬೇಕು, ಅಂದಾಗಲೇ ಮನುಷ್ಯನ ಬಾಳಿಗೊಂದು ಸುಂದರ ಅರ್ಥ. ಈ ಹಿನ್ನಲೆಯಲ್ಲಿ ೧೨ನೇ ಶತಮಾ ನದಲ್ಲಿ ನಡೆದ ಕಾಯಕ ಕ್ರಾಂತಿಯ ರೂವಾರಿ ಮತ್ತು ಸಮಾನತೆಯ ಯುಗ ಪುರುಷ, ಭಕ್ತಿ ಬಂಡಾರಿ ಬಸವಣ್ಣ ನವರ ಕೈಗೊಂಡ ಕ್ರಾಂತಿಕಾರಿ ಹೆಜ್ಜೆಗಳು ತಮ್ಮ ಮುಂದೆ ಪ್ರಸ್ತುತ ಪಡಿಸಲು ಹೆಮ್ಮೆ ಎನಿಸುತ್ತದೆ.
ಬಸವಣ್ಣನವರು ಬಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿ ಗ್ರಾಮದಲ್ಲಿ ೧೧೩೪ ರಲ್ಲಿ ಜನಿಸಿದರು. ಶ್ರೀ ಮಾದರಸ ಮತ್ತು ಮಾದಲಾಂಬಿಕೆ ಬಸವಣ್ಣ ನವರ ಅಪ್ಪ-ಅಮ್ಮ. ಬಸವಣ್ಣನವರು ಎಂಟನೇ ವಯಸ್ಸಿನಲ್ಲಿ ಇದ್ದಾಗ ಅವರಿಗೆ ಜನಿವಾರ ಕಟ್ಟಲು ಹೋದಾಗ ಅವರು ತಮಗಿಂತ ದೊಡ್ಡವಳಾದ ಸಹೋದರಿ ನಾಗಮ್ಮನಿಗೆ ಕಟ್ಟಲು ಹೇಳುತ್ತಾರೆ. ಆ ಸಮಯದಲ್ಲಿ ಹಿರಿಯರು ಇದು ಪುರುಷರಿಗೆ ಮಾತ್ರ ಕಟ್ಟಬೇಕು ಮಹಿಳೆಯರಿಗೆ ಕಟ್ಟುವಂತಿಲ್ಲ ಎಂದು ಹೇಳಿದಾಗ ಪುರುಷ ಮತ್ತು ಮಹಿಳೆಯ ಮಧ್ಯೆ ಸಮಾನತೆ ಇರಬೇಕು ಬೇಧ ಭಾವ ಇರಬಾರದು ಎಂದು ಹೇಳಿ ಮನೆ ಬಿಟ್ಟು ಹೊರಟು ಹೋಗುತ್ತಾರೆ.
ನಂತರ ಬಸವಣ್ಣ ಕೂಡಲ ಸಂಗಮಕ್ಕೆ ತೆರಳುತ್ತಾರೆ. ಸುಮಾರು ೧೨ ವರ್ಷಗಳ ಕಾಲ ಕೂಡಲಸಂಗಮದಲ್ಲೇ ಅಧ್ಯಯನದಲ್ಲಿ ತೊಡಗಿಸಿಕೊಳ್ಳುತ್ತಾರೆ. ದೇವರು ಬೇರೆ ಎಲ್ಲಿಯೂ ಇಲ್ಲ ಅವನು ನಮ್ಮೊಳಗೆ ಇದ್ದಾನೆ ಎಂದು ಬಸವಣ್ಣ ನಂಬಿದ್ದರು. ಸುಳ್ಳು ಹೇಳುವುದು, ಕೊಲೆ, ಸುಲಿಗೆ, ಪ್ರಾಣಿ ಬಲಿ, ಹಿಂಸೆ ಯಾವುದು ಇಷ್ಟವಾಗುತ್ತಿರಲಿಲ್ಲ. ಇವೆಲ್ಲವನ್ನೂ ಬಸವಣ್ಣ ವಿರೋಧಿಸುತ್ತಿದ್ದರು.
ಜ್ಞಾನದ ದೀಪ ಬೆಳಗಿದ ಜಗಜ್ಯೋತಿ
ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ, ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯ, ಪುರುಷದ ಬಲದಿಂದ ಅವಲೋಹದ ಕೇಡು ನೋಡಯ್ಯ, ಕೂಡಲ ಸಂಗನ ಶರಣರ ಅನುಭಾವದ ಬಲದಿಂದ ಎನ್ನಭವದ ಕೇಡು ನೋಡಯ್ಯ. ನಮ್ಮ ಜೀವನ ಯಾರು ರೂಪಿಸುವುದಿಲ್ಲ ಹಾಗೆಯೇ ನಮ್ಮ ಜೀವನ ಯಾರು ಹಾಳು ಮಾಡುವುದಿಲ್ಲ. ಅದಕ್ಕೆಲ್ಲ ನಮ್ಮೊಳಗಿನ ಅಜ್ಞಾನವೇ ಕಾರಣವಾಗಿರುತ್ತದೆ. ನಮ್ಮ ಅಂತರ0ಗದಲ್ಲಿ ಜ್ಞಾನ ಮೂಡದೆ ನಾವು ಕತ್ತಲೆ ಕಳೆಯಲಾರೆವು. ಸತ್ಯ ನುಡಿಯುವ ಧೈರ್ಯ ನಾಲಿಗೆಗೆ ಬಂದರೆ ಸುಳ್ಳು ಗೆಲ್ಲಲಾರದು. ಹಾಗೆಯೇ ನಮ್ಮ ಒಳಿತಿಗಾಗಿ ನಮ್ಮ ಸಂಗಮ ಸಹವಾಸ ಅಷ್ಟೇ ಮುಖ್ಯವಾಗಿರುತ್ತದೆ. ಗಂಧದ ಜೊತೆಗೆ ಬೆರೆತ ನೀರು ಸುವಾಸನೆ ಬೀರುವಂತೆ.
ಹಾಲಿನಲ್ಲಿ ಬೆರೆತ ನೀರು ಹಾಲಾಗುವಂತೆ ನಮ್ಮ ಸಫಲತೆಯ ಜೀವನ ನಮ್ಮ ಸುತ್ತಲಿನವರ ಪ್ರಭಾವದಂದಿ ಅವತಿರುತ್ತದೆ ಎಂದು ಹೇಳು ಮೇಲಿನ ವಚನ ನವಿರಾಗಿ ನಮಗೆ ಸನ್ಮಾರ್ಗ ತೋರುತ್ತದೆ. ಹೀಗೆ ತಮ್ಮೊಳಗಿನ ಜ್ಞಾನದ ಮೂಲಕ ಜಗಕ್ಕೆ ಬೆಳಕಾದವರು ಜಗಜ್ಯೋತಿ ಬಸವೇಶ್ವರರು. ಅವರ ವಚನಗಳ ಪ್ರಭಾವ ನವ ಸಮಾಜದ ನಿರ್ಮಾಣದ ನಮ್ಮ ಯುವ ಸಮಾಜಕ್ಕೆ ಮನವರಿಕೆ ಮಾಡಿಕೊಡಬೇಕಿದೆ. ಈ ನರಳುವ ಸಮಯದಿಂದ ಮನಸ್ಸುಗಳು ಆದಷ್ಟು ಬೇಗ ದೂರ ಸರಿದು ಮತ್ತೆ ನಗೆಯ ಕಡಲಲಿ ಬದುಕು ಬೆಳಗಲಿ ಎಂದು ಆ ಕೂಡಲ ಸಂಗಮ ದೇವನಲ್ಲಿ ಬೇಡುತ್ತ ಎಲ್ಲರಿಗೂ ಬಸವ ಜಯಂತಿಯ ಶುಭಾಶಯಗಳು.