ಅಧಿಕಾರಕ್ಕೆ ಬಿಜೆಪಿ ಸಿದ್ಧ, ಜೆಡಿಎಸ್ಗೆ ಇಷ್ಟ, ಕಾಂಗ್ರೆಸ್ ಕಷ್ಟ
ನಾಯಕರ ರಾಜಕೀಯ ಪ್ರತಿಷ್ಠೆಯ ಆಟ
ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ಪ್ರತಿಷ್ಠಿತ ಕಲಬುರಗಿ ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಸದ್ಯಕ್ಕೆ ನಡೆಯುವುದು ಅನುಮಾನ! ಏಕೆಂದರೆ, ಮೇಯರ್ ಚುನಾವಣೆ ಈಗ ಕೇವಲ ಕಲಬುರಗಿ ಮಹಾನಗರದ ರಾಜಕಾರಣವಾಗಿ ಉಳಿದಿಲ್ಲ. ಬದಲಾಗಿ ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳ ವೈಯಕ್ತಿಕ ಜಿದ್ದಾಜಿದ್ದಿನ ವಿಚಾರವಾಗುತ್ತಿದೆ. ಅಷ್ಟೇ ಅಲ್ಲ, ಮೂರು ಪಕ್ಷಗಳ ನಾಯಕರ ಪರಸ್ಪರ ರಾಜಕೀಯ ಕಾಲೆಳೆದಾಟಕ್ಕೂ ಸರಕಾಗುತ್ತಿದೆ. ಪರಿಣಾಮ ಕಲಬುರಗಿ ಮಹಾನಗರ ಮೇಯರ್, ಉಪ ಮೇಯರ್ ಕಾಣದೆ ಪಾಲಿಕೆ ಸದಸ್ಯರು ಇನ್ನಷ್ಟು ಕಾಲ ಅತಂತ್ರದಿಂದ ಅಲೆಯುವ ದಿನಗಳು ಎದುರಾಗುವ ಸಾಧ್ಯತೆಯೂ ಕಾಣುತ್ತಿದೆ.
ಕಲಬುರಗಿಯಲ್ಲಿ ಚುನಾವಣೆ ಮುಗಿದು ೧೫ ದಿನಗಳೇ ಕಳೆದಿವೆ. ಆದರೂ ಮೇಯರ್ ಚುನಾವಣೆ ನಡೆಯುವ ಲಕ್ಷಣಗಳು ಮಾತ್ರ ಗೋಚರಿಸುತ್ತಿಲ್ಲ. ಕಾರಣ ಪಕ್ಷಗಳ ಬಲಾಬಲ ಅತಂತ್ರ ಸ್ಥಿತಿ. ಇಂಥ ಸಂದರ್ಭದಲ್ಲಿ ಅಧಿಕಾರ ಹಿಡಿಯಲು ಶಕ್ತವಾಗಿರುವ ಕಾಂಗ್ರೆಸ್ಗೆ ಕೆಲವೇ ಸದಸ್ಯ ಬಲದ ಕೊರತೆ ಇದೆ. ಆದರೆ, ಅದನ್ನು ತುಂಬಿಕೊಳ್ಳಲು ಪಕ್ಷದ ನಾಯಕರು ಸಿದ್ಧರಿಲ್ಲ. ಇತ್ತ ಅಧಿಕಾರ ಹಿಡಿಯಲು ಹಾತೋರಿಯುತ್ತಿರುವ ಬಿಜೆಪಿಗೆ ಸದಸ್ಯ ಬಲದ ಕೊರತೆ ನೀಗಿಕೊಳ್ಳಲು ಪಾಲಿಕೆಯ ಮೂರನೇ ದೊಡ್ಡ ಪಕ್ಷ ಜೆಡಿಎಸ್ ಇನ್ನೂ ಒಪ್ಪಿಕೊಂಡಿಲ್ಲ.
ಈ ಸಮಸ್ಯೆ ಬಗೆಹರಿಯದೆ ರಾಜ್ಯ ಸರಕಾರ ಮೇಯರ್ ಚುನಾವಣೆ ದಿನಾಂಕ ನಿಗದಿ ಮಾಡಿ ಅಧಿಸೂಚನೆ ಹೊರಡಿಸಲು ಸಿದ್ಧವಿಲ್ಲ. ಈ ಮಧ್ಯೆ ಪಕ್ಷಗಳ ನಾಯಕರ ನಡುವಿನ ಪ್ರತಿಷ್ಠೆ ವೈಯಕ್ತಿಕ ರಾಜಕೀಯ ಜಿದ್ದಾಜಿದ್ದಿ ತೀವ್ರವಾಗುತ್ತಿದ್ದು, ಇದು ಕೂಡ ಚುನಾವಣೆಗೆ ದೊಡ್ಡ ಡಕಾಗಿ ನಿಂತಿದೆ. ಪರಿಣಾಮ ಸದ್ಯಕ್ಕೆ ಕಲಬುರಗಿ ಮೇಯರ್, ಉಪ ಮೇಯರ್ ಚುನಾವಣೆ ನಡೆಯುವುದಿಲ್ಲ ಎಂದು ಪಕ್ಷಗಳ ನಾಯಕರೇ ಹೇಳುತ್ತಿದ್ದಾರೆ.
ಇದೇವೇಳೆ ಕಲಬುರಗಿ ಅಧಿಕಾರ ಸಿಗಿದ್ದರೆ ಬಿಜೆಪಿ ಸರಕಾರ ಮೇಯರ್ ಚುನಾವಣೆಗೆ ದಿನಾಂಕ ನಿಗದಿ ಮಾಡದೆ ಕಾಲ ನೂಕಿದರೂ ಅಚ್ಚರಿ ಇಲ್ಲ ಎನ್ನುವ ಮಾತುಗಳಿವೆ. ಏಕೆಂದರೆ, ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆ ನಡೆದು ನಾಲ್ಕು ತಿಂಗಳೇ ಕಳೆದಿದ್ದರೂ ಮೇಯರ್ ಚುನಾವಣೆಗೆ ಸರಕಾರ ದಿನಾಂಕವನ್ನೇ ನಿಗದಿ ಮಾಡಿಲ್ಲ. ಇದರಿಂದ ಅಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯುವಂತಿದ್ದರೂ ಅತಂತ್ರವಾಗಿದೆ.
ಇವರಿಗೆ ಏಕೆ ಅಧಿಕಾರ ಬೇಡ?: ಕಲಬುರಗಿ ಪ್ರಥಮ ಬಾರಿಗೆ ಬಿಜೆಪಿ ಹೆಚ್ಚು ಸ್ಥಾನ ಗಳಿಸುತ್ತಿದ್ದಂತೆ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ಅಧಿಕಾರ
ಹಿಡಿಯಲು ಸಾಹಸ ಆರಂಭಿಸಿದ್ದರು. ಜೆಡಿಎಸ್ ಬೆಂಬಲ ಪಡೆಯಲು ಕಂದಾಯ ಸಚಿವ ಆರ್.ಅಶೋಕ್ ಮೂಲಕ ಮಾಜಿ ಪ್ರಧಾನಿ ದೇವೇಗೌಡರನ್ನು ಒಪ್ಪಿಸಲು ಯತ್ನಿಸಿದ್ದರು. ನಂತರ ಅಶೋಕ್ ಅವರು ಪಕ್ಷದ ನಾಯಕ ಕುಮಾರಸ್ವಾಮಿ ಅವರನ್ನೂ ಭೇಟಿ ಮಾಡಿ ಮಾತುಕತೆ ನಡೆಸಿದ್ದಾಗಿದೆ. ಆದರೂ ಜೆಡಿಎಸ್ ಇನ್ನೂ ನಿರ್ಧಾರ ಹೊರ ಹಾಕಿಲ್ಲ. ಕಾರಣ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜನ ಖರ್ಗೆ ಹಾಗೂ ದೇವೇಗೌಡ ಅವರು ಮುಂಬರುವ ಚುನಾವಣೆಯ ಹಿನ್ನೆಲೆಯಲ್ಲಿ
ಕಾಂಗ್ರೆಸ್ ಜೆಡಿಎಸ್ ದೋಸ್ತಿ ಮಾಡಲು ಪ್ರಯತ್ನ ನಡೆದಿದೆ ಎಂದು ತಿಳಿದುಬಂದಿದೆ.
ಒಂದೊಮ್ಮೆ ಜೆಡಿಎಸ್ ಇಲ್ಲಿ ಬಿಜೆಪಿ ಜತೆ ಅಧಿಕಾರ ಹಂಚಿಕೊಂಡರೆ ಮುಂದಿನ ಚುನಾವಣೆಯಲ್ಲಿ ಮುಸ್ಲಿಂ ಮತ್ತು ದಲಿತರ ಮತಗಳು ಕೈ ತಪ್ಪುತ್ತವೆ ಎನ್ನುವ ಆತಂಕವಿದೆ. ಹಾಗೆಂದು ಕಾಂಗ್ರೆಸ್ ಜತೆಗೂಡಿ ಅಧಿಕಾರ ಹಿಡಿಯಲು ಪ್ರತಿಷ್ಠೆ ಮತ್ತು ವೈಯಕ್ತಿಕ ರಾಜಕೀಯ ದ್ವೇಷಗಳು ಅಡ್ಡಿಯಾಗಿ ನಿಲ್ಲುತ್ತಿವೆ. ಅಂದರೆ ಅಽ
ಕಾರ ದೋಸ್ತಿ ಬೇಕಾದರೆ ಕಾಂಗ್ರೆಸ್ ನಾಯಕರು ಮಾತುಕತೆಗೆ ಬರಲಿ ಎಂದು ಜೆಡಿಎಸ್ ನಾಯಕ ಕುಮಾರಸ್ವಾಮಿ ಪರೋಕ್ಷ ಸವಾಲು ಹಾಕಿ ಕುಳಿತಿ
ದಿದ್ದಾರೆ. ಆದರೆ, ದೋಸ್ತಿ ಸರಕಾರ ಮುರಿದ ನಂತರ ಕುಮಾರಸ್ವಾಮಿ ಬಳಿ ನಾವೇಕೆ ಹೋಗುವುದು ಎಂದು ಕಾಂಗ್ರೆಸ್ ನಾಯಕರು ಮೌನ ವಹಿಸಿದ್ದಾರೆ.
ಇದರ ಹಿಂದೆ ಎರಡು ರೀತಿಯ ರಾಜಕೀಯ ತಂತ್ರಗಳಿವೆ. ಅಂದರೆ ಜೆಡಿಎಸ್ ನವರು ಬಿಜೆಪಿ ಜತೆ ದೋಸ್ತಿ ಮಾಡಿದರೆ ಮುಂದಿನ ಚುನಾವಣೆಯಲ್ಲಿ
ದಲಿತ ಮತ್ತು ಮುಸಲ್ಮಾನರ ಮತಗಳು ಜೆಡಿಎಸ್ಗೆ ಕೈತಪ್ಪಲಿವೆ ಎನ್ನುವ ಲೆಕ್ಕಾಚಾರವಿದೆ. ಜತೆಗೆ ಕಲಬುರಗಿ ಮೇಯರ್ ಸ್ಥಾನ ಬಿಜೆಪಿ ಪಾಲಾದರೆ
ಇದು ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವೈಫಲ್ಯ ಎಂದು ಹೇಳುವುದಕ್ಕೆ ಪಕ್ಷದ ಕೆಲವು ಮುಖಂಡರೇ ತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ. ದೋಸ್ತಿ ಮೂಲಕವಾದರೂ ಅಧಿಕಾರ ಹಿಡಿಯಲಿಲ್ಲ ಎನ್ನುವ ಸಂದೇಶ ಹೋಗಬೇಕೆಂದು ಶಿವಕುಮಾರ್ ವಿರೋಧ ಗುಂಪು ಲೆಕ್ಕಾಚಾರ ಹಾಕಿದೆ ಎಂದು
ಮೂಲಗಳು ಹೇಳಿವೆ.
ಏನಿದು ಸದಸ್ಯ ಬಲ ಸಮಸ್ಯೆ?
ಕಾಂಗ್ರೆಸ್ನ ಭದ್ರಕೋಟೆ ಕಲಬುರಗಿಯಲ್ಲಿ ಇತ್ತೀಚಿಗೆ ಪಾಲಿಕೆ ಚುನಾವಣೆ ನಡೆದು ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಅಂದರೆ 55 ಸದಸ್ಯ ಬಲದ ಕಲಬುರಗಿ ಪಾಲಿಕೆಯಲ್ಲಿ ಕಾಂಗ್ರೆಸ್ 27, ಬಿಜೆಪಿ 23, ಜೆಡಿಎಸ್ 4 ಹಾಗೂ ಪಕ್ಷೇತರ 1 ಸದಸ್ಯ ಬದಲವಿದೆ. ಶಾಸಕರು, ಸಂಸದರು ಹಾಗೂ ವಿಧಾನಪರಿಷತ್ ಸದಸ್ಯರ ಮತಗಳನ್ನು ಲೆಕ್ಕ ಹಾಕಿದರೂ ಬಿಜೆಪಿಗೆ ಕಾಂಗ್ರೆಸ್ ಗಿಂತ ಹೆಚ್ಚಾಗಿಯೇ ಸಿಗುತ್ತದೆ. ಇಲ್ಲಿ ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ನಿಗದಿಯಾಗಿದ್ದು, ಉಪ ಮೇಯರ್ ಹಿಂದುಳಿದ ವರ್ಗ ಬಿಗೆ ಮೀಸಲಾಗಿದೆ.
ಪಾಲಿಕೆಯಲ್ಲಿ ಅಧಿಕಾರ ಹಿಡಿಯಲು ಯಾವುದೇ ಪಕ್ಷ ಕನಿಷ್ಠ 28 ಸದಸ್ಯ ಬಲ ಸಂಪಾದಿಸಬೇಕು. ಆದರೆ, ನಾಯಕರ ಅಲಕ್ಷ್ಯದ ಪರಿಣಾಮ ಕಾಂಗ್ರೆಸ್ ಅಽಕಾರ ವಂಚಿತವಾಗಿ ದೋಸ್ತಿ ಮೂಲಕ ಅಽಕಾರ ಹಿಡಿಯಲು ಯತ್ನಿಸುತ್ತಿದೆ. ಈ ಮಧ್ಯೆ ರಾಜ್ಯ ಅಽಕಾರ ರೂಢ ಬಿಜೆಪಿ ಇದೇ ಪ್ರಥಮ ಬಾರಿಗೆ ಕಾಂಗ್ರೆಸ್ ಕೋಟೆ
ಕಲಬುರಗಿಯಲ್ಲಿ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿ ವಿಕ್ರಮ ಸಾಧಿಸಿದ್ದು, ಇದೇ ಹುಮ್ಮಸ್ಸಿನಲ್ಲಿ ಅಽಕಾರ ಹಿಡಿಯಲು ಪ್ರಯತ್ನ ಮಾಡುತ್ತಿದೆ. ಆದರೆ, ಮೂರನೇ ದೊಡ್ಡ ಜೆಡಿಎಸ್ ಪಕ್ಷ ಇಲ್ಲಿ ನಿರ್ಣಾಯಕವಾಗಿದ್ದು, ಇದರ ತೀರ್ಮಾನ ಹೊರ ಬೀಳುವವರೆಗೂ ಮೇಯರ್ ಚುನಾವಣೆಯ ಸ್ಪಷ್ಟ ಚಿತ್ರಣ ಸಿಗುವುದಿಲ್ಲ.