ಕರುನಾಡಲ್ಲೇ ಕನ್ನಡ ಕಲಿಕೆಗೆ ಅಡ್ಡಿ; ಸಂಸ್ಕೃತ ಸಂಸ್ಥೆಗಳಿಂದ ಪಿಐಎಲ್
ವಿಶೇಷ ವರದಿ: ಸಿಂಹರಾಜ್ ಬೆಂಗಳೂರು
ಹೂವಿಗೆ ಗಿಡವೇ ಆಸರೆ, ಬಳ್ಳಿಗೆ ಮರವೇ ಆಸರೆ, ಕಂದಮ್ಮಗೆ ಹೆತ್ತ ತಾಯಲ್ಲದೇ ಇನ್ನಾರು ಆಸರೆ? ಆದರೆ, ಕನ್ನಡ- ಕರ್ನಾಟಕ ಎಂಬ ವಿಷಯಕ್ಕೆ ಬಂದರೆ, ಭಾರತೀಯ ಭಾಷೆಗಳ ತಾಯಿಯಂತಿರುವ ಸಂಸ್ಕೃತ ತನ್ನ ಕಂದನಾದ ಕನ್ನಡಕ್ಕೆ ಆಸರೆಯಾಗದೇ, ಮಲತಾಯಿಯಾಗಿದ್ದಾಳೆ ಎಂಬುದಕ್ಕಿಂತ ವಿಪರ್ಯಾಸದ ಸಂಗತಿ ಮತ್ತೊಂದಿದೆಯೇ? ಕನ್ನಡ ಭಾಷೆಗೆ ಸುಮಾರು ೨ ಸಾವಿರ ವರ್ಷಗಳ ಇತಿಹಾಸವಿದೆ.
ಎಲ್ಲ ಲಿಪಿಗಳ ರಾಣಿ, ಕನ್ನಡವೆಂದರೆ ಬರಿ ನುಡಿಯಲ್ಲ ಹಿರಿದಿದೆ ಅದರರ್ಥ… ಎಂದೆಲ್ಲ ಹಾಡಿ ಹೊಗಳಿಸಿ ಕೊಳ್ಳುತ್ತಿದೆ. ಆದರೆ, ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ಹಿನ್ನೆಲೆಯಲ್ಲಿ ತವರು ರಾಜ್ಯ ಕರ್ನಾಟಕದ ಶೈಕ್ಷಣಿಕ ಸಂಸ್ಥೆಗಳಲ್ಲೇ ಕನ್ನಡ ಭಾಷೆಯನ್ನು ಕಡ್ಡಾಯಗೊಳಿಸಲು ಸಾಧ್ಯವಾಗುತ್ತಿಲ್ಲ. ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ, ಕರ್ನಾಟಕ ಸರಕಾರ, ಉನ್ನತ ಶಿಕ್ಷಣ ಇಲಾಖೆ, ರಾಜ್ಯ ಪ್ರೌಢಶಿಕ್ಷಣ ಮಂಡಳಿಗಳನ್ನು ಪ್ರತಿವಾದಿಗಳನ್ನಾಗಿಸಿ, ಬೆಂಗಳೂರಿನ ಸಂಸ್ಕೃತ ಭಾರತಿ ಟ್ರಸ್ಟ್, ಮಹಾವಿದ್ಯಾಲಯ ಸಂಸ್ಕೃತ ಪ್ರಾಧ್ಯಾಪಕ ಸಂಘ, ಶ್ರೀ ಹಯಗ್ರೀವ ಟ್ರಸ್ಟ್, ವ್ಯೋಮ ಲಿಂಗ್ವಿಸ್ಟಿಕ್ ಲ್ಯಾಬ್ಸ್ ಫೌಂಡೇಶನ್ ಜಂಟಿಯಾಗಿ ಉಚ್ಚ ನ್ಯಾಯಾಲಯದಲ್ಲಿ ಪಿಐಎಲ್ ಸಲ್ಲಿಸಿವೆ.
ಮೂಲಭೂತ ಪ್ರಶ್ನೆ ಏನೆಂದರೆ, ಕನ್ನಡವನ್ನು ಕರ್ನಾಟಕದಲ್ಲಲ್ಲದೇ ಬೇರೆ ರಾಜ್ಯದಲ್ಲಿ ಕಡ್ಡಾಯ ಮಾಡಿ ಕಲಿಸಲು ಸಾಧ್ಯವೇ? ಸಂಸ್ಕೃತ ದೇವ ಭಾಷೆ ಬುದೇನೋ ಸರಿ. ಉತ್ತರ ಭಾರತ ಮತ್ತು ಈಶಾನ್ಯ ಭಾರತದ ಕೆಲವು ರಾಜ್ಯಗಳಲ್ಲಿ ಸಂಸ್ಕೃತವನ್ನು ಕಲಿಸಲಾಗುತ್ತಿದೆ. ಆದರೆ, ಕರ್ನಾಟಕದಲ್ಲಿ ಇಲ್ಲಿನ ನೆಲದ ಭಾಷೆಯನ್ನೇ ಕಡೆಗಣಿಸಿ ಸಂಸ್ಕೃತವನ್ನು ಬಲವಂತವಾಗಿ ಹೇರುವ ಪ್ರಯತ್ನ ಬೇಕಿದೆಯೇ? ಎಂಬ ಆಕ್ಷೇಪ ಭರಿತ ಅಭಿಪ್ರಾಯ ಎಲ್ಲೆಡೆ ವ್ಯಾಪಕವಾಗುತ್ತಿದೆ.
ಭಾಷೆ, ಸಂಸ್ಕೃತಿ ಸೇರಿ ಹಲವು ವಿಷಯಗಳ ಕಾರಣಕ್ಕಾಗಿ ಪ್ರತ್ಯೇಕ ರಾಜ್ಯದ ನೆಲೆಗಳನ್ನು ಹೊಂದಿರುವುದೇ ಭಾರತದ ವೈಶಿಷ್ಟ್ಯ. ಪ್ರತಿಯೊಂದು ನೆಲ (ರಾಜ್ಯ)ದ ಭಾಷೆಯೇ ಅಲ್ಲಿನ ಜನರ ಮಾತೃಭಾಷೆಯಾಗಿರುವುದು ಸಾಮಾನ್ಯ. ಅಲ್ಲಿ ಹುಟ್ಟಿದ ಪ್ರತಿಯೊಬ್ಬನಿಗೂ ಹೆತ್ತ ತಾಯಿಯಂತೇ, ತಾಯಿ ಭಾಷೆಯೂ ಮುಖ್ಯವಾಗಿದೆ. ಭಾವನೆಗಳನ್ನು ವ್ಯಕ್ತಪಡಿಸಲು, ಸ್ಥಳೀಯವಾಗಿ ಇತರರೊಂದಿಗೆ ವ್ಯವಹರಿಸಲು ಮಾತೃಭಾಷೆಯಷ್ಟು ಪ್ರಬಲವಾದುದು ಮತ್ತೊಂದಿಲ್ಲ.
ಸಾಮಾಜಿಕ ಅಥವಾ ಆರ್ಥಿಕ ಹಿನ್ನೆಲೆ ಪರಿಗಣನೆಗೆ ಬಾರದಂತೆ, ವಿದ್ಯಾರ್ಥಿಗಳು ಭೇದ ಭಾವವಿಲ್ಲದೇ ಅತ್ಯುನ್ನತ ಗುಣಮಟ್ಟದ ಶಿಕ್ಷಣ ಸೌಲಭ್ಯವನ್ನು ಸಮಾನವಾಗಿ ಪಡೆಯಲು ಸಾಧ್ಯವಾಗಬೇಕು. ಅದರಂತೆ, ವಿದ್ಯಾರ್ಥಿಗಳನ್ನು ವಿಕಸಿತರನ್ನಾಗಿಸುವ, ತಾರ್ಕಿಕವಾಗಿ ಆಲೋಚಿಸುವಂತೆ ಮಾಡುವ, ಕ್ರಿಯಾ ಶೀಲರನ್ನಾಗಿಸುವ, ಮಾನವೀಯತೆ, ಸಹಾನುಭೂತಿ, ಧೈರ್ಯ- ಸ್ಥೈರ್ಯ, ವೈಜ್ಞಾನಿಕ ಮನೋಭಾವ, ಸೃಜನಾತ್ಮಕ ಶಕ್ತಿ, ನೈತಿಕ ಚಿಂತನೆ, ಮೌಲ್ಯಗಳನ್ನು
ಅಳವಡಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ೨೦೨೦ರ ಜು.೨೯ರಂದು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪರಿಷ್ಕೃತಗೊಳಿಸಿ, ಜಾರಿಗೊಳಿಸಿದೆ. ಅದರಂತೆ, ರಾಜ್ಯದಲ್ಲಿ ಪದವಿ ಹಂತದ ಶಿಕ್ಷಣದಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿಸಿರುವುದು ಇವರಿಗೇಕೆ
ಹಿಡಿಸುತ್ತಿಲ್ಲ ಎಂಬುದೇ ಯಕ್ಷಪ್ರಶ್ನೆಯಾಗಿದೆ.
ನಿಯಮದಲ್ಲೇನಿದೆ?: ಬಿಎ ಅಥವಾ ಬಿಎಸ್ಸಿ ಅಧ್ಯಯನಕ್ಕೆ ಕಾಲೇಜಿನಲ್ಲಿ ಲಭ್ಯವಿರುವ ೨ ವಿಷಯ (ಡಿಸಿಪ್ಲಿನ್ ಕೋರ್) ಗಳನ್ನು ಆಯ್ಕೆ ಮಾಡಿಕೊಂಡು, ೩ನೇ ವರ್ಷದ ಪ್ರಾರಂಭದಲ್ಲಿ ಮೇಜರ್ ಆಗಿ ೧ ವಿಷಯ, ಮೈನರ್ ಆಗಿ ೧ ವಿಷಯ ಅಥವಾ ಎರಡೂ ವಿಷಯಗಳನ್ನು ಮೇಜರ್ ಆಗಿ ಆಯ್ಕೆ ಮಾಡಿಕೊಳ್ಳಬಹುದು. ೩ನೇ ವರ್ಷದಲ್ಲಿ ಅಧ್ಯಯನ ಮಾಡಿದ ೧ ಮೇಜರ್ ವಿಷಯವನ್ನೇ ೪ನೇ ವರ್ಷದಲ್ಲಿ ಅಧ್ಯಯನ ಮಾಡಿ ಆನರ್ಸ್ ಪದವಿ ಪಡೆಯಬಹುದಾಗಿದೆ.
ವಿದ್ಯಾರ್ಥಿಯು ಮೊದಲ ವರ್ಷದ ಪ್ರಾರಂಭದಲ್ಲಿ ಡಿಸಿಪ್ಲಿನ್ ಕೋರ್ ವಿಷಯಗಳ ಜತೆಗೆ ೧ ಒಪನ್ ಎಲೆಕ್ಟಿವ್ ವಿಷಯವನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ಒಪನ್ ಎಲೆಕ್ಟಿವ್ ಅನ್ನು ಮುಂದುವರಿಸಬಹುದು ಅಥವಾ ಪ್ರತಿ ಸೆಮಿಸ್ಟರ್ನಲ್ಲೂ ಒಪನ್ ಎಲೆಕ್ಟಿವ್ ಅನ್ನು ಬೇರೆ ಬೇರೆ ವಿಷಯಗಳಲ್ಲಿ ಅಧ್ಯಯನ ಮಾಡಬಹುದು. ವಿದ್ಯಾರ್ಥಿಗಳು ಪದವಿಯ ಮೊದಲ ೨ ವರ್ಷ ೪ ಸೆಮಿಸ್ಟರ್ಗಳಲ್ಲಿ ೨ ಭಾಷೆಗಳನ್ನು ಕಲಿಯಬಹುದಾಗಿದ್ದು, ಈ ಪೈಕಿ ೧ ಭಾಷೆಯಾಗಿ ಕನ್ನಡ ಕಲಿಕೆಯನ್ನು ೪ ಸೆಮಿಸ್ಟರ್ಗಳಲ್ಲಿ ಕಡ್ಡಾಯಗೊಳಿಸಲಾಗಿದೆ.
ಹೊರರಾಜ್ಯ ಅಥವಾ ಹೊರದೇಶದ ವಿದ್ಯಾರ್ಥಿಗಳು, ದ್ವಿತೀಯ ಪಿಯುಸಿವರೆಗೆ ಯಾವುದೇ ಹಂತದಲ್ಲಿ ಕನ್ನಡವನ್ನೇ ಕಲಿಯದ ವಿದ್ಯಾರ್ಥಿಗಳಿಗೆ ಮೊದಲ ವರ್ಷದ ಯಾವುದಾದರೂ ೧ ಸೆಮಿಸ್ಟರ್ನಲ್ಲಿ ವ್ಯಾವಹಾರಿಕ (ಫಂಕ್ಷನಲ್) ಕನ್ನಡ ಕಲಿಯುವುದು ಕಡ್ಡಾಯವಾಗಿರುತ್ತದೆ. ಕನ್ನಡದ ಜತೆ ಆಸಕ್ತಿಯ ಮತ್ತೊಂದು ಭಾಷೆ ಕಲಿಯಬಹುದಾಗಿದ್ದು, ಉಳಿದ ೩ ಸೆಮಿಸ್ಟರ್ಗಳಲ್ಲಿ ವಿದ್ಯಾರ್ಥಿ ತನ್ನ ಆಯ್ಕೆಯ ಯಾವುದೇ ೨ ಭಾಷೆಗಳನ್ನು ಕಲಿಯಬಹುದಾಗಿರುತ್ತದೆ.
ಬಿಕಾಂ, ಬಿಸಿಎ, ಬಿಬಿಎ ಇತ್ಯಾದಿ ವಿಷಯಾಧಾರಿತ ಸ್ನಾತಕ ಪದವಿಗಳಿಗೆ ವಿಷಯ (ಡಿಸಿಪ್ಲಿನ್ ಕೋರ್) ನಿರ್ಧರಿತವಾಗಿದ್ದು, ಬಿಎ, ಬಿಸ್ಸಿಗಳಲ್ಲಿರುವಂತೆ ಬೇರೆ ಬೇರೆ ವಿಷಯ (ಡಿಸಿಪ್ಲಿನ್ ಕೋರ್)ಗಳನ್ನು ಆಯ್ಕೆ ಮಾಡಿಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಕನ್ನಡ ಮತ್ತು ಇತರೆ ಭಾಷೆಗಳನ್ನು ಮತ್ತು ಒಪನ್ ಎಲೆಕ್ಟಿವ್ಸ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
ಕನ್ನಡ ಎಂದರೆ…
? ೫.೫ ಕೋಟಿ ಜನರ ಮಾತೃಭಾಷೆ
? ಜಗತ್ತಿನಲ್ಲಿ ಅತಿ ಹೆಚ್ಚು ಮಂದಿ ಮಾತನಾಡುವ ೨೯ನೇ ಭಾಷೆ
? ಕನ್ನಡ ಬರಹದ ಮಾದರಿಗಳಿಗೆ ೧,೫೦೦ ವರ್ಷದ
ಇತಿಹಾಸ
? ಲಿಪಿಗಳ ರಾಣಿ ಕನ್ನಡ ಎಂದು ವಿನೋಬಾ ಭಾವೆ ಹೊಗಳಿದ್ದಾರೆ
? ಕರ್ನಾಟಕದ ಪರಿಸರ, ಶೈಕ್ಷಣಿಕ ವಾತಾವರಣ, ಹೇರಳ
ಉದ್ಯೋಗವಕಾಶಗಳ ಕಾರಣಕ್ಕೆ ಹೊರರಾಜ್ಯ ಮತ್ತು
ಹೊರದೇಶಗಳ ಲಕ್ಷಾಂತರ ವಿದ್ಯಾರ್ಥಿಗಳು ಇಲ್ಲಿಗೆ
ಬರುತ್ತಾg