‘ಮಿನಿ ದುಬೈ’ನಲ್ಲಿ ಉರ್ದು ನಾಮಫಲಕ: ಭಾಷಾ ಕಡ್ಡಿ ಗೀರುತ್ತಿರುವ ನೆರೆಯ ಮಂದಿ
ವಿನುತಾ ಹೆಗಡೆ ಶಿರಸಿ
ಗಡಿ ಪ್ರದೇಶ ಉತ್ತರ ಕನ್ನಡದಲ್ಲಿ ಕನ್ನಡ, ಕನ್ನಡ ಸಂಘಟನೆಗಳು ಸೊರಗುತ್ತಿವೆಯೇ? ಅನ್ಯಭಾಷೆಗಳ ಪ್ರಭಾವ ಹೆಚ್ಚುತ್ತಿದೆಯೇ? ಇಂಥದ್ದೊಂದು ಪ್ರರ್ಶನೆ ಮತ್ತೆ ಉದ್ಭವಿಸಿದೆ.
ಕಾರವಾರದಲ್ಲಿ ಕೊಂಕಣಿ, ಭಟ್ಕಳದಲ್ಲಿ ಉರ್ದು ಫಲಕಗಳು ಕೇವಲ ವಿವಾದ ಹುಟ್ಟಿ ಸಿಲ್ಲ, ಬದಲಿಗೆ ಕನ್ನಡದ ನೆಲದ ಅಸ್ತಿತ್ವದ ಪ್ರಶ್ನೆಗಳನ್ನೂ ಹುಟ್ಟುಹಾಕಿದೆ. ಏಳೆಂಟು ವರ್ಷದ ಕೆಳಗೆ ‘ಏಕೀಕರಣ ಮಂಚ್’ ಹೆಸರಿನಲ್ಲಿ ಗೋವಾದ ಆಶಾ ಪಾಲನಕರ್, ಪ್ರಕಾಶ ಪಾಲನಕರ್ ದಂಪತಿ ಕಾರವಾರವನ್ನು ಗೋವಾಕ್ಕೆ ಸೇರಿಸಬೇಕೆಂದು ರಾತ್ರಿ ಬೆಳಗಾಗುವುದರೊಳಗೆ ಕರಪತ್ರ ಹಂಚಿ ಮಹಾರಾಷ್ಟ್ರ ಸರಕಾರಕ್ಕೂ ಮನವಿ ನೀಡಿದ್ದರು. ಇದರ ಬೆನ್ನಲ್ಲೇ ಎನ್ಸಿಪಿಯ ಅಜಿತ್ ಪವಾರ್ ಜೋಯಿಡಾ, ಕಾರವಾರ ದಲ್ಲಿ ಕೊಂಕಣಿ, ಮರಾಠಿಗರೇ ಹೆಚ್ಚಿದ್ದು, ಅವನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಹೇಳಿಕೆ ನೀಡಿದ್ದರು.
ಹೀಗಾಗಿ ಹೊರ ರಾಜ್ಯದ ಕುಮ್ಮಕ್ಕೂ ಇಲ್ಲಿ ಪ್ರಭಾವ ಬೀರಿರುವ ಸಾಧ್ಯತೆ ಇದೆ. ಆದರೆ ಇದಕ್ಕೆ ನಮ್ಮಲ್ಲಿ ರಾಜಕೀಯ ಕುಮ್ಮಕ್ಕು ಸಿಕ್ಕಿರಲಿಲ್ಲ. ಹಾಗಾಗಿ ಭಾಷಾ ವಿಷಯದಲ್ಲಿ ಸಾಮೂಹಿಕ ಘರ್ಷಣೆ ನಡೆಯದಿದ್ದರೂ ಭಟ್ಕಳ ನಗರದಲ್ಲಿ ಧರ್ಮವೇ ಭಾಷೆಯಾಗಿದ್ದರಿಂದ ಆಗಾಗ ಹೊಗೆಯಾಡುತ್ತಲೇ ಇದೆ. ಇದೀಗ ಕಾರವಾರ ನಗರಸಭೆಯ ವ್ಯಾಪ್ತಿಯಲ್ಲಿ ದೇವನಾಗರಿ ಲಿಪಿಯಲ್ಲಿ, ಕೊಂಕಣಿ ಭಾಷೆಯ ನಾಮಫಲಕ ಬರೆಸಲಾಗಿದೆ.
ಕರ್ನಾಟಕ ರಕ್ಷಣಾ ವೇದಿಕೆ, ಕನ್ನಡ ಪರ ಸಂಘಟನೆ, ಕನ್ನಡಸಾಹಿತ್ಯ ಪರಿಷತ್ ಎಲ್ಲರೂ ಸೇರಿ ಡಿಸಿಗೆ ಮನವಿ ನೀಡಿ ನಂತರ ಅದಕ್ಕೆ ಮಸಿ ಬಳಿಸಲಾಗಿತ್ತು. ಆದರೆ ಮರಾಠಿಗರು, ಕೊಂಕಣಿಗರು ನಮಗೆ ಕನ್ನಡದ ಅರಿವಿಲ್ಲ, ಆದ್ದರಿಂದ ನಮ್ಮ ಮಾಹಿತಿಗಾಗಿ ನಮ್ಮ
ಭಾಷೆಯಲ್ಲೇ ಫಲಕಗಳಿರಬೇಕೆಂದು ಪ್ರತಿಭಟನೆ ಯನ್ನೂ ನಡೆಸಿದ್ದರು.
ಇದರಿಂದ ಎಚ್ಚೆತ್ತ ಗಡಿ ಅಭಿವೃದ್ಧಿ ಪ್ರಾಽಕಾರದ ಅಧ್ಯಕ್ಷ ಸೋಮಶೇಖರ್ ಜಿಲ್ಲಾಧಿಕಾರಿಗೆ ಪತ್ರ ಬರೆದು ಕನ್ನಡದಲ್ಲಿಯೇ ನಾಮಫಲಕ ಅಳವಡಿಕೆಗೆ ಸೂಚಿಸಿದ್ದಾರೆ. ಇದು ಕಾರವರಕ್ಕೆ ಸೀಮಿತವಲ್ಲ. ಜಿಲ್ಲೆಯ ಭಟ್ಕಳದಲ್ಲಿ ಪುರಸಭೆಯಲ್ಲೂ ಉರ್ದು ನಾಮಫಲಕ ಬರೆಯ ಲಾಗಿತ್ತು. ಇಲ್ಲಿಯ ಪುರಸಭೆಯಲ್ಲಿ ತಂಜಿಮ್ ಆಡಳಿತವಿರುವುದರಿಂದ ಹೆಚ್ಚಿನ ಸದಸ್ಯರಿದ್ದು, ಆಡಳಿತ ಪಾರುಪತ್ಯ ಇರುವುದು ಗಮನಾರ್ಹ. ಆದರೆ ಭಟ್ಕಳದಲ್ಲಿ ಪುರಸಭೆ ಆಡಳಿತ ತೆಗೆದುಕೊಂಡ ನಿರ್ಧಾರದಿಂದ ಇದೀಗ ಭಾಷಾ ವಿವಾದ ಕಾರವಾರದಿಂದ
ಭಟ್ಕಳದ ಗಡಿಯವರೆಗೂ ತಲುಪಿದೆ.
***
ಆಡಳಿತದಲ್ಲಿ ಕನ್ನಡವನ್ನು ತಂದಿರುವ ಸರಕಾರ ಅದನ್ನು ಸರಿಯಾಗಿ ಅನುಷ್ಠಾನಗೊಳಿಸಬೇಕಿದೆ. ರಾಜ್ಯ ಸರಕಾರ ಈ ನಿಟ್ಟಿನಲ್ಲಿ
ವಿಫಲವಾಗುತ್ತಿದೆ. ನಾವು ಕರವೇ ಸಂಘಟನೆಯವರು ಸರಕಾರವನ್ನು ಎಚ್ಚರಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಅಲ್ಲಿಯ ಸ್ಥಳೀಯ
ಜನಪ್ರತಿನಿಧಿಗಳು ಇದರಲ್ಲಿ ವಿಫಲರಾಗುತ್ತಿದ್ದಾರೆ.
-ಅರುಣ್ ಜಾವಗಲ್
ಕರವೇ ರಾಜ್ಯ ಸಂಘಟನಾ
ಕಾಯದರ್ಶಿ.
ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ
ಭಟ್ಕಳ ಪುರಸಭಾ ಕಾರ್ಯಾಲಯಕ್ಕೆ ಉರ್ದು ನಾಮಫಲಕ ಅಳವಡಿಸುವುದನ್ನು ವಿರೋಧಿಸಿ ಕನ್ನಡ ಹಾಗೂ ಹಿಂದೂ ಸಂಘಟನೆಗಳು ಪುರಸಭೆ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಪುರಸಭೆ ಕಟ್ಟಡಕ್ಕೆ ಹೊಸದಾಗಿ ಬಣ್ಣ ಬಳಿದ ನಂತರ
ಗುತ್ತಿಗೆದಾರರು ಕನ್ನಡ, ಇಂಗ್ಲಿಷ್ ಹಾಗೂ ಉರ್ದು ಭಾಷೆಯಲ್ಲಿ ‘ಪುರಸಭಾ ಕಾರ್ಯಾಲಯ ಭಟ್ಕಳ’ ಎಂಬ ನಾಮಫಲಕ ಳವಡಿಕೆಗೆ ಮುಂದಾಗಿದ್ದರು. ಇದನ್ನು ವಿರೋಧಿಸಿ, ಪೊಲೀಸರೆದುರೇ ಪ್ರತಿಭಟನಾ ಕಾರರು ಸ್ಥಳದಲ್ಲಿಯೇ ನಾಮಫಲಕ ತೆರವು ಮಾಡುವಂತೆ
ಪಟ್ಟುಹಿಡಿದರು. ಇದರಿಂದ ಕೆಲಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣವೂ ಸೃಷ್ಟಿಯಾಗಿತ್ತು.
***
ಪ್ರಾದೇಶಿಕ ಭಾಷೆಗೆ ತಕ್ಕಂತೆ ನಾಮಫಲಕ ಅಳವಡಿಸಹೋದರೆ ಹತ್ತು ಹಲವು ಭಾಷಾ ಫಲಕಗಳನ್ನು ಸರಕಾರಿ ಕಚೇರಿಗಳಲ್ಲಿ ಅಳವಡಿಸ ಬೇಕಾಗುತ್ತದೆ. ಹಾಗಾಗಿ ಉರ್ದು ನಾಮಫಲಕವನ್ನು ತೆರವುಗೊಳಿಸಬೇಕು ಎನ್ನುವುದು ಅವರ ಆಗ್ರಹವಾಗಿತ್ತು. ಹಳೆಯ ಪುರಸಭೆ ಕಟ್ಟಡದಲ್ಲಿ ಪುರಸಭಾ ನಾಮ ಫಲಕವನ್ನು ಕನ್ನಡ, ಇಂಗ್ಲಿಷ್ ಹಾಗೂ ಉರ್ದು ಭಾಷೆ ಯಲ್ಲಿ ಬರೆಯಿಸಲಾಗಿತ್ತು. ಅದನ್ನೇ ಇಲ್ಲಿ ಅಳವಡಿಸಿ ದ್ದೇವೆ. ಹೊಸದಾಗಿ ನಾವು ಏನೂ ಬದಲಾವಣೆ ಮಾಡಿಲ್ಲ.
-ಪರ್ವೇಜ್ ಕಾಶೀಂಜೀ ಪುರಸಭಾ ಅಧ್ಯಕ್ಷ