ವಿನುತಾ ಹೆಗಡೆ ಶಿರಸಿ
ಶಿರಸಿ ಜಾತ್ರೆಯಲ್ಲಿ ಲಕ್ಷ,ಲಕ್ಷ ಆದಾಯ ಕಂಡ ಭಟ್ಕಳ ಮಲ್ಲಿಗೆ
ಸಮುದ್ರವನ್ನೂ ದಾಟಿ ಆಚೆಗೂ ಪರಿಮಳ ಬೀರಿದ್ದು ವಿಶೇ
ಜಾತ್ರೆ ಅಂಗಳದ ಆಸು ಪಾಸು ಸುಳಿದರೆ ಮಲ್ಲಿಗೆಯ ಘಮ್ ಎನ್ನುವ ಪರಿಮಳ. ದೇವಿ ದರ್ಶನಕ್ಕೆ ಜಾತ್ರೆಯ ಗದ್ದುಗೆ ಒಳ ಹೋದರೂ ಭಟ್ಕಳ ಮಲ್ಲಿಗೆ ಪರಿಮಳ… ಈ ಬಾರಿಯ ಶಿರಸಿ ಜಾತ್ರೆಯಲ್ಲಿ ಮಾರಮ್ಮ ಭಟ್ಕಳ ಮಲ್ಲಿಗೆ ಹೂ, ದಂಡೆ ಮುಡಿದದ್ದೇ ಹೆಚ್ಚು. ಅಮ್ಮನವರ ಪ್ರಸಾದವಾಗಿ ಮಹಿಳೆಯರ ಕೈ ಸೇರಿದ್ದವು, ಲಕ್ಷಾಂತರ ಮಲ್ಲಿಗೆಯ ದಂಡೆ.
ಭಟ್ಕಳದ ರೈತರು ಹಲವೆಡೆ ಮಲ್ಲಿಗೆಯನ್ನೇ ಪ್ರಮುಖ ಬೆಳೆಯನ್ನಾಗಿಸಿಕೊಂಡಿದ್ದು, ಇದು ಉತ್ತರ ಕನ್ನಡ ಜಿಲ್ಲೆಯೊಂದೇ ಅಲ್ಲದೇ ಕರಾವಳಿ ತೀರದ ಮಂಗಳೂರು, ಉಡುಪಿ, ಗೋವಾವನ್ನೂ ತಲುಪುತ್ತದೆ. ಮಧ್ಯಾಹ್ನದಿಂದ ಸಂಜೆ ವೇಳೆವರೆಗೂ ಈ ಮೊಗ್ಗನ್ನು ಕೊಯ್ಯಲಾಗುತ್ತಿದ್ದು, ಮೊಗ್ಗಿನ ದಂಡೆ ಅಥವಾ ಹಾರ ಕಟ್ಟಿದ ಮೇಲೆ ಇದು ಹಾಳಾಗ ದಂತೆ ಹಸಿರು ಎಲೆ ಅಥವಾ ಬಾಳೆ ಎಲೆ ಯಲ್ಲಿ ಇದನ್ನು ಸುತ್ತಿಡಲಾಗುತ್ತದೆ. ಅಂತೆಯೇ ಹಾರಗಳ ಮಲ್ಲಿಗೆ ಮೊಗ್ಗನ್ನು ಸುಂದರವಾಗಿ ಹೆಣೆಯಲಾಗುತ್ತದೆ. ಇದು ಮೊಗ್ಗಿರು ವಾಗಲೂ ಸಹ ಪರಿಮಳ ಬೀರಬಲ್ಲ ಅಚ್ಚ ಬಿಳಿಯ ಮಲ್ಲಿಗೆಯಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಉತ್ತರಕೊಪ್ಪ ಮೀಡ್ಲು ಗ್ರಾಮದಲ್ಲಿ ಹೆಚ್ಚಾಗಿ ಈ ಮಲ್ಲಿಗೆ ಬೆಳೆಯುವ ರೈತ ರಿದ್ದಾರೆ. ಈ ಮಲ್ಲಿಗೆ ಮೊಗ್ಗು ಕಟ್ಟುವ ರೀತಿಯೇ ಬೇರೆ. ಎಲ್ಲರಿಗೂ ಈ ಮಲ್ಲಿಗೆ ಮೊಗ್ಗಿನ ಹಾರ ಕಟ್ಟಲುಬಾರದು. ಇಲ್ಲಿನ ರೈತ ಮಹಿಳೆ ಯರೇ ಹೆಚ್ಚಾಗಿ ಆ ಮೊಗ್ಗನ್ನು ಸುಂದರವಾಗಿ ದಾರದಲ್ಲಿ ಹೆಣೆಯುತ್ತಾರೆ. ಆದ್ದರಿಂದ ಇದರ ಹಾರ, ಅಥವಾ ದಂಡೆ ನೋಡಲು ಸಹ ಅತಿ ಆಕರ್ಷಕವಾಗಿರುತ್ತದೆ.
ಭಟ್ಕಳ ತಾಲೂಕು ಶಿರಸಿಗೆ ಸನಿಹ ಇರುವುದರಿಂದ ಜಾತ್ರೆ ಸಮಯದಲ್ಲಿ ಬೆಳೆದ ಮಲ್ಲಿಗೆ ಎಲ್ಲವೂ ಶಿರಸಿ ಅಮ್ಮನ ಪಾದ ಸೇರಿವೆ. ಅಂತೆಯೇ ಮೈಸೂರು, ಮಲ್ಲಿಗೆ, ಶಂಕರಪುರ ಮಲ್ಲಿಗೆ, ದುಂಡು ಮಲ್ಲಿಗೆ, ಎಲ್ಲ ತರಹದ ಮಲ್ಲಿಗೆ ಇದ್ದರೂ ಈ ಭಟ್ಕಳ ಮಲ್ಲಿಗೆ ವಿಶೇಷ ಸ್ಥಾನವನ್ನು ಪಡೆದಿದೆ. ಇದು ಪೇಟೆಂಟ್ ತೆಗೆದುಕೊಳ್ಳುವಲ್ಲಿ ಭಟ್ಕಳ ವಿಫಲವಾದರೂ ದರ ನಿಗದಿ ಮಾತ್ರ ಎಲ್ಲಡೆಯೂ
ಭಟ್ಕಳವೇ ನಿರ್ಧರಿತವಾಗುತ್ತದೆ. ಉಡುಪಿ, ಮಂಗಳೂರಿನಲ್ಲಿ ಈ ಭಟ್ಕಳ ಮಲ್ಲಿಗೆ ಬೆಳೆದರೂ ಅದು ಭಟ್ಕಳ ಮಲ್ಲಿಗೆ ಆಗಿಯೇ ಉಳಿದಿದೆ.
ಮಲ್ಲಿಗೆ ವ್ಯಾಪಾರ ಐದು ಲಕ್ಷ ರು.ಗೂ ಅಧಿಕ
ಪರಿಮಳವ ಬೀರುವ ಮಲ್ಲಿಗೆ ಹೂ ಎಂದರೆ ಎಂತಹವರಿಗೂ ಕೊಂಡುಕೊಳ್ಳುವ ಬಯಕೆ. ಅದರಲ್ಲೂ ಭಟ್ಕಳದ ಮಲ್ಲಿಗೆ ಸಮುದ್ರವನ್ನೂ ದಾಟಿ ಆಚೆಗೂ ಪರಿಮಳ ಬೀರಿದ್ದು ವಿಶೇಷ. ಈ ಬಾರಿಯ ಶಿರಸಿ ಮಾರಿಕಾಂಬಾ ಜಾತ್ರೆಯಲ್ಲಿ ಭಟ್ಕಳ ಮಲ್ಲಿಗೆ ಐದು ಲಕ್ಷ ರುಪಾಯಿಗೂ ಅಧಿಕ ವಹಿವಾಟು ಕಂಡಿದೆ. ದಿನವೂ ಭಟ್ಕಳದಿಂದ ಬರುವ ಮಲ್ಲಿಗೆ ದಿನವೊಂದಕ್ಕೆ ಒಂದೊಂದು ವ್ಯಾಪಾರಸ್ಥರ ಬಳಿಯೂ ಹತ್ತರಿಂದ ಹದಿನೈದು ಸಾವಿರ ರುಪಾಯಿ ವ್ಯಾಪಾರವಾಗಿದ್ದು, ಮಾರಿಕಾಂಬಾ ದೇವಿಯ ಅಮ್ಮನ ಮೈ ಮೇಲೆ ದಿನವೂ ಭಟ್ಕಳ ಮಲ್ಲಿಗೆಯ ಹಾರ ಕಂಗೊಳಿಸಿದ್ದವು.
***
ದಿನಕ್ಕೆ ನೂರೈವತ್ತರಿಂದ ಇನ್ನೂರು ಬಂಡಲ್ ಮಲ್ಲಿಗೆ ದಂಡೆ ಖಾಲಿಯಾಗುತ್ತದೆ. ದಿನಕ್ಕೆ ಹತ್ತು ಸಾವಿರ ರುಪಾಯಿಯಿಂದ ಹದಿನೈದು ಸಾವಿರ ರುಪಾಯಿವರೆಗೂ ವ್ಯಾಪಾರವಾಗಿದೆ. ಒಂದು ಸಣ್ಣ ದಂಡೆಗೆ ಎಪ್ಪತ್ತರಿಂದ ಎಂಬತ್ತು ರುಪಾಯಿಗೆ
ವ್ಯಾಪಾರ ವಾಗುತ್ತದೆ. ಈ ಸಾರಿ ನಾವು ಚೆನ್ನಾಗಿ ವ್ಯಾಪಾರಮಾಡಿ ಲಾಭ ಕಂಡಿದ್ದೇವೆ.
-ಖಾದರ್ ಭಟ್ಕಳ ಮಲ್ಲಿಗೆ ದಂಡೆ ವ್ಯಾಪಾರಸ್ಥ