ಮೆಡಿಕಲ್ ಸೀಟು ಶುಲ್ಕ ಏರಿಕೆ ಇಲ್ಲ
ಗ್ರಾಮೀಣರ ಅನ್ಯಾಯ ತಡೆಗೆ ನೀಟ್ ತರಬೇತಿ
ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಳಗಾವಿ
ನೀಟ್ ಸೀಟು ಹಂಚಿಕೆ ಗೊಂದಲದಿಂದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುವುದಿಲ್ಲ. ಅದಕ್ಕೆ ಸರಕಾರ ಎಂದಿಗೂ ಅವಕಾಶ ಕೊಡುವುದಿಲ್ಲ ಎಂದು ವೈದ್ಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.
ವಿದ್ಯಾರ್ಥಿಗಳ ಗೊಂದಲ ಸದ್ಯದಲ್ಲೇ ನಿವಾರಣೆಯಾಗಲಿದೆ. ಜತೆಗೆ ಖಾಸಗಿ ಮೆಡಿಕಲ್ ಕಾಲೇಜುಗಳು ಸಲ್ಲಿಸಿರುವ ಶುಲ್ಕ ಏರಿಕೆ ಪ್ರಸ್ತಾಪವನ್ನು ಸರಕಾರ ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದು ವಿವರಿಸಿದ್ದಾರೆ. ರಾಜ್ಯದಲ್ಲಿ ನೀಟ್ ಸೀಟು ಹಂಚಿಕೆ ಗೊಂದಲದಿಂದ ಸಾವಿರಾರು ವಿದ್ಯಾರ್ಥಿಗಳು ಎದು ರಿಸುತ್ತಿರುವ ಅತಂತ್ರ ಮತ್ತು ಆತಂಕದ ಸಮಸ್ಯೆಗಳ ಬಗ್ಗೆ ವಿಶ್ವವಾಣಿ ಪತ್ರಿಕೆ ಸರಣಿ ವರದಿ ಪ್ರಕಟಿಸಿದ್ದು. ಈ ಹಿನ್ನೆಲೆಯಲ್ಲಿ ಪತ್ರಿಕೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಸುಧಾಕರ್ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
ವಿದ್ಯಾರ್ಥಿಗಳಿಗೆ ನೀಟ್ ಸೀಟು ಆತಂಕ, ಸರಕಾರ ನಿರಾತಂಕ ಏಕೆ?
ನೀಟ್ ಸೀಟು ಹಂಚಿಕೆ ವಿಷಯದಲ್ಲಿ ವಿಳಂಬವಾಗಿರುವುದು ನಿಜ. ಇದರಿಂದ ಸಾಕಷ್ಟು ಮಂದಿ ವಿದ್ಯಾರ್ಥಿಗಳ ನಡುವೆ ಗೊಂದಲ ಕೂಡ ಉಂಟಾಗಿದೆ. ಸೀಟು ಹಂಚಿಕೆ ವಿಚಾರ ಸದ್ಯ ನ್ಯಾಯಾಲಯದಲ್ಲಿ ಇರುವುದರಿಂದ ಹೆಚ್ಚು ಮಾತನಾಡಲು ಸಾಧ್ಯವಿಲ್ಲ. ಇದರ ಬಗ್ಗೆ ನಾವು ಏನು ಹೇಳಿದರೂ ನ್ಯಾಯಾಲಯ ನಿಂದನೆ ಆಗಬ ಹುದು.
ನೀಟ್ ಅವಸ್ಥೆಗೆ ಕಾರಣ ಯಾರು?
ನೀಟ್ ವಿಚಾರ ಗೊಂದಲ ಆಗುವ ಮೊದಲೇ ಈ ಪ್ರಕ್ರಿಯೆ ಮುಗಿದು ಹೋಗಿದ್ದರೆ ಚೆನ್ನಾಗಿ ಇರುತ್ತಿತ್ತು. ಆದರೆ ಕೋವಿಡ್ ಪರಿಣಾಮದಿಂದ ಆರಂಭವಾದ ಸಮಸ್ಯೆ ಮುಂದಕ್ಕೆ ಹೋಗುತ್ತಲೇ ಬಂತು. ಹೀಗಾಗಬಾರದಿತ್ತು.
ಈ ಗೊಂದಲಗಳು ಶೀಘ್ರವೇ ಮುಗಿಯಲು ಸಾಧ್ಯವೇ?
ಈ ವಿಚಾರ ಸದ್ಯ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ. ನಾನು ಇದನ್ನು ನೋಡುತ್ತಿರುವ ಹಾಗೆ ಸುಪ್ರೀಂನಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ಕಾರಣ ಕ್ಕೂ ಅನ್ಯಾಯ ಆಗುವುದಿಲ್ಲ. ಅದರಲ್ಲಿ ವಿದ್ಯಾರ್ಥಿಗಳಿಗೆ ನೂರಕ್ಕೆ ನೂರು ನ್ಯಾಯ ಸಿಕ್ಕೆ ಸಿಗುತ್ತದೆ. ಇಲ್ಲಿ ಸರಕಾರ ಮತ್ತು ನ್ಯಾಯಾಲಯ ಖಂಡಿತ ವಿದ್ಯಾರ್ಥಿಗಳ ಪರ ನಿಲ್ಲುತ್ತದೆ. ವಿದ್ಯಾರ್ಥಿಗಳಿಗೆ ಯಾವುದೇ ಅನ್ಯಾಯ ಆಗುವುದಿಲ್ಲ. ಅದರ ಬಗ್ಗೆ ನನಗೆ ವಿಶ್ವಾಸವಿದೆ.
ಗ್ರಾಮೀಣ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯ ಗೊತ್ತಿದೆಯೇ?
ಗ್ರಾಮೀಣ ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಎದುರಿಸುವುದು, ಅದರಲ್ಲಿ ಯಶಸ್ವಿ ಆಗುವುದು ಕಡಿಮೆ ಇರಬಹುದು. ಈ ಅನ್ಯಾಯ ಸರಿಪಡಿಸಲು ಮುಂದೆ ನಮ್ಮ ಇಲಾಖೆಯಿಂದಲೇ ಅಗತ್ಯ ಕ್ರಮಕೈಗೊಳ್ಳಲಾಗುವುದು. ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಕೋಚಿಂಗ್ ಸೆಂಟರ್ ಆರಂಭಿಸಿ, ಆ ಮೂಲಕ ಮಕ್ಕಳನ್ನು ಪರೀಕ್ಷೆಗೆ ಸಜ್ಜುಗೊಳಿಸುತ್ತೇವೆ.
ಸೀಟು ಗೊಂದಲ ನೀಟಾಗಿ ನಿವಾರಣೆ ? ಖಾಸಗಿ ಕಾಲೇಜುಗಳು ಶುಲ್ಕ ಏರಿಕೆ ಬೇಡಿಕೆ ಇಟ್ಟಿವೆಯಲ್ಲಾ?
ಖಾಸಗಿ ವೈದ್ಯ ಕಾಲೇಜುಗಳ ಶುಲ್ಕ ಏರಿಕೆ ಬಗ್ಗೆ ಇರುವ ಪ್ರಸ್ತಾಪ ಸರಿಯಲ್ಲ. ಇದಕ್ಕೆ ಸರಕಾರ ಒಪ್ಪಿಕೊಳ್ಳುವುದಿಲ್ಲ. ಸದ್ಯಕ್ಕೆ ಶುಲ್ಕ ಏರಿಕೆ ಸಾಧ್ಯವಿಲ್ಲ. ವೈದ್ಯ ಕಾಲೇಜುಗಳು ಶೇ.೨೦ರಷ್ಟು ಶುಲ್ಕ ಏರಿಕೆಗೆ ಕೇಳಿರಬಹುದು. ಆದರೆ ನಾವು ಈಗ ಶೇ.1ರಷ್ಟು ಏರಿಸುವುದಕ್ಕೆ ಒಪ್ಪಿಗೆ ನೀಡಿಲ್ಲ. ಶುಲ್ಕ ಏರಿಕೆ ಪ್ರಸ್ತಾಪದ ಕಾರಣಕ್ಕೆ ದಂತವೈದ್ಯ ಕಾಲೇಜುಗಳು ಪ್ರವೇಶವನ್ನು ವಿಳಂಬ ಮಾಡಿದವು. ಕೆಲವು ವೈದ್ಯ ಕಾಲೇಜುಗಳ ಪ್ರಸ್ತಾಪವನ್ನು ನಾನು ಒಪ್ಪಿಕೊಳ್ಳ ಲಿಲ್ಲ. ನಂತರ ಅವು ಮುಖ್ಯಮಂತ್ರಿಗಳನ್ನು ಒಪ್ಪಿಸುವುದಾಗಿ ಹೋದವು. ಅದಕ್ಕೆ ನನ್ನ ಅಭ್ಯಂತರವಿಲ್ಲ. ನಾನಂತೂ ಯಾವುದೇ ಕಾರಣಕ್ಕೂ ಒಪ್ಪುವು ದಿಲ್ಲ ಎಂದು ಹೇಳಿದ್ದೇನೆ.
ಸರಕಾರಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿ ಶೀಘ್ರ ಇತ್ಯರ್ಥಕ್ಕೆಕೇಳಬೇಕಲ್ಲವೇ?
ಇದು ರಾಷ್ಟ್ರೀಯ ವಿಷಯ. ಹಾಗೆಯೇ ಇದು ದೇಶಾದ್ಯಂತ ಎದುರಾಗಿರುವ ವಿಳಂಬ ಮತ್ತು ಗೊಂದಲ. ಇದಕ್ಕೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಪರಿಹಾರ
ಕಂಡುಕೊಳ್ಳಬೇಕು. ಹೀಗಾಗಿ ನಮ್ಮ ರಾಜ್ಯ ಸರಕಾರ ಮಾತ್ರ ಸುಪ್ರೀಂನಲ್ಲಿ ಅರ್ಜಿ ಹಾಕಿ, ಬೇಗ ಇತ್ಯಾರ್ಥ ಮಾಡಿ ಎಂದು ಹೇಳಲು ಸಾಧ್ಯವಿಲ್ಲ.