ಅಧಿಕಾರಿಗಳಿಗೆ ಸರಕಾರದ ಆದೇಶ
ದುಂದು ವೆಚ್ಚ ಕಡಿತಕ್ಕೆ ಮತ್ತೊಂದು ಹೆಜ್ಜೆ
ವಿಶೇಷ ವರದಿ: ರಂಜಿತ್ ಎಚ್.ಅಶ್ವತ್ಥ ಬೆಂಗಳೂರು
ಸರಕಾರಿ ಕೆಲಸದ ಮೇಲೆ ತೆರಳುವ ಅಧಿಕಾರಿಗಳು ಇನ್ನು ಮುಂದೆ ವಿಮಾನ ಟಿಕೆಟ್ ಅನ್ನು ಖಾಸಗಿ ಏಜೆನ್ಸಿಗಳಿಂದ ಬುಕ್ ಮಾಡುವ ಬದಲು, ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ (ಎಂಎಸ್ಐಎಲ್) ನಿಂದಲೇ ಬುಕ್ ಮಾಡಬೇಕು ಎಂದು ಸರಕಾರದ ಆದೇಶ ಹೊರಡಿಸಿದೆ.
ಕಚೇರಿ ಸಂಬಂಧಿತ ಪ್ರವಾಸ, ಅಧ್ಯಯನ ಪ್ರವಾಸ ಸೇರಿದಂತೆ ವಿವಿಧ ಕಾರಣಗಳಿಗೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರವಾಸವನ್ನು ಹಿರಿಯ ಅಧಿಕಾರಿ ಗಳು ಮಾಡುತ್ತಾರೆ. ಆದರೆ ಈ ರೀತಿ ಪ್ರಯಾಣದ ಸಂಪೂರ್ಣ ಖರ್ಚನ್ನು ಸರಕಾರವೇ ಭರಿಸುತ್ತದೆ. ಈ ರೀತಿಯ ಪ್ರವಾಸಕ್ಕೆ ವಿಮಾನ ಟಿಕೆಟ್ ಅನ್ನು ಎಂಎಸ್ಐಎಲ್ ನಿಂದಲೇ ಬುಕ್ ಮಾಡಿಸಬೇಕು ಎನ್ನುವ ಸ್ಪಷ್ಟ ಆದೇಶವಿದೆ.
ಆದರೆ ಕೆಲವು ಅಧಿಕಾರಿಗಳು ಇದನ್ನು ಮೀರಿ, ಖಾಸಗಿ ಏಜೆನ್ಸಿ ಕಡೆಯಿಂದ ಟಿಕೆಟ್ ಬುಕ್ ಮಾಡಿಸುತ್ತಿದ್ದರು. ಇದರಿಂದ ಸರಕಾರಕ್ಕೆ ಹೆಚ್ಚುವರಿ ಹಣಕಾಸು ಹೊರೆ ಬೀಳುತ್ತಿದೆ. ಆದ್ದರಿಂದ ಇದನ್ನು ಗಂಭೀರವಾಗಿ ಪರಿಗಣಿಸಿ ರುವ ಸರಕಾರ, ಇನ್ಮುಂದೆ ಕಡ್ಡಾಯವಾಗಿ ಎಂಎಸ್ಐಎಲ್ನಿಂದಲೇ ಟಿಕೆಟ್ ಬುಕ್ ಮಾಡಿಸಬೇಕು ಎಂದು ಆದೇಶ ಹೊರಡಿಸಿದೆ.
ಏಕೆ ಈ ಕ್ರಮ?
ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಆರ್ಥಿಕ ಸೋರಿಕೆ ಯನ್ನು ತಡೆಯುವುದಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಖಾಸಗಿ ಏಜೆನ್ಸಿಗಳಿಂದ ವಿಮಾನ ಟಿಕೆಟ್ ಬುಕ್ ಮಾಡುವುದರಿಂದ ಹೆಚ್ಚು ಕಮಿಷನ್ ಹೋಗುತ್ತದೆ ಎನ್ನುವ ಕಾರಣಕ್ಕೆ ಈ ತೀರ್ಮಾನ ಕೈಗೊಳ್ಳ ಲಾಗಿದೆ. ಎಂಎಸ್ಐಎಲ್ ಗೂ ಹೆಚ್ಚುವರಿ ಆರ್ಥಿಕ ಸಂಪನ್ಮೂಲ ಸಿಗಲಿದೆ ಎನ್ನುವ ಲೆಕ್ಕಾಚಾರವೂ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2003ರಲ್ಲಿಯೇ ಆಗಿದ್ದ ಆದೇಶ ಈ ಆದೇಶವನ್ನು 2003ರಲ್ಲಿಯೇ ಮಾಡಲಾಗಿತ್ತು. ಆದರೂ ಕೆಲ ಅಧಿಕಾರಿಗಳು ಈ ನಿಯಮ ವನ್ನು ಪಾಲಿಸದೇ, ಖಾಸಗಿ ಏಜೆನ್ಸಿ ಕಡೆಯಿಂದ ಬುಕ್ ಮಾಡಿಸುತ್ತಿದ್ದರು. ಇದರಿಂದ ಎಂಎಸ್ಐಎಲ್ಗೆ ಬರುವ ಆದಾಯ ಖೋತಾ ಆಗುವ ಜತೆಗೆ ಖಾಸಗಿ ಏಜೆನ್ಸಿಗಳಿಗೆ ಹೆಚ್ಚುವರಿಯಾಗಿ ಕಮಿಷನ್ ನೀಡಬೇಕಿತ್ತು. ಆದ್ದರಿಂದ ಇದೀಗ ಈ ಕಮಿಷನ್ ಹಣವನ್ನು ಉಳಿಸುವುದಕ್ಕಾಗಿ ಸರಕಾರ ಮತ್ತೊಮ್ಮೆ ಆದೇಶ ಹೊರಡಿಸಿದೆ.
ಯಾರಿಗೆ ಅನ್ವಯ?
ವಿವಿಧ ಇಲಾಖೆಯ ಅಧಿಕಾರಿಗಳು ಕಾರ್ಯನಿಮಿತ್ತ ಪ್ರಯಾಣಿಸುವಾಗ ಸರಕಾರಿ ಸ್ವಾಮ್ಯದಲ್ಲಿ ಬರುವ ವಿವಿಧ ಸಂಸ್ಥೆ ಹಾಗೂ ನಿಗಮ ಮಂಡಳಿ ನೌಕರರು
ಸಹಕಾರಿ ಸಂಸ್ಥೆ ಹಾಗೂ ಇದರ ಅಧೀನದಲ್ಲಿರುವ ಇಲಾಖೆಯ ಅಧಿಕಾರಿಗಳು ಈ ನಿಯಮ ಜಾರಿಗೊಳಿಸಲು ಕಾರಣವೇನು? ಖಾಸಗಿ ಏಜೆನ್ಸಿಗಳಿಗೆ ನೀಡುವ ಕಮಿಷನ್ ತಡೆಯಲು ಕೆಲ ಅಧಿಕಾರಿಗಳು ವಿಮಾನದ ಟಿಕೆಟ್ ದರ ಹೆಚ್ಚಿಗೆ ತೋರಿಸಿ ಭ್ರಷ್ಟಾಚಾರ ಎಸಗಿರುವ ಘಟನೆಗಳಿವೆ ಎಂಎಸ್ಐಎಲ್ ಸರಕಾರಿ ಸಂಸ್ಥೆ ಯಾಗಿರುವುದರಿಂದ, ಕಮಿಷನ್ ಆದಾಯ ಸರಕಾರಕ್ಕೆ ಬರಲಿದೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದು ಸುಲಭ ಅಧಿಕಾರಿಗಳ ಸಂಪೂರ್ಣ ಪ್ರವಾಸವನ್ನು ಟ್ರ್ಯಾಕ್ ಮಾಡುವುದು ಸುಲಭ.