ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾಗದು, ಸಿಎಂ ಸಿದ್ದು ಪಕ್ಷಕ್ಕೆ ಅನಿವಾರ್ಯ
ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ಮುಡಾ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆನ್ನಿಗೆ ನಿಂತಿರುವ ಕಾಂಗ್ರೆಸ್ ಹೈಕಮಾಂಡ್ ತಾತ್ಕಾಲಿಕವಾಗಿ ಕೆಪಿಸಿಸಿ ಅಧ್ಯಕ್ಷ ಮತ್ತು ಸಚಿವ ಸಂಪುಟ ವಿಸ್ತರಣೆ ಪ್ರಸ್ತಾಪಗಳನ್ನು ಮುಂದಕ್ಕೆ ಹಾಕಿದೆ. ಹಾಗೆಯೇ ಮುಡಾ ಪ್ರಕರಣ ವಿಚಾರಣೆಗೆ ಸಂಬಂಽಸಿದಂತೆ ನ್ಯಾಯಾಲಯವು ಆ.೨೯ಕ್ಕೆ ಏನಾದರೂ ತೀವ್ರ ಕಠಿಣ ಆದೇಶಗಳನ್ನು ಒಳಗೊಂಡ ತೀರ್ಪು ನೀಡದ ಹೊರತು ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಚಿಂತಿಸು ವುದು ಬೇಡ ಹಾಗೂ ಅದರ ಬಗ್ಗೆ ಚರ್ಚೆ ನಡೆಸುವುದೂ ಬೇಡ ಎಂದೂ ಪಕ್ಷದ ಹೈಕಮಾಂಡ್ ಅಭಿಪ್ರಾಯಪಟ್ಟಿದೆ ಎಂದು ತಿಳಿದುಬಂದಿದೆ.
ಇಷ್ಟೇ ಅಲ್ಲದೆ, ಕರ್ನಾಟಕದಲ್ಲಿ ರಾಜ್ಯಪಾಲರ ನಡೆ ಮತ್ತು ನಿಲುಗಳನ್ನು ವಿರುದ್ಧದ ಹೋರಾಟಗಳನ್ನು ಮುಂದುವರಿಸುತ್ತಾ ಇದನ್ನು ರಾಷ್ಟ್ರ ಮಟ್ಟದ
ವಿಚಾರಗಳನ್ನಾಗಿಸುವ ತಂತ್ರಗಳನ್ನು ರೂಪಿಸುವ ಬಗ್ಗೆ ಹೈಕಮಾಂಡ್ ಸಲಹೆ ನೀಡಿದೆ. ಹಾಗೆಯೇ ಇದನ್ನು ಇಂಡಿಯಾ ಒಕ್ಕೂಟದ ಹೋರಾಟದ ವಿಚಾರವನ್ನಾಗಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ. ಅದರ ಭಾಗವಾಗಿಯೇ ರಾಷ್ಟ್ರಪತಿ ಮುಂದೆ ಕಾಂಗ್ರೆಸ್ ಪರೇಡ್ ನಡೆಸುವ ಚರ್ಚೆ ನಡೆಸಲಾಗಿದೆ ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ.
ಅಂದರೆ, ಜಮ್ಮು-ಕಾಶ್ಮೀರ, ಹರಯಾಣ, ಮಹಾರಾಷ್ಟ್ರ ಹಾಗೂ ದೆಹಲಿ ಸೇರಿದಂತೆ ಮುಂಬರುವ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಕರ್ನಾಟಕ ಸರಕಾರ ಮತ್ತು ರಾಜಭವನಗಳ ನಡುವಿನ ಹೋರಾಟದ ವಿಚಾರಗಳನ್ನು ಬಳಕೆ ಮಾಡಿಕೊಳ್ಳಬೇಕಿದೆ. ಅದಕ್ಕೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಯಾಗಿ ಮುಂದುವರಿಯಬೇಕಿದೆ ಎನ್ನುವ ನಿಲುವು ಹೈಕಮಾಂಡ್ ನದು ಎನ್ನಲಾಗಿದೆ.
ಇದೆಲ್ಲಕ್ಕಿಂತ ಮುಖ್ಯವಾಗಿ ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧದ ಬಳ್ಳಾರಿ ಅಕ್ರಮ ಗಣಿಗಾರಿಕೆಗೆ ವಿಚಾರವನ್ನು ಇನ್ನಷ್ಟು ತೀವ್ರಗೊಳಿಸಿ, ಈ ವಿಚಾರದಲ್ಲಿ ಜೆಡಿಎಸ್ ಪರವಾಗಿ ಬಿಜೆಪಿ ಬೆಂಬಲಕ್ಕೆ ನಿಲ್ಲಲು ಹಿಂದೇಟು ಹಾಕುವಂತೆ ಮಾಡುವ ನಿಟ್ಟನಲ್ಲಿ ತಂತ್ರಗಳನ್ನ ರೂಪಿಸಬೇಕೆನ್ನುವ ಬಗ್ಗೆ ಕಾಂಗ್ರೆಸ್ ವರಿಷ್ಠರು ರಾಜ್ಯ ನಾಯಕರಿಗೆ ಸಲಹೆ ನೀಡಿzರೆ ಎಂದೂ ಗೊತ್ತಾಗಿದೆ. ಈ ಎ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಸಾರ್ವಜನಿಕರ ವಲಯದಲ್ಲಿ ಎದ್ದಿದ್ದ ಅನುಮಾನಗಳಿಗೆ ಹೈಕಮಾಂಡ್ ಬೆಂಬಲದ ಮೂಲಕ ತೆರೆ ಎಳೆದಂತಾಗಿದೆ ಎಂದು ಹಿರಿಯ ಸಚಿವರೊಬ್ಬರು ಹೇಳಿದ್ದಾರೆ.
ಸಚಿವರಿಗೆ ಕೊಕ್ ನೀಡಿದರೆ ಸಮಸ್ಯೆ
ಮುಡಾ ಪ್ರಕರಣದಿಂದ ಸಂಪುಟದ ಅನೇಕ ಸಚಿವರು ಕೂಡ ಕಂಟಕದಿಂದ ಪಾರಾದಂತಾಗಿದೆ. ಅಂದರೆ, ಮುಡಾ ಪ್ರಕರಣ ಈ ಹಂತಕ್ಕೆ ತೀವ್ರಗೊಳ್ಳ ದಿದ್ದರೆ, ಇಷ್ಟೊತ್ತಿಗೆಗಾಲೇ ಸುಮಾರು ೮ ಸಚಿವರಿಗೆ ಕೊಕ್ ನೀಡುವ ಪ್ರಕ್ರಿಯೆ ಆರಂಭವಾಗಿತ್ತು. ಆದರೆ ಸದ್ಯಕ್ಕೆ ಅದಕ್ಕೆ ಕೈಹಾಕಿದರೆ ಒಗ್ಗಟ್ಟು ಕದಡಿ ದಂತಾಗುತ್ತದೆ, ಪ್ರತಿಪಕ್ಷಗಳ ವಿರುದ್ಧ ಸಮರ ನಡೆಯುತ್ತಿರುವ ಸಂದರ್ಭದಲ್ಲಿ ಅನಗತ್ಯ ಗೊಂದಲ ತಂದುಕೊಂಡಂತಾಗುತ್ತದೆ ಎನ್ನುವ ಕಾರಣಕ್ಕೆ ಪಕ್ಷದ ಹೈಕಮಾಂಡ್ ಸಂಪುಟ ಸರ್ಜರಿ ಪ್ರಸ್ತಾಪವನ್ನೂ ಮಾಡುಲು ಆಸಕ್ತಿ ತೋರಿಸಿಲ್ಲ ಎನ್ನಲಾಗಿದೆ. ಇಷ್ಟೇ ಅಲ್ಲದೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಪ್ರಸ್ತಾಪವನ್ನೂ ಸದ್ಯಕ್ಕೆ ಮುಂದೂಡಲಾಗಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ಆಗಸ್ಟ್ ೨೯ಕ್ಕೆ ಏನಾಗಬಹುದು ?
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಿಚಾರಣೆಗೆ ಅನುಮತಿ
ನೀಡಿರುವ ಹಿನ್ನೆಯಲ್ಲಿ ಖಾಸಗಿ ದೂರುದಾರರು ಶಾಸಕರು, ಸಂಸದರ ವಿಚಾರಣಾ ವಿಶೇಷ ನ್ಯಾಯಪೀಠದಲ್ಲಿ ಅರ್ಜಿ ಸಲ್ಲಿಸಿ ತನಿಖೆ ನಡೆಸುವಂತೆ ಕೋರಿದ್ದಾರೆ. ಇದರ ವಿಚಾರಣೆಯೂ ನಡೆದಿದ್ದು, ಆ.೨೯ರಂದು ಕೋರ್ಟ್ ಆದೇಶ ಹೊರಡಿಸಬಹುದೆಂದು ನಿರೀಕ್ಷಿಸಲಾಗಿದೆ. ಅಂದರೆ ಈ ಪ್ರಕರಣಕ್ಕೆ ಸಂಬಂಽಸಿದಂತೆ ನ್ಯಾಯಾಲಯ ಮುಖ್ಯಮಂತ್ರಿ ವಿರುದ್ಧ ತನಿಖೆಗೆ ಅನುಮತಿ ನೀಡಬಹುದು ಅಥವಾ ವಿಚಾರಣೆಗೆ ಅನುಮತಿ ನೀಡಿರುವುದು ಕಾನೂನು ಬಾಹಿರ ಎಂದು ಹೇಳಬಹುದು, ಇಲ್ಲವೆ ವಿಚಾರಣೆಗೆ ರಾಜ್ಯಪಾಲರು ಅನುಮತಿ ನೀಡುವ ಸಂದರ್ಭದಲ್ಲಿ ಈ ಎಲ್ಲಾ ಅಂಶಗಳನ್ನು ಪರಿಗಣಿಸಿzರೆಯೇ ಎಂದೂ ಖಾತರಿಪಡಿಸಿಕೊಳ್ಳುವಂತೆ ಅರ್ಜಿದಾರರಿಗೆ ಸೂಚಿಸಬಹುದು ಇವುಗಳಲ್ಲದೆ ಏನಾದರೂ ಆದೇಶ ಹೊರಬೀಳಬಹುದು ಎನ್ನುವ ಲೆಕ್ಕಾಚಾರ ದಲ್ಲಿ ಕಾಂಗ್ರೆಸ್ ಇದೆ. ಅಷ್ಟೇ ಅಲ್ಲ, ಏನಾದರೂ ಕೋರ್ಟ್ ಅರ್ಜಿದಾರರ ಕೋರಿಕೆಯಂತೆ ಮುಖ್ಯಮಂತ್ರಿ ವಿರುದ್ಧ ತನಿಖೆಗೆ ಆದೇಶಿಸಿದರೆ, ಅದರ ವಿರುದ್ಧ ಸುಪ್ರೀಂಕೋಕೋರ್ಟ್ ಮೆಟ್ಟಿಲೇರಲು ಎಲ್ಲಾ ಸಿದ್ಧತೆಗಳನ್ನು ನಡೆಸಲಾಗಿದೆ ಎಂದು ಮುಖ್ಯಮಂತ್ರಿಗಳ ಅಪ್ತವಲಯದ ನಾಯಕರು
ತಿಳಿಸಿ ದ್ದಾರೆ.