ಪರಿಹಾರ ಸೈಟ್ ಹೆಸರಿನಲ್ಲಿ ಹೊಸ ದಂಧೆ, ಕೇಳಿದ್ದಕ್ಕಿಂತ ಹೆಚ್ಚು ನಿವೇಶನಗಳ ಹಂಚಿಕೆ, ತನಿಖೆಯೂ ಮೊಟಕು
ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ರಾಜಧಾನಿ ಬೆಂಗಳೂರಿನ ಬಿಡಿಎದಲ್ಲಿ ಈ ಹಿಂದೆ ನಡೆಯುತ್ತಿದ್ದ ಪರಿಹಾರ ನಿವೇಶನ ಹಂಚಿಕೆ ಹಗರಣದ ರೋಗ ಈಗ ಮೈಸೂರು ಅಭಿವೃದ್ಧಿ ಪ್ರಾಧಿ ಕಾರಕ್ಕೂ ಅಂಟಿದೆ. ಬಡಾವಣೆ ನಿರ್ಮಾಣಕ್ಕೆ ಜಮೀನು ನೀಡಿದ ರೈತರ ಹೆಸರಿನಲ್ಲಿ ಫಲಾನುಭವಿ ಎಂಬುದಾಗಿ ಹೇಳಿ ಒಂದು ನಿವೇಶನದ ಬದಲು ೬೦ಕ್ಕೂ ಹೆಚ್ಚಿನ ನಿವೇಶನಗಳನ್ನು ನೀಡಲಾಗಿದೆ. ಇದೇ ರೀತಿ ಫಲಾನುಭವಿಗಳು ಎಂದು ಹೇಳಿಕೊಂಡ ನೂರಾರು ಮಂದಿಗೆ ನಿಗದಿಗಿಂತ ಹೆಚ್ಚಿನ
ನಿವೇಶನಗಳನ್ನು ನೀಡಿರುವುದು ಸರಕಾರದ ಗಮನಕ್ಕೆ ಬಂದಿದೆ. ಅಷ್ಟೇ ಅಲ್ಲ.
ಕಳೆದ ಎರಡು ವರ್ಷಗಳಲ್ಲಿ ಸುಮಾರು ೩೦೦೦ಕ್ಕೂ ಹೆಚ್ಚಿನ ನಿವೇಶನಗಳನ್ನು ಭೂ ಮೌಲ್ಯ ಹೆಚ್ಚಾಗಿರುವ ಪ್ರತಿಷ್ಠಿತ ಬಡಾವಣೆಗಳಾದ ವಿಜಯನಗರ,
ದಟ್ಟಗಳ್ಳಿ, ಜೆ.ಪಿ.ನಗರ ಹಾಗೂ ಆರ್.ಟಿ.ನಗರ ಗಳಲ್ಲಿ ಹಂಚಿಕೆ ಮಾಡಲಾಗಿದ್ದು, ಇದರಿಂದ ಮುಡಾಗೆ ಕೋಟ್ಯಂತರ ರೂಪಾಯಿಗಳ ನಷ್ಟ ಉಂಟಾಗಿ ರುವ ಪತ್ತೆಯಾಗಿದೆ. ಅಚ್ಚರಿ ಎಂದರೆ ಈ ಹಗರಣದ ಹಿಂದೆ ವ್ಯವಸ್ಥಿತ ಜಾಲವೇ ಕೆಲಸ ಮಾಡುತ್ತಿದ್ದು, ನಿವೇಶನ ಹಂಚಿಕೆಗೆ ಬೇಕಾದ ದಾಖಲೆಗಳ ಸಿದ್ಧತೆ ಮತ್ತು ಅಗತ್ಯ ಪರಿಕರಗಳ ಪೂರೈಕೆ ಮಾಡುತ್ತಿವೆ. ಈ ಜಾಲ ಮುಡಾ ಸಿಬ್ಬಂದಿ ಜತೆ ಸಂಪರ್ಕದಲ್ಲಿದ್ದು ಹಂಚಿಕೆ ಕಾರ್ಯವನ್ನು ಅನಿರೀಕ್ಷಿತ ರೀತಿಯಲ್ಲಿ ಪೂರ್ಣಗೊಳಿಸುತ್ತಿವೆ ಎನ್ನಲಾಗುತ್ತಿದೆ. ಇದರೊಂದಿಗೆ ಮುಡಾ ಅಧಿಕಾರಿಗಳು ಸದ್ದಿಲ್ಲದೆ ಕೋಟ್ಯಂತರ ರೂಪಾಯಿಗಳ ಹಗರಣ ನಡೆಸಿದ್ದು, ಇದೀಗ ಸರಕಾರದ ಗಮನಕ್ಕೆಬಂದಿದೆ ಎಂದು ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಬೇಸರದ ಸಂಗತಿ ಎಂದರೆ, ಮೈಸೂರಿನಲ್ಲಿ ಕೇವಲ ೨೦-೩೦ ಅಳತೆಯ ಚಿಕ್ಕ ನಿವೇಶನವಾದರೂ ಸಿಕ್ಕಿದರೆ ಸಾಕು ಎಂದು ಸುಮಾರು ೪೦ ಸಾವಿರಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದು ಅವರು ಕಳೆದ ೧೫ ವರ್ಷಗಳಿಂದ ನಿವೇಶನ ಸಿಗುತ್ತದೆ ಎಂದು ಕನಸು ಕಾಣುತ್ತಿದ್ದಾರೆ. ಆದರೆ ಮುಡಾ ಅಧಿಕಾರಿಗಳು ಬಡ ಅರ್ಜಿದಾರರಿಗೆ ನೀಡಬೇಕಾದ ನಿವೇಶನಗಳನ್ನು ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ನಿಯಮಗಳನ್ನು ಉಲ್ಲಂಘಿಸಿ ಪ್ರಭಾವಿಗಳಿಗೆ ಮತ್ತು ಭೂ ದಳಿಗಳಿಗೆ ಹಂಚಿಕೆ ಮಾಡುತ್ತಿದ್ದಾರೆ ಎಂದು ಪಿ.ಎಸ್. ನಟರಾಜ್ ಎಂಬವರು ಸರಕಾರಕ್ಕೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಿ ದ್ದಾರೆ.
ಇದನ್ನಾಧರಿಸಿ ಮುಡಾ ಆಯುಕ್ತ ದಿನೇಶ್ ಕುಮಾರ್ ಅವರಿಗೆ ಸರಕಾರ ಈ ಹಿಂದೆಯೇ ನೋಟಿಸ್ ಕೂಡ ನೀಡಿದೆ. ಆದರೆ ನಿವೇಶನಗಳ ಅಕ್ರಮ ಹಂಚಿಕೆ ಮಾತ್ರ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ದೂರಲಾಗಿದೆ. ಮುಡಾ ಅಕ್ರಮಗಳ ಬಗ್ಗೆ ತನಿಖೆ ನಡೆಸುಂತೆ ಸರಕಾರ ತನಿಖಾಧಿಕಾರಿಗಳನ್ನೂ ಕಳುಹಿಸಿತ್ತು. ಆದರೆ ಮುಡಾ ಆಯುಕ್ತರು ತನಿಖಾ ಅಧಿಕಾರಿಗಳಿಗೆ ಕಡತಗಳನ್ನು ನೀಡದ ಕಾರಣ ತನಿಖೆ ಅರ್ಧಕ್ಕೆ ನಿಂತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಪರಿಹಾರ ಸೈಟ್ ಹಗರಣ?: ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ ನಿವೇಶನ ಹಂಚಿಕೆ ನಿಯಮಗಳ ಪ್ರಕಾರ, ಪ್ರಾಧಿಕಾರಗಳು ಬಡಾವಣೆಗಳ ನಿರ್ಮಾಣಕ್ಕೆ ರೈತರಿಂದ ಭೂಮಿ ಪಡೆದ ನಂತರ ನಿಗದಿತ ಪ್ರಮಾಣದಷ್ಟು ಪರಿಹಾರ ಸೈಟ್ ಹೆಸರಿನಲ್ಲಿ ಹೊಸ ದಂಧೆ, ಕೇಳಿದ್ದಕ್ಕಿಂತ ಹೆಚ್ಚು ನಿವೇಶನ ಗಳ ಹಂಚಿಕೆ, ತನಿಖೆಯೂ ಮೊಟಕು ಮೈಸೂರು ಮುಡಾದಲಿ
3000 ಸೈಟ್ ಹಂಚಿಕೆ ಹಗರಣ!
ಪರಿಹಾರದ ನಿವೇಶನಗಳನ್ನು ನೀಡಬೇಕಾಗುತ್ತದೆ. ಅದೇರೀತಿ ಮೈಸೂರಿನಲ್ಲಿ ಮಡಾ ದಿಂದಲೇ ಭೂ ಸ್ವಾಧೀನ ಮಾಡಿಕೊಂಡಿದ್ದರೆ, ಅಭಿವೃದ್ಧಿ ಪಡಿಸಿದ ಬಡಾವಣೆಯಲ್ಲಿ ರೈತರಿಗೆ ಶೇ.೫೦ರಷ್ಟು ಪರಿಹಾರದ ನಿವೇಶನಗಳನ್ನು ನೀಡಬೇಕು. ಒಂದೊಮ್ಮೆ ಆ ಬಡಾವಣೆಯಲ್ಲಿ ನಿವೇಶನ ನೀಡಲಾಗದಿದ್ದರೆ, ನಂತರ ಅಭಿವೃದ್ಧಿ ಯಾಗುವ ಬಡಾವಣೆಯಲ್ಲಿ ನೀಡಬೇಕು. ಹಾಗೆಯೇ ರೈತರೇ ಮುಂದಾಗಿ ಬಡಾವಣೆಗೆ ಭೂಮಿ ನೀಡಿದರೆ, ಪ್ರೋತ್ಸಾಹದಾಯಕವಾಗಿ
ಎಕರೆಗೆ ೩೦-೪೦ ಚ.ಮೀ. ಅಳತೆಯ ನಿವೇಶನ ನೀಡಬೇಕಾಗುತ್ತದೆ. ಇನ್ನು ಈಗಾಗಲೇ ಮುಡಾ ಬಡಾವಣೆಯಲ್ಲಿ ನಿವೇಶನ ಹೊಂದಿದ್ದವರು ಪಕ್ಕದ ಸಣ್ಣ ನಿವೇಶನ (ತನ್ನ ನಿವೇಶನದ ಕಾಲುಭಾಗಕ್ಕಿಂತ ಚಿಕ್ಕದಾಗಿದ್ದರೆ)ವನ್ನೂ ಖರೀದಿಸಬಹುದು. ಈ ಪ್ರಕಾರವಾಗಿ ನಿವೇಶ ನಗಳನ್ನು ಹಂಚಿಕೆ ಮಾಡಬೇಕಾ ದರೆ ಮುಡಾದ ಆಡಳಿತ ಮಂಡಳಿ (ಜಿಲ್ಲಾಧಿಕಾರಿ, ಎಸ್ಪಿ, ಮುಡಾ ಅಧ್ಯಕ್ಷ, ಆಯುಕ್ತ, ಕಾರ್ಯದರ್ಶಿ ಇತರ ಅಧಿಕಾರಿಗಳು, ಜನಪ್ರತಿನಿಧಿ ಗಳು) ಮುಂದೆ ಮಂಡಿಸಿ ಚರ್ಚಿಸಿ ನಿರ್ಣಯ ಮಾಡಬೇಕು.
ಅದನ್ನು ಸರಕಾರಕ್ಕೆ ಸಲ್ಲಿಸಿ ಅನುಮೋದನೆ ಪಡೆದು ನಂತರ ದಾಖಲೆಗಳನ್ನು ಪರಿಶೀಲಿಸಿ ಹಂಚಿಕೆ ಮಾಡಬೇಕು. ಆದರೆ ಮುಡಾದಲ್ಲಿ ಪರಿಹಾರವಾಗಿ ಒಂದು ನಿವೇಶನ ನೀಡುವ ಬದಲಿಗೆ ೫೦ಕ್ಕೂ ಹೆಚ್ಚು ನಿವೇಶನ ನೀಡಲಾಗಿದೆ. ಅದೇ ಬಡಾವಣೆ ಅಥವಾ ನಂತರ ಅಭಿವೃದ್ಧಿಪಡಿಸಿದ ಬಡಾವಣೆಗಳಲ್ಲಿ ಹಂಚಿಕೆ ಮಾಡುವ ಬದಲು ಪ್ರತಿಷ್ಠಿತ ಬಡಾವಣೆಗಳಲ್ಲಿ ನಿವೇಶನ ನೀಡಲಾಗಿದೆ. ಜತೆಗೆ ಚಿಕ್ಕ ನಿವೇಶನ ಹೆಸರಿನಲ್ಲಿ ೫೦-೮೦ ಚದರಡಿ ಅಳತೆಯ ವಿಶಾಲ
ನಿವೇಶನಗಳನ್ನೇ ಹಂಚಿಕೆ ಮಾಡಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆ ಮೂಲಗಳು ತಿಳಿಸಿವೆ.
ಏನಿದು ಹಂಚಿಕೆಯಾ…
ಮುಡಾಗೆ ಈ ಹಿಂದೆ ಜಮೀನುಗಳನ್ನು ನೀಡಿರುವಕುಟುಂಬದವರನ್ನು ಪತ್ತೆ ಮಾಡಲಾಗುತ್ತದೆ. ಆ ಕುಟುಂಬದ ಮುಖಂಡರನ್ನೇ ಹೊಸದಾಗಿ
ಅರ್ಜಿದಾರರನ್ನಾಗಿಸಿ ಅವರು ಮತ್ತೆ ಪರಿಹಾರದ ನಿವೇಶನ ಪಡೆಯುವಂತೆ ಮಾಡಲಾಗುತ್ತಿದೆ. ಅರ್ಜಿದಾರರಿಗೆ ಬೇಕಾದ ವಂಶವೃಕ್ಷ ಮತ್ತು ಇತರ ಪೂರಕ
ದಾಖಲೆಗಳನ್ನುಕಡಿಮೆ ಅವಧಿಯಲ್ಲಿ ಸಿಗುವಂತೆ ಮಾಡಲಾಗುತ್ತದೆ. ನಂತರ ಮುಡಾದಲ್ಲಿ ತ್ವರಿತವಾಗಿ ನಿವೇಶನ ಹಂಚಿಕೆಗೆ ಮಾಡಿಕೊಡಲಾಗುತ್ತಿದೆ
ಎನ್ನಲಾಗಿದೆ. ಉದಾಹರಣೆಗೆ ಹೀಗಾಗಿ ನೂರಾರು ಮಂದಿಗೆ ಸಾವಿರಾರು ನಿವೇಶನಗಳನ್ನು ಅಕ್ರಮವಾಗಿ ನೀಡಲಾಗಿದೆ ಎಂದು ಆರೋಪಿಸಲಾಗಿದೆ.
ಮೈಸೂರು ತಾಲೂಕಿನ ಮಾರಗೌಡನಹಳ್ಳಿಯ ವಿವಿಧ ಸರ್ವೇ ನಂಬರ್ಗಳಲ್ಲಿ ನಾಗರಾಜು ಎಂಬವರಿಗೆ ೩೦-೪೦ ಅಳತೆಯ ೯೦ ನಿವೇಶನಗಳನ್ನು
ನೀಡಲು ಅವಕಾಶವಿತ್ತು. ಆದರೆ ೧೨೦ ನಿವೇಶನಗಳನ್ನು ನೀಡಲಾಗಿದೆ. ಇದೇ ರೀತಿ ಹಿನಕಲ್ ನಲ್ಲಿ ಸರ್ವೇ ನಂಬರ್ ೨೧೧ರಲ್ಲಿ ಪಾಪಣ್ಣ ಅವರಿಗೆ ೩೦-೪೦ ಅಳತೆಯ ೩೬ ನಿವೇಶನಗಳನ್ನು ನೀಡುವ ಬದಲು ೬೦ ನಿವೇಶನಗಳನ್ನು ನೀಡಲಾಗಿದೆ. ಮುಖ್ಯವಾಗಿ ಪ್ರಾಧಿಕಾರ ಅಡಳಿತ ಮಂಡಳಿ ಮತ್ತು ಸರಕಾರದ ಅನುಮತಿ ಇಲ್ಲದೆ ಒಂದೇ ಒಂದು ನಿವೇಶನವನ್ನೂ ಆಯುಕ್ತರು ನೀಡುವಂತಿಲ್ಲ. ಆದರೆ ಆಯುಕ್ತರು ಯಾವುದೇ ಅನುಮತಿ ಪಡೆಯದೇ
ನೂರಾರು ಮಂದಿಗೆ ಅಕ್ರಮವಾಗಿ ನಿವೇಶನಗಳನ್ನು ಹಂಚಿಕೆ ಮಾಡಿರುವ ದಾಖಲೆಗಳು ಸದ್ಯ ಸರಕಾರದ ಕೈ ಸೇರಿದೆ ಎನ್ನಲಾಗಿದೆ.
*
ಮುಡಾ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿಲ್ಲ. ಆದರೆ ಹಂಚಿಕೆಯಾಗಿರುವ ನಿವೇಶನಗಳ ದಾಖಲೆಗಳ ನೈಜತೆ ಬಗ್ಗೆ ದೂರುಗಳು ಬಂದಿವೆ. ಹೀಗಾಗಿ ಭೂ ಸ್ವಾಧೀನಾಧಿಕಾರಿ ಪರಿಶೀಲನೆ ನಂತರ ನಿವೇಶನ ಬಿಡುಗಡೆ ಮಾಡುವಂತೆ ಸೂಚಿಸಿದ್ದೇನೆ.ಯಾವುದೇ ತಡೆಯಾಜ್ಞೆ ಇಲ್ಲ.
-ಮರಿಗೌಡ, ಮುಡಾ ಅಧ್ಯಕ್ಷ