ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ಹೊಸ ನೋಂದಣಿ ವ್ಯವಸ್ಥೆ ತೆರಿಗೆದಾರರಿಗೆ ತಲೆನೋವು
ತೆರಿಗೆ ಪಾವತಿಸದಿದ್ದರೆ ನೋಂದಣಿ ರದ್ದತಿ ಭಯ
ಜಿಎಸ್ಟಿ (ಸರಕು ಮತ್ತು ಸೇವಾ ತೆರಿಗೆ) ಪಾವತಿಯಲ್ಲಿ ದೇಶದ ಎರಡನೇ ಅತಿದೊಡ್ಡ ರಾಜ್ಯ ಎನಿಸಿರುವ ಕರ್ನಾಟಕ ದಲ್ಲಿ ಜಿಎಸ್ ಟಿ ಜಂಜಾಟ ಶುರುವಾಗಿದೆ !
ಸುಧಾರಣೆ ಹೆಸರಿನಲ್ಲಿ ಕೇಂದ್ರ ಸರಕಾರ ಆರಂಭಿಸಿರುವ ಹೊಸ ನಿಯಮದಿಂದ ಜಿಎಸ್ ಟಿ ಪಾವತಿ ಮತ್ತು ನೋಂದಣಿಯಲ್ಲಿ ಹೊಸ ಗೋಳು ಆರಂಭವಾಗಿದೆ. ಅದರಲ್ಲೂ ಜಿಎಸ್ ಟಿ ಹೊಸ ನೋಂದಣಿ ಮಾಡುವವರಿಗೆ ಅಗ್ನಿಪರೀಕ್ಷೆಗಳೇ ಎದುರಾಗಿವೆ.
ಇಷ್ಟೂ ದಿನ ಜಿಎಸ್ಟಿ ಪಾವತಿಸುವುದು ತಡವಾದರೆ ದಂಡ ಪಾವತಿಸದಿದ್ದರೆ ಸರಕಾರ ದಂಡ ವಿಧಿಸಲಾಗುತ್ತಿತ್ತು. ಆದರೆ ಈಗ ಜಿಎಸ್ಟಿ ಪಾವತಿಸಿದ್ದದರೆ ನೋಂದಣಿಯನ್ನೇ ರದ್ದುಗೊಳಿಸುತ್ತಿದೆ. ಇನ್ನು ಹೊಸ ಜಿಎಸ್ಟಿ ನೋಂದಣಿ ಮಾಡುವವರು ನೂರಾರು ಪರೀಕ್ಷೆ, ಪರಿಶೀಲನೆ , ಪ್ರಶ್ನೆಗಳಿಗೆ ಒಳಗಾಗಿ ನೋವು ಅನುಭವಿಸು ವಂತಾಗಿದೆ. ಅಂದರೆ, ಈ ಹೊಸ ತೆರಿಗೆದಾರರು ಜಿಎಸ್ ಟಿ ನೋಂದಣಿ ಮಾಡಬೇಕಾದರೆ ದಾಖಲೆಗಳ ಸಲ್ಲಿಸುವುದು, ಕಚೇರಿಗಳಿಗೆ ಅಲೆಯುವುದು ಮಾತ್ರವಲ್ಲ, ಕಣ್ಣು, ಮುಖ, ಬೆರಳಚ್ಚು ಸೇರಿದಂತೆ ಅನೇಕ ಪರೀಕ್ಷೆಗಳಿಗೆ ಒಳಗಾಗ ಬೇಕಾಗುತ್ತದೆ. ಅದೊಂದು ರೀತಿಯ ಇಎನ್ ಟಿ ತಜ್ಞ ವೈದ್ಯರ ಪರೀಕ್ಷೆಗೆ ಒಳಗಾಗುವಂತೆ ಆಗುತ್ತಿದೆ.
ಹೀಗಾಗಿ ಜಿಎಸ್ಟಿ ಹೊಸ ನೋಂದಣಿ ಅತ್ಯಂತ ಕಠಿಣವಾಗಿ ನಿತ್ಯ ಸಾವಿರಾರು ತೆರಿಗೆದಾರರು, ವರ್ತಕರು, ಸಣ್ಣ ಪುಟ್ಟ ವ್ಯಾಪಾರಿಗಳು ಕಚೇರಿಗಳಿಗೆ ಅಲೆ ಯುತ್ತಾ ಪರದಾಡುತ್ತಿದ್ದಾರೆ. ಈ ಬಗ್ಗೆ ಸಮಸ್ಯೆಗಳನ್ನು ತೋಡಿಕೊಳ್ಳಲು ತೆರಿಗೆದಾರರಿ ಅವಕಾಶವೇ ಬೆರಳೆಣಿಕೆಯಷ್ಟು ಸೇವಾ ಕೇಂದ್ರಗಳನ್ನ ಹೊರತು ಪಡಿಸಿ ಬೇರೆ ವ್ಯವಸ್ಥೆಯೇ ಇಲ್ಲ. ಹೀಗಾಗಿ ಜಿಎಸ್ ಟಿ ನೋಂದಣಿಯಾದವರು ಪಾವತಿಗಾಗಿ ಪರದಾಡುತ್ತಿದ್ದರೆ, ಹೊಸ ತೆರಿಗೆದಾರರು ನೋಂದಣಿ ಹೆಸರಿನಲ್ಲಿ ನರಳುತ್ತಿದ್ದಾರೆ ಎಂದು ವರ್ತಕರ ಸಂಘದವರು ಹೇಳಿದ್ದಾರೆ.
ತೆರಿಗೆದಾರರು ತೊಂದರೆ ನೂರಾರು: ವರ್ಷಕ್ಕೆ ಸುಮಾರು 80 ಸಾವಿರ ಕೋಟಿ ರು.ಗಳ ಜಿಎಸ್ಟಿ ಸಂಗ್ರಹಿಸು ತ್ತಿರುವ ಕರ್ನಾಟಕ ದೇಶದ ಎರಡನೇ ಸ್ಥಾನದಲ್ಲಿದೆ. ಅದರಲ್ಲೂ ಕಳೆದ ಆರು ತಿಂಗಳ ಅವಧಿಯಲ್ಲಿ ಸುಮಾರು 37 ಸಾವಿರ ಕೋಟಿ ರು. ಗಳಿಗೂ ಹೆಚ್ಚಿನ ಜಿಎಸ್ಟಿ ಸಂಗ್ರಹವಾಗಿದೆ. ಇದಕ್ಕೆ ಕಾಣಿಕೆ ಸಲ್ಲಿಸುತ್ತಿರುವ 9 ಲಕ್ಷಕ್ಕೂ ಅಧಿಕ ದೊಡ್ಡ ಪ್ರಮಾಣದ ತೆರಿಗೆದಾರರಿದ್ದು, 1.08 ಲಕ್ಷಕ್ಕೂ ಹೆಚ್ಚು ಸಣ್ಣ ತೆರಿಗೆದಾರರು (ಶೇ.2ರಷ್ಟು ತೆರಿಗೆ ಪಾವತಿಸುವ
ರಾಜೀ ತೆರಿಗೆದಾರರು ) ಇದ್ದಾರೆ.
ಆದರೆ ಈ ತೆರಿಗೆದಾರರಿಗೆ ದೊರಕುವ ಸೇವಾ, ಸೌಲಭ್ಯಗಳು ಮಾತ್ರ ತೀರಾ ಕನಿಷ್ಠ. ತೀರಾ ತೊಂದರೆಯಾದವರ ಸಮಸ್ಯೆ ಕೇಳಲು ಕೇಂದ್ರ ಸರಕಾರ ಬರೀ 6 ಸೇವಾ ಕೇಂದ್ರಗಳನ್ನು ಸ್ಥಾಪಿಸಿ ಕೈತೊಳೆದುಕೊಂಡಿದೆ. ಆದರಿಂದ ಇವುಗಳಿಂದ ಉಪಯೋಗವಾಗುತ್ತಿಲ್ಲ ಎಂದು ತೆರಿಗೆದಾರರು ಹೇಳುತ್ತಿದ್ದಾರೆ.
ಏನಿದು ಜಿಎಸ್ಟಿ ಜಂಜಾಟ !
ಈ ಹಿಂದೆ ಹೊಸ ಜಿಎಸ್ಟಿಗಾಗಿ ದಾಖಲೆಗಳ ಸಹಿತ ಅರ್ಜಿ ಸಲ್ಲಿಸಿದರೆ, ಅಧಿಕಾರಿಗಳು ದಾಖಲೆ ಪರಿಶೀಲಿಸಿ ಒಂದೇ ವಾರದಲ್ಲಿ ನೋಂದಣಿ ಸಂಖ್ಯೆ ನೀಡುತ್ತಿದ್ದರು. ಆದರೆ ಈಗಿನ ಹೊಸ (ಅ) ವ್ಯವಸ್ಥೆಯಲ್ಲಿ ಹೊಸ ಜಿಎಸ್ ಟಿಗಾಗಿ ಅರ್ಜಿ ಸಲ್ಲಿಸಿದರೆ, ವಾರವಾದರೂ ಮಾಹಿತಿ ಸಿಗುವುದಿಲ್ಲ. ನಂತರ ವೆಬ್ ಸೈಟ್ ನಲ್ಲಿ ದೂರು ದಾಖಲಿಸಿದರೆ,
ಕಚೇರಿಗೆ ಬರುವಂತೆ ಹೇಳಲಾಗುತ್ತಿದೆ. ಆದರೆ ಅದರ ಬಗ್ಗೆ ಸ್ಪಷ್ಟ ಮಾಹಿತಿ ಇರುವುದಿಲ್ಲ. ಆನಂತರ ಕಚೇರಿಗೆ ಹೋದರೆ, ಅಧಿಕಾರಿಗಳು ಬಯೋ ಮೆಟ್ರಿಕ್, ಕಣ್ಣು ಸ್ಕಾನಿಂಗ, ಮುಖದ ಚಹರೆ ಫೋಟೋ ಪಡೆಯುತ್ತಾರೆ.
ನಂತರ ಎಲ್ಲಾ ಮೂಲ ದಾಖಲೆಗಳನ್ನು ಪಡೆದು ನಂತರ ತಿಳಿಸುತ್ತೇವೆ ಎನ್ನುತ್ತಾರೆ. ಆದರೆ 15 ದಿನಗಳೇ ಕಳೆದರೂ ಮಾಹಿತಿ ಸಿಗುವುದಿಲ್ಲ. ಬದಲಾಗಿ ಜಿಎಸ್ ಟಿ ವೆಬ್ ಸೈಟ್ ನಲ್ಲಿ ನಿಮ್ಮ ಅರ್ಜಿ ಪ್ರೊಸೆಸ್ ಆಗುತ್ತಿದೆ ಎಂಬ ಮಾಹಿತಿ
ತೋರಿಸುತ್ತದೆ. ನಂತರ ಅಧಿಕಾರಿಗಳು ವ್ಯಾಪಾರ ಸ್ಥಳ (ಅಂಗಡಿ)ಕ್ಕೆ ಭೇಟಿ ನೀಡುವುದಾಗಿ ಹೇಳುತ್ತಾರೆ. ಆದರೆ ಯಾರೂ ಬರುವುದಿಲ್ಲ. ಬದಲಾಗಿ ಅರ್ಜಿದಾರರನ್ನು ಕರೆಸಿ ಕೊಂಡು ಮತ್ತಷ್ಟು ಮಾಹಿತಿ ಕೇಳುತ್ತಾರೆ. ಹೀಗಾಗಿ ಜಿಎಸ್ ಟಿ ನೋಂದಣಿಯನ್ನು ಅಽಕಾರಿಗಳು ಸುಲಭ ವಾಗಿ ಮಾಡುವುದಿಲ್ಲ. ಅರ್ಜಿದಾರರು ಬಿಡುವುದಿಲ್ಲ.
ಇದರಿಂದ ಜಿಎಸ್ ಟಿ ಜಟಾಪಟಿ ಶುರುವಾಗಿದೆ ಎನ್ನುತ್ತಾರೆ ಸರಕಾರದ ಜಿಎಸ್ ಟಿ ಸಲಹಾ ಸಮಿತಿ ಸದಸ್ಯರು.
*
ಕೇಂದ್ರ ಸರಕಾರ ಹೊಸ ನಿಯಮ ಜಾರಿಗೊಳಿಸಿರುವುದರಿಂದ ಜಿಎಸ್ ಟಿ ಪಡೆಯುವವರು ಬಯೋಮೆಟ್ರಿಕ್ ಸೇರಿದಂತೆ ವಿವಿಧ ಪರೀಕ್ಷೆಗಳನ್ನು ಎದುರಿಸಬೇಕು. ಇದರಿಂದ ಸಮಸ್ಯೆಗಳಿದ್ದರೆ ಗಮನಕ್ಕೆ ತಂದರೆ ಪರಿಶೀಲಿಸು ತ್ತೇವೆ.
-ಕಮಲಾಕರ್ ಸಾರೆರ್ಕ, ಸಹಾಯಕ ನಿಯಂತ್ರಕರು ( ಬಯೋಮೆಟ್ರಿಕ್ ನೋಂದಣಿ )
ಇದನ್ನೂ ಓದಿ: MUDA : ಮುಡಾ ಪ್ರಕರಣದಲ್ಲಿ ಗೆದ್ದು ಸೋತ ಬಿಜೆಪಿ