ಮಹಾನಗರ ಪಾಲಿಕೆಯಲ್ಲಿ ಶೇ. 40ಕ್ಕೂ ಹೆಚ್ಚು ಹುದ್ದೆಗಳು ಖಾಲಿ
ಮಾನವ ಸಂಪನ್ಮೂಲ ಕೊರತೆಯಿಂದ ಎನ್ಜಿಒ ಮೊರೆ ಹೋಗುತ್ತಿರುವ ಪಾಲಿಕೆ
ಅಪರ್ಣಾ ಎ.ಎಸ್ ಬೆಂಗಳೂರು
ಚಿಲುಮೆ ಸಂಸ್ಥೆ ನಡೆಸಿದೆ ಎನ್ನಲಾದ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿನ ಅಕ್ರಮ ರಾಷ್ಟ್ರಮಟ್ಟದಲ್ಲಿ ಭಾರಿ ಸದ್ದು ಮಾಡಿರುವ ಬೆನ್ನ, ಬಿಬಿಎಂಪಿಯ ನಡೆಯುತ್ತಿರುವುದೇ ಎನ್ ಜಿಓಗಳ ಸಹಾಯದೊಂದಿಗೆ ಎನ್ನುವ ಸುದ್ದಿ ಹೊರಬಂದಿದೆ.
ಪಾಲಿಕೆಯಲ್ಲಿ ಉನ್ನತ್ತ ಹುದ್ದೆಯಿಂದ ಹಿಡಿದು ಡಿ ಗ್ರೂಪ್ ನೌಕರಿಯ ತನಕ ಭಾರಿ ಪ್ರಮಾಣದಲ್ಲಿ ಹುದ್ದೆಗಳು ಖಾಲಿ ಇದ್ದು, ಒಟ್ಟು ೧೨೯೪೬ ಹುದ್ದೆಗಳ ಪೈಕಿ ಐದು ಸಾವಿರ ಕ್ಕೂ ಹೆಚ್ಚು ಹುದ್ದೆಗಳು ಭರ್ತಿಯಾಗದೆ ಉಳಿದಿದೆ. ಹೀಗಾಗಿ ವಿವಿಧ ಕೆಲಸಗಳಿಗೆ ಎನ್ಜಿಓ ಗಳ ನೆರವು ಪಡೆಯುವುದು ಅನಿವಾರ್ಯವಾಗಿದೆ.
ಶಿಕ್ಷಣ, ಆರೋಗ್ಯ, ಅರಣ್ಯ ಸೇರಿದಂತೆ ವಿವಿಧ ವಲಯಗಳಲ್ಲಿನ ಕಾರ್ಯಕ್ಕೆ ಬಿಬಿಎಂಪಿ ಸ್ವಯಂ ಸೇವಾ ಸಂಘಟನೆಗಳ ನೆರವನ್ನು ಪಡೆದುಕೊಳ್ಳುತ್ತಿದೆ. ಕೆಲ ಸಂಸ್ಥೆಗಳು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿವೆ. ಆದರೆ, ಕೆಲ ಸಂಸ್ಥೆಗಳು ಬಿಬಿಎಂಪಿ ಯೊಂದಿಗೆ ಮಾಡಿಕೊಂಡಿರುವ ಒಪ್ಪಂದವನ್ನು ದುರುಪಯೋಗ ಪಡಿಸಿಕೊಳ್ಳುವ ಅತಂಕ ಇದೀಗ ಶುರುವಾಗಿದೆ.
ಚಿಲುಮೆ ಪ್ರಕರಣದ ಬಳಿಕ ಹೆಚ್ಚಾದ ಆತಂಕ: ಇತ್ತೀಚಿಗೆ ಭಾರಿ ವಿವಾದ ಸೃಷ್ಟಿಸಿರುವ ಮತದಾರರ ಪಟ್ಟಿ ಪರಿಷ್ಕರಣೆ ಅಕ್ರಮದ ಬಳಿಕ ಈ ಆತಂಕ ಹೆಚ್ಚಾಗಿದೆ. ಎನ್ಜಿಓಗಳು ಈ ರೀತಿ ಅಧಿಕಾರ ದುರುಪಯೋಗ ಪಡಿಸಿಕೊಂಡರೆ ಏನು ಮಾಡಲು
ಸಾಧ್ಯ ಎನ್ನುವ ಮಾತುಗಳು ಕೇಳಿಬರುತ್ತಿದೆ. ಆದರೆ, ಅಧಿಕಾರಿಗಳು ಮಾತ್ರ, ಭಾರೀ ಪ್ರಮಾಣದಲ್ಲಿ ಹುದ್ದೆ ಖಾಲಿ ಇರುವುದರಿಂದ ಏನು ಮಾಡಲು ಸಾಧ್ಯ ಎನ್ನುವ ಪ್ರಶ್ನೆ ಎತ್ತಿದ್ದಾರೆ.
ಮೂಲಗಳ ಪ್ರಕಾರ ೨೦೨೧-೨೨ನೇ ಸಾಲಿನಲ್ಲಿ ಬಿಬಿಎಂಪಿ ಒಟ್ಟಾಗಿ ೮,೭೯೯ ಕೋಟಿ ರು. ವಾರ್ಷಿಕ ವೇತನವನ್ನು ನೀಡಬೇಕು. ಇದು ಎಲ್ಲರ ವೇತವನ್ನು ನೀದಿಡರೆ ಆಗುವ ಮೊತ್ತ. ಆದರೆ ಕಳೆದ ವರ್ಷ ಕೇವಲ ೧,೧೨೭ ಕೋಟಿ ರು.ಗಳನ್ನು ಮಾತ್ರ ವೇತನದ ರೂಪದಲ್ಲಿ ತನ್ನ ಸಿಬ್ಬಂದಿಗೆ ನೀಡಿದೆ. ಒಟ್ಟು ೧೨೯೪೬ ಹುzಗಳ ಪೈಕಿ ೫೫೨೩ ಹುದ್ದೆಗಳು ಖಾಲಿಯಿದ್ದು, ೭೪೨೩ ಹುzಗಳು ಮಾತ್ರ ಭರ್ತಿಯಾಗಿವೆ. ಇದರಲ್ಲಿ ಎ ದರ್ಜೆಯ ೨೧೪, ಬಿ ದರ್ಜೆಯ ೨೦೩, ಸಿ ದರ್ಜೆಯ ೧೪೧೮ ಹಾಗೂ ಡಿ ದರ್ಜೆಯ ೩೬೮೮ ಹುದ್ದೆಗಳು ಖಾಲಿಯಿದೆ ಎಂದು ತಿಳಿದುಬಂದಿದೆ.
ಯಾವ ಕ್ಷೇತ್ರದಲ್ಲಿ ಎನ್ಜಿಓ ಬಳಕೆ
ಸಿಬ್ಬಂದಿ ಕೊರತೆಯಿಂದಾಗಿ ಪಾಲಿಕೆಯು ಸದ್ಯ ಅನೇಕ ವಿಭಾಗಗಳಲ್ಲಿರುವ ಖಾಲಿ ಹುದ್ದೆಗಳನ್ನು ಎನ್ಜಿಓ ಮೂಲಕ ಭರ್ತಿ ಮಾಡುತ್ತಿದ್ದು, ಆರೋಗ್ಯ, ಶಿಕ್ಷಣ, ಘನತ್ಯಾಜ್ಯ ನಿರ್ವಹಣೆ,ಪರಿಸರ ಸಂರಕ್ಷಣೆ, ಜಾಗೃತಿ ಕಾರ್ಯಕ್ರಮ ಸೇರಿದಂತೆ ಹಲವು
ಕಾರ್ಯಕ್ರಮಗಳಲ್ಲಿ ಎನ್ಜಿಓಗಳನ್ನು ಬಳಸಿಕೊಳ್ಳಲಾಗುತ್ತಿದೆ. ಇದರ ಜತೆಗೆ ಕಾರ್ಯಕ್ರಮ ನಿರ್ವಹಣೆಯ ಜವಾಬ್ದಾರಿಯೂ ಇವರದ್ದಾಗಿದೆ.
*
ಸ್ವಯಂ ಸೇವಾ ಸಂಸ್ಥೆಗಳು ಬಿಬಿಎಂಪಿಗೆ ಪೂರಕವಾಗಿ ಕಾರ್ಯನಿರ್ವಹಿಸಬೇಕೇ ಹೊರತು, ಬಿಬಿಎಂಪಿಯನ್ನು ಬದಿಗೊತ್ತಿ ಕೆಲಸ ಮಾಡಬಾರದು. ತಮ್ಮ ಅಗತ್ಯವಿರುವಲ್ಲಿ ಸೇವೆ ಒದಗಿಸುವ ಮೂಲಕ ಸಹಕಾರ ನೀಡಬೇಕು ಹಾಗೂ ತರಬೇತಿ ನೀಡುವ ಕಾರ್ಯವನ್ನು ಮಾಡಬೇಕು.
-ಅರ್ಚನಾ ತ್ರಿಪಾಠಿ, ಸಿಇಒ, ಸಾಹಸ್ ಸಂಸ್ಥೆ