ದೇವೇಂದ್ರ ಜಾಡಿ ಕಲಬುರಗಿ
ರಸ್ತೆಗಳಿಗಿಲ್ಲ ಬೀದಿ ದೀಪ, ಕಗ್ಗತ್ತಲಲ್ಲೇ ಜನರ ಓಡಾಟ
ರಾತ್ರಿ ಸಂಚಾರಕ್ಕೆ ಕಳ್ಳಕಾಕರ ಭಯ, ಅ<ಕಾರಿಗಳ ನಿರ್ಲಕ್ಷ್ಯ
ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳುವಂತೆ ಕಲಬುರಗಿ ದಿನೇದಿನೇ ಬೃಹತ್ತಾಗಿ ಬೆಳೆಯುತ್ತಿದೆ ನಿಜ. ಆದರೆ, ಬೆಳೆದು ಅಭಿವೃದ್ಧಿ ಹೊಂದಿ ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಅತ್ಯುತ್ತಮ ಸಿಟಿ ಎನ್ನುವ ಹೆಗ್ಗಳಿಕೆ ಪಡೆಯಲು ಬೇಕಾದ ಮೂಲಭೂತ ಸೌಕರ್ಯಗಳಿಂದ ಕಲಬುರಗಿ ನಗರ ವಂಚಿತವಾಗಿದಂತೂ ಸುಳ್ಳಲ್ಲ. ಹೀಗಿದ್ದಾಗ ಜಿಲ್ಲೆ ಅಭಿವೃದ್ಧಿಯಾದರು ಹೀಗಾದೀತು ಎನ್ನುವುದು ರ್ಶರೀಸಾಮಾನ್ಯನ ಪ್ರಶ್ನೆಯಾಗಿದೆ.
ಹೌದು, ನಗರದ ಬಹುತೇಕ ’ಸ್ಟ್ರೀಟ್ಸ್ ಗಳಲ್ಲಿ ಲೈಟ್ಸ್’ ಇಲ್ಲದೇ ಇರುವುದರಿಂದ ಕಗ್ಗತ್ತಲಲ್ಲೇ ಜನರು ಭಯದ ವಾತಾವರಣದ ನಡುವೆ ಓಡಾಟ ನಡೆಸಿದ್ದಾರೆ. ತಡರಾತ್ರಿ ಕೆಲಸ ಮುಗಿಸಿ ಮನೆಗೆ ಬರುವಾಗ, ನಸುಕಿನ ಜಾವ ಕೆಲಸಕ್ಕೆ ಬೇಗ ತೆರಳುವ ಸಾರ್ವಜನಿಕರಿಗೆ ಬೀದಿದೀಪಗಳ ಬೆಳಕು ಕಣ್ಮರೆಯಾಗಿದೆ.
ಲೈಟ್ಸ್ ಇಲ್ಲದ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ಕಳ್ಳಕಾಕಾರ ಕಾಟ ಅಧಿಕವಾಗಿದ್ದು, ಇಂತಹ ರಸ್ತೆಗಳ ಮೂಲಕ ಸಂಚಾರ ಮಾಡುವುದೇ ದುಸ್ತರವಾಗಿದೆ. ನಗರದ ರಾಮ ಮಂದಿರ್ ವೃತ್ತದಿಂದ ಶಹಾಬಾದ್ ಕ್ರಾಸ್ ಹಾಗೂ ಹೈಕೋರ್ಟ್ ರಸ್ತೆಯ ಕಡೆಗೆ ತೆರಳುವ ಎರಡು ಬದಿಯ ರಿಂಗ್ ರಸ್ತೆಯಲ್ಲಿ ಬೀದಿ ದೀಪ ಮಾಯವಾಗಿವೆ. ಅಲ್ಲದೇ,
ಹೊಸ ಜೇವರ್ಗಿ ರಸ್ತೆ, ಹಳೆಯ ಜೇವರ್ಗಿ ರಸ್ತೆ ಪಿ ಅಂಡ್ ಟಿ ಕಾಲೋನಿ, ಸರ್ದಾರ್ ವಲ್ಲಭ ಬಾಯ್ ವೃತ್ತದಿಂದ ರಾಷ್ಟ್ರಪತಿ ವೃತ್ತಕ್ಕೆ ಸಂಪರ್ಕಿಸುವ ರಸ್ತೆ, ಜಿಲ್ಲಾ ನ್ಯಾಯಾಲಯಕ್ಕೆ ಹೋಗುವ ರಸ್ತೆ ಹಾಗೂ ರಾಮ ಮಂದಿರ ವೃತ್ತದಿಂದ ಜೇವರ್ಗಿಗೆ ಹೋಗುವ ರಸ್ತೆಯಲ್ಲಿನ ಕೋಟನೋರ್ ಡಿ ಗ್ರಾಮದ ರಸ್ತೆ ಸೇರಿ ಬಹುತೇಕ ರಸ್ತೆಗಳಲ್ಲಿ
ಬೀದಿ ದೀಪಗಳೇ ಇಲ್ಲದಿರುವುದು ಕಲಬುರಗಿ ಮಹಾನಗರ ಪಾಲಿಕೆ ಹಾಗೂ ಹೆದ್ದಾರಿ ಪ್ರಾಧಿಕಾರಗಳ ಅಽಕಾರಗಳ ದಿವ್ಯ ನಿರ್ಲಕ್ಷ್ಯವೆಂದರು ತಪ್ಪಾಗುವುದಿಲ್ಲ.
ರಿಂಗ್ ರಸ್ತೆ ಸೇರಿ ಕೆಲ ಪ್ರಮುಖ ರಸ್ತೆಗಳಲ್ಲಿ ಆಗಾಗ ಕೊಲೆ, ದರೋಡೆ, ಬೇದರಿಸಿ ಕಳ್ಳತನ ಆಗಿರುವ ಘಟನೆಗಳು ಅನೇಕ ಬಾರಿ ಬೆಳಕಿಗೆ ಬಂದಿವೆ. ಮನೆಯಿಂದ ಬೇಗ ಕೆಲಸಕ್ಕೆ ಹೋಗುವವರು, ತಡವಾಗಿ ಮನೆಗೆ ಬರುವವರು, ತಡರಾತ್ರಿ ರೈಲು ಹಾಗೂ ಬಸ್ ನಿಲ್ದಾಣದಿಂದ ಮನೆಗಳಿಗೆ ತೆರಳುವ ಜನಸಾಮಾನ್ಯರು ಭಯದಲ್ಲೇ ಓಡಾಟ ಮಾಡುತ್ತಿದ್ದಾರೆ. ಹೀಗಿದ್ದರು ಅಧಿಕಾರಗಳು ಇಲ್ಲಿ ’ಸ್ಟ್ರೀಟ್ಸ್ ಲೈಟ್ಸ್’ ಅಳವಡಿಸಿದೇ ಸರಿಯಾದ ಬೆಳಕಿನ ವ್ಯವಸ್ಥೆ ಮಾಡುವಲ್ಲಿ ಸಂಪೂರ್ಣವಾಗಿ ವಿ-ಲವಾಗಿದ್ದಾರೆ ಎಂದು ಜನರು ಹಿಡಿಶಾಪ ಹಾಕುತ್ತಿದ್ದಾರೆ.
ಲೈಟ್ಸ್ ಇಲ್ಲದ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ಕಳ್ಳಕಾಕಾರ ಕಾಟ ಅಧಿಕವಾಗಿದ್ದು, ಇಂತಹ ರಸ್ತೆಗಳ ಮೂಲಕ ಸಂಚಾರ ಮಾಡುವುದೇ ದುಸ್ತರವಾಗಿದೆ. ನಗರದ ರಾಮ ಮಂದಿರ್ ವೃತ್ತದಿಂದ ಶಹಾಬಾದ್ ಕ್ರಾಸ್ ಹಾಗೂ ಹೈಕೋರ್ಟ್ ರಸ್ತೆಯ ಕಡೆಗೆ ತೆರಳುವ ಎರಡು ಬದಿಯ ರಿಂಗ್ ರಸ್ತೆಯಲ್ಲಿ ಬೀದಿ ದೀಪ ಮಾಯವಾಗಿವೆ. ಅಲ್ಲದೇ,
ಹೊಸ ಜೇವರ್ಗಿ ರಸ್ತೆ, ಹಳೆಯ ಜೇವರ್ಗಿ ರಸ್ತೆ ಪಿ ಅಂಡ್ ಟಿ ಕಾಲೋನಿ, ಸರ್ದಾರ್ ವಲ್ಲಭ ಬಾಯ್ ವೃತ್ತದಿಂದ ರಾಷ್ಟ್ರಪತಿ ವೃತ್ತಕ್ಕೆ ಸಂಪರ್ಕಿಸುವ ರಸ್ತೆ, ಜಿಲ್ಲಾ ನ್ಯಾಯಾಲಯಕ್ಕೆ ಹೋಗುವ ರಸ್ತೆ ಹಾಗೂ ರಾಮ ಮಂದಿರ ವೃತ್ತದಿಂದ ಜೇವರ್ಗಿಗೆ ಹೋಗುವ ರಸ್ತೆಯಲ್ಲಿನ ಕೋಟನೋರ್ ಡಿ ಗ್ರಾಮದ ರಸ್ತೆ ಸೇರಿ ಬಹುತೇಕ ರಸ್ತೆಗಳಲ್ಲಿ
ಬೀದಿ ದೀಪಗಳೇ ಇಲ್ಲದಿರುವುದು ಕಲಬುರಗಿ ಮಹಾನಗರ ಪಾಲಿಕೆ ಹಾಗೂ ಹೆದ್ದಾರಿ ಪ್ರಾಧಿಕಾರಗಳ ಅಧಿಕಾರಗಳ ದಿವ್ಯ ನಿರ್ಲಕ್ಷ್ಯವೆಂದರು ತಪ್ಪಾಗುವುದಿಲ್ಲ.
ರಿಂಗ್ ರಸ್ತೆ ಸೇರಿ ಕೆಲ ಪ್ರಮುಖ ರಸ್ತೆಗಳಲ್ಲಿ ಆಗಾಗ ಕೊಲೆ, ದರೋಡೆ, ಬೇದರಿಸಿ ಕಳ್ಳತನ ಆಗಿರುವ ಘಟನೆಗಳು ಅನೇಕ ಬಾರಿ ಬೆಳಕಿಗೆ ಬಂದಿವೆ. ಮನೆಯಿಂದ ಬೇಗ ಕೆಲಸಕ್ಕೆ ಹೋಗುವವರು, ತಡವಾಗಿ ಮನೆಗೆ ಬರುವವರು, ತಡರಾತ್ರಿ ರೈಲು ಹಾಗೂ ಬಸ್ ನಿಲ್ದಾಣದಿಂದ ಮನೆಗಳಿಗೆ ತೆರಳುವ ಜನಸಾಮಾನ್ಯರು ಭಯದಲ್ಲೇ ಓಡಾಟ ಮಾಡುತ್ತಿದ್ದಾರೆ. ಹೀಗಿದ್ದರು ಅಧಿಕಾರಗಳು ಇಲ್ಲಿ ’ಸ್ಟ್ರೀಟ್ಸ್ ಲೈಟ್ಸ್’ ಅಳವಡಿಸಿದೇ ರಿಯಾದ ಬೆಳಕಿನ ವ್ಯವಸ್ಥೆ ಮಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ ಎಂದು ಜನರು ಹಿಡಿಶಾಪ ಹಾಕುತ್ತಿದ್ದಾರೆ.
ಕತ್ತಲಲ್ಲಿ ಹೈಕೋರ್ಟ್ ಮುಂಭಾಗ
ನಗರದ ರಿಂಗ್ ರಸ್ತೆಯಲ್ಲಿರುವ ಕಲಬುರಗಿ ಹೈಕೋರ್ಟ್ ವಿಭಾಗೀಯ ಪೀಠದ ಎದುರುಗಡೆಯೇ ಕತ್ತಲು ಆವರಿಸಿದೆ.
ಇಲ್ಲಿನ ಕಂಬಗಳಿಗೆ ಲೈಟ್ ಗಳೇ ಇಲ್ಲ. ಜತೆಗೆ ಐಟಿ ಪಾರ್ಕ್ ನಲ್ಲಿ ಕೆಲಸ ಮುಗಿಸಿ ಮನೆಗೆ ಹೋಗುವ ಮಹಿಳಾ ಉದ್ಯೋಗಿಗಳು ಉಸಿರು ಬಿಗಿಹಿಡಿದು ಮನೆಗಳಿಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ, ಈ ರಸ್ತೆಯಲ್ಲಿ
ಬಾರಿ ವಾಹನಗಳು ಎರ್ರಾಬಿರ್ರಿ ಸಂಚಾರ ಮಾಡುತ್ತವೆ. ಸ್ವಲ್ಪ ಆಯಾ ತಪ್ಪಿದರು ಅಪಾಯ ಕಟ್ಟಿಟ್ಟ ಬುತ್ತಿ.
*
ವಿಶ್ವವಾಣಿ ರಿಯಾಲಿಟಿ ಚೆಕ್
ನಗರದ ಬಹುತೇಕ ರಸ್ತೆಗಳಲ್ಲಿ ಬೀದಿ ದೀಪಗಳು ಇಲ್ಲದೇ ಇರುವುದರ ಬಗ್ಗೆ ಕೆಲ ವ್ಯಕ್ತಿಗಳು ’ವಿಶ್ವವಾಣಿ’ಗೆ ತಿಳಿಸಿದರು. ಈ ಬಗ್ಗೆ ಖುದ್ದು ವಿಶ್ವವಾಣಿ ನಸುಕಿನ ಜಾವ ಹಾಗೂ ಸಾಯಂಕಾಲ ರಿಯಾಲಿಟಿ ಚೆಕ್ ಗೆ ಮುಂದಾದಾಗ, ಆಲ್ಮೋಸ್ಟ್ ಜನನಿಬಿಡ ಪ್ರದೇಶಗಳಾದ ತಿಮ್ಮಾಪುರ ವೃತ್ತ, ಸಂತೋಷ್ ಕಾಲೋನಿ, ಪಿ ಅಂಡ್ ಟಿ ಕಾಲೋನಿ, ರಿಂಗ್ ರಸ್ತೆ ಸೇರಿ ಪ್ರಮುಖ ರಸ್ತೆಗಳಲ್ಲಿ ಲೈಟ್ಸ್ ಇಲ್ಲದೇ ಇರುವ ಸ್ಟ್ರೀಟ್ಸ್ ಗಳು ಕಂಡುಬಂದಿವೆ. ಆದರಿಂದ ಸಂಬಂಧಪಟ್ಟ ಅಧಿಕಾರಿ ಗಳು ಕೂಡಲೇ ಮುತುವರ್ಜಿ ವಹಿಸಿ ಬೀದಿ ದೀಪಗಳ ಅಳವಡಿಕೆ ಮುಂದಾಗಬೇಕು
ಕಣ್ಣಿದ್ದು ಕುರುಡಾದ ಪಾಲಿಕೆ ಅಧಿಕಾರಿಗಳು
ನಿತ್ಯ ನಗರ ಸ್ವಚ್ಛಗೊಳಿಸುವ ಮಹಾನಗರ ಪಾಲಿಕೆಯ ಸಿಬ್ಬಂದಿ ನಸುಕಿನ ಜಾವದಿಂದಲೇ ಸ್ವಚ್ಛತೆ ಕಾರ್ಯ ಆರಂಭಿಸುತ್ತಾರೆ. ಸಿಬ್ಬಂದಿಗೆ ಎಲ್ಲೆಲ್ಲಿ ಸ್ವಚ್ಛಗೊಳಿಸಬೇಕೆಂದು ಹೇಳಲು ಆಗಮಿಸುವ ಪಾಲಿಕೆ ಅಽಕಾರಿಗಳ ಕಣ್ಣಿಗೆ
ಬೀದಿ ದೀಪಗಳು ಇಲ್ಲದೇ ಇರುವುದು ಕಂಡರು ಸಹ ಕಾಣದಂತೆ ವರ್ತಿಸುತ್ತಾರೆ. ಕಸಗುಡಿಸುವ ಮಹಿಳೆಯರು ಸಹ ಕತ್ತಲಲ್ಲೇ ಕೆಲಸ ಮಾಡುತ್ತಾರೆ. ’ಅಧಿಕಾರಿಗಳಿಗೆ ಕಂಬಗಳಿಗೆ ಲೈಟ್ ಹಾಕಿ ಬೆಳಕು ಕೊಟ್ಟು ಜನರಿಗೆ ಅನುಕೂಲ ಮಾಡಿಕೊಡಬೇಕು ಎನ್ನುವ ಉದ್ದೇಶವೇ ಇಲ್ಲ’ ಎಂದು ಹಾಲಿನ ವ್ಯಾಪಾರಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
*
ನಗರದ ಕೆಲ ರಸ್ತೆಗಳಲ್ಲಿ ಬೀದಿ ದೀಪಗಳು ಇಲ್ಲದಿರುವುದು, ಜನರ ಓಡಾಟಕ್ಕೆ ಅಡಚಣೆಯಾಗುತ್ತಿದೆ. ಹೈಕೋರ್ಟ್ ನಿಂದ ರಾಮ ಮಂದಿರಕ್ಕೆ ಹೋಗುವ ರಿಂಗ್ ರಸ್ತೆಯಲ್ಲಿ ಲೈಟ್ ಇಲ್ಲ. ಐಟಿ ಪಾರ್ಕ್ ನಲ್ಲಿ ಕೆಲಸ ಮುಗಿಸಿ ಹೋಗಲು
ಕೆಲವೊಮ್ಮೆ ತಡವಾಗುತ್ತದೆ. ಭಯದಲೇ ಮನೆಗೆ ಹೋಗುವ ಪರಿಸ್ಥಿತಿ ಉಂಟಾಗಿದೆ. ಬೇಗ ಮನೆ ತಲುಪಿದರೆ ಸಾಕಪ್ಪ ಎನ್ನುವ ವಾತಾವರಣ ನಿರ್ಮಾಣವಾಗಿದೆ.
ಶರಣಕುಮಾರ್ ಜಾನಿ
ಐಟಿ ಪಾರ್ಕ್ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿ