ಸದ್ಯಕ್ಕೆ ಹುದ್ದೆಗಳ ತಂಟೆ ಬೇಡ ಎಂದ ಹೈಕಮಾಂಡ್
ಚುನಾವಣೆ ನಂತರ ಕೆಪಿಸಿಸಿ ಅಧ್ಯಕ್ಷರ ಬದಲು
ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ರಾಜ್ಯ ಕಾಂಗ್ರೆಸ್ ನಲ್ಲಿ ಹುದ್ದೆಗಳ ಬದಲಾವಣೆಯ ಬಲವಂತದ ಗಾಳಿ ಬೀಸಲಾರಂಭಿಸಿದೆ. ಲೋಕ ಸಭಾ ಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್ ನಾಯಕತ್ವಕ್ಕೆ ಒಕ್ಕಲಿಗರು ಮತಹಾಕಿಲ್ಲ ಎಂದೂ ಯಾರೊ ಬ್ಬರೂ ಡಿಸಿಎಂ ಹುದ್ದೆ ತ್ಯಜಿಸಬೇಕೆನ್ನುತ್ತಿಲ್ಲ. ಹಾಗೆಯೇ ಒಪ್ಪಂದದ ಅವಧಿ ಮುಗಿದಿದೆ
ಎಂದು ಯಾರೊಬ್ಬರೂ ಸಿದ್ದರಾಮಯ್ಯ ಅವರನ್ನು ಸ್ಥಾನವನ್ನೂ ಬಿಟ್ಟುಕೊಡಿ ಎನ್ನುತ್ತಿಲ್ಲ. ಈ ಬಗ್ಗೆ ಹೈಕಮಾಂಡ್ ಕೂಡ ಚರ್ಚೆ ಆಗಿಲ್ಲ. ಆದರೂ ಹೆಚ್ಚುವರಿ ಡಿಸಿಎಂ ಹಾಗೂ ಮುಖ್ಯಮಂತ್ರಿ ಬದಲಾವಣೆ ವಿಚಾರ ಹೆಚ್ಚು ಮುನ್ನೆಲೆಗೆ ಬರುತ್ತಿದೆ.
ಇದರ ಹಿಂದೆ ಆ ಸ್ಥಾನಗಳಲ್ಲಿ ಕಣ್ಣಿಟ್ಟಿರುವ ನಾಯಕರು ಹಾಗೂ ಅವರ ಬೆಂಬಲಿಗರ ಕೈಗಳು ಹೆಚ್ಚು ಕೆಲಸ ಮಾಡುತ್ತಿರುವುದು ಪಕ್ಷದ ಹೈಕಮಾಂಡ್ ಗಮನಕ್ಕೆ ಬಂದಿದೆ. ಹಾಗೆಯೇ ಲಾಭದ ನಿರೀಕ್ಷೆಯಲ್ಲಿರುವ ಕೆಲವು ಸ್ವಾಮೀಜಿಗಳು ಕೂಡ ಇದರಲ್ಲಿ ಪ್ರಮುಖ ಪಾತ್ರ ವಹಿಸಿರುವ ಬಗ್ಗೆಯೂ ದಿಲ್ಲಿ ನಾಯಕರು ಮಾಹಿತಿ ಪಡೆದಿzರೆ ಎಂದು ಕಾಂಗ್ರೆಸ್ ಉನ್ನತ ಮೂಲಗಳು ತಿಳಿಸಿವೆ.
ಹೀಗಾಗಿ ಕಾಂಗ್ರೆಸ್ನಲ್ಲಿ ಸಿಎಂ ಹಾಗೂ ಡಿಸಿಎಂ ಸೇರಿದಂತೆ ಅನೇಕ ಹುದ್ದೆಗಳ ಅಕಾಲಿಕ ಬದಲಾವಣೆಯ ಬಲವಂತದ ಬಿರುಗಾಳಿ ಎದ್ದಿದೆ. ಹಾಗೆ ನೋಡಿದರೆ, ಪಕ್ಷದಲ್ಲಿ ಹೆಚ್ಚುವರಿ ಡಿಸಿಎಂ ಹುದ್ದೆ ಕೇಳುತ್ತಿರುವುದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಮಾತ್ರ. ಅದರ ನೈಜ ಆಕಾಂಕ್ಷಿಗಳಾದ ಡಾ.ಎಚ್.ಸಿ.ಮಹದೇವಪ್ಪ ಅವರಾಗಲೀ, ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಹಾಗೂ ಪರಮೇಶ್ವರ್, ಕೆ.ಎಚ್. ಮುನಿಯಪ್ಪ ಅವರಾಗಲೀ ಅಲ್ಲ. ಈ ವಿಚಾರದಲ್ಲಿ ಮಹದೇವಪ್ಪ ಹಾಗೂ ಜಾರಕಿಹೊಳಿ ಕೊಂಚ ಹಿಂದೆಯೇ ಇದ್ದಾರೆ.
ಏಕೆಂದರೆ, ಅವರಿಬ್ಬರೂ ಅವರು ಕೆಪಿಸಿಸಿ ಅಧ್ಯಕ್ಷರ ಹುದ್ದೆ ಮೇಲೆ ಕಣ್ಣಿಟ್ಟಿದ್ದು, ಸದಾ ಕಾರ್ಯಕರ್ತರ ಜತೆ ಹಾಗೂ ಜನರ ಮಧ್ಯೆ ರಾಜಕಾರಣ
ಮಾಡುವವರು ಎನ್ನುವ ಮಾಹಿತಿ ಪಕ್ಷದ ಹೈಕಮಾಂಡ್ ಗೆ ತಿಳಿದಿದೆ. ಈ ಹಿನ್ನೆಲೆಯಲ್ಲಿ ಮಹದೇವಪ್ಪ ಅವರು ದೆಹಲಿ ಪ್ರವಾಸದ ವೇಳೆ ಎಐಸಿಸಿ ಅಧ್ಯಕ್ಷ
ಮಲ್ಲಿಕಾರ್ಜುನ್ ಖರ್ಗೆ ಭೇಟಿ ಸಂದರ್ಭದಲ್ಲಿ ಈ ವಿಚಾರಗಳನ್ನು ಚರ್ಚಿಸಿzರೆ ಎನ್ನಲಾಗಿದ್ದು, ಖರ್ಗೆ ಅವರು ಈ ಇಬ್ಬರ ವಿಚಾರದಲ್ಲಿ ಗಂಭೀರ ಲೆಕ್ಕಾಚಾರ ಮಾಡುತ್ತಿದ್ದಾರೆ.
ಈ ಇಬ್ಬರೂ ಸಚಿವರೂ ಕೆಪಿಸಿಸಿ ಅಧ್ಯಕ್ಷ ಹುದ್ದೆ ನೀಡುವುದಾದರೆ, ಮಂತ್ರಿಸ್ಥಾನದ ಜತೆಗೇ ಇರಬೇಕು ಎಂಬ ಬೇಡಿಕೆ ಸಲ್ಲಿಸಿzರೆ ಎನ್ನಲಾಗಿದೆ. ಈ ಇಬ್ಬರೂ ನಾಯಕರು ಅಪಾರ ವಿರೋಧದ ನಡುವೆಯೂ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿ ಸಂಸತ್ ನಲ್ಲಿ ಪಕ್ಷದ ಕೈ ಬಲಪಡಿಸಿದ್ದಾರೆ. ಉಳಿದಂತೆ ಇತರ ದಲಿತ ಸಮುದಾಯದ ಮಂತ್ರಿಗಳು ಈ ವಿಚಾರದಲ್ಲಿ ವಿ-ಲವಾಗಿದ್ದು, ಇದನ್ನು ಪಕ್ಷದ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ ಎಂದೂ ಹೇಳಲಾಗಿದೆ.
ದಿಢೀರ್ ಬದಲಾವಣೆ ಕೂಗು ಏಕೆ ?
ವಾಸ್ತವದಲ್ಲಿ ಲೋಕಸಭೆಯಲ್ಲಿ (ಹಿಂದಿನ ಚುನಾವಣೆಗೆ ಹೋಲಿಸಿದರೆ) ಕಾಂಗ್ರೆಸ್ ಉತ್ತಮ ಸಾಧನೆಯನ್ನೇ ಮಾಡಿರುವ ಕಾರಣ ನಾಯಕರ ಹುದ್ದೆ ಬದಲಾವಣೆ ಸದ್ಯಕ್ಕೆ ನಡೆಯದು. ಆದರೆ ಈ ಹಿಂದೆ ಹೈಕಮಾಂಡ್ ನಾಯಕಾರಾದಿಯಾಗಿ ಅನೇಕರು ಹೇಳಿದ್ದಂತೆ, ಲೋಕಸಭೆ ನಂತರ ಶಿವಕುಮಾರ್, ಕೆಪಿಸಿಸಿ ಹುz ಬಿಟ್ಟುಕೊಂಡುತ್ತಾರೆ ಎನ್ನುವ ಮಾತುಕತೆ ನಡೆದಿತ್ತು. ಇದನ್ನು ನೆನೆಪಿಸಲು ಸಚಿವ ರಾಜಣ್ಣ ಹೆಚ್ಚುವರಿ ಡಿಸಿಎಂ ಬಾಂಬ್ ಹಾಕುತ್ತಿದ್ದರು. ಇದಕ್ಕೆ ಪ್ರತಿಯಾಗಿ ಡಿ.ಕೆ. ಶಿವಕುಮಾರ್ ಬೆಂಬಲಿಗರು, ಕೆಂಪೇಗೌಡ ಜಯಂತಿಯ ಸಂದರ್ಭ ಬಳಸಿಕೊಂಡುಮುಖ್ಯಮಂತ್ರಿ ಬದಲಾವಣೆ ಚರ್ಚೆ ಮುನ್ನೆಲೆಗೆ ತಂದರು. ಪರಿಣಾಮ ಒಕ್ಕಲಿಗ ಮಹಾಸಂಸ್ಥಾನ ಮಠದ ಚಂದ್ರಶೇಖರಸ್ವಾಮಿ, ತುಂಬಿದ ಸಮಾರಂಭದಲ್ಲಿ ಮುಖ್ಯಮಂತ್ರಿ ಎದುರೇ ಕುರ್ಚಿ
ಬಿಟ್ಟುಕೊಡಬೇಕೆನ್ನುವ ಒತ್ತಾಯ ಮಾಡಿದರು.
ಈ ಬಗ್ಗೆ ಮೌನ ವಹಿಸಲಾಗದ ಡಿ.ಕೆ.ಶಿವಕುಮಾರ್, ಇನ್ನು ಮುಂದೆ ಸ್ವಾಮೀಜಿಗಳು ಇಂಥ ಮಾತನಾಡಬೇಡಿ ಎನ್ನುವ ಸಮಾಧಾನದ ಮಾತುಗಳನ್ನಾಡಿ ದ್ದರು. ಆದರೂ ಸಮಾಧಾನಗೊಳ್ಳದ ಕನಕ ಗುರುಪೀಠದ ಸಿದ್ದರಾಮಾನಂದ ಸ್ವಾಮೀಜಿ, ಸಿದ್ದರಾಮಯ್ಯ ಅವರು ಉತ್ತಮ ಆಡಳಿತ ನಡೆಸುತ್ತಿದ್ದಾರೆ. ಅವರ ಬದಲಾವಣೆ ಸಲ್ಲದು ಎಂದು ವಿರೋಧಿಸಿದರು. ಇದೇ ವೇಳೆ ತಮ್ಮದೇನೂ ಕಡಿಮೆ ಎನ್ನುವಂತೆ ಬಾಳೇಹೊನ್ನೂರು ರಂಭಾಪುರ ಮಠದ ಸ್ವಾಮೀಜಿ, ಕಾಂಗ್ರೆಸ್ ನ ಅತ್ಯಂತ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಒತ್ತಾಯಿಸಿದರು.
ಹೀಗೆ ಸ್ವಾಮೀಜಿಗಳ ಹೇಳಿಕೆಯಾಟ ಮುಂದುವರಿಯಬಾರದು ಎಂದು ವಚನಾನಂದ ಸ್ವಾಮೀಜಿ ಈ ವಿಷಯವನ್ನು ಹೈಕಮಾಂಡ್ ನೋಡಿಕೊಳ್ಳುತ್ತದೆ ಎನ್ನುವ ಮೂಲಕ ಎಲ್ಲಾ ಸ್ವಾಮೀಜಿಗಳ ಹೇಳಿಕೆಗಳಿಗೆ ತೆರೆ ಎಳೆದಿದ್ದಾರೆ.
ಕೆಪಿಸಿಸಿ ಬದಲಾವಣೆ ಸಾಧ್ಯತೆ ಹೆಚ್ಚು
ಈ ಹಿಂದೆಯೇ ಚರ್ಚೆಯಾಗಿರುವಂತೆ ಸದ್ಯದ ಕೆಪಿಸಿಸಿ ಅಧ್ಯಕ್ಷ ಬದಲಾವಣೆ ಮಾಡಲು ಪಕ್ಷದ ಹೈಕಮಾಂಡ್ ತೀರ್ಮಾನನಿಸಿದೆ ಎಂದು ತಿಳಿದು ಬಂದಿದೆ. ಆದರೆ ಡಿ.ಕೆ. ಶಿವಕುಮಾರ್, ಜಿಪಂ ಮತ್ತು ಬಿಬಿಎಂಪಿ ಚುನಾವಣೆವರೆಗೂ ಅವಕಾಶ ಕೇಳಿರುವ ಹಿನ್ನೆಲೆಯಲ್ಲಿ ಅಲ್ಲಿಯತನಕ ಅವಕಾಶ ನೀಡಲಾಗಿದ್ದು,
ಆನಂತರದಲ್ಲಿ ರಾಜ್ಯ ಪ್ರವಾಸ ಮಾಡಿ ಪಕ್ಷ ಸಂಘಟಿಸುವ ಹಿರಿಯರೊ ಬ್ಬರಿಗೆ ಹುದ್ದೆ ನೀಡಲಾಗುತ್ತದೆ. ಹೀಗಾಗಿ ಸಚಿವರಾದ ಎಚ್.ಸಿ.ಮಹದೇವಪ್ಪ,
ಸತೀಶ್ ಜಾರಕಿಹೊಳಿ ರೇಸ್ನಲ್ಲಿದ್ದಾರೆ. ಅಷ್ಟಕ್ಕೂ ಶಿವಕುಮಾರ್ ಅವರಿಗೆ ಸದ್ಯಕ್ಕೆ ಚನ್ನಪಟ್ಟಣ ಉಪಚುನಾ ವಣೆ ಗೆಲ್ಲುವ ಮೂಲಕ ಸಹೋದರ ಡಿ.ಕೆ.ಸುರೇಶ್ ರಾಜಕೀಯ ಭವಿಷ್ಯ ಗಟ್ಟಿಗೊಳಿಸುವ ದಿಗಿಲಿ ನಲ್ಲಿದ್ದು, ಅಲ್ಲಿ ತನಕ ಯಾವುದೇ ಬದಲಾವಣೆ ಯನ್ನೂ ಅವರು ಒಪ್ಪುವುದಿಲ್ಲ ಎನ್ನಲಾಗಿದೆ. ಮುಂದಿನ ದಿನಗಳ ಅಧಿಕಾರ ಹಂಚಿಕೆ ಕುರಿತು ಪಕ್ಷದ ಹೈಕಮಾಂಡ್ ಜತೆಗೆ ಚರ್ಚೆ ನಡೆಸಲಾ ಗಿದೆ. ಸದ್ಯ ಸಿಎಂ, ಡಿಸಿಎಂ ಬದಲಾವಣೆ ಬಗ್ಗೆ ಲಕ್ಷ್ಯ ಕೊಡುತ್ತಿಲ್ಲ ಎನ್ನಲಾಗುತ್ತಿದೆ.