ಹೂವಪ್ಪ ಐ ಎಚ್. ಬೆಂಗಳೂರು
ಜನರಿಗೆ ಬೆಲೆ ಏರಿಕೆಯ ಬಿಸಿ
ರಾಜ್ಯದಲ್ಲಿ ಶೇ.70 ಈರುಳ್ಳಿ ನಾಶ
ಕಟಾವಿಗೆ ಮಳೆಯ ಅಡ್ಡಿ
ನೀರು ಪಾಲಾದ ಈರುಳ್ಳಿ ಬೆಳೆ
ಚಿತ್ರದುರ್ಗ, ಗದಗ, ಬಾಗಲಕೋಟ, ಧಾರವಾಡ, ಬೆಳಗಾವಿ ಈ ಎಲ್ಲಾ ಜಿಲ್ಲೆಗಳಲ್ಲಿ ಈರುಳ್ಳಿ ಕಾಟವಿಗೆ ಬಂದಿದ್ದು, ಭಾನು ವಾರ ರಾತ್ರಿ ಪೂರ್ತಿ ಸುರಿದ ಭಾರೀ ಮಳೆಗೆ ಸಾವಿರಾರು ಎಕರೆ ಈರುಳ್ಳಿ ಕೊಳೆತು ಹೋಗುತ್ತಿದ್ದು, ರೈತರು ಕಣ್ಣೀರು ಹಾಕುತ್ತಿದ್ದಾರೆ. ಇತ್ತ, ಗ್ರಾಹಕರ ಕಣ್ಣಲ್ಲಿಯೂ ನೀರು ತರಿಸುತ್ತಿದೆ. ಈರುಳ್ಳಿ ಹೆಚ್ಚಿದರೆ ಅಷ್ಟೇ ಕಣ್ಣೀರು ಬರುತ್ತಿಲ್ಲ ಅದರ ಬೆಲೆ ಕೇಳಿದರೂ ಈಗ ಕಣ್ಣೀರು ಬರಲಿದೆ. ಅಷ್ಟರಮಟ್ಟಿಗೆ ಈರುಳ್ಳಿ ಬೆಲೆ ಗಗನಕ್ಕೇರಿದೆ. ಕಳೆದ ಕೆಲ ದಿನ ಗಳಿಂದ ಈರುಳ್ಳಿ ಬೆಲೆ ಏರುತ್ತಿದ್ದು, ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟುತ್ತಿದೆ.
ಹೊಲದಲ್ಲಿ ಕೊಳೆಯುತ್ತಿರುವ ಈರುಳ್ಳಿ: ವಾರದ ಹಿಂದೆಯಷ್ಟೇ ಕೆ.ಜಿ. ಈರುಳ್ಳಿಗೆ ಸಗಟುದರ ದಪ್ಪ 32-38 ರು. ಇತ್ತು. ಚಿಲ್ಲರೆ ದರ 40-45 ರು. ಗೆ ಇತ್ತು. ಈಗ ಸಗಟು 50-52 ರು., ಚಿಲ್ಲರೆ ದರ 60-70 ರು. ಗೆ ಮಾರಾಟವಾಗುತ್ತಿದೆ. ಮಧ್ಯಮ 40-45 ರು. ಗೆ ಮಾರಾಟವಾಗುತ್ತಿದೆ. ಇದರಿಂದ ಗ್ರಾಹಕರು ಕಂಗಾಲಾಗಿದ್ದಾರೆ.
ಬಿಸಿಲು ಬೀಳದ ಕಾರಣ ಈರುಳ್ಳಿ ಒಣಗದೇ ಹೊಲದ ಕೊಳೆಯುತ್ತಿವೆ. ಹೀಗಾಗಿ ಬೆಳೆಗಾರರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಈ ವರ್ಷ ನಿರಂತರ ಸುರಿಯುತ್ತಿರುವ ಮಳೆಗೆ ಈರುಳ್ಳಿ ಇಳುವರಿ ಶೇ.70 ಕ್ಕೂ ಹೆಚ್ಚು ಕುಸಿತ ಕಂಡಿದೆ. ಹೀಗಾಗಿ ಮಾರುಕಟ್ಟೆಗೆ ಈರುಳ್ಳಿ ಪೂರೈಕೆ ಕಡಿಮೆಯಾಗಿದ್ದರಿಂದ ಬೆಲೆ ಏರಿಕೆಗೆ ಪ್ರಮುಖ ಕಾರಣ ವಾಗಿದೆ. ಇನ್ನುತ್ತಾರೆ ಬೆಂಗಳೂರು ಎಪಿಎಂಸಿ ಬಿ ಮಂಡಿ ವ್ಯಾಪಾರಿಗಳು. 50 ಕೆಜಿಯ ಚೀಲ ಮಹಾರಾಷ್ಟ್ರ ಕರ್ನಾಟಕ ಸೇರಿ ಈ ಹಿಂದೆ 1 ಲಕ್ಷ ಮೇಲ್ಪಟ್ಟು ಬೆಂಗಳೂರು ಎಪಿಎಂಸಿಗೆ ಬರುತ್ತಿದ್ದ ಈರುಳ್ಳಿ ಈಗ 60-70 ಸಾವಿರಕ್ಕೆ ಸೀಮಿತವಾಗಿದೆ. ಬೇಡಿಕೆಗೆ ತಕ್ಕಂತೆ ಈರುಳ್ಳಿ ಬಾರದೆ ಬೆಲೆ ಏರಿಕೆಯಾಗುತ್ತಿದೆ. ಎಂದು ಹೇಳಲಾಗುತ್ತಿದೆ.
ಉತ್ತಮ ಬೆಲೆ ಇರುವ ಕಾರಣ ಹಾಳಾಗಿರುವ ಈರುಳ್ಳಿ ಬಿಟ್ಟು ಅಳಿದುಳಿದ ಈರುಳ್ಳಿಯನ್ನು ಮಾರಾಟ ಮಾಡಲು ರೈತರು ಮುಂದಾಗಿದ್ದಾರೆ. ಆದರೆ, ಈರುಳ್ಳಿಯನ್ನು ಗುಡ್ಡೆಹಾಕಿ ಮಾರುಕಟ್ಟೆಗೆ ಸಾಗಿಸಲು ಮತ್ತೆ ಮಳೆ ಕಾಟ ಶುರುವಾಗಿದೆ. ಮೇಲಿಂದ ಮೇಲೆ ಜಿಟಿಜಿಟಿ ಮಳೆ ಆಗುತ್ತಿದ್ದು ಮೋಡಕವಿದ ವಾತಾವರಣ ತಿಳಿಯಾಗುತ್ತಿಲ್ಲ
ಎನ್ನುತ್ತಾರೆ ರೈತರು.
ಬಿಸಿಲು ಬಿದ್ದರೆ ಒಣಗಿಸಿ ಈರುಳ್ಳಿಯನ್ನು ಮಾರುಕಟ್ಟೆಗೆ ಸಾಗಿಸಬಹುದು. ಆದರೆ ಮೋಡ ಕವಿದ ವಾತಾವರಣ ನಮಗೆ ದಿಕ್ಕು ತೋಚದಂತೆ ಮಾಡಿದೆ. ಎಕರೆ ಈರುಳ್ಳಿ ಬೆಳೆಯಲು 50 ರಿಂದ 60 ಸಾವಿರ ರು. ಖರ್ಚು ಮಾಡಿದ್ದೇವೆ, ಆದರೆ ಈ ಬಾರಿ ಮಾರುಕಟ್ಟೆಯಲ್ಲಿ ಕ್ವಿಂಟಲ್ ಈರುಳ್ಳಿಗೆ 4 ರಿಂದ 5 ಸಾವಿರ ರು. ಉತ್ತಮ ಬೆಲೆ ಇದೆ. ನಿರಂತರ
ಸುರಿಯುತ್ತಿರುವ ಮಳೆ ಅಳಿದುಳಿದ ಈರುಳ್ಳಿಯನ್ನೂ ಕೊಳೆತು ಹೋಗುವಂತೆ ಮಾಡಿದೆ ಎಂದು ರೈತರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.
ಬೆಳೆಗಾರರರು ಕನಸು ನುಚ್ಚುನೂರು: ಆರಂಭದಲ್ಲಿ ಚೆನ್ನಾಗಿ ಮಳೆಯಾಗಿದ್ದರಿಂದ ಭರ್ಜರಿಯಾಗಿ ಈರುಳ್ಳಿ ಬೆಳೆ ಬಂದಿತ್ತು. ಒಂದು ಎಕರೆಗೆ 100 ಚೀಲ್ ಈರುಳ್ಳಿ ನಿರೀಕ್ಷೆಯಲ್ಲಿದ್ದ ರೈತರಿಗೆ ಭಾರಿ ನಿರಾಸೆಯಾಗಿದೆ. ಈ ಬಾರಿ ಕ್ವಿಂಟಾಲ್ ಈರುಳ್ಳಿಗೆ 4-5 ಸಾವಿರ ದರ ಇದ್ದು, ರೈತರು ಭಾರಿ ಸಂತಸದಲ್ಲಿದ್ದೆವು ಸಂತಸಕ್ಕೆ ವರುಣ ಬರೆ ಎಳೆದಿದ್ದಾನೆ. ಎನ್ನುತ್ತಾರೆ ಗದಗ ತಾಲೂಕು ಈರುಳ್ಳಿ ಬೆಳೆಗಾರ ಸಿದ್ದಪ್ಪ ಕರೆಣ್ಣನವರ ಇನ್ನೊಬ್ಬ ರೈತ ಪಕ್ಕೀರಪ್ಪ ಈರುಳ್ಳಿ ಮಾರಾಟ ಮಾಡಿದ್ರೆ ಲಕ್ಷಾಂತರ ಹಣ ಬರುತ್ತೆ. ಮನೆ ಕಟ್ಟುವ ಕನಸು ಕಂಡಿದ್ವಿ ಆ ಕನಸು ನುಚ್ಚುನೂರಾ ಗಿದೆ.
ಈ ಬಾರಿ ಉತ್ತಮ ಬೆಳೆ ಬಂದಿದ್ದು ಸಾಲಮುಕ್ತ ರಾಗಬೇಕು ಎಂಬ ಆಸೆಯಲ್ಲಿದ್ದ ನಮ್ಮಂತಹವರ ಪಾಡು ಅಧೋಗತಿ ಯಾಗಿದ್ದು ಮತ್ತೆ ಅವರು ಸಾಲದ ಸುಳಿಯಲ್ಲಿ ಸಿಲುಕಿzರೆ ಎಂದು ಹೇಳುತ್ತಾರೆ ಬೆಂಗಳೂರು ಎಪಿಎಂಸಿಗೆ ಈರುಳ್ಳಿ ಮಾರಾಟ ಮಾಡಲು ಬಂದ ರೈತರು.
ಮಳೆ ರಭಸಕ್ಕೆ ಕೊಚ್ಚಿ ಹೋದ ಈರುಳ್ಳಿ
ಬಾಗಲಕೋಟೆ ಜಿಲ್ಲೆಯಲ್ಲಿ ಈ ಬಾರಿ ಅಂದಾಜು 31ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿತ್ತು.
ಉತ್ತರ ಕರ್ನಾಟಕ ಭಾಗದಲ್ಲಿ ಕಬ್ಬು ಬಿಟ್ಟರೆ ಈರುಳ್ಳಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ನಾಲ್ಕೇ
ತಿಂಗಳಲ್ಲಿ ಫಸಲು ಬರುವುದರಿಂದ ಈ ಭಾಗದ ರೈತರು ಈರುಳ್ಳಿ ಬೆಳೆಯುತ್ತಾರೆ. ರೈತರು ತಮ್ಮ ಹೊಲಗಳಲ್ಲಿ
ಕಿತ್ತು ಒಣಗಲು ಹಾಕಿದ್ದ ಈರುಳ್ಳಿ ಬೆಳೆ ನೀರಿನ ರಭಸಕ್ಕೆ ಚೆಪಿಲ್ಲಿಯಾಗಿದ್ದು, ಕೆಲವು ರೈತರ ಬೆಳೆ ನೀರಿನಲ್ಲಿ ಕೊಚ್ಚಿ ಹೋಗಿ ಬೇರೆಯವರ ಹೊಲದಲ್ಲಿ ಬಿದ್ದಿದೆ ಎಂದು ಹೇಳಲಾಗುತ್ತಿದೆ.
*
ಬಿಸಿಲು ಬಿದ್ದರೆ ಒಣಗಿಸಿ ಈರುಳ್ಳಿಯನ್ನು ಮಾರುಕಟ್ಟೆಗೆ ಸಾಗಿಸಬಹುದು. ಆದರೆ ಮೋಡಕವಿದ ವಾತಾವರಣ ನಮಗೆ ದಿಕ್ಕು ತೋಚದಂತೆ ಮಾಡಿದೆ. ಎಕರೆ ಈರುಳ್ಳಿ ಬೆಳೆಯಲು 50 ರಿಂದ 60 ಸಾವಿರ ರು. ಖರ್ಚು ಮಾಡಿದ್ದೇವೆ, ಆದರೆ ಈ ಬಾರಿ ಮಾರುಕಟ್ಟೆಯಲ್ಲಿ ಕ್ವಿಂಟಲ್ ಈರುಳ್ಳಿಗೆ 4 ರಿಂದ 5 ಸಾವಿರ ರು. ಉತ್ತಮ ಬೆಲೆ ಇದೆ. ನಿರಂತರ
ಸುರಿಯುತ್ತಿರುವ ಮಳೆ ಅಳಿದುಳಿದ ಈರುಳ್ಳಿಯನ್ನೂ ಕೊಳೆತು ಹೋಗುವಂತೆ ಮಾಡಿದೆ ಎಂದು ರೈತರು ತಮ್ಮ
ಅಳಲು ತೋಡಿಕೊಳ್ಳುತ್ತಿದ್ದಾರೆ
-ಶಿವರುದ್ರಪ್ಪ, ಬಾಗಲಕೋಟೆ, ಈರುಳ್ಳಿ ಬೆಳೆಗಾರ
ವರ್ಷ ನಿರಂತರ ಸುರಿಯುತ್ತಿರುವ ಮಳೆಗೆ ಈರುಳ್ಳಿ ಇಳುವರಿ ಶೇ.60 ಕ್ಕೂ ಹೆಚ್ಚು ಕುಸಿತ ಕಂಡಿದೆ. ಹೀಗಾಗಿ ಮಾರುಕಟ್ಟೆಗೆ ಈರುಳ್ಳಿ ಪೂರೈಕೆ ಕಡಿಮೆಯಾಗಿದ್ದು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.
-ಬಿಎಲ್ಎಸ್ ಮೂರ್ತಿ, ಬೆಂಗಳೂರು ಎಪಿಎಂಸಿ ಈರುಳ್ಳಿ ಮಂಡಿ ವ್ಯಾಪಾರಿ
ಇದನ್ನೂ ಓದಿ: Gadag Rain: ಗದಗದಲ್ಲಿ ಭಾರೀ ಮಳೆ; ಲಕ್ಷಾಂತರ ರೂ. ಮೌಲ್ಯದ ಈರುಳ್ಳಿ ಬೆಳೆ ನೀರುಪಾಲು