ತನಿಖೆ ನಡೆಸುತ್ತಿರುವ ಪೊಲೀಸರನ್ನು ಕಾಡುತ್ತಿರುವ ಪ್ರಶ್ನೆಗಳು
ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ರಾಜ್ಯವನ್ನೇ ಬೆಚ್ಚಿ ಬೀಳಿಸಿರುವ ಗುತ್ತಿಗೆದಾರ ಸಂತೋಷ್ ಸಾವಿನ ಪ್ರಕರಣದ ಹಿಂದೆ ರಾಜಕೀಯ ಷಡ್ಯಂತ್ರ ಶಂಕೆಯೂ ಮೂಡಲಾರಂಭಿಸಿದೆ. ಸಂತೋಷ್ ಆತ್ಮಹತ್ಮೆ ಮಾಡಿಕೊಂಡಿದ್ದಾರೋ ಕೊಲೆಯೋ, ಇಲ್ಲವೇ ಮತ್ಯಾವುದೋ ಕಾರಣದಿಂದ ಸಾವಿಗೀಡಾಗಿದ್ದಾರೋ ಎನ್ನುವುದು ತನಿಖೆಯಿಂದ ತಿಳಿಯುವ ಮುನ್ನವೇ ಪ್ರಕರಣಕ್ಕೆ ರಾಜಕೀಯ ಬಣ್ಣ ಬಂದಿದೆ.
ಏತನ್ಮಧ್ಯೆ, ಪ್ರಕರಣದ ಹಿಂದೆ ಷಡ್ಯಂತ್ರ ಶಂಕೆ ಬಲಗೊಳ್ಳುವುದಕ್ಕೆ ಹಲವು ಕಾರಣಗಳಿವೆ. ಸಚಿವ ಈಶ್ವರಪ್ಪ ವಿರುದ್ಧ ಪ್ರತಿಪಕ್ಷಗಳ ಆರೋಪ ಮಾಡು ತ್ತಲೇ ಬಂದಿದ್ದ ಸಂತೋಷ್, ಏಕಾಏಕಿ ಆತ್ಮಹತ್ಯೆಗೆ ಶರಣಾಗಿರುವುದು ಹಾಗೂ ಅದರ ಹಿಂದಿನ ಹಲವಾರು ಬೆಳವಣಿಗೆಗಳು ಹಲವು ಅನುಮಾನಗಳನ್ನು ಹುಟ್ಟು ಹಾಕಿವೆ. ಸಾವಿಗೂ ಮುನ್ನ ಕಳುಹಿಸಿರುವ ವಾಟ್ಸ್ ಆಪ್ ಸಂದೇಶದಲ್ಲಿ ‘ಸಚಿವರು ಕಾಮಗಾರಿ ಬಿಲ್ ಪಾವತಿಸಲು ಶೇ.೪೦ ಕಮಿಷನ್ ಕೇಳಿದ್ದ ರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಹೇಳಿದ್ದಾರೆನ್ನಲಾಗಿದೆ. ಹಾಗಾದರೆ ಕಮಿಷನ್ ಕೇಳಿದ ಮಾತ್ರಕ್ಕೆ ಆತ್ಮಹತ್ಯೆ ಮಾಡಿಕೊಳ್ಳ ಲಾಗುವುದೇ ಎನ್ನುವ ಸಾಮಾನ್ಯ ಪ್ರಶ್ನೆ ತನಿಖೆ ನಡೆಸುತ್ತಿರುವ ಪೊಲೀಸರನ್ನು ಕಾಡುತ್ತಿದೆ.
ಸಂತೋಷ್ ಕುಟುಂಬವದರು ಹೇಳುವ ಪ್ರಕಾರ ಆತ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯೇ ಅಲ್ಲ. ಆದರೂ ಏಕೆ ಇಂಥ ಕೃತ್ಯಕ್ಕೆ ಮುಂದಾದ ಎನ್ನುವ ಪ್ರಶ್ನೆ ಕೂಡ ಶುರುವಾಗಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ ಸಂತೋಷ್, ಬಿಲ್ ಪಾವತಿಗಾಗಿ ಸಚಿವರಿಗೆ ಮನವಿ ಸಲ್ಲಿಸಿದ್ದು, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದು, ಸಚಿವ ಈಶ್ವರಪ್ಪ ವಿರುದ್ಧ ಬಿಜೆಪಿ ನಾಯಕರಾದ ಜೆ.ಪಿ.ನಡ್ಡಾ, ಅಮೀತ್ ಶಾ, ಪ್ರಧಾನಿ ಕಚೇರಿ, ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆ ಕಚೇರಿ ಸೇರಿ ಎಡೆ ದೂರುಗಳಲ್ಲಿ ಸಲ್ಲಿಸಿದ್ದು ಇತ್ಯಾದಿಗಳೆಲ್ಲ ಏಕೆ?
ಇದೀಗ ಎಲ್ಲ ಹೋರಾಟದ ಕೆಚ್ಚನ್ನು ಕೊನೆಗಾಣಿಸಿ ಏಕಾಏಕಿ ಸಾವಿಗೆ ಶರಣಾದರೇಕೆ? ಇದಕ್ಕೆ ದಾರಿ ತೋರಿಸಿದ್ದವರು, ಉತ್ತೇಜನ ನೀಡಿದ್ದವರು ಯಾರು ಎನ್ನುವ ಪ್ರಶ್ನೆಗಳೂ ಸಂತೋಷ ಸಾವಿನ ಹಿಂದೆ ಷಡ್ಯಂತರ ಇರಬಹುದು ಎನ್ನುವ ಗುಮಾನಿ ಹೆಚ್ಚಿಸುತ್ತಿವೆ.
ಸಾವಿಗೂ ಮುನ್ನ ಏನೆಲ್ಲ ಆಗಿತ್ತು?: ಸಂತೋಷ್ ತಲಾ ೫ಲಕ್ಷ ರು. ಮೊತ್ತದ ಸುಮಾರು ೧೦೯ಕ್ಕೂ ಹೆಚ್ಚು ಕಾಮಗಾರಿಗಳನ್ನು ನಡೆಸಿದ್ದರು. ನಂತರ ಇದರ ಬಿಲ್ ಪಾವತಿಗಾಗಿ ಸಚಿವರು ಶೇ.೪೦ರಷ್ಟು ಕಮಿಷನ್ ಕೇಳುತ್ತಿzರೆ ಎಂದು ಆರೋಪಿಸಿದ್ದರು. ಈ ಆರೋಪ ದೆಹಲಿಯಲ್ಲಿರುವ ಬಿಜಿಪಿ ನಾಯಕರ
ಕಚೇರಿಗಳನ್ನೂ ಮುಟ್ಟಿತ್ತು. ಇದರ ಪರಿಣಾಮ ಕೇಂದ್ರ ಆರ್ಡಿಪಿಆರ್ ಇಲಾಖೆ ರಾಜ್ಯಕ್ಕೆ ಈ ಸಂಬಂಧ ಸ್ಪಷ್ಟನೆಯನ್ನೂ ಕೇಳಿತ್ತು. ಸ್ಪಷ್ಟನೆ ನೀಡಿದ್ದ ರಾಜ್ಯ ಸರಕಾರ, ‘ಆರೋಪಿಸಿರುವ ಗುತ್ತಿಗೆದಾರರು ಇಲಾಖೆಯ ಯಾವುದೇ ಕಾಮಗಾರಿ ನಡೆಸಿಲ್ಲ’ ಎಂದು ಉತ್ತರಿಸಿತ್ತು.
ಆದರೆ, ಇಷ್ಟೆಲ್ಲ ನಡೆಯಲು ಕಾರಣ ಯಾರು? ಈಶ್ವರಪ್ಪ ವಿರುದ್ಧ ದೆಹಲಿ ನಾಯಕರಿಗೆ ದೂರು ಕೊಡಿಸಿದವರು ಯಾರು? ದೆಹಲಿಗೆ ವಿಮಾನ ಪ್ರಯಾಣದ ಟಿಕೆಟ್ ಬುಕ್ ಮಾಡಿದ್ದ ಬಿಜೆಪಿಯ ನಾಯಕರು ಯಾರು? ಎಂಬ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ. ಹಾಗೆಯೇ ದೆಹಲಿಯಲ್ಲಿ ಸಂತೋಷ್ ಪತ್ರಿಕಾಗೋಷ್ಠಿ ನಡೆಸಿದ ನಂತರ ಕಾಂಗ್ರೆಸ್ ನಾಯಕರು ಇದೇ ವಿಚಾರ ಮುಂದಿಟ್ಟು ಪತ್ರಿಕಾಗೋಷ್ಠಿ ಮಾಡಿದ್ದೇಕೆ?
ಹಿಂಡಲಗಾ ಕಾಂಗ್ರೆಸ್ ನಾಯಕರು ಸಂತೋಷ್ ಆದೇಶವಿಲ್ಲದೆ ೪ಕೋಟಿ ರು. ಮೊತ್ತದ ಕಾಮಗಾರಿ ನಡೆಸುತ್ತಿದ್ದರೂ ಮೌನವಾಗಿದ್ದೇಕೆ ಎನ್ನುವ ಪ್ರಶ್ನೆಗಳು ಘಟನೆಯನ್ನು ಇನ್ನಷ್ಟು ಗಹನ ತನಿಖೆಗೆ ಪ್ರೇರೇಪಿಸುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸರಕಾರದ ಆದೇಶವಿಲ್ಲದೆ ಕಾಮಗಾರಿ ಮಾಡಿದ್ದೆಕೆ?
ಸಂತೋಷ್ ತಾವೇ ಹೇಳಿಕೊಂಡಂತೆ ಕ್ಲಾಸ್ ಒನ್ ಗುತ್ತಿಗೆದಾರರಾಗಿದ್ದರು. ಇವರು ಬೆಳಗಾವಿಯ ಹಿಂಡಲಗಾ ಗ್ರಾಮ ಪಂಚಾಯಿತಿಯಲ್ಲಿ ಸುಮಾರು ೪ ಕೋಟಿ ರು. ಮೊತ್ತದ ಕಾಮಗಾರಿಗಳನ್ನು ನಡೆಸಿದ್ದರು. ಅಷ್ಟಕ್ಕೂ ಇದು ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕ್ಷೇತ್ರ. ಇಲ್ಲಿ ಸರಕಾರದ ಕಾಮಗಾರಿ ಆದೇಶವಿಲ್ಲದೆ, ಸಚಿವರ ಅನುಮೋದನೆ ಇಲ್ಲದೆ, ಟೆಂಡರ್ ಇಲ್ಲದೆ, ಆಂದಾಜು ಪಟ್ಟಿ ಸಿದ್ಧಪಡಿಸದೆ ಕಾಮಗಾರಿ ನಡೆಸಿದ್ದು ಹೇಗೆ? ಇದಕ್ಕೆ ಅನುಮತಿ ನೀಡಿದ್ದವರಾದರೂ ಯಾರು ಎನ್ನುವ ಶಂಕೆ ಇಲಾಖೆಯನ್ನು ಕಾಡುತ್ತಿದೆ.
ಆದೇಶವೇ ಇಲ್ಲದೆ ಕಾಮಗಾರಿ ನಡೆಸಿದರೆ ಸಂತೋಷ್ ಅವರಿಗೂ ಇಲಾಖೆಗೂ ಯಾವುದೇ ಸಂಬಂಧವಿಲ್ಲ. ಅಂದರೆ ಮೇಲೆ ಸಚಿವರು ಬಿಲ್ ಪಾವತಿಸಲು
ಶೇ.೪೦ರಷ್ಟು ಕಮಿಷನ್ ಕೇಳುವ ಪ್ರಶ್ನೆಯೇ ಬರುವುದಿಲ್ಲ ಎಂದು ಆರ್ಡಿಪಿಆರ್ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ಅಷ್ಟಕ್ಕೂ ಸಂತೋಷ್ ಕಾಮಗಾರಿ ಬಿಲ್ ಪಾವತಿಗಾಗಿ ಮಧ್ಯವರ್ತಿಯೊಬ್ಬರಿಗೆ ೧೫ ಲಕ್ಷ ಮುಂಗಡ ಕಮಿಷನ್ ನೀಡಿದ್ದೆ ಎಂದೂ ಹೇಳಿದ್ದರು. ಇದಕ್ಕೂ ಪ್ರಕರಣಕ್ಕೂ ಕೂಡ ತಾಳೆಯಾಗುತ್ತಿಲ್ಲ ಎನ್ನುವುದು ಅಧಿಕಾರಿಗಳ ವಾದ.
ಹಲವು ಅನುಮಾನ ಹುಟ್ಟಿಸಿದ ಪ್ರಶ್ನೆಗಳು
ಸಂತೋಷ್ ಈ ಹಿಂದೆ ದೆಹಲಿಯಲ್ಲಿ ಡಿ.ಕೆ ಸುರೇಶ್ ಮತ್ತಿತರ ಕಾಂಗ್ರೆಸ್ ನಾಯಕ ರನ್ನು ಭೇಟಿ ಮಾಡಿ ಸುದ್ದಿಗೋಷ್ಠಿ ನಡೆಸಿದ್ದೇಕೆ? ಮುಖ್ಯಮಂತ್ರಿ ಯವರು ಉಡುಪಿ ಪ್ರವಾಸದಲ್ಲಿರುವಾಗಲೇ, ಬೆಳಗಾವಿಯ ಸಂತೋಷ್ ಉಡುಪಿಗೆ ಹೋಗಿ ಆತ್ಮಹತ್ಯೆಗೆ ಶರಣಾಗಿದ್ದು ಕಾಕತಾಳೀಯವೇ? ವರ್ಕ್ ಆರ್ಡರ್ ಇಲ್ಲದಿದ್ದರೂ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಅವರನ್ನು ಹುರುದುಂಬಿಸಿ ದವರ್ಯಾರು? ಜಿಲ್ಲೆಯ ಕಾಂಗ್ರೆಸ್ ಮುಖಂಡರ ಪಾತ್ರ ಏನಿದರಲ್ಲಿ? ಪ್ರವಾಸಕ್ಕೆಂದು ಜತೆಗೆ ಹೋಗಿದ್ದ ಸ್ನೇಹಿತರು ಯಾರು? ಸಂತೋಷ್ ಮೃತಪಟ್ಟ ಸಮಯದಲ್ಲಿ ಒಬ್ಬರನ್ನೇ ಬಿಟ್ಟು ಎಲ್ಲಿಗೆ, ಯಾಕೆ ಹೋಗಿದ್ದರು? ದಿಲ್ಲಿಯಲ್ಲಿ ಅಮಿತ್ಶಾ ಸೇರಿದಂತೆ ಕೇಂದ್ರ ಸಚಿವರನ್ನು, ನಾಯಕರನ್ನು ಭೇಟಿ ಮಾಡಲು ಅವಕಾಶ ಮಾಡಿಕೊಟ್ಟ ರಾಜ್ಯದ ಪ್ರಭಾವಿ ಮುಖಂಡರ್ಯಾರು