ರಂಗನಾಥ ಕೆ.ಮರಡಿ
ತುಮಕೂರು: 500 ಕ್ಕಿಂತ ರಾಗಿ ಬೆಳೆಯುವುದರೊಂದಿಗೆ ಸಮಗ್ರ ಕೃಷಿಯಲ್ಲಿ ಯಶಸ್ವಿಯಾದ ರೈತನಿಗೆ ಕೇಂದ್ರ ಸರಕಾರ ಮಿಲಿಯನೇರ್ ಪ್ರಶಸ್ತಿ ನೀಡಿ ಗೌರವಿಸಿದೆ.
ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ತಮ್ಮಡಿಹಳ್ಳಿ ಯುವ ಕೃಷಿಕ ರಮೇಶ್, ಮಿಲಿಯನೇರ್ ಫಾರ್ಮರ್ ಆಫ್ ಇಂಡಿಯಾ ಅವಾರ್ಡ್-2023 ಪ್ರಶಸ್ತಿ ಪಡೆದು ಜಿಲ್ಲೆಯಲ್ಲಿ ಮಾದರಿಯಾಗಿದ್ದಾರೆ.
ತಿಪಟೂರು ತಾಲೂಕಿನ ಕೊನೆಯಲ್ಲಿರುವ ಕೆವಿಕೆ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಮಗ್ರ ಕೃಷಿಯನ್ನು ಕೈಗೊಂಡು 2020 ರ ಸಾಲಿನಲ್ಲಿ 500 ಕ್ವಿಂಟಾಲ್ ರಾಗಿ ಬೆಳೆದು ಸಾಧನೆ ಮಾಡಿದ್ದಾರೆ. ರಾಗಿಯೊಂದಿಗೆ ಶ್ರೀಗಂಧ ಸೇರಿದಂತೆ ನಾನಾ ರೀತಿಯ ಮಿಶ್ರ ಬೇಸಾಯವನ್ನು ಮಾಡುವ ಮೂಲಕ ಕೃಷಿಕರಿಗೆ ಮಾದರಿಯಾಗಿದ್ದಾರೆ.
ಇತ್ತೀಚೆಗೆ ದೆಹಲಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಗುಜರಾತಿನ ರಾಜ್ಯಪಾಲರಾದ ಆಚಾರ್ಯ ದೇವವ್ರತ ಅವರಿಂದ ಪ್ರಶಸ್ತಿ ಸ್ವೀಕರಿಸಿರುವ ಮಾದರಿ ರೈತ ರಮೇಶ್ ಕೃಷಿಯಲ್ಲಿ ಮತ್ತಷ್ಟು ಕ್ರಿಯಾಶೀಲತೆಯನ್ನು ಬಳಸಿಕೊಂಡು ಸಾಧನೆ ಮಾಡಲು ಮುಂದಾಗಿದ್ದಾರೆ.
ಮಿಲಿಯನೇರ್ ಫಾರ್ಮರ್ ಆಫ್ ಇಂಡಿಯಾ ಅವಾರ್ಡ್-2023 ಪ್ರಶಸ್ತಿಗೆ ರಾಜ್ಯದಿಂದ 21 ಮಂದಿ ಆಯ್ಕೆಯಾಗಿದ್ದು ಅದರಲ್ಲಿ ರಮೇಶ್ ಒಬ್ಬರಾಗಿದ್ದಾರೆ.
ಆಧುನಿಕವಾಗಿ ರೈತರನ್ನು ಕಡೆಗಣಿಸಲಾಗುತ್ತದೆ. ಸರ್ಕಾರಗಳು ಸಹ ಅನ್ನದಾತನಿಗೆ ಆಸರೆಯಾಗುವಲ್ಲಿ ವಿಫಲವಾಗುತ್ತಿವೆ. ರೈತರು ಸಹ ಉತ್ತಮ ಸಾಧನೆ ಮಾಡಬಹುದು. ಶ್ರದ್ಧೆಯಿಂದ ಕೃಷಿ ಕಾಯಕವನ್ನು ಮಾಡಿದರೆ ಉತ್ತಮ ಪ್ರತಿಫಲ ಸಿಗುತ್ತದೆ ಎಂಬುದಕ್ಕೆ ಯುವ ರೈತ ರಮೇಶ್ ಸಾಕ್ಷಿಯಾಗಿದ್ದಾರೆ.
*
ಆಧುನಿಕ ವಿಧಾನಗಳನ್ನು ಬಳಸಿಕೊಂಡು ಕ್ರಿಯಾಶೀಲತೆಯಿಂದ ಕೃಷಿ ಮಾಡಿದರೆ ಉತ್ತಮ ಸಾಧನೆ ಮಾಡಬಹುದು.ಕೆವಿಕೆ ಅಧಿಕಾರಿಗಳ ಮಾರ್ಗ ದರ್ಶನ ದಲ್ಲಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಉತ್ತಮ ಬೆಳೆ ಬೆಳೆಯಲಾಗುತ್ತಿದೆ. ಮಿಲಿಯನೇರ್ ಫಾರ್ಮರ್ ಆಫ್ ಇಂಡಿಯಾ ಅವಾರ್ಡ್- 2023 ಪ್ರಶಸ್ತಿ ಸಂದಿರುವುದು ಇನ್ನೂ ಹೆಚ್ಚಿನ ಸಾಧನೆ ಮಾಡಲು ಆಸಕ್ತಿ ಮೂಡಿಸಿದೆ: ರಮೇಶ್, ಮಿಲಿಯನೇರ್ ಫಾರ್ಮರ್ ಆಫ್ ಇಂಡಿಯಾ ಅವಾರ್ಡ್ ಪುರಸ್ಕೃತ ರೈತ