ವಿಶೇಷ ವರದಿ : ಆನಂದ ಸ್ವಾಮಿ ಹಿರೇಮಠ
ಮಾನ್ವಿ: ರಾಯಚೂರು ಗ್ರಾಮೀಣ ಕ್ಷೇತ್ರವು ಕಲ್ಮಲ ವಿಧಾನಸಭೆ ಕ್ಷೇತ್ರದಿಂದ ನೂತನವಾಗಿ ಮಾನ್ವಿ ತಾಲೂಕಿನ ಹೊಬ್ಬಳಿಗಳನ್ನು ಒಳಗೊಂಡಿದ್ದು ಕಲಮಲ, ತಲಾಮಾರಿ, ಚಂದ್ರಬAಡ, ದೇವಸೂಗೂರು, ಚಿಕ್ಕಸೂಗೂರು, ಯರಗೇರಾ, ಕುರ್ಡಿ, ಗೀಲೆಸೂಗೂರು, ಹೊಬಳಿಗಳನ್ನು ಒಳಗೊಂಡು ೨೦೦೮ರಲ್ಲಿ ನೂತನ ಕ್ಷೇತ್ರ ರಚನೆಯಾಗಿದ್ದು ಪ.ಪಂಗಡ ಮೀಸಲು ಕ್ಷೇತ್ರವಾಗಿದೆ.
ರಾಯಚೂರು ಜಿಲ್ಲೆ ರಾಜ್ಯದ ಅತ್ಯಂತ ಹಿಂದುಳಿದ ಪ್ರದೇಶಗಳಲ್ಲಿ ಒಂದಾಗಿದ್ದು ಬಿಸಿಲು ನಾಡಿ ನಲ್ಲಿನ ಗ್ರಾಮಗಳಲ್ಲಿ ಕುಡಿಯುವ ನೀರಿಗೂ ಬರ, ರೈತರ ಜಮೀನುಗಳಿಗೆ ನೀರಾವರಿಯಂತು ಕನಸಿನ ಮಾತಾಗಿದ್ದು ಕೊಳವೆ ಬಾವಿಗಳ ಪ್ಲೋರೈಡ್ ನೀರಿನಿಂದ ಜನರು ಅಂಗವಿಕಲರಾದರೆ ಅಪೌಷ್ಟಿಕತೆಯಿಂದ ಮಕ್ಕಳು ದುರ್ಬಲರಾಗಿದ್ದಾರೆ.
ಕಳೆದ ಒಂದು ವರ್ಷದಿಂದ ಏಮ್ಸೆಗಾಗಿ ಹೋರಾಟ ನಡೆಯುತ್ತಿದ್ದರು ಸರಕಾರದಿಂದ ಸ್ಪಂದನೆ ಇಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಾದ ಐ.ಐ.ಟಿ ಸ್ಥಳಾಂತರವಾಗಿದ್ದು ಈ ಭಾಗದ ವಿದ್ಯಾರ್ಥಿಗಳಿಗೆ ಸರಕಾರದ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಮಂಜೂರು ಮಾಡದೆ ಇರುವುದರಿಂದ ಉನ್ನತ ಶಿಕ್ಷಣಕ್ಕೆ ಅವಕಾಶವಿಲ್ಲದಾಂತಾಗಿದ್ದೆ.
೨೦೦೯ರಲ್ಲಿ ನೆರೆಹಾವಳಿಯಿಂದ ತಮ್ಮ ಸರ್ವಸ್ವವನ್ನು ಕಳೆದು ಕೊಂಡ ಕುರ್ಡಿ ಹೋಬಳಿಯ ನದಿ ಪಾತ್ರದ ಗ್ರಾಮಗಳ ಜನರಿಗೆ ಇದುವರೆಗೂ ಸರಿಯಾದ ವಸತಿ ವ್ಯವಸ್ಥೆಗಾಗಿ ನಿರ್ಮಿಸಿರುವ ಮನೆಗಳನ್ನು ನವಗ್ರಾಮಗಳಲ್ಲಿ ಫಲನುಭವಿಗಳಿಗೆ ನೀಡುವಲ್ಲಿ ವಿಳಂಬವಾಗಿರುವುದರಿ0ದ ಸಮರ್ಪಕವಾಗಿ ಜನರ ಬಳಕೆಗೆ ಬರದೆ ಹಾಳು ಊರುಗಳಾಂತಗಿದ್ದು ಇದುವರೆಗೂ ನವಗ್ರಾಮಗಳಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿಲ್ಲ. ಚಿಕ್ಕಸೂಗೂರು ಹಾಗೂ ದೇವಸೂಗೂರುಗಳ ವ್ಯಾಪ್ತಿಯಲ್ಲಿನ ಗ್ರಾಮಗಳ ಜನರು ವಿವಿಧ ಕಾರ್ಖನೆಗಳಿಗೆ ತಮ್ಮ ಕೃಷಿ ಜಮೀನುಗಳನ್ನು ಕಳೆದು ಕೊಂಡಿದ್ದಾರು ಇನ್ನೂ ಅವರಿಗೆ ಸರಿಯಾದ ಪರಿಹಾರ ದೊರೆತ್ತಿಲ್ಲ ಉದ್ಯೋಗ ಸೇರಿದಂತೆ ಈ ಭಾಗದ ಅಭಿವೃದ್ದಿಗೆ ಸರಕಾರ ಮುಂದಾಗುತ್ತಿಲ್ಲ.
ಕಳೆದ ಹಲವು ವರ್ಷಗಳಿಂದ ಕ್ಷೇತ್ರದ ಜನರ ಜೊತೆ ನಿರಂತರವಾದ ಸಂಪರ್ಕವನ್ನು ಹೊಂದಿರುವುದು ರಾಜ್ಯ ಎಸ್.ಟಿ. ಮೋರ್ಚ ರಾಜ್ಯಧ್ಯಕ್ಷ ರಾಗಿರುವುದು ಹಾಗೂ ರಾಜ್ಯ ಸರಕಾರದಿಂದ ಪ.ಜಾತಿ ಹಾಗೂ ಪ.ಪಂಗಡ ಮೀಸಲಾತಿ ಹೆಚ್ಚಳಮಾಡಲು ಕ್ರಮ ಕೈಗೊಂಡಿರುವುದು ಇವರಿಗೆ ಅನುಕೂಲವಾಗಲಿದೆ.
ಹಾಲಿ ಶಾಸಕ ಬಸವನಗೌಡ ದದ್ದಲ್ ಈ ಭಾಗದಲ್ಲಿ ಕೆರೆಗಳ ನಿರ್ವಹಣೆ , ನರೇಗಾ ಯೋಜನೆಯನ್ನು ಬಳಸಿಕೊಂಡು ಶಾಲೆಗಳಲ್ಲಿ ಅಭಿವೃದ್ದಿ ಕಾಮಾಗಾರಿಗಳನ್ನು ಕೈಗೊಂಡಿದ್ದು,ಕ್ಷೇತ್ರದ ಜನರೊಂದಿಗೆ ನಿರಂತರವಾದ ಸಂಪರ್ಕವನ್ನು ಹೊಂದಿ ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವುದು ಕ್ಷೇತ್ರದ ಪ್ರತಿಯೊಂದು ಗ್ರಾಮದಲ್ಲಿಯೂ ಕನಿಷ್ಟ ಸರಕಾರಿ ಯೋಜನೆಗಳ ಜಾರಿ ಅವರಿಗೆ ಅನುಕೂಲವಾಗಿದೆ.
ಕ್ಷೇತ್ರದ ವಿಶೇಷ: ೨೦೦೮ರಲ್ಲಿ ಮೊದಲಾಬಾರಿಗೆ ಕಾಂಗ್ರೇಸ್ ನಿಂದ ರಾಜಾ ರಾಯಪ್ಪನಾಯಕ ಗೇಲುವು ಸಾಧಿಸಿದ್ದು, ೨೦೧೩ರಲ್ಲಿ ಬಿಜೆಪಿ ಯಿಂದ ತಿಪ್ಪರಾಜು ಹಾವಲ್ದಾರ್ ಗೇಲುವು ಸಾಧಿಸಿದ್ದಾರೆ ೨೦೧೮ರಲ್ಲಿ ಕಾಂಗ್ರೇಸ್ ನಿಂದ ಬಸವನಗೌಡ ದದ್ದಲ್ ಗೇಲುವು ಕಂಡಿದ್ದಾರೆ
ಕಾAಗ್ರೇಸ್ ಪಕ್ಷದ ಭದ್ರ ಕೋಟೆಯಲ್ಲಿ ಬಿಜೆಪಿ ಪಕ್ಷ ಕೂಡ ಸಮಬಲವನ್ನು ಪ್ರದರ್ಶಿಸಿದ್ದು ಜೆಡಿಎಸ್ ಈ ಬಾರಿ ಪೈಪೋಟಿ ನೀಡಲು ಮುಂದಾಗುವ ಮೂಲಕ ತ್ರೀಕೋನ ಸ್ಪರ್ಧೆ ಸಂಭವವಿದೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಕ್ಷೇತ್ರದಲ್ಲಿ ಸಂಚಾರಿಸುವ ಮೂಲಕ ಪಕ್ಷವನ್ನು ಸಂಘಟಿಸಿದ್ದಾರೆ ಬಿಜೆಪಿ ಅಭ್ಯರ್ಥಿ ತಿಪ್ಪರಾಜು ಹಾವಲ್ದಾರ್ಗೆ ದೇವದುರ್ಗ ಶಾಸಕ ಶಿವನಗೌಡ ನಾಯಕರವರ ಸಂಪೂರ್ಣವಾದ ಬೆಂಬಲವಿರುವುದು.
ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಅಲ್ಪ ಸಂಖ್ಯತರನ್ನು, ಪ.ಜಾತಿ ಸಮುದಾಯದವರನ್ನು, ಒಲಿಸಿಕೊಂಡವರು ಅಧಿಕಾರವನ್ನು ಪಡೆಯುವ ಸಾಧ್ಯತೆ ಹೆಚ್ಚು
ಕುರ್ಡಿ ಹೋಬಳಿಯಲ್ಲಿ ಮುಸ್ಲಿಂ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ, ಕಲ್ಮಲ ಹೋಬಳಿಯಲ್ಲಿ ಪ.ಜಾತಿ,ಪ.ಪಂಗಡ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ,ಶಕ್ತಿನಗರದಲ್ಲಿ ಸರಕಾರಿ ನೌಕರರ ಮತಗಳು ಅವಶ್ಯವಶಾಗಿರುತ್ತವೆ, ಪ,ಪಂಗಡ ಮೀಸಲು ಕ್ಷೇತ್ರವಾಗಿರುವುದರಿಂದ ಸಾಮಾನ್ಯ ವರ್ಗದ ಮತಗಳನ್ನು ಪಡೆಯುವುದು ಕೂಡ ನಿರ್ಣಯಕವಾಗುತ್ತದೆ.
ಇದುವರೆಗೂ ನಡೆದ ಚುನಾವಣೆಗಳಲ್ಲಿ ಅಭ್ಯರ್ಥಿಗಳ ಗೇಲುವಿನ ಅಂತರ ಅತ್ಯಂತ ಕಡಿಮೆ ಇರುವುದರಿಂದ ಮೂರು ಪಕ್ಷಗಳ ಅಭ್ಯರ್ಥಿಗಳು ಗಂಭಿರವಾಗಿ ಕ್ಷೇತ್ರದಲ್ಲಿ ತಮ್ಮ ಮತಗಳನ್ನು ಭದ್ರ ಪಡಿಸಿಕೊಳ್ಳುವುದು ಅವಶ್ಯಕವಾಗಿರುತ್ತದೆ.
ಕಾಂಗ್ರೇಸನ ಭದ್ರಕೋಟೆಯಲ್ಲಿ ಎರಡನೇ ಬಾರಿಗೆ ಬಸವನಗೌಡ ದದ್ದಲ್ ಕಾಂಗ್ರೇಸ್ ಪಕ್ಷದ ವತಿಯಿಂದ ಹಾಗೂ ತಿಪ್ಪರಾಜು ಹವಾಲ್ದಾರ್ ಅದೃಷ್ಟ ಪರೀಕ್ಷಗೆ ಮುಂದಾಗಿದ್ದಾರೆ.
ಸಂಭಾವ್ಯ ಅಭ್ಯರ್ಥಿಗಳು: ಕಾಂಗ್ರೇಸ್ ಪಕ್ಷದಿಂದ ಬಸವನಗವಡ ದದ್ದಲ್, ಮಟಮಾರಿ ಚಂದ್ರಶೇಖರನಾಯಕ, ಜನತದಾಳ ಪಕ್ಷದ ವತಿಯಿಂದ ಸಣ್ಣ ನರಸಿಂಹ ನಾಯಕ, ಬಿಜೆಪಿ ಪಕ್ಷದಿಂದ ತಿಪ್ಪರಾಜು ಹಾವಾಲ್ದಾರ್, ಕ,ಕ,ಪ್ರ,ಪಕ್ಷದಿಂದ ಖಾಸಿಂ ನಾಯಕ ಪ್ರಬಲ ಅಕಾಂಕ್ಷಿಗಳಾಗಿದ್ದಾರೆ,
ಮತದಾರರ ಪಟ್ಟಿ: ಪುರುಷರು: ಮಹಿಳೆಯರು:ತೃತೀಯ ಲಿಂಗಿಗಳು: ಒಟ್ಟು ಮತದಾರರು
ಕಳೆದ ಮೂರು ಚುನಾವಣೆಗಳ ಫಲಿತಾಂಶ:
ವರ್ಷ:೨೦೧೮:
ಗೆಲುವು: ಬಸವನಗೌಡ ದದ್ದಲ್ (ಕಾಂಗ್ರೇಸ್)೬೬೬೫೬ ಮತಗಳು.
ಸೋಲು: ತಿಪ್ಪರಾಜು ಹಾವಾಲ್ದಾರ್, (ಬಿಜೆಪಿ )೫೬೬೯೨ ಮತಗಳು.
ಅಂತರ:೯೯೬೪ ಮತಗಳು
೨೦೧೩:
ಗೆಲುವು ತಿಪ್ಪರಾಜು ಹಾವಾಲ್ದಾರ್, (ಬಿಜೆಪಿ )೫೦೪೯೭ ಮತಗಳು.
ಸೋಲು: ರಾಜಾರಾಯಪ್ಪ ನಾಯಕ (ಕಾಂಗ್ರೇಸ್) ೪೭೨೨೭ಮತಗಳು.
ಅಂತರ:೩೨೭೦ ಮತಗಳು.
೨೦೦೮:
ಗೆಲವು : ರಾಜಾರಾಯಪ್ಪ ನಾಯಕ (ಕಾಂಗ್ರೇಸ್) ೩೪೪೩೨ಮತಗಳು. :
ಸೋಲು:ರಾಜಾ ರಂಗಪ್ಪನಾಯಕ (ಜೆಡಿಎಸ್)೩೫೭೭೧ ಮತಗಳು
ಅಂತರ:೧೮೭೭ ಮತಗಳು.