ರಂಜಿತ್ ಎಚ್. ಅಶ್ವತ್ಥ ಬೆಂಗಳೂರು
ಪ್ರತಿ ಕ್ಷೇತ್ರಗಳಲ್ಲಿ ನಾಲ್ಕಕ್ಕೂ ಹೆಚ್ಚು ಟಿಕೆಟ್ ಆಕಾಂಕ್ಷಿಗಳು
ಡಿಡಿ ಪಡೆಯುತ್ತಿದ್ದಂತೆ ಹಲವು ನಿಬಂಧನೆ ವಿಧಿಸಿದ ಕೈ
ಆಕಾಂಕ್ಷಿಗಳು ಅರ್ಜಿಯಲ್ಲೇ ಮುಚ್ಚಳಿಕೆ ಬರೆಯಬೇಕು
ರಾಜ್ಯ ಕಾಂಗ್ರೆಸ್ ಮುಂದಿನ ವಿಧಾನಸಭಾ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸಿಕೊಳ್ಳುವ ಭಾಗವಾಗಿ, ಕೆಪಿಸಿಸಿ ಆರಂಭಿಸಿರುವ ‘ಅರ್ಜಿ ಆಹ್ವಾನ’ದ ಮುಂದುವರಿದ ಭಾಗವಾಗಿ ಇದೀಗ ‘ಬಂಡಾಯ ಸ್ಪರ್ಧೆ’ಗೆ ಬ್ರೇಕ್ ಹಾಕಲು ಪ್ಲಾನ್ ಮಾಡಿದೆ.
ಹೌದು, ಟಿಕೆಟ್ಗೆ ಅರ್ಜಿ ಸಲ್ಲಿಸಲು ಐದು ಸಾವಿರ ಹಾಗೂ ಅರ್ಜಿ ಸಲ್ಲಿಸುವಾಗ ಎರಡು ಲಕ್ಷ ಡಿ.ಡಿ. ಸಲ್ಲಿಸಬೇಕು ಎನ್ನುವ ನಿಯಮವನ್ನು ಮಾಡಿ, ಅದಕ್ಕಾಗಿ ಅರ್ಜಿ ನಮೂನೆ ಯನ್ನು ಕೆಪಿಸಿಸಿ ಬಿಡುಗಡೆ ಮಾಡಿತ್ತು. ಇದೀಗ ಈ ನಮೂನೆಯಲ್ಲಿ ಹಲವಾರು ನಿಬಂಧನೆಗಳನ್ನು ವಿಧಿಸಿವೆ. ಅದರಲ್ಲಿ ಪ್ರಮುಖವಾಗಿ, ಯಾರಿಗಾದರೂ ಟಿಕೆಟ್ ಕೈತಪ್ಪಿ ದರೆ ಯಾವುದೇ ಕಾರಣಕ್ಕೂ ಬಂಡಾಯ ಅಥವಾ ಪರ್ಯಾಯ ಪಕ್ಷದಿಂದ ಸ್ಪರ್ಧಿಸುವು ದಿಲ್ಲ ಎನ್ನುವ ಮುಚ್ಚಳಿಕೆ ಬರೆದುಕೊಡ ಬೇಕು ಎನ್ನುವ ಸ್ಪಷ್ಟ ಸೂಚನೆ ನೀಡಿದೆ.
ಒಂದೊಂದು ಕ್ಷೇತ್ರದಿಂದ ಕನಿಷ್ಠ ನಾಲ್ಕರಿಂದ ಐದು ಆಕಾಂಕ್ಷಿಗಳಿದ್ದಾರೆ. ಈ ಐವರಲ್ಲಿ ಕೇವಲ ಒಬ್ಬರಿಗೆ ಮಾತ್ರ ಟಿಕೆಟ್ ಸಿಗುವ ಸಾಧ್ಯತೆಯಿರುತ್ತದೆ. ಆದರೆ ಟಿಕೆಟ್ ತಪ್ಪಿದವರು ಪಕ್ಷಬಿಟ್ಟು ಬಂಡಾಯವಾಗಿ ಸ್ಪರ್ಧಿಸುವ ಆತಂಕವಿರುವುದರಿಂದ, ಟಿಕೆಟ್ ಸಿಗದಿದ್ದರೂ ಬಂಡಾಯವೇಳುವಂತಿಲ್ಲ ಎನ್ನುವ ಸೂಚನೆಯನ್ನು ನೀಡಿದೆ.
ಡಿಡಿ ಹಣ ವಾಪಸ್ ಕೇಳುವಂತಿಲ್ಲ!
ಇದಿಷ್ಟೇ ಅಲ್ಲದೇ ಅರ್ಜಿ ಸಲ್ಲಿಸುವವರು ಸಾಮಾನ್ಯ ವರ್ಗದವರಾಗಿದ್ದರೆ ಎರಡು ಲಕ್ಷ ಹಾಗೂ ಎಸ್ಸಿ, ಎಸ್ಟಿ ಆಗಿದ್ದರೆ
ಒಂದು ಲಕ್ಷ ಪಾವತಿಸಬೇಕು ಎನ್ನುವ ಸೂಚನೆಯನ್ನು ಈ ಹಿಂದೆಯೇ ನೀಡಲಾಗಿತ್ತು. ಆದರೀಗ ಅರ್ಜಿಯಲ್ಲಿ, ಒಂದು ವೇಳೆ
ಡಿಡಿ ಕೊಟ್ಟವರಿಗೆ ಟಿಕೆಟ್ ಸಿಗದಿದ್ದರೆ ಅದನ್ನು ವಾಪಸು ಕೇಳುವಂತಿಲ್ಲ ಎನ್ನುವ ಷರತ್ತನ್ನು ಕಾಂಗ್ರೆಸ್ ವಿಧಿಸಿದೆ.
ಅರ್ಜಿಯಲ್ಲಿ ನೀಡಬೇಕಾದ ವಿವರಗಳೇನು?
ಈ ಹಿಂದೆ ಯಾವುದಾದರೂ ಚುನಾವಣೆಯಲ್ಲಿ ಸ್ಪರ್ಧಿಸಿದ್ದರೆ ಅದರ ಮಾಹಿತಿ ಪಕ್ಷವನ್ನು ತ್ಯಜಿಸಿ, ಪುನಃ ಪಕ್ಷಕ್ಕೆ ಸೇರ್ಪಡೆ ಯಾಗಿದ್ದರೆ, ಆ ಬಗ್ಗೆ ಮಾಹಿತಿ ಮತ್ತು ಕಾರಣ ಬ್ಲಾಕ್, ತಾಲೂಕು, ಜಿಲ್ಲಾ ಮಟ್ಟದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿ ರುವ ಮಾಹಿತಿ ಸಾಮಾಜಿಕ ಕಾರ್ಯದ ಬಗ್ಗೆ ವಿವರ ಆಕಾಂಕ್ಷಿಯ ಮೇಲೆ ಯಾವುದಾದರೂ ಕ್ರಿಮಿನಲ್ ಮೊಕ್ಕದಮೆಗಳಿದ್ದರೆ ಮಾಹಿತಿ ಬಂಡಾಯವಾಗಿ ಸ್ಪರ್ಧಿಸುವುದಿಲ್ಲ ಎನ್ನುವ ಬಗ್ಗೆ ಅಫಿಡೆವಿಟ್ ಟಿಕೆಟ್ ಸಿಗದಿದ್ದರೆ ಏನು ಮಾಡಬೇಕು?
ಟಿಕೆಟ್ ಸಿಗದಿದ್ದರೆ ಪರ್ಯಾಯವಾಗಿ ಅಥವಾ ಬಂಡಾಯವಾಗಿ ಸ್ಪರ್ಧಿಸುವಂತಿಲ್ಲ ಎನ್ನುವ ಷರತ್ತಿಗೆ ಅನೇಕರು ಆಕ್ಷೇಪ
ವ್ಯಕ್ತಪಡಿಸಿದ್ದಾರೆ. ಮುಂದಿನ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ನಾವು ಹಲವು ಸಿದ್ಧತೆ ಮಾಡಿಕೊಂಡಿರುತ್ತೇವೆ. ಒಂದು ವೇಳೆ ಟಿಕೆಟ್ ಸಿಗದಿದ್ದರೆ ಅನಿವಾರ್ಯವಾಗಿ ಬಂಡಾಯವಾಗಿ ಅಥವಾ ಇತರ ಪಕ್ಷದಿಂದ ಸ್ಪರ್ಧಿಸಲೇಬೇಕಾಗುತ್ತದೆ. ಆದರೆ ಈ ರೀತಿ ಬಂಡಾಯ ಸ್ಪರ್ಧಿಸುವಂತಿಲ್ಲ ಎಂದು ಷರತ್ತು ವಿಧಿಸುವುದು ಸರಿಯಲ್ಲ ಎನ್ನುವ ಮಾತುಗಳನ್ನು ಆಕಾಂಕ್ಷಿಗಳು ಹೇಳಿದ್ದಾರೆ.
ಅರ್ಜಿಗೆ ಭಾರಿ ಬೇಡಿಕೆ
ಕಾಂಗ್ರೆಸ್ ಮೂಲಗಳ ಪ್ರಕಾರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಪಡೆಯಬೇಕಾದ ಅರ್ಜಿಗೆ ಭರ್ಜರಿ ಬೇಡಿಕೆಯಿದೆ ಎನ್ನಲಾಗಿದೆ. ಹಲವು ಆಕಾಂಕ್ಷಿಗಳು, ಐದು ಸಾವಿರ ರು. ಪಾವತಿಸಿ ಅರ್ಜಿಯನ್ನು ಪಡೆಯುತ್ತಿದ್ದಾರೆ. ಖರ್ಗೆ ಕಾರ್ಯಕ್ರಮಕ್ಕೆ ಭಾಗವಹಿಸಲು ಆಗಮಿಸಿರುವ ಅನೇಕರು, ವಾಪಸು ಹೋಗುವಾಗ ಅರ್ಜಿಯನ್ನು ಪಡೆದಿದ್ದಾರೆ.
16ರೊಳಗೆ ಎರಡು ಲಕ್ಷ ಡಿಡಿ ತೆಗೆದುಕೊಂಡು ಅರ್ಜಿ ಸಲ್ಲಿಸಲಿದ್ದಾರೆ. ಟಿಕೆಟ್ ಪಡೆಯಲು ಹಲವು ರೀತಿಯಲ್ಲಿ ಖರ್ಚು ಮಾಡುವುದು ಸಾಮಾನ್ಯ. ಅದರಲ್ಲಿ ಈ ರೀತಿ ಅಧಿಕೃತವಾಗಿಯೇ ಪಕ್ಷಕ್ಕೆ ಹಣ ಕೊಡುವುದು ದೊಡ್ಡ ಸಮಸ್ಯೆಯೇನಲ್ಲ ಎನ್ನುವ
ಮಾತನ್ನು ಕೆಲ ಆಕಾಂಕ್ಷಿಗಳು ಹೇಳಿದ್ದಾರೆ.