ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಮೂರುವರೆ ಸಾವಿರಕ್ಕೂ ಹೆಚ್ಚು ಅರ್ಜಿಗಳಿಗೆ ನೆರವು
ರಂಜಿತ್ ಎಚ್. ಅಶ್ವತ್ಥ ಬೆಂಗಳೂರು
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೂರು ತಿಂಗಳಲ್ಲಿ ಸಿಎಂ ಪರಿಹಾರ ನಿಧಿ ದಾಖಲೆ ಪ್ರಮಾಣ ದಲ್ಲಿ ವಿತರಣೆ ಯಾಗಿದೆ. ಬಡವರ ಪಾಲಿನ ಸಂಜೀವಿನಿ ಎಂದೇ ಹೇಳ ಲಾಗುವ ‘ಮುಖ್ಯಮಂತ್ರಿ ಗಳ ಪರಿಹಾರ ನಿಧಿ’ಯಲ್ಲಿ ಮೂರು ತಿಂಗಳಲ್ಲಿ ೨೮ ಕೋಟಿ ರು.ಗೂ ಹೆಚ್ಚು
ಅನುದಾನ ನೀಡುವ ಮೂಲಕ ‘ಜನಪರ ಸರಕಾರ’ ಎನಿಸಿದೆ.
ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಅಧಿಕಾರ ಸ್ವೀಕರಿಸಿದ ಮೆ ೨೦ರಿಂದ ಸೆ.೧೫ರವರೆಗೆ ಈ ಪರಿಹಾರ ನಿಧಿಯಿಂದ ಸುಮಾರು ೨೮ ಕೋಟಿ ರು. ಗೂ ಹೆಚ್ಚು ಅನುದಾನ ವಿತರಿಸಲಾಗಿದೆ. ಇದರೊಂದಿಗೆ ಹಿಮಾಚಲ ಪ್ರದೇಶದಲ್ಲಿ ಸಂಭವಿಸಿದ ನೈಸರ್ಗಿಕ ವಿಕೋಪಕ್ಕೆ ೧೫ ಕೋಟಿ ರು. ಹಾಗೂ ಹಿಂದೂ ಪರ ಸಂಘಟನೆಗಳಿಂದ ಹತ್ಯೆಯಾಗಿದ್ದ ಆರು ಮಂದಿಗೆ ೧.೫೦ ಕೋಟಿ ರು. ಪರಿಹಾರ ವಿತರಿಸಲಾಗಿದೆ. ಇದನ್ನು ಹೊರತುಪಡಿಸಿ, ಸುಮಾರು ಮೂರು ಸಾವಿರಕ್ಕೂ ಹೆಚ್ಚು ಅರ್ಜಿಗಳಿಗೆ ಸಹಾಯಧನವನ್ನು ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಪರಿಹಾರ ನಿಽಯಿಂದ ನೆರವು ಕೋರಿ ಸಿಎಂ ಅಽಕೃತ ಕಚೇರಿ ಹಾಗೂ ನಿವಾಸಕ್ಕೆ ನಿತ್ಯ ಸಾವಿರಾರು ಅರ್ಜಿಗಳು ಬರುತ್ತದೆ. ಆರೋಗ್ಯ, ಶಿಕ್ಷಣ ಸೇರಿ ಹಲವು ಕಾರಣಗಳಿಗೆ ಸಹಾಯಕ್ಕಾಗಿ ಅರ್ಜಿಗಳು ಸಲ್ಲಿಕೆಯಾಗುತ್ತವೆ. ಎಲ್ಲ ಅರ್ಜಿಗಳನ್ನು ಪರಿಶೀಲಿಸಿ, ‘ಅರ್ಹ‘ರಿಗೆ ಮಾತ್ರ ಅನುದಾನವನ್ನು ಸಿಎಂ ಗಮನಕ್ಕೆ ತಂದು ವಿತರಿಸಲಾಗುತ್ತದೆ. ಎರಡನೇ ಅವಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರ ಸ್ವೀಕರಿಸಿಕೊಂಡ ಬಳಿಕ ಸುಮಾರು ೫,೨೦೩ ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ೪,೭೦೬ ಅರ್ಜಿಗಳಿಗೆ ಈಗಾಗಲೇ ಸಹಾಯಧನ ವಿತರಿಸಲಾಗಿದೆ.
ಇನ್ನುಳಿದ ೫೦೦ಕ್ಕೂ ಹೆಚ್ಚು ಅರ್ಜಿಗಳು ಪರಿಶೀಲನೆ ಮಾಡಲಾಗುತ್ತಿದೆ. ಕೆಲವರು ಅರ್ಜಿ ಸಲ್ಲಿಸಿದ್ದಾರೆ. ಆದರೆ ಅದಕ್ಕೆ ಪೂರಕವಾಗಿ ನೀಡಬೇಕಿರುವ ಬಿಪಿಎಲ್ ಕಾರ್ಡ್ ಸೇರಿದಂತೆ ಇನ್ನುಳಿದ ಕೆಲ ದಾಖಲೆಗಳನ್ನು ಸಲ್ಲಿಸಿಲ್ಲ. ಇದರೊಂದಿಗೆ ಕೆಲವರು ಅರ್ಜಿ ಸಲ್ಲಿಸಿದ್ದಾರೆಯೇ ಹೊರತು, ಯಾವುದೇ ರೀತಿಯ ಮಾಹಿತಿ ನೀಡಿಲ್ಲ. ಹೀಗಾಗಿ ಅಂತಹ ಅರ್ಜಿಗಳು ಪರಿಶೀಲನೆ ಹಂತದಲ್ಲಿದೆ ಎಂದು ಮೂಲಗಳು ತಿಳಿಸಿವೆ.
ಡಿಬಿಟಿಯಿಂದ ಪರಿಹಾರ ವಿತರಣೆ: ಇಷ್ಟು ದಿನ ಚೆಕ್ ಮೂಲಕ ಆರ್ಥಿಕ ನೆರವು ನೀಡಲಾಗುತ್ತಿತ್ತು. ಆದರೆ, ಇದರಿಂದ ಹಲವು ಸಮಸ್ಯೆಗಳಾಗುತ್ತಿದ್ದವು.
ಪ್ರಮುಖವಾಗಿ ಚೆಕ್ನಲ್ಲಿ ಬರೆಯುವ ಹೆಸರು ತಪ್ಪಾದರೆ, ಚೆಕ್ ಬೌನ್ಸ್ ಹಾಗೂ ಚೆಕ್ ಅನ್ನು ಬ್ಯಾಂಕ್ಗೆ ಯಾವ ರೀತಿ ಹಾಕಬೇಕು ಎನ್ನುವುದು ಹಲವರಿಗೆ ತಿಳಿಯದೇ ಇರುವುದರಿಂದ ಇದೀಗ ಚೆಕ್ ಬದಲಿಗೆ ಡಿಬಿಟಿ ಮೂಲಕ ನೆರವು ನೀಡಲಾಗುತ್ತಿದೆ. ಅಧಿಕಾರಿಗಳ ಪ್ರಕಾರ, ಮುಖ್ಯಮಂತ್ರಿಗಳಿಂದ ಒಪ್ಪಿಗೆ ಸಿಕ್ಕ ೨೪ ಗಂಟೆಯೊಳಗೆ ಫಲಾನುಭವಿಗಳ ಖಾತೆಗೆ ಅನುದಾನ ಸಂದಾಯವಾಗಲಿದೆ.
ದೇಣಿಗೆಯಿಂದ ಸಂಗ್ರಹಿಸುವ ನಿಧಿ ಮುಖ್ಯಮಂತ್ರಿಗಳ ಪರಿಹಾರ ನಿಧಿ ನಡೆಯುವುದು ಸರಕಾರದ ಅನುದಾನದಲ್ಲಿ ಅಲ್ಲ. ಬದಲಿಗೆ ವಿವಿಧ ಸಂಘಟನೆಗಳು, ಖಾಸಗಿ ವ್ಯಕ್ತಿಗಳು ಹಾಗೂ ಖಾಸಗಿ ಕಂಪನಿಗಳು ಸೇರಿದಂತೆ ಸರಕಾರದ ಸ್ವಾಯತ್ತ ಸಂಸ್ಥೆಗಳು ನೀಡುವ ದೇಣಿಗೆಯಿಂದ ಸಂಗ್ರಹವಾಗುವ ಅನುದಾನದಲ್ಲಿ. ಈ ಪರಿಹಾರ ನಿಧಿಗೆ ನೀಡುವ ದೇಣಿಗೆಗೆ ೮೦ರಷ್ಟು ತೆರಿಗೆ ವಿನಾಯಿತಿಯೂ ಸಿಗಲಿದೆ. ಕೆಲವೊಮ್ಮೆ ಖಾಸಗಿ ಸಂಸ್ಥೆಗಳು ಸಿಎಸ್ಆರ್ ಫಂಡ್ಗಳನ್ನು ಈ ನಿಽಗೆ
ದೇಣಿಗೆಯಾಗಿ ನೀಡುತ್ತವೆ.
ಆರೋಗ್ಯಕೆ ಸಿಂಹಪಾಲು
ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ನೀಡುವ ಪರಿಹಾರ, ಮುಖ್ಯಮಂತ್ರಿಗಳ ವಿವೇಚನೆಗೆ ಬಿಡಲಾಗಿರುತ್ತದೆ. ಆದರೆ, ಶೇ.೮೦ಕ್ಕೂ ಹೆಚ್ಚು ಮೊತ್ತವನ್ನು ಅರೋಗ್ಯ ಕಾರಣಕ್ಕಾಗಿ ಸಲ್ಲಿಕೆಯಾಗಿರುವ ಅರ್ಜಿಗಳಿಗೆ ನೀಡಲಾಗುತ್ತದೆ. ಇದರೊಂದಿಗೆ ಅಪಘಾತ ದಿಂದ ಮೃತಪಟ್ಟವರು, ಆರ್ಥಿಕ ಸಹಾಯ ಹಾಗೂ ನೈಸರ್ಗಿಕ ವಿಕೋಪದಲ್ಲಾಗುವ ಸಮಸ್ಯೆಗೂ ಪರಿಹಾರ ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕ್ರಿಯೆ ಹೇಗೆ?
ಯಾವ ಕಾರಣಕ್ಕೆ ಸಹಾಯಧನ ಬೇಕೆಂದು ಪತ್ರ ಬರೆಯಬೇಕು
ಅಗತ್ಯ ದಾಖಲೆಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿ ವಿಭಾಗಕ್ಕೆ ಸಲ್ಲಿಸಬೇಕು
ಈ ದಾಖಲೆ ಹಾಗೂ ಪತ್ರವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು
ಸಿಎಂ ಒಪ್ಪಿದ ಬಳಿಕ ಫಲಾನುಭವಿಗಳಿಗೆ ಡಿಬಿಟಿ ಮೂಲಕ ಅನುದಾನ ವಿತರಣೆ.