ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Karnataka Budget 2025: ಇಂದು ರಾಜ್ಯ ಬಜೆಟ್‌ ಮಂಡನೆ: ಗಾತ್ರ ರೂ.4 ಲಕ್ಷ ಕೋಟಿ ಸಾಧ್ಯತೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ದಾಖಲೆಯ 16ನೇ ಬಜೆಟ್ ಮಾರ್ಚ್ 7ರಂದು ಮಂಡನೆಯಾಗಲಿದ್ದು, ಈ ಬಾರಿ ಆಯವ್ಯಯದ ಗಾತ್ರ ಸುಮಾರು 4 ಲಕ್ಷ ಕೋಟಿ ರು. ಮೀರುವ ಸಾಧ್ಯತೆ ಇದೆ. ಕಳೆದ ಬಾರಿ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡಿಸಿದ್ದ ಸಿದ್ದರಾಮಯ್ಯ ಅವರು ಈಗ ಆದಷ್ಟೂ ವಾಸ್ತವ ಹಾಗೂ ಸಮತೋಲಿತ ಬಜೆಟ್ ಮಂಡಿಸುವ ಪ್ರಯತ್ನದಲ್ಲಿದ್ದಾರೆ

ಇಂದು ರಾಜ್ಯ ಬಜೆಟ್‌ ಮಂಡನೆ: ಗಾತ್ರ ರೂ.4 ಲಕ್ಷ ಕೋಟಿ ಸಾಧ್ಯತೆ

Profile Ashok Nayak Mar 6, 2025 7:45 AM

ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು

ಸಿಎಂ ಸಿದ್ದು 16ನೇ ಆಯವ್ಯಯಕ್ಕೆ ಕ್ಷಣಗಣನೆ, ಹೊಸ ಯೋಜನೆಗಳ ಜತೆ ಹೂಡಿಕೆಗೆ ಆದ್ಯತೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ದಾಖಲೆಯ 16ನೇ ಬಜೆಟ್ ಮಾರ್ಚ್ 7 ರಂದು ಮಂಡನೆಯಾಗಲಿದ್ದು, ಈ ಬಾರಿ ಆಯವ್ಯಯದ ಗಾತ್ರ ಸುಮಾರು 4 ಲಕ್ಷ ಕೋಟಿ ರು. ಮೀರುವ ಸಾಧ್ಯತೆ ಇದೆ. ಕಳೆದ ಬಾರಿ ಲೋಕಸಭಾ ಚುನಾವಣೆಯನ್ನು ಗಮನ ದಲ್ಲಿಟ್ಟುಕೊಂಡು ಬಜೆಟ್ ಮಂಡಿಸಿದ್ದಸಿದ್ದರಾಮಯ್ಯ ಅವರು ಈಗ ಆದಷ್ಟೂ ವಾಸ್ತವ ಹಾಗೂ ಸಮತೋಲಿತ ಬಜೆಟ್ ಮಂಡಿಸುವ ಪ್ರಯತ್ನದಲ್ಲಿದ್ದಾರೆ ಎನ್ನಲಾಗಿದೆ. ಒಂದು ಕಡೆ ಗ್ಯಾರಂಟಿಗಳ ಹೊರೆ, ಮತ್ತೊಂದು ಕಡೆ ಬೃಹತ್ ಯೋಜನೆಗಳಿಗೆ ಅನುದಾ ನದ ಕೊರತೆ, ಮತ್ತೊಂದು ಕಡೆ ರಾಜಸ್ವ ಕೊರತೆಯ ನಡುವೆ ಸಾಲ ಪಡೆದು, ಆರ್ಥಿಕ ಶಿಸ್ತು ಕಾಪಾಡುವ ತುಂಬಾ ಬುದ್ಧಿವಂತಿಕೆ ಬಜೆಟ್ ಮಂಡಿಸಲು ಸಿದ್ದರಾಮಯ್ಯ ಅವರು ಸರ್ವ ತಯಾರಿ ಮಾಡಿzರೆ ಎಂದು ಹೇಳಲಾಗುತ್ತಿದೆ.

ಕಳೆದ ಬಾರಿ 3.71ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡಿಸಿದ್ದ ಸಿದ್ದರಾಮಯ್ಯ, ರಾಜಸ್ವ ವೆಚ್ಚ 2.90ಲಕ್ಷ ಕೋಟಿಗೂ ಅಧಿಕವಾಗಿ, ಬಂಡವಾಳ ವೆಚ್ಚ ಕೇವಲ 55ಸಾವಿರ ಕೋಟಿಗೆ ಇಳಿದಿತ್ತು. ಇದರ ಮಧ್ಯೆ, ಕೇಂದ್ರ ಸರಕಾರದಿಂದ ಲಭಿಸಬೇಕಿದ್ದ ರಾಜ್ಯದ ತೆರಿಗೆ ಪಾಲು, ಜಿಎಸ್ ಟಿ ಹಂಚಿಕೆ ಕೊರತೆಯಿಂದ ರಾಜ್ಯದಲ್ಲಿ ಆದಾಯ ಕೊರತೆಯಾಗಿತ್ತು, ಬದಲಾಗಿ ಯೋಜನೆಗಳಿಗೆ ಬಂಡವಾಳ ಹೂಡಿಕೆ ವೆಚ್ಚಗಳು ಕಷ್ಟವಾಗಿತ್ತು. ಇದರೊಂದಿಗೆ ಕೇಂದ್ರ ದಿಂದ ನಿರೀಕ್ಷೆ ಮಾಡಿದ್ದ ವಿಶೇಷ ಅನುದಾನ ಕೂಡ ಕೈ ತಪ್ಪಿತ್ತು.

ಇದನ್ನೂ ಓದಿ: Karnataka Budget 2025: ಕರ್ನಾಟಕ ರಾಜ್ಯ ಬಜೆಟ್ 2025 ಯಾವಾಗ? ಮಂಡನೆ ಎಷ್ಟು ಗಂಟೆಗೆ? ನಿರೀಕ್ಷೆಗಳೇನು?

ಇಂಥ ಸಮಸ್ಯೆಗಳು ಈ ಬಾರಿ ಸರಿದೂಗಿಸಲು ಹೆಚ್ಚಿನ ಆದಾಯದ ಮೂಲಗಳು ಮತ್ತು ಹಣ ಉಳಿತಾಯ ದಾರಿಗಳನ್ನು ಹುಡುಕಿ ಕೆಲವು ಹೊಸ ಘೋಷಣೆಗಳನ್ನೂ ಮಾಡುವ ನಿರೀಕ್ಷೆ ಇದೆ. ಮುಖ್ಯವಾಗಿ ಆರ್ಥಿಕ ಶಿಸ್ತಿಗೆ ಹೆಸರಾದ ಸಿದ್ದರಾಮಯ್ಯ ಅವರು ಈ ಬಾರಿ ಬಜೆಟ್ ಗಾತ್ರ ಹೆಚ್ಚಿಸಿ, ಅದಕ್ಕೆ ಅನುಗುಣವಾಗಿ ಸಾಲ ಪಡೆಯುವ ಪ್ರಮಾಣವನ್ನೂ ಏರಿಕೆ ಮಾಡಿ ವಿತ್ತೀಯ ಕೊರತೆಯನ್ನು (ಜೆಎಸ್ ಡಿಪಿಯ ಶೇ.3 ಒಳಗೆ) ಮಿತಿಯಲ್ಲಿ ತೋರಿಸಲು ಪ್ರಯತ್ನ ನಡೆಸುವ ಸಾಧ್ಯತೆ ಇದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ.

ಎಣ್ಣೆ ದರ ಏರಿಕೆ ಸಾಧ್ಯತೆ ಇಲ್ಲ

ಕಳೆದ ವರ್ಷದ ಬಜೆಟ್‌ನಲ್ಲಿ ಸುಮಾರು 105246 ಕೋಟಿ ರು. ಸಾಲ ಮಾಡಲು ಅಂದಾ ಜಿಸಿದ್ದ ಸಿದ್ದರಾಮಯ್ಯ ಅವರು ಈ ಬಾರಿ ಇನ್ನೂ ಹೆಚ್ಚಿನ ಸಾಲದ ಮೊರೆ ಹೋಗುವ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ. ಸುಮಾರು 1.25 ಲಕ್ಷ ಕೋಟಿ ರು. ವರೆಗೂ ಸಾಲ ಪಡೆಯಲು ಆರ್ಥಿಕ ಇಲಾಖೆ ತನ್ನ ಪ್ರಮಾಣ ಹಿಗ್ಗಿಸಿಕೊಳ್ಳುವ ಪ್ರಯತ್ನ ನಡೆಸಿದೆ ಎನ್ನ ಲಾಗಿದೆ. ಇದರಿಂದ ಸಹಜವಾಗಿಯೇ ಬಡ್ಡಿ ಪಾವತಿ ಅಂದಾಜು ಕೂಡ 45000 ಕೋಟಿ ರು. ಏರಿಕೆಯಾಗುವ ಸಂಭವ ಕಾಣುತ್ತಿದೆ.

ಇನ್ನು ಪಂಚ ಗ್ಯಾರಂಟಿಗಳ ಯೋಜನೆಯಿಂದಾಗುವ 52 ಸಾವಿರ ಕೋಟಿ ರು. ಹೊರೆ ಯನ್ನು ಅಷ್ಟು ಸುಲಭವಾಗಿ ಕಡಿಮೆ ಮಾಡಲಾಗದು ಎನ್ನುವುದನ್ನು ಮನಗಂಡಿರುವ ಸಿದ್ದರಾಮಯ್ಯ ಅವರು, ಏಕಾಏಕಿ ಕಡಿವಾಣ ಹಾಕದೆ, ಇದಕ್ಕಾಗಿ ಇತರ ಮೂಲಗಳಿಂದ ಆದಾಯ ಕ್ರೋಢೀಕರಿಸುವ ಯೋಚನೆಯಲ್ಲಿದ್ದಾರೆ ಎಂದು ಅರ್ಥಿಕ ಇಲಾಖೆ ಅಧಿಕಾರಿ ಗಳು ತಿಳಿಸಿದ್ದಾರೆ. ಈ ಬಾರಿ ವಿವಿಧ ತೆರಿಗೆ ಮೂಲಗಳಿಂದ ಸುಮಾರು 2 ಲಕ್ಷ ಕೋಟಿ ವರೆಗೂ ಸಂಗ್ರಹಿಸುವ ಲೆಕ್ಕಾಚಾರದಲ್ಲಿರುವ ಸಿದ್ದರಾಮಯ್ಯ ಅವರು, ಕೆಲವು ಸೆಸ್ ಮತ್ತು ಸಣ್ಣಪುಟ್ಟ ತೆರಿಗೆಗಳ ಹೆಚ್ಚಳಕ್ಕೂ ಕೈಹಾಕುವ ಸಂಭವವಿದೆ ಎಂದು ಮೂಲಗಳು ಹೇಳಿವೆ.

ಆದರೆ ಕಳೆದ ವರ್ಷ ಎರಡು ಬಾರಿ ಅಬಕಾರಿ ಮೇಲಿನ ತೆರಿಗೆ ಏರಿಕೆ ಮಾಡಿರುವುದರಿಂದ ಮತ್ತೆ ಈ ಬಜೆಟ್ ನಲ್ಲಿ ಅಬಕಾರಿ ತೆರಿಗೆ ಹೆಚ್ಚಿಸುವ ಸಾಧ್ಯತೆಯನ್ನು ತಳ್ಳಿ ಹಾಕಲಾಗುತ್ತಿದೆ.

ಹೂಡಿಕೆ, ಉಳಿತಾಯಕ್ಕೆ ಆದ್ಯತೆ

ಬಿಡದಿ ಟೌನ್‌ಶಿಪ್ ನೆಲಮಂಗಳ ಬಳಿ ಕ್ವಿನ್ ಸಿಟಿ ಯೋಜನೆಗಳ ಮೂಲಕ ರೈತರಿಂದ ಭೂಮಿ ಖರೀದಿಸಿ ಅವರಿಗೆ ಪರಿಹಾರ ನೀಡುವುದರ ಜತೆಗೆ ಅಭಿವೃದ್ಧಿಪಡಿಸಿ ಜಾಗವನ್ನು ಖಾಸಗಿ ಹೂಡಿಕೆಗೆ ನೀಡುವ ಆದಾಯ ಹೆಚ್ಚಳ ಕೆಲವು ಯೋಜನೆಗಳಿಗೂ ಚಿಂತನೆ ನಡೆಸ ಲಾಗುತ್ತಿದೆ. ಜತೆಗೆ ಕೆಲವು ಪಿಪಿಪಿ ಮಾದರಿಯ ಯೋಜನೆಗಳನ್ನೂ ಘೋಷಣೆ ಮಾಡಿ ಗ್ಯಾರಂಟಿಗಳಿಂದ ಬೃಹತ್ ಯೋಜನೆಗಳಿಗೆ ಹಣವಿಲ್ಲ ಎನ್ನುವ ಟೀಕೆ ದೂರ ಮಾಡುವ ಪ್ರಯತ್ನವೂ ನಡೆದಿದೆ. ಖಾಸಗಿ ಸಾಲದ ಬದಲು ಕೆಲವು ಇಲಾಖೆ, ನಿಗಮಗಳ ನಡುವೆ ಸಾಲ ಕೊಟ್ಟು ತೆಗೆದುಕೊಳ್ಳುವ ವ್ಯವಸ್ಥೆ ಬಗ್ಗೆಯೂ ಪ್ರಸ್ತಾಪಿಸುವ ಸಂಭವ ಕಾಣುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇನ್ನು ಕೆಲವು ಹೊಸ ಘೋಷಣೆಗಳ ಮಧ್ಯೆ, ಕೆಲವು ಹೊಸ ಜಿಲ್ಲೆಗಳ ಜತೆಗೆ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಘೋಷಿಸುವ ಸಾಧ್ಯತೆ ಹೆಚ್ಚಾಗಿದೆ.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಬೇಡಿಕೆ ಮತ್ತು ಬೆಂಗಳೂರು ನಗರ ವ್ಯಾಪ್ತಿಯ ಜಮೀನಿನ ಬೆಲೆ ರಾಮನಗರ ಜಿಲ್ಲೆಯಲ್ಲೂ ಸಿಗುವಂತಾಗಬೇಕು. ಆ ಮೂಲಕ ರೀಯಲ್ ಎಸ್ಟೇಟ್ ವಹಿವಾಟು ಹೆಚ್ಚಾಗಿ ಸರಕಾರಕ್ಕೆ ಆದಾಯ ಹರಿದು ಬರಬೇಕೆನ್ನುವ ಲೆಕ್ಕಾಚಾರ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.