ಬೆಂಕಿ ಬಸಣ್ಣ ನ್ಯೂಯಾರ್ಕ್
ಅಮೆರಿಕ ಮೊರೀಸ್ವಿಲ್ ಮೇಯರ್ರಿಂದ ಗೌರವ
ಕರ್ನಾಟಕ ಕಲಾಶ್ರೀ, ನೃತ್ಯ
ಗುರು, ಕ್ರಿಕೆಟ್ ಪೋಷಕಿ, ಸಮಾಜ ಸೇವಕಿಯಾಗಿರುವ ಸುಪ್ರಿಯಾ ದೇಸಾಯಿ
ನೃತ್ಯ, ಸಮಾಜ ಸೇವೆ ಹಾಗೂ ಅಮೆರಿಕದಲ್ಲಿ ಕ್ರಿಕೆಟ್ ಪೋಷಣೆಯ ಮೂಲಕ ಹೆಸರಾಗಿ ರುವ ಕರ್ನಾಟಕ ಕಲಾಶ್ರೀ ಸುಪ್ರಿಯಾ ದೇಸಾಯಿ ಅವರಿಗೆ ಅಮೆರಿಕದ ಮೊರೀಸ್ವಿಲ್ನ ಮೇಯರ್ ಟಿ.ಕೆ.ಕಾಲಿ ಅವರು ಗೌರವಿಸಿರುವ ಸನ್ಮಾಸಿ ದರು.
ಕೆಲದಿನಗಳ ಹಿಂದೆ ನಡೆದ ಕಾರ್ಯಕ್ರಮದಲ್ಲಿ ಅಮೆರಿಕದ ಉತ್ತರ ಕ್ಯಾರೋಲಿನಾದ ಮೊರೀಸ್ವಿಲ್ ನಗರದ ಮೇಯರ್ ಟಿ.ಜೆ. ಕಾಲಿ ಅವರು ಸುಪ್ರಿಯಾ ಅವರನ್ನು ಗೌರವಿಸಿದರು. ಕರ್ನಾಟಕ ಕಲಾಶ್ರೀಯಾಗಿರುವ ಸುಪ್ರಿಯಾ ದೇಸಾಯಿ ಅವರು, ಕಳೆದ ಮೂರು ದಶಕಗಳಿಂದ ನೃತ್ಯಗುರುವಾಗಿ, ಕ್ರಿಕೆಟ್ ಪೋಷಕಿ, ಸಮಾಜ ಸೇವಕಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ವಿಶಿಷ್ಟ ಸೇವೆಯನ್ನು ಗುರುತಿಸಿ ಮೇಯರ್ ಕಾಲಿ ಅವರು, ಪ್ರತಿಷ್ಠಿತ ಮಾನ್ಯತಾ ಪತ್ರವನ್ನು ನೀಡಿ ಸನ್ಮಾನಿಸಿದರು.
ಸುಪ್ರಿಯಾ ಅವರು ಮೂಲತಃ ಬೆಂಗಳೂರಿನವರು. ರಾಜಧಾನಿ ಬೆಂಗಳೂರಿನಲ್ಲಿ ಜನಿಸಿದ ಅವರು, ೩೩ ವರ್ಷಗಳ ಹಿಂದೆ ಉತ್ತರ ಕ್ಯಾರೋಲಿನಾದ ರಿಸರ್ಚ್ ಟ್ರೈ ಆಂಗಲ್ ಪ್ರದೇಶಕ್ಕೆ ವಲಸೆ ಹೋಗಿ, ಅಪಾರ ಸಾಧನೆಗಳನ್ನು
ಮತ್ತು ಸಮಾಜ ಸೇವೆಯನ್ನು ಮಾಡಿದ್ದಾರೆ. ಭರತನಾಟ್ಯ ಮತ್ತು ಕುಚಿಪುಡಿ ನೃತ್ಯಗುರು ಸುಪ್ರಿಯಾ ದೇಸಾಯಿ ಯವರು ೧೯೯೩ರಲ್ಲಿ ತಮ್ಮ ನೃತ್ಯಶಾಲೆ ‘ಪಾಯಲ್ ಡಾ ಅಕಾಡೆಮಿ’ಯನ್ನು ಸ್ಥಾಪಿಸಿ ಸಾವಿರಾರು ಮಕ್ಕಳಿಗೆ ನೃತ್ಯ
ಕಲಿಸಿದ್ದಾರೆ. ಕೆಲ ವರ್ಷಗಳ ಹಿಂದೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ಇವರಿಗೆ ಕರ್ನಾಟಕ ಕಲಾಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಪ್ರಶಸ್ತಿ ಪ್ರದಾನ: ಅಂತಾರಾಷ್ಟ್ರೀಯ ವೇದಿಕೆ ಯಲ್ಲಿ ಕ್ರಿಕೆಟ್ ಪ್ರಚಾರ ಮಾಡುವಲ್ಲಿ, ಬರಹಗಾರರಾಗಿ ಮತ್ತು ಕ್ರೀಡಾ ವಕ್ತಾರರಾಗಿ ಇವರು ವಹಿಸಿರುವ ಪಾತ್ರ ಅಪಾರವಾಗಿದೆ. ಮೊರೀಸ್ವಿಲ್ ನಗರವನ್ನು ದೇಶೀಯ ಮತ್ತು ಅಂತಾ ರಾಷ್ಟ್ರೀಯ ಕ್ರಿಕೆಟ್ ಕೇಂದ್ರವನ್ನಾಗಿ ರೂಪಿಸಲು ಹಗಳಿರಲು ದುಡಿದಿದ್ದಾರೆ.
ಈ ಎಲ್ಲ ಸಾಧನೆಯನ್ನು ಗಮನಿಸಿ, ರಿಸ್ವಿಲ್ಲ್ ನಗರ ಆಗ ೧೩ರಂದು ಸನ್ಮಾನ ಪದಕ ಘೋಷಣೆ ಮಾಡಿತ್ತು ಮತ್ತು ಸೆ.೭ರಂದು ನಡೆದ ಸುಂದರ ಸಮಾರಂಭದಲ್ಲಿ ಮೇಯರ್ ಟಿ.ಜೆ. ಕಾಲಿ ಸುಪ್ರಿಯಾ ದೇಸಾಯಿರ ಸಾಧನೆ ಗಳನ್ನು ಹಾಡಿ ಹೊಗಳಿ, ಪ್ರಶಸ್ತಿ ಪ್ರದಾನ ಮಾಡಿದರು.
ಸಹಾಯಕ್ಕೆ ಸಿದ್ದ
ಕೇವಲ ನೃತ್ಯ ಮಾತ್ರವಲ್ಲದೇ ಅತ್ಯುತ್ತಮ ನಾಯಕತ್ವ ಗುಣವನ್ನು ಹೊಂದಿರುವ ಇವರಿಗೆ ಸಮಾಜ ಸೇವೆಯಲ್ಲಿ ವಿಶೇಷ ಆಸಕ್ತಿ. ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಸಿದ್ಧರಿರುತ್ತಾರೆ. ಉತ್ತರ ಕ್ಯಾರೋಲಿನಾ ರಾಜ್ಯದ ‘ಸಂಪಿಗೆ’ ಕನ್ನಡ ಸಂಘದ ಸಂಸ್ಥಾಪಕರಲ್ಲಿ ಒಬ್ಬರಾಗಿ ಮತ್ತು ಪ್ರಥಮ ಅಧ್ಯಕ್ಷೆಯಾಗಿ ಕನ್ನಡ ಸೇವೆಯನ್ನು
ಮಾಡಿದ್ದಾರೆ. ಕನ್ನಡ ಸೇವೆಗಾಗಿ ತಮ್ಮ ಜೀವವನ್ನೇ ಮುಡಿಪಾಗಿಗಿಟ್ಟಿರುವ ಸುಪ್ರಿಯಾ ಅವರು ಅಕ್ಕ(ಅಮೆರಿಕನ್ ಕನ್ನಡ ಕೂಟಗಳ ಆಗರ) ಸಂಸ್ಥೆಯ ಸಂಸ್ಥಾಪಕ ಸದಸ್ಯೆ ಹಾಗೂ ಮೊದಲ ಖಜಾಂಚಿ. ಅಕ್ಕ ವಿಶ್ವ ಕನ್ನಡ ಸಮ್ಮೇಳನಗಳನ್ನು ಯಶಸ್ವಿಯಾಗಿ ಆಯೋಜಿಸುವಲ್ಲಿ ವಿವಿಧ ಕಮಿಟಿಗಳ ನಾಯಕತ್ವ ವಹಿಸಿದ್ದಾರೆ.
ಇದನ್ನೂ ಓದಿ: Dr Sudhakar Hosalli Column: ಇವರು ಕೂಡ ಗುಲಾಮರೇ, ಗುಲಾಮರಂತೆ ಇದ್ದಾರಷ್ಟೇ !