ನಿಯಮ ಮೀರಿ ಚಾಲನೆ
ಕಮಿಷನ್ ಪಡೆದು ಮೌನವಾಗುತ್ತಿರುವ ಅಧಿಕಾರಿಗಳು
ತುಮಕೂರು: ಓಲಾ, ಉಬರ್ ಕಂಪನಿಗಳು ಕಾರುಗಳು ನಿಯಮ ಮೀರಿ ಚಾಲನೆ ಮಾಡುತ್ತಿರುವು ದರಿಂದ ಬಡ ಚಾಲಕರ ಜೀವನದ ಮೇಲೆ ಬರೆ ಎಳೆದಂತಾಗಿದೆ.
ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಯಲ್ಲಿ ಮಾತ್ರ ಕಾರುಗಳು ಸಂಚರಿಸಲು ಅನುಮತಿ ನೀಡಲಾ ಗಿದೆ. ಆದರೆ ಇತರೆ ಜಿಲ್ಲೆಗಳಿಗೂ ಪ್ರಯಾಣಿಕರನ್ನು ಕರೆದೊಯ್ಯುತ್ತಿರುವುದರಿಂದ ಟ್ಯಾಕ್ಸಿ ನಂಬಿ ಕೊಂಡು ಜೀವನ ಮಾಡುತ್ತಿರುವ ಚಾಲಕರು, ಮಾಲೀಕರ ಜೀವನ ಸಂಕಷ್ಟಕ್ಕೆ ಸಿಲುಕಿದೆ.
ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ನಿಮಯ ಮೀರಿ ಜಿಲ್ಲೆಗೆ ಪ್ರವೇಶಿಸುತ್ತಿರುವ ಓಲಾ, ಉಬರ್ ಕಂಪನಿಯ ಸುಮಾರು 20ಕ್ಕೂ ಹೆಚ್ಚು ಕಾರುಗಳನ್ನು ಚಾಲಕರುಗಳು ಹಿಡಿದು ಪೊಲೀಸರಿಗೆ ಒಪ್ಪಿಸಿ ದೂರು ದಾಖಲು ಮಾಡುವಂತೆ ಆಗ್ರಹಿಸುತ್ತಿದ್ದರೂ ಪೊಲೀಸರು ಕ್ಯಾರೆ ಎನ್ನುತ್ತಿಲ್ಲ.
ಆರ್.ಟಿ.ಓ ಅಧಿಕಾರಿಗಳು ಕಠಈಣ ಕ್ರಮಕೈಗೊಳ್ಳುವ ಬದಲು ಕಮಿಷನ್ ಪಡೆದು ಸುಮ್ಮನಾಗು ತ್ತಿದ್ದಾರೆ. ಇದರಿಂದಾಗಿ ಕರೋನಾದ ಕಷ್ಟದ ನಡುವೆ ಬಡ ಚಾಲಕರ ಜೀವನ ನಿರ್ವಹಣೆ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ.
ಕಮಿಷನ್ ಪಡೆದು ಕಾರು ಬಿಟ್ಟ ಖಾಕಿ
ಅಕ್ರಮವಾಗಿ ಪ್ರಯಾಣಿಕರನ್ನು ಬೆಂಗಳೂರಿನಿಂದ ತುಮಕೂರಿಗೆ ಕರೆತರುತ್ತಿದ್ದ ಊಬರ್, ಓಲಾ ಕಂಪನಿಯ ಸುಮಾರು 10 ಕಾರುಗಳನ್ನು ಚಾಲಕರು ಹಿಡಿದು ಕ್ಯಾತ್ಸಂದ್ರ ಠಾಣೆಗೆ ಮಾಹಿತಿ ನೀಡಿ ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ ಆದರೆ ಪೊಲೀಸರು ಯಾವುದೇ ಕ್ರಮಕೈಗೊಳ್ಳದೆ 10 ಸಾವಿರ ಹಣ ಪೀಕಿಕೊಂಡು ಬಿಟ್ಟು ಕಳುಹಿಸಿದ್ದಾರೆ ಎಂದು ಜಯ ಕರ್ನಾಟಕ ಸಂಘಟನೆಯ ಟ್ಯಾಕ್ಸಿ ಸಂಘದ ಪದಾಧಿಕಾರಿಗಳು ದೂರಿದ್ದಾರೆ.
***
ಓಲಾ, ಉಬರ್ ಕಂಪನಿಯ ಕಾರುಗಳು ನಿಯಮ ಮೀರಿ ಪ್ರಯಾಣಿಕರನ್ನು ಕರೆದೊಯ್ಯುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಜಿಲ್ಲಾದ್ಯಂತ ಪ್ರತಿಭಟನೆ ನಡೆಸಲಾಗುವುದು. ಆರ್.ಟಿ.ಓ ಹಾಗೂ ಪೊಲೀಸ್ ಅಧಿಕಾರಿಗಳ ನಿರ್ಲಕ್ಷಯತೆಯಿಂದಾಗಿ ಬಡ ಚಾಲಕರು ಬಿದಿಗೆ ಬರುವಂತಾಗಿದೆ.
ಪ್ರತಾಪ್, ಜಿಲ್ಲಾಧ್ಯಕ್ಷ, ಜಯಕರ್ನಾಟಕ ಟ್ಯಾಕ್ಸಿ ಘಟಕ.