ಹೂವಪ್ಪ ಐ.ಎಚ್. ಬೆಂಗಳೂರು
ಹೆಚ್ಚಿದ ಮಳೆ: ಪೂರೈಕೆಯಾಗದ ತರಕಾರಿ
ಗಗನಕ್ಕೇರಿದ ತರಕಾರಿ ಬೆಲೆ
ಹಿಂಗಾರು ಮಳೆಯ ಆರ್ಭಟ, ವಾಯುಭಾರ ಒತ್ತಡದಿಂದಾಗಿ ರಾಜ್ಯದ ಹಲವು ಜಿಗಳಲ್ಲಿ ಮಳೆ ಸುರಿಯುತ್ತಿದೆ. ಬೆಳೆಗಳು ನಾಶವಾಗುತ್ತಿವೆ. ಅದರ ಜತೆಗೆ, ದಿನದಿಂದ ದಿನಕ್ಕೆ ತರಕಾರಿ ಬೆಲೆ ಏರುತ್ತಲೇ ಇದೆ. ಇದರಿಂದ ಸಾಮಾನ್ಯ ಜನ ರೋಸಿ ಹೋಗಿದ್ದಾರೆ.
ಒಂದು ಕಡೆ ದಿನಂಪ್ರತಿ ಸುರಿಯುತ್ತಿರುವ ಮಳೆಗೆ ಹೆಚ್ಚಿನ ಪ್ರಮಾಣದಲ್ಲಿ ತರಕಾರಿಗಳು ಮಾರುಕಟ್ಟೆಗೆ ಬರುತ್ತಿಲ್ಲ.
ಇನ್ನೊಂದು ಕಡೆ ತರಕಾರಿಗಳಿಗೆ ಬೇಡಿಕೆ ಹೆಚ್ಚಾಗಿರುವ ಕಾರಣ ತರಕಾರಿ ಬೆಲೆ ಗಗನಕ್ಕೇರಿದೆ. ದಸರಾ ಮೊದಲು
ಕೆಜಿಗೆ ರು. 40 ನಿಂದ ರು.50 ಇದ್ದ ತರಕಾರಿಗಳ ಬೆಲೆ ಒಮ್ಮೆಯೇ ಬರೋಬ್ಬರಿ ರು. 80-100ರ ಗಡಿಗೆ ಬಂದಿವೆ.
ಹೀಗಾಗಿ ಚಿಲ್ಲರೆ ದರದಲ್ಲಿ ಮಾರಾಟ ದೊಡ್ಡ ಸವಾಲಾಗಿದೆ ಎನ್ನುತ್ತಾರೆ ಚಿಲ್ಲರೆ ತರಕಾರಿ ವ್ಯಾಪಾರಿಗಳು.
ಬಹುತೇಕ ಎಲ್ಲ ತರಕಾರಿ ದುಬಾರಿಯಾಗಿವೆ. ಬೀನ್ಸ್ ಎಪಿಎಂಸಿ ಸಗಟು ದರ ಕೆಜಿಗೆ ರಿಂಗ್ ಬೀ ರು.140 ನಾಟಿ
ರು.120 ಇದ್ದು, ಚಿಲ್ಲರೆ ದರ ರು.160-180 ಗೆ ಮಾರಾಟವಾಗುತ್ತಿದೆ. ಬದನೆಕಾಯಿ, ಕ್ಯಾರೆಟ್, ಹಾಗಲಕಾಯಿ, ಚವಳಿಕಾಯಿ, ಬೆಂಡೆಕಾಯಿ, ಕ್ಯಾಪ್ಸಿಕಮ್, ನವಿಲುಕೋಸುಗಳ ಸಗಟು ದರ ರು. ೫೦-೬೦ ಇದೆ. ಇನ್ನು ಚಿಲ್ಲರೆ ಬೆಲೆ ಹೆಚ್ಚುಕಡಿಮೆ ಎಲ್ಲ ತರಕಾರಿ ಬೆಲೆ ರು.೭೦-೮೦ ಆಗಿದೆ. ಟೊಮೇಟೊ, ಈರುಳ್ಳಿ ಕಳೆದೆರಡು ವಾರದಿಂದ ರು.೫೦-೬೦ಗೆ ಮಳೆ ಇನ್ನಷ್ಟು ದಿನ ಮುಂದುವರಿದರೆ ತರಕಾರಿ ದರ ಮತ್ತಷ್ಟು ಏರಲಿದೆ ಎಂಬ ಆತಂಕ ಗ್ರಾಹಕರಿಗಿದೆ.
ಜಿಲ್ಲೆಯಲ್ಲಿ ಜಿಟಿ ಜಿಟಿ ಮಳೆಯಿಂದ ತರಕಾರಿ ಸರಬರಾಜು ಕಡಿಮೆಯಾಗಿದೆ. ಜಿಲ್ಲೆಯಲ್ಲಿ ಬೆಳೆದಿದ್ದ ತರಕಾರಿ ಅತಿ ಹೆಚ್ಚು ತೇವಾಂಶ ಹಾಗೂ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಹೊಲ, ತೋಟದಲ್ಲಿಯೇ ಕೊಳೆಯುತ್ತಿದೆ. ಹೀಗಾಗಿ ಬೇರೆ ಬೇರೆ ಜಿಗಳಿಂದ ಸಹ ತರಕಾರಿ ಸರಿಯಾಗಿ ಸರಬರಾಜಾಗದೆ ಬೆಲೆ ಏರಿಕೆಯಾಗಿದೆ. ಕೆಲವೆಡೆ ಬೆಳೆಗೆ ನಾನಾ ರೋಗ ತಗುಲಿದೆ. ಒಂದುಷ್ಟು ಬೆಳೆ ನೀರಿನಲ್ಲಿ ಮುಳುಗಿವೆ. ಪರಿಣಾಮ ಬೇರ್ಪಡೆ ಮಾಡಿ ಮೂಲೆಗೆ ಬಿಸಾಕು ತ್ತಿದ್ದ ಬೀನ್ಸ್ ಹಾಗೂ ಟೊಮೇಟೊಗೆ ಬಂಗಾರದ ಬೆಲೆ ಬರುತ್ತಿದೆ ಎನ್ನುತ್ತಾರೆ ತರಕಾರಿ ಮಂಡಿ ವ್ಯಾಪಾರಿ ಗಳು.
ರೈತರಿಗಿಲ್ಲ ಲಾಭ
ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಹೊಸದಾಗಿ ತರಕಾರಿ ಬೆಳೆ ನಾಟಿ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮಾರುಕಟ್ಟೆಗೆ ಅಗತ್ಯವಾದಷ್ಟು ತರಕಾರಿ ಸರಬರಾಜಾಗುತ್ತಿಲ್ಲ. ಇದರಿಂದ ತರಕಾರಿ ಬೆಲೆ ಏರಿಕೆಯಾಗಿದೆ. ಆದರೆ ಇದರಿಂದ ರೆತರಿಗೆ ಹೆಚ್ಚಿನ ಪ್ರಯೋಜನವಾಗಿಲ್ಲ. ಬೆಳೆದ ಬೆಳೆಯೆಲ್ಲ ಶೇ. ೬೦ ಹೆಚ್ಚು ಹಾಳಾಗಿವೆ. ಹೆಚ್ಚಿನ
ಬೆಲೆ ಸಿಕ್ಕರೂ ಲಾಭ ಮರೀಚಿಕೆಯಾಗಿದೆ. ಇರುವ ಬೆಳೆ ರಕ್ಷಿಸಿಕೊಳ್ಳಲು ಹರಸಾಹಸ ಮಾಡುವಂತಾಗಿದೆ ಎಂದು
ಹೇಳುತ್ತಾರೆ ಚಿಕ್ಕಬಳ್ಳಾಪುರ ರೈತ ತಿಪ್ಪೇಸ್ವಾಮಿ.
ಇದನ್ನೂ ಓದಿ: Hoovappa I H Column: ಹೂವು, ಹಣ್ಣು ಬೆಲೆ ಜಾಸ್ತಿಯೇನಾಗಿಲ್ಲ !