ಅಧಿಕಾರಿಗಳ ಜಾಣ ಕುರುಡುತನಕೆ : ಸಾರ್ವಜನಿಕರೇ ಬಲಿ…
ವಿಶೇಷ ವರದಿ : ಆನಂದ ಸ್ವಾಮಿ ಹಿರೇಮಠ
ರಾಯಚೂರು : ಜಿಲ್ಲೆಯಾದ್ಯಂತ ಅಕ್ರಮವಾಗಿ ಬೋರ್ವೆಲ್, ನೀರು ಶೇಖರಣೆ ಟ್ಯಾಂಕರ್ ಗಳ ಮೂಲಕ ನಗರ, ಪಟ್ಟಣ, ಮತ್ತು ಪುರಸಭೆಯ ಅಂತಹ ಕೇಂದ್ರ ಸ್ಥಾನಗಳಲ್ಲಿ ಓಣಿಗೊಂದು ಬೀದಿಗೊಂದು ಎಂಬಂತೆ ಅಕ್ರಮವಾಗಿ ನೀರು ಶುದ್ದೀಕರಣ ಘಟಕಗಳನ್ನು ನಿರ್ಮಿಸಿಕೊಂಡು ಅವರದೇ ಆದಂತಹ ರೀತಿಯಲ್ಲಿ ಸಾರ್ವಜನಿಕರಿಗೆ ಅತಿಹೆಚ್ಚಿನ ದರಗಳಲ್ಲಿ ಕುಡಿಯುವ ನೀರನ್ನು ಸರಬರಾಜ ಮಾಡುತ್ತಿದ್ದರು ಜಿಲ್ಲೆಯ ಆಹಾರ ಮತ್ತು ಗುಣಮಟ್ಟದ ಜಿಲ್ಲೆಯ ಅಂಕಿತ ಅಧಿಕಾರಿ ಪ್ರಕಾಶ್ ಪುಣೆ ಶೆಟ್ಟಿ ಕಂಡರು ಕಾಣದಂತೆ ಕುಡು ಜಾಣತನದಲ್ಲಿ ಇದ್ದಾರೆ.
ಜಿಲ್ಲೆಯಲ್ಲಿ ಕಳೆದ ಹತ್ತು ವರ್ಷದಲ್ಲಿ ‘ಐಎಸ್ಐ’ ಮಾನ್ಯತೆ ಪಡೆದ 21 ನೀರು ಶುದ್ಧೀಕರಣ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಆದರೆ, ಇವುಗಳಲ್ಲೂ ಬಹುತೇಕ ಕಡೆ ನಿಯಮಗಳು ಪಾಲನೆಯಾಗುತ್ತಿಲ್ಲ. ‘ಐಎಸ್ಐ’ ಅಧಿಕಾರಿ ಗಳು ತಪಾಸಣೆಗೆ ಬಂದಾಗಲಷ್ಟೇ ಶಿಸ್ತಿನಿಂದ ಕಾರ್ಯ ನಿರ್ವಹಿಸುತ್ತವೆ. ಉಳಿದಂತೆ, ಬೇಕಾಬಿಟ್ಟಿಯಾಗಿ ಇವು ನೀರನ್ನು ಶುದ್ಧೀಕರಿಸುತ್ತಿವೆ. ಅಧಿಕಾರಿಗಳೂ ದೂರು ಬಂದರಷ್ಟೇ ತಪಾಸಣೆ ನಡೆಸುತ್ತಾರೆ. ಇಲ್ಲದಿದ್ದ ವೇಳೆಯಲ್ಲಿ ಶುದ್ಧೀಕರಣ ಘಟಕಗಳು ತಮಗಿಷ್ಟ ಬಂದಂತೆ ಕಾರ್ಯನಿರ್ವಹಿಸುತ್ತಿವೆ.
ಅನಧಿಕೃತ ನೀರಿನ ಪ್ಲಾಂಟ್ ಗಳಿಂದ ಆಟೋ ಟ್ಯಾಂಕರ್, ಪ್ಲಾಸ್ಟಿಕ್ ಪಾಕೆಟ್ ನೀರು, ಕ್ಯಾನುಗಳ ಮೂಲಕ ಸರ್ವಜನಿಕರಿಗೆ ಮನೆ ಬಾಗಿಲಿಗೆ ತಲುಪಿಸುವ ನೆಪದಲ್ಲಿ ನೀರಿಗೆ ಅತಿಹೆಚ್ಚಿನ ಸಿಹಿಯ ಕ್ಯಾಲ್ಸಿಯಂ ಗಳನ್ನು ಮಿಶ್ರಣ ಮಾಡಿ ಸಾರ್ವಜನಿಕರ ಆರೋಗ್ಯಕ್ಕೆ ಮತ್ತು ಜೀವಗಳ ಜೊತೆ ಆಟವಾಡುತ್ತಿದ್ದಾರೆ.
ನಿಯಮಗಳೇನು…?
ನೀರು ಶುದ್ಧೀಕರಣಕ್ಕೆ ಹಲವು ನಿಯಮಗಳನ್ನು ‘ಐಎಸ್ಐ’ ವಿಧಿಸಿದೆ. ನಗರ, ಪಟ್ಟಣ, ಪುರಸಭೆ, ಗ್ರಾಮ ಪಂಚಾಯತ್, ಸರಬರಾಜಾಗುವ ನೀರನ್ನು ಇದಕ್ಕೆ ಬಳಕೆ ಮಾಡಬಾರದು. ತಮ್ಮದೇ ಖಾಸಗಿ ಕೊಳವೆ ಬಾವಿ ಮೂಲಕವೇ ನೀರನ್ನು ತೆಗೆಯಬೇಕು. ಈ ಕೊಳವೆ ಬಾವಿ ಶುದ್ಧ ಪರಿಸರ ದಲ್ಲಿರಬೇಕು. ಇದರ ಸುತ್ತ ಚರಂಡಿ, ಕಸ ಇರಬಾರದು.
ಇದರಿಂದ ತೆಗೆದ ನೀರನ್ನು ಮಹಡಿ ಮೇಲಿನ ತೊಟ್ಟಿಯಲ್ಲಿ ಘನ ಕಶ್ಮಲಗಳು ತಳ ಸೇರಲಿ ಎಂದು ಕನಿಷ್ಠ ಒಂದು ದಿನ ಸಂಗ್ರಹಿಸಬೇಕು. ನಂತರ, ತಳದಿಂದ ಎರಡು ಅಡಿ ಮೇಲಕ್ಕೆ ಪೈಪ್ ಮೂಲಕ ನೀರನ್ನು ಶುದ್ದೀಕರಣ ಘಟಕಕ್ಕೆ ಸರಬರಾಜು ಮಾಡಬೇಕು.
‘ಓಝೋನೈಜೇಷನ್’ ಇಲ್ಲವೇ ‘ಅಲ್ಟ್ರಾವೈಲೇಟ್ ಪ್ಯಾಸೇಜ್’ ತಂತ್ರಜ್ಞಾನ ಗಳ ಮೂಲಕ ನೀರನ್ನು ಶುದ್ಧೀಕರಣ ಮಾಡಬೇಕು. ಆರ್.ಒ ಘಟಕದಲ್ಲಿ ಬೇಡದ ರಾಸಾಯನಿಕಗಳನ್ನು ಹಾಗೂ ಹೆಚ್ಚಿನ ರಾಸಾಯನಿಕಗಳನ್ನು ತೆಗೆಯಬೇಕು. ನಂತರ, ತೊಟ್ಟಿಗೆ ನೀರು ಬಂದು ಸಂಗ್ರಹವಾಗುತ್ತದೆ. ಇದನ್ನು ಬಾಟಲ್ಗಳಿಗೆ ತುಂಬಿದ ನಂತರ 48 ಗಂಟೆಗಳ ಕಾಲ ಅದು ಹಾಗೆಯೇ ಇರಬೇಕು. ಶುದ್ಧೀಕರಿಸಿದ ನೀರಿನ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿ, ಅದು ಸುರಕ್ಷಿತ ಎಂದು ವರದಿ ಬಂದ ಬಳಿಕವಷ್ಟೇ ನೀರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಬೇಕು ಎಂಬ ನಿಯಮಗಳಿವೆ. ಆದರೆ, ಇವೆಲ್ಲವೂ ಚಾಚೂತಪ್ಪದೇ ಯಾವುದೇ ಘಟಕದಲ್ಲೂ ಪಾಲನೆಯಾಗುತ್ತಿಲ್ಲ.
*
ಜಿಲ್ಲೆಯಾದ್ಯಂತ ಕುಡಿಯುವ ನೀರಿನ ಪ್ಲಾಂಟ್ ಗಳ ದೊಡ್ಡ ಮಾಫಿಯೇ ನಡೆಯುತ್ತಿದೆ. ಪ್ಲಾಸ್ಟಿಕ್ ನಿಷೇಧ ನಿಷೇಧವಾದರೂ ಜಿಲ್ಲೆಯ ತುಂಬಾ ಪ್ಲಾಸ್ಟಿಕ್ ಪಾಕೆಟ್ ನೀರುಗಳು.ನೀರು ಸರಬರಾಜು ಮಾಡುವವರಿಗೆ ‘ಐ ಎಸ್ ಐ’ ಮಾರ್ಕ್ ಇಲ್ಲ, ಒಂದು ನಗರ ಪ್ರದೇಶದಲ್ಲಿ ನೂರಕ್ಕೂ ಹೆಚ್ಚು ಶುದ್ಧಿಕರಣ ಘಟಕಗಳು ಇದ್ದರೂ ಕೂಡ, ನೀರಿನ ಗುಣಮಟ್ಟದ ಸರ್ಟಿಫಿಕೇಟ್ ಗಳು ಇಲ್ಲ, ಇವೆಲ್ಲವನ್ನೂ ತಡೆಯಬೇಕಾದ ಆಹಾರ ಮತ್ತು ಗುಣಮಟ್ಟ ಪ್ರಾಧಿಕಾರದ ಅಂಕಿತ ಅಧಿಕಾರಿ ಊಟವೇ ಇಲ್ಲದ ಬಾರ್, ಅಂಡ್ ರೆಸ್ಟೋರೆಂಟ್ ಮತ್ತು ದೊಡ್ಡ ದೊಡ್ಡ ಹೋಟೆಲ್ ಉದ್ಯಮಿಗಳ ಹತ್ತಿರ, ನಕಲಿ ಶುದ್ಧಿಕರಣ ಘಟಕಗಳಿಂದ ಜುಬು ತುಂಬಿಸಿಕೊಳ್ಳುವಲ್ಲಿ ಕಾರ್ಯ ಪ್ರಕೃತರಾಗಿದ್ದಾರೆ.
ಅಶೋಕ್ ಕುಮಾರ್ ಸಿ ಕೆ ಜೈನ್.
ಶಿವರಾಮೇಗೌಡರ ಕರವೇ ಜಿಲ್ಲಾ ಅಧ್ಯಕ್ಷರು ರಾಯಚೂರು.
ಜಿಲ್ಲೆಯ ಎಲ್ಲಾ ನೀರಿನ ಶುದ್ಧಿಕರಣ ಘಟಕಗಳ ನೀರನ್ನು ಸ್ಯಾಂಪಲ್ ತೆಗೆದುಕೊಳ್ಳಲಾಗಿದೆ. ಅವುಗಳಲ್ಲಿ ಕೆಲವು ಲ್ಯಾಬ್ ರೇಟರಿಗಳಿಗೆ ಪರೀಕ್ಷೆಗೆ ಕಳಿಸಲಾಗಿದೆ. ಘಟಕಗಳ ಮಾಲೀಕರಿಗೆ ಪರವನಿಗೆ ಪಡೆಯಲು ತಿಳಿಸಿದ್ದೇವೆ ಆದರೆ ಕೆಲವರು ಆಸಕ್ತಿ ತೋರಿಸುತ್ತಿಲ್ಲ, ಹೀಗಾಗಿ ಮುಂದಿನ ಕ್ರಮ ತೆಗೆದುಕೊಳ್ಳಲು ಯೋಚಿಸುತ್ತಿದ್ದೇವೆ.
ಪ್ರಕಾಶ್ ಪುಣೆ ಶೆಟ್ಟಿ
ಆಹಾರ ಮತ್ತು ಸುರಕ್ಷತಾ ಪ್ರಾಧಿಕಾರದ ಅಂಕಿತ ಅಧಿಕಾರಿ.