ಶಿವರಾಮ ಹೆಬ್ಬಾರ್, ಕಾರ್ಮಿಕ ಇಲಾಖೆ ಸಚಿವ
ಸಂದರ್ಶನ: ವಿನುತಾ ಹೆಗಡೆ, ಶಿರಸಿ
ಕಾರ್ಮಿಕ ಇಲಾಖೆ ಎನ್ನುವುದು ಅತಿದೊಡ್ಡ ಇಲಾಖೆ. ಉದ್ಯಮಿ ಹಾಗೂ ಕಾರ್ಮಿಕರನ್ನು ಒಂದೇ ಸಮನಾಗಿ ತಗೆದು ಕೊಂಡು ಹೋಗುವ ಮಹತ್ವದ ಜವಾಬ್ದಾರಿ ಈ ಇಲಾಖೆಗೆ ಇದೆ. ಕಾರ್ಮಿಕ ಇಲಾಖೆಯನ್ನು ಪ್ರಭಾವಶಾಲಿ ಇಲಾಖೆ ಯನ್ನಾಗಿಸಿ, ಕಾರ್ಮಿಕರನ್ನು ಭದ್ರವಾಗಿಸಿ ಜೀವನಕ್ಕೆ ಭರವಸೆ ನೀಡಲಾಗುವುದು ಎಂದು ಕಾರ್ಮಿಕ ಇಲಾಖೆ ಸಚಿವ ಶಿವರಾಮ ಹೆಬ್ಬಾರ್ ಹೇಳಿದ್ದಾರೆ. ವಿಶ್ವವಾಣಿಯೊಂದಿಗೆ ಮಾತನಾಡಿದ ಅವರು, ಕಾರ್ಮಿಕ ಇಲಾಖೆಯ ನೂತನ ಯೋಜನೆ, ಸವಾಲು, ಕರೋನಾ ಸಮಯದಲ್ಲಿ ತಗೆದುಕೊಂಡ ತೀರ್ಮಾನ, ಅಸಂಘಟಿತ ಕಾರ್ಮಿಕರಿಗೆ ಇರುವ ಯೋಜನೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನದ ಪೂರ್ಣ ಪಾಠ ಇಲ್ಲಿದೆ.
ಕಾರ್ಮಿಕ ಸಚಿವರೇ ನಿಮಗೆ ಕಾರ್ಮಿಕರಾಗಿ ಕೆಲಸಮಾಡಿದ ಅನುಭವ ಇದೆಯಾ ?
ನಾನೊಬ್ಬ ಕಾರ್ಮಿಕನಾಗಿಯೇ ಕೆಲಸ ನಿರ್ವಹಿಸಿದ್ದು, ಲಾರಿ ಡ್ರೈವರ್ ಆಗಿ ಕೆಲಸ ನಿರ್ವಹಿಸಿದ್ದೇನೆ. ಕರ್ನಾಟಕ, ಗೋವಾ, ಮಹಾರಾಷ್ಟ್ರ, ಆಂಧ್ರ, ಕೇರಳ ಐದು ರಾಜ್ಯದಲ್ಲಿ ಚಾಲಕನಾಗಿ ಕೆಲಸ ನಿರ್ವಹಿಸಿದ್ದೇನೆ. ಹಸಿವು ಅನ್ನುವ ಕಷ್ಟ ನನಗೆ ಅರಿವಿದೆ. ಹಸಿವು ಎಂದಿಗೂ ಭಾಷಣದಲ್ಲಿ ಅರಿವಿಗೆ ಬರುವುದಲ್ಲ. ಶ್ರಮಿಕರಿಗೆ ಅದನ್ನು ಅನುಭವಿಸಿದಾಗ ಗೊತ್ತಾಗುವಂತದ್ದು, ಹಾಗಾಗಿ ಕಾರ್ಮಿಕರ ಶ್ರಮ ನನಗೆ ಗೊತ್ತಿದೆ. ಅತಿ ಶೀಘ್ರದಲ್ಲಿ ಡ್ರೆ ವರ್ ಬಿಲ್ ತರಲಿದ್ದೇವೆ. ಕರ್ನಾಟಕದಲ್ಲಿರುವ ಟ್ರಕ್ ಡ್ರೈವರ್, ಆಟೋ ಡ್ರೈವರ್, ಕ್ಲಿನರ್ ಅವರಿಗೆ ಬೇಕಾಗುವಂತ ಡ್ರೈವರ್ ಬಿಲ್ ತರಲಿದ್ದೇವೆ. ಚಾಲಕರು ಅಪಘಾತದಲ್ಲಿ ಸತ್ತಾಗ ಅವರ ಮಕ್ಕಳಿಗೆ ವಿದ್ಯಾಭ್ಯಾಸ, ಪಿಂಚಣಿ ಮುಂತಾದ ಕಾರ್ಯಕ್ಕೆ ಆಗಲಿದೆ. ಮುಖ್ಯ ಮಂತ್ರಿಗಳು ಇದಕ್ಕೆ ಒಪ್ಪಿಗೆ ನೀಡಲಿದ್ದಾರೆ. ಅತ್ಯಂತ ಬಡವರಿರುವ ಈ ವರ್ಗ ಬೆಂಬಲಿಸು ತ್ತಾರೆ.
ಕಾರ್ಮಿಕ ಇಲಾಖೆಯ ಶಕ್ತಿ ರಾಜ್ಯಕ್ಕೆ ತೋರಿಸುವ ಕೆಲಸ ಮಾಡಿದಿರಾ?
ಇಲಾಖೆಯಲ್ಲಿ ಕೆಲಸ ಮಾಡುವಂತದ್ದು ಇಶ್ಚಾಶಕ್ತಿ ಮತ್ತು ಕೊಟ್ಟಂತ ಕೆಲಸವನ್ನು ನಿಷ್ಠೆಯಿಂದ ಮಾಡುವಂತದ್ದು ನಮ್ಮ
ಜವಾಬ್ದಾರಿ ಅದನ್ನು ಮಾಡಿದ್ದೇನೆ. ಅದರಿಂದ ಕಾರ್ಮಿಕ ಇಲಾಖೆಗೆ ನನ್ನಿಂದ ಹೆಚ್ಚು ಸಹಾಯ ಆಗಿದ್ದರೆ ಸಂತೋಷ. ಇಲಾಖೆ ಯಿಂದ ನನಗೂ ಒಂದು ಶಕ್ತಿ ಬಂದಿದೆ. ಇಲಾಖೆಯೂ ನನಗೆ ಸಾಕಷ್ಟು ಕಲಿಸಿಕೊಟ್ಟಿದೆ. ಅದರಿಂದ ಇಲಾಖೆ ಮತ್ತು ಕಾರ್ಮಿಕರ ನಡುವೆ ಇಲಾಖೆ ಜತೆಗೇ ಹೋಗಿ ಒಂದು ಸೇತುವೆಯಾಗಿ ಕೆಲಸಮಾಡಿದ್ದೇವೆ. ಎಂದಿಗೂ ಉದ್ಯಮ ವಿರೋಧಿ ಎನಿಸಿಕೊಂಡಿಲ್ಲ. ಕಾರ್ಮಿಕ ಮತ್ತು ಕಾರ್ಮಿಕರಿಗೆ ಕೆಲಸ ಕೊಡುವ ಉದ್ಯಮ ಜತೆಜತೆಗೆ ಹೋಗಬೇಕೆಂದು ನಿರ್ಣಯ ಮಾಡಿದ್ದೇವೆ. ಉದ್ಯಮ ಸ್ನೇಹಿ ಕರ್ನಾಟಕ ಆಗಬೇಕು ಕಾರ್ಮಿಕ ಸ್ನೇಹಿ ಕರ್ನಾಟಕ ಆಗಬೇಕು ಎನ್ನುವುದು ನಮ್ಮ ಉದ್ದೇಶ.
ನೀವು ಬಂದ ಮೇಲೆ ಇಲಾಖೆಗೆ ವೇಗ ಸಿಕ್ಕಿತ್ತು ಎನ್ನುವ ಮಾತಿದೆ ಹೌದೇ?
ಕಾರ್ಮಿಕ ಇಲಾಖೆ ರಾಜ್ಯದಲ್ಲಿಯೇ ಅತ್ಯಂತ ದೊಡ್ಡ ಇಲಾಖೆ ಇದು. ರಾಜ್ಯದಲ್ಲೇ ಎರಡು ಕೋಟಿ ಜನ ಇರುವ ಅವರ ಕಷ್ಟ ಸುಖ ನೋಡುವ ಇಲಾಖೆ ಇದು. ಸಂಘಟಿತ, ಅಸಂಘಟಿತ ಕಾರ್ಮಿಕರನ್ನು ಮತ್ತು ಗುತ್ತಿಗೆ ಕಾರ್ಮಿಕರನ್ನು ಎಚ್ಚರಿಕೆಯಿಂದ ನೋಡಿಕೊಂಡು ಹೋಗಬೇಕಾದ ಇಲಾಖೆ ಇದಾಗಿದ್ದು, ನಾನು ಅಽಕಾರ ವಹಿಸಿಕೊಂಡಮೇಲೆ ಸವಾಲು ನಿರ್ಮಾಣವಾಯಿತು. ಕೋವಿಡ್ ಎನ್ನುವ ಮಹಾಮಾರಿ ಬಂದಮೇಲೆ ಕಾರ್ಮಿಕರ ರಕ್ಷಣೆಯೇ ದೊಡ್ಡ ಸವಾಲಾಗಿ ಪರಿಣಮಿಸಿತು. ವಿಶೇಷವಾಗಿ ನಗರ ಪ್ರದೇಶಗಳಲ್ಲಿ ವಲಸೆ ಕಾರ್ಮಿಕರ ದೇಶದ ಹಲವಾರು ಭಾಗದಿಂದ ಬಂದವರಿಗೆ ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ಯಲ್ಲಿ ನಮ್ಮ ಮುಖ್ಯ ಮಂತ್ರಿಗಳಾದ ಅಂದಿನ ಯಡಿಯೂರಪ್ಪ ಹಾಗೂ ಇಂದಿನ ಬಸವರಾಜ ಬೊಮ್ಮಾಯಿಯವರು ಒಂದು ಮತ್ತು ಎರಡನೇ ಅಲೆಯಲ್ಲಿ ಕಾರ್ಮಿಕ ಇಲಾಖೆಯಿಂದ ಯಾರೂ ಕೂಡಾ ಹಸಿವಿನಿಂದ ಸಾಯಬಾರದೆಂದು ಸತ್ ಸಂಕಲ್ಪ ಮಾಡಿ ಇಡೀ ಕಾರ್ಮಿಕರಿಗೆ ಈ ಇಲಾಖೆಯ ಬಗ್ಗೆ ಗೌರವ ಹೆಚ್ಚಾಗಲು ಕಾರಣವಾಯಿತು, ಕಷ್ಟ ಕಾಲಕ್ಕೆ ತಮಗೂ ಒಬ್ಬರಿಂದ್ದಾರೆ ಎನ್ನುವ ಮನಸ್ಥಿತಿ ಅರ್ಥವಾಯಿತು.
ಒಂದು ಕೋಟಿಗೂಹೆಚ್ಚು ಊಟ ನೀಡಿದ್ದೆವು ನಾವು. ಹೊರ ರಾಜ್ಯದಿಂದ ಬಂದ ಕಾರ್ಮಿಕರಿಗೆ ಬಿಎಂಟಿಸಿ ಬಸ್ ಕ್ಯಾಂಪ್ಗಳಲ್ಲಿ ಅವರು ಸ್ಥಳಕ್ಕೆ ತಲುಪುವವರೆಗೂ ನಾವು ಅವರಿಗೆ ಅನ್ನ, ನೀರಿನ ವ್ಯವಸ್ಥೆ ಮಾಡಿದ್ದೇವೆ. ಹೀಗೇ ಕಾರ್ಮಿಕ ಇಲಾಖೆ ಅಧಿಕಾರಿಗಳ ತಂಡ ಯುದ್ದೋಪಾದಿಯಲ್ಲಿ ಕಾರ್ಮಿಕರ ರಕ್ಷಣೆ ಮಾಡುವಂತ ಕೆಲಸವನ್ನು ಮಾಡಿದ್ದೇವೆ.
ಕಾರ್ಮಿಕರಿಗೆ ಶಕ್ತಿ ನೀಡಿದಿರೋ ಅಥವಾ ಇಲಾಖೆಗೋ? ಅವರ ಮಕ್ಕಳಿಗೋ ?
ಕಾರ್ಮಿಕ ಇಲಾಖೆಗೆ ಕಾರ್ಮಿಕರಿಂದ ಶಕ್ತಿ ತುಂಬಲು, ಶಕ್ತಿಯುತವಾಗಿ ಬೆಳೆಯಲು ಸಾಧ್ಯ. ನಾವು ಅಷ್ಟಕ್ಕೇ ನಿಂತಿಲ್ಲ. ರಾಷ್ಟ್ರದ ಅತ್ಯುನ್ನತ ಪರೀಕ್ಷಾ, ಎನ್ಐಟಿ, ಎನ್ ಎಐಟಿಯಂತಹ ದೇಶದ ಸರ್ಧಾತ್ಮಕ ಪರೀಕ್ಷೆಯಲ್ಲಿ ನಮ್ಮ ಕಾರ್ಮಿಕ ಮಕ್ಕಳು, ಕಟ್ಟಡ ಕಾರ್ಮಿಕ ಮಕ್ಕಳೂ ಸ್ಫರ್ಧಾತ್ಮಕ ಪರೀಕ್ಷೆಯಲ್ಲಿ ಆಯ್ಕೆ ಆದರೆ ಅವರ ಸಂಪೂರ್ಣ ವೆಚ್ಚವನ್ನೂ ನಾವೇ ಭರಿಸುವ ಹಾಗೂ ಅವರು ಹೊರದೇಶಕ್ಕೆ ಹೋಗುವುದಾದರೂ ಅವರ ಸಂಪೂರ್ಣ ವೆಚ್ಚ ಭರಿಸುವ ನಿರ್ಣಯ ಮಾಡಿದ್ದೇವೆ. ಒಟ್ಟಾರೆಯಾಗಿ ಈ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಯಾವುದೇ ಸರ್ಧಾತ್ಮಕ ಪರೀಕ್ಷೆಗೆ ಕೂರಿಸಲು ಹಿನ್ನಡೆ ಇಲ್ಲ. ಅವರೊಂದಿಗೆ ನಮಗೆ ಇಲಾಖೆ ಇದೆ. ಸಮಾಜದ ಮೇಲ್ಪಂಕ್ತಿಯಲ್ಲೂ ನಮ್ಮ ಮಕ್ಕಳು ಕಲಿಯುವುದಕ್ಕೆ ಸಾಧ್ಯವಾಗುತ್ತೆ ಎನ್ನುವ ನಿರ್ಣಯವಾಗಿದೆ.
ನಾವು ಈ ಹಿಂದೆ ೨೦೦ ಕೋಟಿ ರು. ಗಳಷ್ಟು ವಿದ್ಯಾರ್ಥಿ ವೇತನ ನೀಡುತ್ತಿದ್ದೆವು. ಅಧಿಕಾರಿಗಳ ಮೂಲಕ ಅದನ್ನು ನೀಡಲಾಗುತ್ತಿದ್ದು, ಅನೇಕ ಮಧ್ಯವರ್ತಿಗಳ ಇದನ್ನು ಶೋಷಣೆಗೆ ಒಳಪಡಿಸುತ್ತಿವು. ಈ ಬಾರಿ ಅದನ್ನು ಅದನ್ನು ಡಬಲ್ ಮಾಡಿದ್ದು, ನಾಲ್ಕು ನೂರು ಕೋಟಿ ರು. ಗಳಷ್ಟು ಹಣವನ್ನು ಕಾರ್ಮಿಕರ ಮಕ್ಕಳ ಕಲ್ಯಾಣ ನಿಧಿಗಾಗಿ ಯುಕೆಜಿಯಿಂದ ಅವರು ಕಲಿಯುವಲ್ಲಿಯವರೆಗೂ ಎಲ್ಲ ವೆಚ್ಚವನ್ನೂ ಭರಿಸುವ ದೊಡ್ಡ ಪ್ರಮಾಣದ ಹಣವನ್ನು ನೀಡುತ್ತಿದ್ದು, ಈ ಹಣವನ್ನು ಯಾವ ಮಧ್ಯವರ್ತಿಗಳ ಕೈಗೂ ಸಿಗದಂತೆ ಅವರಿಗೆ ನೇರವಾಗಿ ಅವರಿಗೆ ತಲುಪಿಸುವ ಕೆಲಸ ಮಾಡಿದ್ದೇವೆ.
ಬಸವರಾಜ ಬೊಮ್ಮಾಯಿಯವರು ಎರಡು ಘಂಟೆ ಒಳಗಾಗಿ ೧೫೦ ಕೋಟಿ ರುಪಾಯಿಯನ್ನು ೮೯ ಸಾವಿರ ಮಕ್ಕಳಿಗೆ ಹಣ ಸಿಗುವಂತ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಹೀಗೆ ಕಾರ್ಮಿಕರ ಮಕ್ಕಳಿಗೆ ಎಲ್ಲ ಹಂತದಲ್ಲೂ ಯೋಚಿಸಿ ವಿನೂತನ ಯೋಜನೆಯನ್ನು ಜಾರಿಗೆ ತಂದಿದ್ದೇವೆ.
ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕರು ನಿಮಗೆ ಸವಾಲಾದರೇ ?
ಯಾವಾಗಲೂ ಅಸಂಘಟಿತ ಹಾಗೂ ಸಂಘಟಿತ ಕಾರ್ಮಿಕರಿಗೆ ತುಂಬಾ ವ್ಯತ್ಯಾಸವಿದೆ. ಇಷ್ಟು ವರ್ಷ ನಾವು ಹೊಸಬರನ್ನು ನಾವು ನೇಮಕ ಮಾಡುವಾಗ ಸರಕಾರದ ಪರವಾನಗಿಗೆ ಹೋಗಬೇಕಿತ್ತು. ದೇಶದ ಪ್ರಧಾನಿ ಮೋದಿಯವರು ಮೂರು ತಿಂಗಳ ಹಿಂದೆ ಇ ಶ್ರಮ ಯೋಜನೆ ಜಾರಿಗೆ ತಂದಿದ್ದು, ಅಸಂಘಟಿತ ಕಾರ್ಮಿಕ ಪೂಜಾರಿಯಿಂದ ಹಿಡಿದು ಕಟ್ಟ ಕಡೆಯ ವ್ಯಕ್ತಿಗೂ ಇ ಶ್ರಮದಿಂದ ನೋಂದಾಯಿಸಿಕೊಳ್ಳಬ ಹುದಾಗಿದ್ದು, ಅಟಲ್ ಬಿಹಾರಿ ವಾಜಪೇಯಿ ಸ್ಕೀಮ್ನಲ್ಲಿ ೨ ಲಕ್ಷ ರುಪಾಯಿ ಲಾಭವೂ
ಸಿಗುವಂತಾಗಿದೆ. ಕಳೆದ ಮೂರು ತಿಂಗಳಲ್ಲಿ ರಾಜ್ಯದಲ್ಲಿ ೪೦ ಲಕ್ಷ ಇ ಶ್ರಮ ಪೋಸ್ಟ್ನ ಹೆಸರು ನೋಂದಾಯಿಸಿಕೊಂಡಿದ್ದೇವೆ.
ನಮ್ಮಲ್ಲಿ ೧ ಕೋಟಿ ೮೫ ಲಕ್ಷ ಜನ ಅಸಂಘಟಿತ ಕಾರ್ಮಿಕರಿದ್ದಾರೆ ಎನ್ನುವ ಮಾಹಿತಿ ಇದೆ. ಅದರ ಆಧಾರದ ಮೇಲೆ ಹೆಸರು
ನೋಂದಾಯಿಸಿದವರಿಗೆ ಕಷ್ಟದ ಕಾಲದಲ್ಲಿ ನಾವು ಅವರ ಕಷ್ಟಕ್ಕೆ ಬಿಒಟಿ ಆಧಾರದ ಮೇಲೆ ಅವರಿಗೆ ಸಹಾಯ ಮಾಡಲು ನಮಗೆ
ಸಾಧ್ಯ.
ಕಾರ್ಮಿಕ ಇಲಾಖೆಯ ಎಷ್ಟು ಯೋಜನೆ ಅನುಷ್ಠಾನಕ್ಕೆ ಬಂದಿದೆ ? ಹೇಗೆ ?
೧೯ ಯೋಜನೆಗಳನ್ನು ಈಗಾಗಲೇ ನಾವು ಅನುಷ್ಟಾನಕ್ಕೆ ತಂದಿದ್ದೇವೆ. ಅಂಬ್ಯುಲೆನ್ಸ್ ಸೇರಿದಂತೆ ವಿದ್ಯಾರ್ಥಿಗಳಿಗೆ ೪ ನೂರು ಕೋಟಿ ರುಪಾಯಿ ಹಣ ನೀಡುತ್ತಿದ್ದೇವೆ. ದೇಶದಲ್ಲೇ ಮೊದಲನೇ ಬಾರಿಗೆ ಕಟ್ಟಡ ಕಾರ್ಮಿಕ ಮಕ್ಕಳಿಗೆ ಐಎಎಸ್, ಕೆಎಎಸ್ ತರಬೇತಿಯನ್ನು ಉಚಿತವಾಗಿ ಕೊಡುವ ವಿನೂತನ ಪದ್ದತಿಯನ್ನು ಬೊಮ್ಮಾಯಿ ಸರಕಾರ ಜಾರಿಗೆ ತಂದಿದೆ.
ಮಕ್ಕಳಿಗೆ ಸರ್ಧಾತ್ಮಕ ಪರೀಕ್ಷೆಯನ್ನು ಕೆಸಿಸಿ ಮೂಲಕ ಅಪ್ಲಿಕೇಷನ್ ಕರೆದಿದ್ದು ೨೫೦೦ ಕ್ಕೂ ಹಚ್ಚು ಕಾರ್ಮಿಕ ಮಕ್ಕಳು ಅರ್ಜಿ ಹಾಕಿದ್ದರು. ಯಾವುದೇ ಹಸ್ತಕ್ಷೇಪ ಇಲ್ಲದೆಯೇ ಅವರ ಬುದ್ದಿವಂತಿಕೆಯ ಆಧಾರದ ಮೇಲೆ ಆಯ್ಕೆ ಮಾಡಿ, ಮೊದಲ ಹಂತದಲ್ಲಿ ೭೦೦ ಜನರಿಗೆ ಆಯ್ಕೆ ಮಾಡಿ ದ್ದೇವೆ. ಸ್ಟೈಫಂಟ್, ತರಬೇತಿಯ ಎಲ್ಲ ವೆಚ್ಚವನ್ನೂ ನಾವೇ ಭರಿಸುವ ಹೊಣೆ ಹೊತ್ತಿದ್ದೇವೆ. ಬಡವರ ಸೇವೆಗೆ ನಮ್ಮ ಮುಖ್ಯ ಮಂತ್ರಿಗಳು ಸೇವೆಗೆ ಶಕ್ತಿ ಅವಕಾಶ ನೀಡಿದ್ದಾರೆ. ಅದರಿಂದ ಇಲಾಖೆಗೆ ಗೌರವ ಕೊಡಲು ಸಾಧ್ಯ ವಾಗಿದೆ.