Friday, 22nd November 2024

Nayanthara : ಮುಖಕ್ಕೆ ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿದ್ರಾ ಲೇಡಿ ಸೂಪರ್‌ ಸ್ಟಾರ್ ನಯನತಾರಾ? ಸಂದರ್ಶನದಲ್ಲಿ ಎನಂದ್ರು?

Nayanthara :

ಚೆನೈ : ಜನಪ್ರಿಯ ನಟಿಯರು ಅಂದ ಹೆಚ್ಚಿಸಿಕೊಳ್ಳಲು ಮುಖಕ್ಕೆ ಪ್ಲಾಸ್ಟಿಕ್‌ ಸರ್ಜರಿ ಮಾಡಿಕೊಳ್ಳುವುದು ಸರ್ವೇ ಸಾಮಾನ್ಯ. ಅದೇ ಆರೋಪವನ್ನು ದಕ್ಷಿಣ ಭಾರತದ ಸ್ಟಾರ್‌ ನಟಿ ನಯನತಾರ (Nayanthara) ಕೂಡ ಎದುರಿಸಿದ್ದರು. ಆದರೆ ಈಗ ಅದರ ಬಗ್ಗೆ ಮಾತನಾಡಿದ್ದು, ವದಂತಿಗಳಿಗೆ ತೆರೆ ಎಳೆದಿದ್ದಾರೆ. ಈ ಹಿಂದೆ ನಯನ ತಾರಾ ತನ್ನ ಮುಖಕ್ಕೆ ಪ್ಲಾಸ್ಟಿಕ್‌ ಸರ್ಜರಿ (plastic surgery) ಮಾಡಿಸಿದ್ದಾರೆ. ತಮ್ಮ 38 ವರ್ಷದಲ್ಲೂ ಇಷ್ಟು ಸುಂದರವಾಗಿರಲು ಸರ್ಜರಿ ಕಾರಣ ಎಂದು ಹೇಳಲಾಗುತ್ತಿತ್ತು. ಇದರ ಬಗ್ಗೆ ನಯನ ತಾರಾ ಸಂದರ್ಶನವೊಂದರಲ್ಲಿ ಮಾತನಾಡಿದ್ದರೆ.

ಹಾಟರ್‌ ಫ್ಲೈ  ಜೊತೆಗಿನ ಸಂವಾದದಲ್ಲಿ  ಮಾತನಾಡಿದ ಲೇಡಿ ಸೂಪರ್‌ ಸ್ಟಾರ್‌ ತಾನು ಯಾವುದೇ ರೀತಿಯ ಪ್ಲಾಸ್ಟಿಕ್‌ ಸರ್ಜರಿಗೆ ಒಳಗಾಗಿಲ್ಲ, ನನ್ನ ಚರ್ಮವನ್ನು ಸೂಕ್ಷವಾಗಿ ನೋಡಿದರೆ ತಿಳಿಯುತ್ತದೆ ಎಂದು ಹೇಳಿದ್ದಾರೆ. ನಿಜವಾದ ನನ್ನ ಮುಖ ಇರುವುದೇ ಹೀಗೆ ವಯಸ್ಸಾಗುತ್ತಾ ಹೋದಂತೆ ಮುಖ ಬದಲಾಗುತ್ತಾ ಹೋಗುತ್ತದೆ. ವರ್ಷದಿಂದ ವರ್ಷಕ್ಕೆ ನನ್ನ ದೇಹ ಹಾಗೂ ಮುಖ ಬದಲಾಗುತ್ತಾ ಹೋಗುತ್ತದೆ. ಪ್ರತಿ ರೆಡ್‌ ಕಾರ್ಪೆಟ್‌ ಸಮಾರಂಭಕ್ಕೂ ಮುನ್ನ ನಾನು ಹುಬ್ಬುಗಳ ವಿನ್ಯಾಸವನ್ನು ಮಾಡಿಸುತ್ತೇನೆ.

ಪ್ರತಿಬಾರಿ ಜನರ ಎದುರು ಬರುವಾಗ ವಿಭಿನ್ನವಾಗಿ ಬರಲು ನಾನು ಇಷ್ಟಪಡುತ್ತೇನೆ. ನನ್ನ ಮುಖ ಬದಲಾದಂತೆ ಕಾಣಲು ಅದೂ ಒಂದು ಮುಖ್ಯ ಕಾರಣ ಪ್ಲಾಸ್ಟಿಕ್‌ ಸರ್ಜರಿ ಎನೂ ಮಾಡಿಸಿಲ್ಲ ಎಂದಿದ್ದಾರೆ.. ನಿರೂಪಕರು ಕೇಳಿದ ಆಹಾರ ಕ್ರಮದ ಬಗ್ಗೆ ಮಾತನಾಡಿದ ನಯನತಾರಾ ಪೌಷ್ಟಿಕ ಆಹಾರ ಸೇವಿಸುತ್ತೇನೆ. ಹೆಚ್ಚು ನೀರು ಕುಡಿದರೆ ಮುಖದಲ್ಲಿ ಹೊಳಪು ಬರಲು ಸಾಧ್ಯ ಎಂದು ಹೇಳಿದ್ದಾರೆ. ಬಹುಭಾಷಾ ತಾರೆ ನಯನತಾರಾ ಸುಂದರವಾಗಿ ಕಾಣಲು ಮುಖ ಹಾಗೂ ತುಟಿಗೆ ಸರ್ಜರಿ ಮಾಡಿಸಿದ್ದಾರೆ ಎಂಬ ಆರೋಪವಿತ್ತು.

ಇದನ್ನೂ ಓದಿ Kerebete Movie: ಪ್ರತಿಷ್ಠಿತ ಅಂತಾರಾಷ್ಟ್ರೀಯ ಗೋವಾ ಫಿಲ್ಮ್ ಫೆಸ್ಟಿವಲ್‌ಗೆ ಕನ್ನಡದ ‘ಕೆರೆಬೇಟೆ’ ಸಿನಿಮಾ ಆಯ್ಕೆ

2003 ರಲ್ಲಿ ಮಲಯಾಳಂನ ಮನಾಸ್ಸಿನಕ್ಕರೆ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ನಯನತಾರಾ ಹಲವು ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಹಲವಾರು ಹಿಟ್‌ ಚಿತ್ರಗಳನ್ನು ನೀಡಿ ಲೇಡಿ ಸೂಪರ್‌ ಸ್ಟಾರ್‌ ಎಂದೆನಿಸಿಕೊಂಡಿದ್ದಾರೆ. ತಮಿಳು ನಿರ್ದೇಶಕ ಶಿವನ್‌ ಜೊತೆ ಮದುವೆಯಾಗಿದ್ದು ಇಬ್ಬರು ಅವಳಿ ಗಂಡು ಮಕ್ಕಳಿದ್ದಾರೆ.

ಇತ್ತೀಚಿಗೆ ತನ್ನ ಮುಂಬರುವ ಚಿತ್ರ ʼ ಡಿಯರ್ ಸ್ಟೂಡೆಂಟ್ಸ್ʼ ಶೂಟಿಂಗ್ ಮಾಡುತ್ತಿದ್ದಾಗ ಚಿಕ್ಕ ಮಗು ಕೂಗಿ ಕರೆಯುತ್ತಾನೆ. ತನ್ನ ಪುಟ್ಟ ಅಭಿಮಾನಿಯೊಂದಿಗೆ ಊಟ ಆಗಿದೆಯಾ? ಮಲಗು ಎಂದು ನಯನತಾರಾ ಹೇಳುವ ವೀಡಿಯೋ ವೈರಲ್‌ ಆಗಿತ್ತು.