Wednesday, 9th October 2024

67ನೇ ಫಿಲ್ಮ್‌ ಫೇರ್‌: ಡಾಲಿ ಧನಂಜಯ್‌, ಯಜ್ಞಾ ಶೆಟ್ಟಿ ಶ್ರೇಷ್ಠ ನಟ, ನಟಿ

ನವದೆಹಲಿ: ಕನ್ನಡ ವಿಭಾಗದ 67ನೇ ಫಿಲ್ಮ್‌ ಫೇರ್‌ ಶ್ರೇಷ್ಠ ನಟ ಹಾಗೂ ಶ್ರೇಷ್ಠ ನಟಿ ಪ್ರಶಸ್ತಿಗೆ ಟ ರಾಕ್ಷಸ ಡಾಲಿ ಧನಂಜಯ್‌, ಯಜ್ಞಾ ಶೆಟ್ಟಿ ಪಾತ್ರ ರಾದರು.

67ನೇ ಫಿಲ್ಮ್‌ ಫೇರ್‌ ಅವಾರ್ಡ್‌ ದಕ್ಷಿಣ ಸಿನಿಮಾಗಳ ಪ್ರಶಸ್ತಿ ಪ್ರದಾನ ಬೆಂಗಳೂರಿನಲ್ಲಿ ಜರುಗಿದ್ದು, ಬಡವ ರಾಸ್ಕಲ್‌ ಚಿತ್ರದಲ್ಲಿನ ಅಭಿನಯಕ್ಕಾಗಿ ಡಾಲಿ ಧನಂಜಯ್‌ ಹಾಗೂ ಆಕ್ಟ್‌ 1978 ಚಿತ್ರದಲ್ಲಿನ ಅಭಿನಯಕ್ಕಾಗಿ ಯಜ್ಞಾ ಶೆಟ್ಟಿ ಶ್ರೇಷ್ಠ ನಟ ಹಾಗೂ ನಟಿ ಪ್ರಶಸ್ತಿ ಸ್ವೀಕರಿಸಿದರು.

ಗರುಡ ಗಮನ ರಿಷಭ ವಾಹನ ಚಿತ್ರದ ನಿರ್ದೇಶನಕ್ಕಾಗಿ ರಾಜ್‌ ಬಿ.ಶೆಟ್ಟಿ ಶ್ರೇಷ್ಠ ನಿರ್ದೇಶಕ ಪ್ರಶಸ್ತಿಗೆ ಪಾತ್ರರಾದರು. ಪೋಷಕ ನಟರಾಗಿ ಆಕ್ಟ್ 1978 ಚಿತ್ರಕ್ಕಾಗಿ ಬಿ.ಸುರೇಶ್‌ ಹಾಗೂ ಶ್ರೇಷ್ಠ ನಟಿ ಪ್ರಶಸ್ತಿಯನ್ನು ಉಮಾಶ್ರೀ (ರತ್ನನ್‌ ಪ್ರಪಂಚ) ಚಿತ್ರಕ್ಕಾಗಿ ಪ್ರಶಸ್ತಿ ಸ್ವೀಕರಿಸಿದರು.

ಶ್ರೇಷ್ಠ ಚಿತ್ರವಾಗಿ ಆಕ್ಟ್‌ ೧೯೭೮ ಚಿತ್ರ ಪ್ರಶಸ್ತಿ ಗಳಿಸಿತು. ಬಡವ ರಾಸ್ಕಲ್‌ ಚಿತ್ರದ ಸಂಗೀತಕ್ಕಾಗಿ ಶ್ರೇಷ್ಠ ಸಂಗೀತ ನಿರ್ದೇಶಕ ಪ್ರಶಸ್ತಿಯನ್ನು ವಾಸುಕಿ ವೈಭವ್‌ ಗಳಿಸಿದರು.