ಮುಂಬೈ: ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ತಮ್ಮ ದಾಂಪತ್ಯ ಜೀವನದಲ್ಲಿ 16 ವರ್ಷ ಪೂರೈಸಿದ್ದಾರೆ.
ದಂಪತಿ ಸುಂದರ ಸೆಲ್ಫಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಬ್ಯೂಟಿಫುಲ್ ಜೋಡಿ ಬಿಳಿ ಬಣ್ಣದ ಡ್ರೆಸ್ನಲ್ಲಿ ಮಿಲಿಯನ್ ಡಾಲರ್ ಸ್ಮೈಲ್ ಚೆಲ್ಲಿದ್ದಾರೆ. ಫೋಟೋಗೆ ‘ಸ್ವೀಟ್ 16’ ಎಂಬುದಾಗಿ ಕ್ಯಾಪ್ಶನ್ ಬರೆದಿದ್ದಾರೆ.
ದಂಪತಿಯ ವಿವಾಹ ವಾರ್ಷಿಕೋತ್ಸವದ ಪೋಸ್ಟ್ ನೆಟ್ಟಿಗರಿಂದ 5 ಲಕ್ಷಕ್ಕೂ ಹೆಚ್ಚು ಲೈಕ್ಸ್ಗಳು ಮತ್ತು ಕಮೆಂಟ್ಗಳನ್ನು ಗಳಿಸಿದೆ.
‘ಅಭಿನಂದನೆಗಳು ಮತ್ತು ಶುಭಾಶಯಗಳು’ ಎಂಬುದಾಗಿ ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ‘ಸುಂದರ ಜೋಡಿ’ ಎಂಬುದಾಗಿ ಮತ್ತೊಬ್ಬರು ಬರೆದಿದ್ದಾರೆ. 2007 ರಲ್ಲಿ ಮುಂಬೈನಲ್ಲಿರುವ ಅಮಿತಾಭ್ ಬಚ್ಚನ್ ಅವರ ಬಂಗಲೆಯಾದ ಪ್ರತೀಕ್ಷಾದಲ್ಲಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ವಿವಾಹ ಸಮಾರಂಭ ನಡೆಯಿತು. ವಿವಾಹವಾದ ನಾಲ್ಕು ವರ್ಷಗಳ ನಂತರ ದಂಪತಿ 2011ರ ನವೆಂಬರ್ 16 ರಂದು ಆರಾಧ್ಯಳಿಗೆ ಪೋಷಕರಾದರು.
ಮಗಳ ಜೊತೆಗೂ ದಂಪತಿ ಹೆಚ್ಚು ಟೈಮ್ ಸ್ಪೆಂಡ್ ಮಾಡುತ್ತಾರೆ. ಮಗಳು ಆರಾಧ್ಯ ಬಚ್ಚನ್ ಪ್ರಸ್ತುತ ಮುಂಬೈನ ಧೀರೂಭಾಯಿ ಅಂಬಾನಿ ಇಂಟರ್ನ್ಯಾಶನಲ್ ಸ್ಕೂಲ್ನಲ್ಲಿ ಆರನೇ ತರಗತಿ ಓದುತ್ತಿದ್ದಾಳೆ.
ಇನ್ನೂ ಐಶ್ವರ್ಯಾ ರೈ ಕೆಲಸದ ವಿಚಾರವಾಗಿ ಹೇಳುವುದಾದರೆ, ಪೊನ್ನಿಯನ್ ಸೆಲ್ವಂ 2 ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಚೋಳ ಸಾಮ್ರಾಜ್ಯಕ್ಕಾಗಿ ನಡೆದ ಹೋರಾಟ, ರಕ್ತಚರಿತ್ರೆಯನ್ನು ಕಟ್ಟಿಕೊಡುವ ಪೊನ್ನಿಯನ್ ಸೆಲ್ವಂ ಚಿತ್ರಕ್ಕೆ ತ್ರಿಶಾ ಜೊತೆಗೆ ಐಶ್ವರ್ಯಾ ನಾಯಕಿ ಯಾಗಿದ್ದಾರೆ. ಈ ಚಿತ್ರದ ಮೊದಲ ಭಾಗ ವಿಶ್ವದಾದ್ಯಂತ 480 ಕೋಟಿ ರೂಪಾಯಿಗಳನ್ನು ಗಳಿಸಿತ್ತು.