Friday, 20th September 2024

Actor Darshan: ದರ್ಶನ್‌ ಆ್ಯಂಡ್‌ ಗ್ಯಾಂಗ್‌ಗೆ ಮತ್ತೊಂದು ದಿನ ನ್ಯಾಯಾಂಗ ಬಂಧನ ವಿಸ್ತರಣೆ

Actor Darshan

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಮತ್ತು ಗ್ಯಾಂಗ್‌ಗೆ (Actor Darshan) ಮತ್ತೊಂದು ದಿನ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿ ಕೋರ್ಟ್ ಆದೇಶ ಹೊರಡಿಸಿದೆ. ನ್ಯಾಯಾಂಗ ಬಂಧನ ಅವಧಿ ಮುಕ್ತಾಯವಾದ ಈ ಹಿನ್ನೆಲೆಯಲ್ಲಿ ನಗರದ 24ನೇ ಎಸಿಎಂಎಂ ಕೋರ್ಟ್‌ಗೆ ಆರೋಪಿಗಳನ್ನು ಗುರುವಾರ ವಿಡಿಯೊ ಕಾನ್ಫರೆನ್ಸ್‌ ಮೂಲಕ ಹಾಜರುಪಡಿಸಲಾಗಿತ್ತು.

ಆರೋಪಿಗಳ ಪರ ವಕೀಲರ ಅಬ್ಜೆಕ್ಷನ್ ಹಿನ್ನೆಲೆಯಲ್ಲಿ ದರ್ಶನ್ ಸೇರಿ ಎಲ್ಲಾ ಆರೋಪಿಗಳಿಗೆ ಒಂದು ದಿನದ ನ್ಯಾಯಾಂಗ ಬಂಧನ ವಿಸ್ತರಣೆ ಆಗಿದ್ದು, ಶುಕ್ರವಾರಕ್ಕೆ ವಿಚಾರಣೆ ಮುಂದೂಡಿಕೆ ಆಗಿದೆ. ಈ ಹಿಂದೆ ಸೆ.9ರಂದು ನಟ ದರ್ಶನ್ ಸೇರಿ 17 ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸಿದಾಗ ಸೆಪ್ಟೆಂಬರ್ 12 ರವರೆಗೆ ಕೋರ್ಟ್‌ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿತ್ತು. ಇದೀಗ ಆರೋಪಿಗಳಿಗೆ ಮತ್ತೊಂದು ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಇನ್ನು ಪ್ರಕರಣದಲ್ಲಿ ಈಗಾಗಲೇ ಚಾರ್ಜ್ ಶೀಟ್ ಕೋರ್ಟ್‌ಗೆ ಸಲ್ಲಿಕೆಯಾಗಿದ್ದು, ಪವಿತ್ರಾಗೌಡ ಎ 1, ದರ್ಶನ್ ಎ-2 ಎಂದು ಉಲ್ಲೇಖಿಸಲಾಗಿದೆ. ತನಿಖಾಧಿಕಾರಿ ಎಸಿಪಿ ಚಂದನ್ ಕುಮಾರ್ ನೇತೃತ್ವದಲ್ಲಿ ಪೊಲೀಸರು ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್‌ಗೆ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು.

ಈ ಸುದ್ದಿಯನ್ನೂ ಓದಿ | Mandya Violence: ನಾಗಮಂಗಲ ಗಲಭೆ ಪ್ರಕರಣ; 150 ಆರೋಪಿಗಳ ವಿರುದ್ಧ ಎಫ್‌ಐಆರ್‌

ಕೊಲೆ ಪ್ರಕರಣ; ಬಿಹಾರ ಮೂಲದ ಮೂವರ ಬಂಧನ

ತುಮಕೂರು: ಗಣಪತಿ ಪ್ರತಿಷ್ಠಾಪನೆ ವಿಚಾರವಾಗಿ ಯುವಕನೋರ್ವನನ್ನು ಕೊಲೆ ಮಾಡಿದ್ದ ಬಿಹಾರ ಮೂಲದ ಮೂವರು ಆರೋಪಿಗಳನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದು, ಕಾನೂನು ಸಂಘರ್ಷಕ್ಕೊಳಗಾದ 13 ವರ್ಷದ ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

ಯುವಕ ಚೋಟನ್ ಕುಮಾರ್ ಕೊಲೆಯಾದ ದುರ್ದೈವಿ. ರಾಮ್ ಬಾಬು ಕುಮಾರ್(20), ಮಂಟು ಕುಮಾರ್( 22), ಅಜಯ್ ಕುಮಾರ್ (20) ಬಂಧಿತ‌ ಆರೋಪಿಗಳು.

 ಬಿಹಾರದ ಯುವಕರು ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದ ಜ್ಯೋತಿ ಬಯೋ ಫ್ಯೂಯಲ್ಸ್ ಹಾಗೂ ಗಾಯತ್ರಿ ಬಯೋ ಫ್ಯೂಯಲ್ಸ್ ಪ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ರು, ಕೆಲಸದ ವಿಚಾರದಲ್ಲಿ  15 ದಿನಗಳ ಹಿಂದೆ ಜ್ಯೋತಿ ಬಯೋ ಫ್ಯೂಯಲ್ಸ್ ನಲ್ಲಿ ಕೆಲಸ ಮಾಡುವ ಚೋಟನ್ ಕುಮಾರ್ ಹಾಗೂ ಗಾಯತ್ರಿ ಬಯೋ ಫ್ಯೂಯಲ್ಸ್ ನಲ್ಲಿ ಕೆಲಸ ಮಾಡುವ ಹುಡುಗರಿಗೂ ಗಲಾಟೆಯಾಗಿರುತ್ತದೆ.

ಸೆ.7ರಂದು ಗಾಯತ್ರಿ ಬಯೋಫ್ಯೂಯಲ್ಸ್ ನಲ್ಲಿ ಕೆಲಸ ಮಾಡುವ ಹುಡುಗರು ಗಣೇಶ ಪ್ರತಿಷ್ಠಾಪನೆ ಮಾಡಿದ್ದು, ಪೂಜೆಗೆ ಹೋದ ಸಮಯದಲ್ಲಿ ಗಲಾಟೆ ತೆಗೆದು ಸಂಜೀವ್ ಕುಮಾರ್, ರಾಂಬಾಬು, ಮೌಂಟು ಕುಮಾರ್, ಅಜಯ್ ಕುಮಾರ್  ಕೈಗಳಿಂದ ಹಾಗೂ ದೊಣ್ಣೆಯಿಂದ ಹೊಡೆದು, ತರಕಾರಿ ಕತ್ತರಿಸುವ ಚಾಕನ್ನು ತೆಗೆದುಕೊಂಡು ಬಂದು ಚೋಟನ್ ಕುಮಾರ್  ಕತ್ತಿಗೆ, ತೋಳಿಗೆ, ಬೆನ್ನಿಗೆ ಚುಚ್ಚಿ, ತೀವ್ರ ಹಲ್ಲೆ ಮಾಡಿ ಗಾಯಾಳು ಚೋಟನ್ ಕುಮಾರ್ ನನ್ನು ಶ್ರೀದೇವಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲು ಪ್ರಯತ್ನಿಸಿದ್ದಾರೆ ಆದರೆ ಚಿಕಿತ್ಸೆ ಫಲಕಾರಿಯಾಗದೇ ಚೋಟನ್ ಕುಮಾರ್  ಮೃತಪಟ್ಟಿದ್ದಾನೆ.

ಈ ಬಗ್ಗೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೊ.ನಂ:250/2024 ಕಲಂ:103, 115(2), 118, 3(5) ಕಲಂ ಅಡಿ ಪ್ರಕರಣ ದಾಖಲಾಗಿತ್ತು.

ಸದರಿ ಪ್ರಕರಣವನ್ನು ಪತ್ತೆ ಮಾಡಲು ತುಮಕೂರು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿ.ಮರಿಯಪ್ಪ, ಮತ್ತು ಬಿ.ಎಸ್.ಅಬ್ದುಲ್ ಖಾದರ್  ಹಾಗೂ ತುಮಕೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಕೆ.ಆರ್.ಚಂದ್ರ ಶೇಖರ್ ಮಾರ್ಗದರ್ಶನದಲ್ಲಿ ತುಮಕೂರು ಗ್ರಾಮಾಂತರ ಪ್ರಭಾರ ವೃತ್ತ ನಿರೀಕ್ಷಕರಾದ ಅವಿನಾಶ್.ವಿ  ನೇತೃತ್ವ ದಲ್ಲಿ ಈರಣ್ಣ.ಜಿ, ಜಯಪ್ರಕಾಶ್, ಪ್ರಕಾಶ್, ರಮೇಶ್, ಚಿದಾನಂದ ಕೆ.ಎನ್, ಪರಮೇಶ್ ಸಿಬ್ಬಂದಿಯನ್ನೊಳಗೊಂಡ ವಿಶೇಷ ತಂಡವು ಆರೋಪಿಗಳನ್ನು ಶೀಘ್ರವಾಗಿ ಬಂದಿದೆ ಮುಂದಿನ ಕ್ರಮ ಕೈಗೊಂಡಿದ್ದಾರೆ.