ಬೆಂಗಳೂರು: ಸ್ಯಾಂಡಲ್ವುಡ್ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ಪತ್ನಿ ಅಂಬುಜಾ ದ್ವಾರಕೀಶ್ (80 ವರ್ಷ) ಶುಕ್ರವಾರ ವಿಧಿವಶರಾದರು.
ದ್ವಾರಕೀಶ್ ಕುಟುಂಬದ ಮೂಲದವರು ಈ ಬಗ್ಗೆ ತಿಳಿಸಿದ್ದು, ಎಚ್ಎಸ್ಆರ್ ಲೇಔಟ್ ನ ತಮ್ಮ ಸ್ವಗೃಹದಲ್ಲಿಯೇ ಅಂಬುಜಾ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ಐದು ಮಂದಿ ಗಂಡು ಮಕ್ಕಳು ಮತ್ತು ಪತಿ ದ್ವಾರಕೀಶ್ ಅವರನ್ನು ಅಗಲಿದ್ದಾರೆ. ಸಂಜೆ ಅವರ ಅಂತ್ಯ ಸಂಸ್ಕಾರ ನೆರವೇರಲಿರುವು ದಾಗಿ ದ್ವಾರಕೀಶ್ ಪುತ್ರ ಯೋಗಿ ತಿಳಿಸಿದ್ದಾರೆ.
ಎಚ್ ಎಸ್ ಅರ್ ಲೇಔಟ್ ನ ಅಪಾರ್ಟ್ಮೆಂಟ್ ನಲ್ಲಿ ಸದ್ಯ ಅಂಬುಜಾ ಪಾರ್ಥೀವ ಶರೀರ ಇಡಲಾಗಿದೆ. ಶುಕ್ರವಾರ ಸಂಜೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.