Sunday, 15th December 2024

ಬಾಲ ನಟ ʻರಾಹುಲ್ ಕೋಲಿʼ ಕ್ಯಾನ್ಸರಿನಿಂದ ಸಾವು

ನವದೆಹಲಿ: ಆಸ್ಕರ್ ಪ್ರಶಸ್ತಿಗೆ ಭಾರತದಿಂದ ಆಯ್ಕೆಯಾದ ʻಚೆಲೋ ಶೋʼ ಚಿತ್ರದ ಬಾಲ ನಟ ʻರಾಹುಲ್ ಕೋಲಿʼ (15) ಕ್ಯಾನ್ಸರ್‌ನಿಂದ ಮೃತಪಟ್ಟಿದ್ದಾರೆ.

ಚೆಲೋ ಶೋ ಚಿತ್ರದಲ್ಲಿ ನಟಿಸಿದ್ದ ಆರು ಮಕ್ಕಳಲ್ಲಿ ಒಬ್ಬರಾಗಿ ನಟಿಸಿರುವ ರಾಹುಲ್ ಕೋಲಿ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದಾನೆ.

ಅಕ್ಟೋಬರ್ 2 ರಂದು ರಾಹುಲ್ ಉಪಹಾರ ಸೇವಿಸಿದ ಬಳಿಕ ರಕ್ತವಾಂತಿ ಮಾಡಿಕೊಂಡಿದ್ದ. ಈ ವೇಳೆ ಜ್ವರ ಕೂಡ ಬಂದಿತ್ತು. ನಂತರ  ಕೊನೆಯುಸಿರೆಳೆದ. ರಾಹುಲ್ ಕೋಲಿಯ ಅಂತ್ಯಕ್ರಿಯೆ ಜಾಮ್ನಗರ ಸಮೀಪದ ಹಪಾ ಗ್ರಾಮದಲ್ಲಿ ಅವರ ಹುಟ್ಟೂರಿ ನಲ್ಲಿ ಅಂತ್ಯಕ್ರಿಯೆ ನಡೆಯಿತು.

ಚೆಲೋ ಶೋ ಅ.14 ರಂದು ಬಿಡುಗಡೆಯಾಗಲಿದೆ. ಚಿತ್ರ ಬಿಡುಗಡೆಗೂ ಮುನ್ನವೇ ರಾಹುಲ್ ಕೋಲಿ ಕೊನೆಯುಸಿರೆಳೆದಿದ್ದಾನೆ.