Sunday, 15th December 2024

ಒಳಗುತ್ತಿಗೆಯ ನೌಕರರ ಮುಷ್ಕರಕ್ಕೆ ನಟ ಅನಿರುದ್ಧ ಬೆಂಬಲ

ಬೆಂಗಳೂರು: ಒಳಗುತ್ತಿಗೆಯ ನೌಕರರನ್ನು ಖಾಯಂಗೊಳಿಸುವಂತೆ ಆಗ್ರಹಿಸಿ ಮತ್ತು ಕನಿಷ್ಠ ವೇತನ ಜಾರಿ ಗೊಳಿಸಬೇಕೆಂಬ ಬೇಡಿಕೆಯನ್ನಿಟ್ಟುಕೊಂಡು ಮುಷ್ಕರ ನಡೆಸಿದ್ದು, ಈ ಮುಷ್ಕರಕ್ಕೆ ನಟ ಅನಿರುದ್ಧ ಬೆಂಬಲಿಸಿ ಧರಣಿಗೆ ತಾವು ಕೈ ಜೋಡಿಸಿದ್ದಾರೆ.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಒಳಗುತ್ತಿಗೆ ನೌಕರರು ಹಲವು ದಿನಗಳಿಂದ ಅನಿರ್ದಿಷ್ಟಾ ವಧಿ ಧರಣಿ ನಡೆಸುತ್ತಿದ್ದಾರೆ.

ಈ ಹಿಂದೆಯು ಪೌರ ಕಾರ್ಮಿಕರ ಪರವಾಗಿಯೂ ಅನಿರುದ್ಧ ಮಾತನಾಡಿದ್ದರು. ಅವರ ನ್ಯಾಯಯುತ ಬೇಡಿಕೆ ಗಳನ್ನು ಈಡೇರಿಸಬೇಕು ಎಂದು  ಸರಕಾರವನ್ನು ಒತ್ತಾಯಿಸಿದ್ದರು. ಇದೀಗ ಆರೋಗ್ಯ ಇಲಾಖೆಯ ಒಳಗುತ್ತಿಗೆಯ ನೌಕರರ ಬೆನ್ನಿಗೆ ನಿಂತಿದ್ದಾರೆ. ಹೋರಾಟ ಸ್ಥಳಕ್ಕೆ ಆಗಮಿಸಿದ ಅವರು, ಹಲವು ಗಂಟೆಗಳ ಕಾಲ ಅವರೊಂದಿಗೆ ಧರಣಿಗೂ ಕೂಳಿತು, ಅವರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅನಿರುದ್ಧ, ‘ಆರೋಗ್ಯ ಸಿಬ್ಬಂದಿ ನಮಗೆ ಕೋವಿಡ್ ಕಾಲದ ದೇವರು ಆಗಿದ್ದರು. ಇಂದು ಆ ದೇವರುಗಳು ಬೀದಿಗೆ ಬಂದಿದ್ದಾರೆ. ಅವರು ತಮ್ಮ ನ್ಯಾಯಯುತ ಬೇಡಿಕೆ ಕೇಳುತ್ತಿದ್ದಾರೆ. ಕೂಡಲೇ ಸರಕಾರ ಅವರ ನೋವಿಗೆ ಸ್ಪಂದಿಸಬೇಕು ಎಂದಿದ್ದಾರೆ.