Sunday, 15th December 2024

Actress Mallika Sherawat: ರಾತ್ರಿ ರೂಮ್‌ಗೆ ಕರೆಯುತ್ತಿದ್ದ ಹೀರೊಗಳು! ನಟಿ  ಮಲ್ಲಿಕಾ ಶೆರಾವತ್‌ ಸ್ಫೋಟಕ ಹೇಳಿಕೆ

Actress Mallika Sherawat

ನವದೆಹಲಿ: ನಟಿ ಮಲ್ಲಿಕಾ ಶೆರಾವತ್ (Actress Mallika Sherawat) ಎಂದಾಕ್ಷಣ ಪಡ್ಡೆಹುಡುಗರ ಮನಸ್ಸು ಅರಳುತ್ತದೆ! ಸ್ಟಾರ್ ನಟರ ಜೊತೆ ಬೋಲ್ಡ್ ಪಾತ್ರಗಳಲ್ಲಿ  ನಟಿಸಿ ಮನೆಮಾತಾಗಿರುವ ನಟಿ ಮಲ್ಲಿಕಾ ಶೆರಾವತ್ ಅವರು ಇದೀಗ ಬಾಲಿವುಡ್ ಚಿತ್ರರಂಗದಲ್ಲಾದ ತಮ್ಮ ಅನುಭವಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಆ ವೇಳೆ  ಅನೇಕ  ನಟರು ರಾತ್ರಿಯಲ್ಲಿ ತಮ್ಮ ಹೋಟೆಲ್ ಕೋಣೆಗಳಿಗೆ ಆಹ್ವಾನಿಸಿದ್ದಾರೆ ಎಂದು ಶಾಕಿಂಗ್ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

Actress Mallika Sherawat

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಇತ್ತೀಚಿನ ವಿಡಿಯೊವೊಂದರಲ್ಲಿ, ಮಲ್ಲಿಕಾ ಅವರು ಚಲನಚಿತ್ರಗಳಲ್ಲಿನ ತಮ್ಮ ಬೋಲ್ಡ್ ಪಾತ್ರಗಳು ಹಾಗೂ ಕೆಲವು ನಟರು ಪರದೆಯ ಹೊರಗೆ ಯಾವ ರೀತಿ ವರ್ತಿಸುತ್ತಾರೆ ಎಂಬ ವಿಚಾರದ ಬಗ್ಗೆ  ಚರ್ಚಿಸಿದ್ದಾರೆ. ವಿಡಿಯೊದಲ್ಲಿ, ಕೆಲವು  ನಟರು ತಡರಾತ್ರಿಯ ವೇಳೆ ಭೇಟಿಯಾಗಲು  ಹೇಗೆ ಸೂಚಿಸುತ್ತಾರೆ ಎಂಬುದನ್ನು ಅವರು ನೆನಪಿಸಿಕೊಂಡಿದ್ದಾರೆ.  ಅವರು ಪರದೆಯ ಮೇಲೆ ಬೋಲ್ಡ್ ಪಾತ್ರಗಳನ್ನು ನಿರ್ವಹಿಸಿದರೆ, ಅವರು ವೈಯಕ್ತಿಕ ಜೀವನದಲ್ಲಿಯೂ ಬೋಲ್ಡ್ ಆಗಿರುತ್ತಾರೆ ಎಂದು ಅನೇಕರು ಭಾವಿಸಿದ್ದಾರೆ.

ಹಾಗಾಗಿ ಈ ನಟರು ಆಗಾಗ್ಗೆ ರಾತ್ರಿಯಲ್ಲಿ ಅವಳಿಗೆ ಕರೆ ಮಾಡಿ ತಮ್ಮನ್ನು ಭೇಟಿಯಾಗಬೇಕೆಂದು ತಿಳಿಸುತ್ತಿದ್ದರು ಎಂಬುದಾಗಿ ನಟಿ ತಿಳಿಸಿದ್ದಾರೆ. ಆದರೆ ಮಲ್ಲಿಕಾ ಅವರ ಬೇಡಿಕೆಗಳನ್ನು  ತಿರಸ್ಕರಿಸಿದ ಕಾರಣ ಅಂತಿಮವಾಗಿ ಸಿನಿಮಾದಲ್ಲಿ ಅವರನ್ನು ಬದಿಗಿಡಲು ಕಾರಣವಾಯಿತು ಎಂದು ಅವರು ಆರೋಪಿಸಿದ್ದಾರೆ.

Actress Mallika Sherawat

ಮಲ್ಲಿಕಾ 2002 ರಲ್ಲಿ ‘ಜೀನಾ ಸಿರ್ಫ್ ಮೆರ್ರೆ ಲಿಯೆ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು.  ನಂತರ 2003 ರಲ್ಲಿ ಖ್ವಾಯಿಶ್ ಚಿತ್ರದಲ್ಲಿ ನಟಿಸಿದ್ದಾರೆ. ಹಾಗೇ  ಮಲ್ಲಿಕಾ, 2004 ರ ಮರ್ಡರ್ ಚಿತ್ರದ ಮೂಲಕ ಬೋಲ್ಡ್ ಪಾತ್ರ ಮಾಡಿ ಎಲ್ಲರ ಗಮನ ಸೆಳೆದಿದ್ದರು.  ಅತ್ಯುತ್ತಮ ನಟನೆಗಾಗಿ ಅವರು ಜೀ ಸಿನಿಮಾ ಪ್ರಶಸ್ತಿಯನ್ನು ಗಳಿಸಿದ್ದಾರೆ. ಅವರು ಜಾಕಿ ಚಾನ್ ಅವರೊಂದಿಗೆ ಹಾಲಿವುಡ್ ಚಿತ್ರ ಮಿಥ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು 2006 ರಲ್ಲಿ ಪ್ಯಾರ್ ಕೆ ಸೈಡ್ ಎಫೆಕ್ಟ್ಸ್ ಚಿತ್ರದಲ್ಲಿ ನಟಿಸಿದ್ದು, ಈ ಚಿತ್ರ ಸೂಪರ್ ಹಿಟ್ ಆಗಿತ್ತು.

 

Actress Mallika Sherawat

ಇದನ್ನೂ ಓದಿ: ಡ್ರೆಸ್ ಸರಿಮಾಡಿಕೊಳ್ಳಲು ಹೋಗಿ ಏನೇನೋ ಆಗಿ ಟ್ರೋಲ್‍ಗೆ ಒಳಗಾದ ಬಿಗ್‌ಬಾಸ್ ಹುಡುಗಿ!

2022ರಲ್ಲಿ ಅವರು ಕೊನೆಯ ಬಾರಿಗೆ ರಜತ್ ಕಪೂರ್ ಅಭಿನಯದ ʼಆರ್ಕೆʼ ಚಿತ್ರದಲ್ಲಿ ಕಾಣಿಸಿಕೊಂಡರು. ಈಗ ರಾಜ್‌ಕುಮಾರ್‌ ರಾವ್ ಮತ್ತು ತೃಪ್ತಿ ಡಿಮ್ರಿ ಅಭಿನಯದ ‘ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೊ’ ಚಿತ್ರದ ಮೂಲಕ ಚಲನಚಿತ್ರಗಳಿಗೆ ಮರಳುತ್ತಿದ್ದಾರೆ.