Wednesday, 30th October 2024

Actress Nayanthara: ನಯನತಾರಾ ಕುರಿತಾದ ಡಾಕ್ಯುಮೆಂಟ್ರಿ ರಿಲೀಸ್‌ ಡೇಟ್‌ ಅನೌನ್ಸ್‌; ಎಲ್ಲಿ, ಯಾವಾಗ ಸ್ಟ್ರೀಮಿಂಗ್‌?

Actress Nayanthara

ಚೆನ್ನೈ: ಸಹಜಾಭಿನಯಯದಿಂದಲೇ ಸಿನಿ ರಸಿಕರ ಗಮನ ಸೆಳೆದ ನಟಿ ನಯನತಾರಾ (Actress Nayanthara). ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿರುವ ಅವರು ಲೇಡಿ ಸೂಪರ್‌ ಎಂದೇ ಜನಪ್ರಿಯ. ಮಲಯಾಳಂನಲ್ಲಿ ವೃತ್ತಿ ಜೀವನ ಅರಂಭಿಸಿ ಬಳಿಕ ತಮಿಳಿಗೆ ಹಾರಿ, ಆರಂಭದಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಮಿಂಚಿ ಬಳಿಕ ಸ್ಟಾರ್‌ ನಾಯಕಿಯಾಗಿ ಬೆಳೆದ ರೀತಿಯೇ ರೋಚಕ. ತೆಲುಗಿನಲ್ಲಿಯೂ ಸೂಪರ್‌ ಹಿಟ್‌ ಹಿಟ್‌ ಚಿತ್ರಗಳನ್ನು ನೀಡಿರುವ ಅವರು ಕನ್ನಡದಲ್ಲಿಯೂ ಅಭಿನಯಿಸಿದ್ದಾರೆ. 2 ದಶಕಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಅವರು ಕಳೆದ ವರ್ಷ ತೆರೆಕಂಡ ʼಜವಾನ್‌ʼ ಸಿನಿಮಾ ಮೂಲಕ ಬಾಲಿವುಡ್‌ಗೂ ಕಾಲಿಟ್ಟಿದ್ದಾರೆ. ಮೊದಲ ಚಿತ್ರದಲ್ಲಿಯೇ ಬಾದ್‌ ಷಾ ಶಾರುಖ್‌ ಖಾನ್‌ ಅವರಿಗೆ ನಾಯಕಿಯಾಗುವ ಅವಕಾಶ ಅಚರದ್ದಾಗಿತ್ತು ಎನ್ನುವುದು ವಿಶೇಷ. ಈ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಿ ನಯನತಾರಾ ಅವರ ಜನಪ್ರಿಯತೆಯನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ದಿದೆ. ಇದೀಗ ನಟಿಯ ಬಗ್ಗೆ ತಯಾರಾದ ಡಾಕ್ಯುಮೆಂಟ್ರಿ ರಿಲೀಸ್‌ ಡೇಟ್‌ ಅನೌನ್ಸ್‌ ಆಗಿದೆ. ಈ ದಿನಕ್ಕಾಗಿ ಬಹು ದಿನಗಳಿಂದ ಕಾಯುತ್ತಿದ್ದ ಅಭಿಮಾನಿಗಳ ಕಾತುಕರಕ್ಕೆ ಕೊನೆಗೂ ತೆರೆ ಬಿದ್ದಿದೆ.

ನಯನತಾರಾ ಕುರಿತಾದ ಡ್ಯಾಕ್ಯುಮೆಂಟ್ರಿ ತಯಾರಾಗುವ ಬಗ್ಗೆ 2 ವರ್ಷಗಳ ಹಿಂದೆಯೇ ಅಂದರೆ 2022ರ ಸೆಪದಟೆಂಬರ್‌ನಲ್ಲಿ ಘೋಷಿಸಲಾಗಿತ್ತು. ಇದಕ್ಕೆ ʼನಯನತಾರಾ: ಬಿಯಾಂಡ್‌ ದಿ ಫೈರ್‌ಟೇಲ್‌ʼ (Nayanthara: Beyond The Fairytale) ಎಂದು ಹೆಸರಿಡಲಾಗಿದೆ. ಆಗಿನಿಂದಲೇ ಕುತೂಹಲ ಕೆರಳಿಸಿದ ಈ ಡಾಕ್ಯುಮೆಂಟ್ರಿ ಬಗ್ಗೆ ಬಳಿಕ ಹೆಚ್ಚಿನ ಮಾಹಿತಿ ಹೊರ ಬಂದಿರಲಿಲ್ಲ. ಇದೀಗ ತಯಾರಕರು ರಿಲೀಸ್‌ ದಿನಾಂಕವನ್ನು ಘೋಷಿಸಿದ್ದಾರೆ.

ಯಾವಾಗ ಬಿಡುಗಡೆ?

ʼ’ನಯನತಾರಾ: ಬಿಯಾಂಡ್ ದಿ ಫೆರಿಟೇಲ್’ ಡಾಕ್ಯುಮೆಂಟ್ರಿ ನ. 18ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ. ಈ ಬಗ್ಗೆ ನೆಟ್‌ಫ್ಲಿಕ್ಸ್‌ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿದೆ. ನ. 18ರಂದು ನಯನತಾರಾ ಅವರ ಹುಟ್ಟುಹಬ್ಬ. ಈ ವರ್ಷ ನಯನತಾರಾ 40ನೇ ವಸಂತಕ್ಕೆ ಕಾಲಿಡುತ್ತಿದ್ದು, ಈ ಹಿನ್ನೆಲೆಯಲ್ಲಿ ಅವರ ಬರ್ತ್‌ ಡೇ ವಿಶೇಷ ಎನಿಸಿಕೊಳ್ಳಲಿದೆ. ಟಿವಿ ನಿರೂಪಕಿಯಾಗಿ ಕ್ಯಾಮೆರಾ ಎದುರಿಸಿದ್ದ ಡಯಾನಾ ಮರಿಯಮ್‌ ಕುರಿಯನ್‌ ಮುಂದೆ ಲೇಡಿ ಸೂಪರ್‌ ಸ್ಟಾರ್‌ ನಯನತಾರಾ ಆಗಿ ಬದಲಾದ ರೋಚಕ ಪಯಣವನ್ನು ಈ ಸಾಕ್ಷ್ಯಚಿತ್ರ ನಿಮ್ಮ ಮುಂದೆ ತೆರೆದಿಡಲಿದೆ.

ಬೆಂಗಳೂರಿನ ಮಲಯಾಳಿ ಕುಟುಂಬದಲ್ಲಿ 1984ರ ನ. 18ರಂದು ಜನಿಸಿದ ನಯನತಾರಾ ತಮ್ಮ ಶಿಕ್ಷಣವನ್ನು ದೇಶದ ವಿವಿಧಡೆಗಳಲ್ಲಿ ಪೂರೈಸಿದರು. 2003ರಲ್ಲಿ ತೆರೆಕಂಡ ಮಲಯಾಳಂನ ʼಮನಸ್ಸಿನಕ್ಕರೆʼ ಚಿತ್ರದ ಮೂಲಕ ಸಿನಿರಂಗಕ್ಕೆ ಕಾಲಟ್ಟರು. 2004ರಲ್ಲಿ ರಿಲೀಸ್‌ ಆದ ಮೋಹನ್‌ಲಾಲ್‌ ಅವರ ʼವಿಸ್ಮಯತುಬಂತ್ತುʼ ಮತ್ತು ʼನಾಟು ರಾಜಾವ್‌ʼ ಮಲಯಾಳಂ ಚಿತ್ರದಲ್ಲಿ ಕಾಣಿಸಿಕೊಂಡರು. ʼಅಯ್ಯʼ ಸಿನಿಮಾ ಮೂಲಕ 2005ರಲ್ಲಿ ಕಾಲಿವುಡ್‌ಗೆ ಪಾದರ್ಪಣೆ ಮಾಡಿದರು. 2006ರಲ್ಲಿ ಬಿಡುಗಡೆಯಾದ ʼಲಕ್ಷ್ಮೀʼ ತೆಲುಗಿನ ಮೊದಲ ಚಿತ್ರ. 2010ರಲ್ಲಿ ಬಿಡುಗಡೆಯಾದ ಉಪೇಂದ್ರ ಅವರ ʼಸೂಪರ್‌ʼ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೂ ಆಗಮಿಸಿದರು. 2023ರಲ್ಲಿ ರಿಲೀಸ್‌ ಆದ ʼಜವಾನ್‌ʼ ನಯನತಾರಾ ಅಭಿನಯ ಮೊದಲ ಹಿಂದಿ ಸಿನಿಮಾ.

ಸದ್ಯ ಮಲಯಾಳಂ ಮತ್ತು ತಮಿಳಿನ ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಬಹು ನಿರೀಕ್ಷಿತ ಯಶ್‌ ಅಭಿನಯದ ʼಟಾಕ್ಸಿಕ್‌ʼ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅಧಿಕೃತ ಘೋಷಣೆ ಹೊರ ಬರಬೇಕಿದೆ. ನಯನತಾರಾ 2022ರಲ್ಲಿ ನಿರ್ದೇಶಕ ವಿಘ್ನೇಶ್‌ ಶಿವನ್‌ ಅವರನ್ನು ವರಿಸಿದ್ದಾರೆ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಈ ಮಧ್ಯೆ ತಮ್ಮ ನೆಚ್ಚಿನ ನಟಿಯ ಡಾಕ್ಯುಮೆಂಟ್ರಿ ರಿಲೀಸ್‌ ಆಗುತ್ತಿರುವ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್‌ ಆಗಿದ್ದಾರೆ.

‘ನಯನತಾರಾ: ಬಿಯಾಂಡ್ ದಿ ಫೆರಿಟೇಲ್’ನಲ್ಲಿ ಅವರ ಜೀವನದ ಏಳು ಬೀಳುಗಳ ಬಗ್ಗೆ ವಿವರಣೆ ಇರಲಿದೆ. ಮಗಳು, ಸಹೋದರಿ, ಸಂಗಾತಿ, ತಾಯಿ, ಗೆಳತಿ, ಸೂಪರ್‌ ಸ್ಟಾರ್‌ ಆಗಿ ಇದುವರೆಗೆ ಎಲ್ಲೂ ಬಹಿರಂಗವಾಗದ ವಿಚಾರಗಳ ಬಗ್ಗೆ ಇದು ಬೆಳಕು ಚೆಲ್ಲಲಿದೆ ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ: Nayanthara : ಮುಖಕ್ಕೆ ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿದ್ರಾ ಲೇಡಿ ಸೂಪರ್‌ ಸ್ಟಾರ್ ನಯನತಾರಾ? ಸಂದರ್ಶನದಲ್ಲಿ ಎನಂದ್ರು?